1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 160/2017 ಕಲಂ. 447, 341, 504, 506 ಸಹಿತ 34 ಐ.ಪಿ.ಸಿ:
ದಿನಾಂಕ:-20-06-2017 ರಂದು ಸಾಯಂಕಾಲ 4-00 ಗಂಟೆಗೆ ಪಿರ್ಯಾದಿದಾರರಾದ
ವೈ. ಮಲ್ಲಿಕಾರ್ಜುನ
ತಂದೆ ನೆಟ್ಟಕಲ್ಲಪ್ಪ ವಯಾ-30ವರ್ಷ ಜಾ. ನಾಯಕ ಉ-ಒಕ್ಕಲುತನ ಸಾ. ಉಳೆನೂರು ತಾ. ಗಂಗಾವತಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ನೀಡಿದ್ದು
ಸದ್ರಿ ದೂರಿನ ಸಾರಾಂಶದಲ್ಲಿ ದಿನಾಂಕ:-30-07-2015
ರಂದು ಉಳೆನೂರು ಗ್ರಾಮದ ತಿಮ್ಮಣ್ಣ ತಂದಿ ಲಿಂಗಪ್ಪ ಇವರಿಗೆ ಸೇರಿದ
ಉಳೆನೂರು ಸೀಮಾ ಸರ್ವೆ ನಂ 115/*/8 ನೆದ್ದರಲ್ಲಿಯ 3 ಎ.14 ಗುಂಟೆ ಜಮೀನನ್ನು ಖರೀದಿ ಮಾಡಿದ್ದು ನನ್ನ ಹೆಸರಿನಲ್ಲಿ ನೊಂದಣಿಯಾಗಿ
ಪಹಣಿ ಕೂಡಾ ನನ್ನ ಹೆಸರಿನಲ್ಲಿ ಆಗಿರುತ್ತದೆ. ದಿನಾಂಕ:-11-07-2017
ರಂದು ಮದ್ಯಾಹ್ನ
1-00 ಗಂಟೆಯ ಸುಮಾರಿಗೆ ಸದ್ರಿ ನನ್ನ ಹೆಸರಿನಲ್ಲಿರುವ ಜಮೀನಿನಲ್ಲಿ ನಾನು
ನನ್ನ ತಂದೆ ಸಾಗುವಳಿ ಮಾಡಲು ನೋಡುವ ಸಲುವಾಗಿ ಬಂದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ್ಗೆ
ಉಳೇನೂರು ನಾಯಕ ಜನಾಂಗದ ನಮೂದು ಮಾಡಿದ ಆರೋಪಿತರು ನಮ್ಮ ಜಮೀನಿನಲ್ಲಿ ಅತೀ ಕ್ರಮ ಪ್ರವೇಶ ಮಾಡಿ
ನಮಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಜೀವ ಬೇದರಿಕೆ ಹಾಕಿ ಜಮೀನಿನಲ್ಲಿ ಬಾರದಂತೆ ತಕರಾರು ಮಾಡುತ್ತಿದ್ದಾರೆ
ನಾವು ನಮ್ಮ ಊರಿಗೆ ಹೋಗಿ ಜಮೀನಿನ ದಾಖಲಾತಿಗಳನ್ನು ತೆಗೆದುಕೊಂಡು ನಮ್ಮ ಸಂಬಂದಿಕರಲ್ಲಿ
ವಿಚಾರಿಸಿ ತಡವಾಗಿ ಠಾಣೆಗೆ ಬಂದಿರುತ್ತೇನೆ ಅಂತಾ ಮುಂತಾಗಿ ನೀಡಿದ ಪಿರ್ಯಾದಿಯ ಸಾರಾಂಶದ ಮೇಲಿಂದ
ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment