1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 106/2017 ಕಲಂ. 379 ಐ.ಪಿ.ಸಿ:
ದಿನಾಂಕ: 21-07-2017 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾಧಿದಾರರಾದ ±Áರದಾ ಗಂಡ ಮಾನಪ್ಪ ಬಡಿಗೇರ ಸಾ ಹಲಗೇರಿ ತಾ ಕೊಪ್ಪಳ ಇವರು ಠಾಣೆಗೆ
ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಇಂದು ಮುಂಜಾನೆ ಫಿರ್ಯಾದಿದಾರರು ಮತ್ತು ಅವರ ಸ್ನೇಹಿತೆ ರೇಣುಕಾ ಗಂಡ ದ್ಯಾಮಪ್ಪ ಗುಡ್ಲಾನೂರ
ಕೂಡಿಕೊಂಡು ಧರ್ಮಸ್ಥಳ ಸಂಘದವರು ನೀಡಿದ ಚೇಕ್ ನ್ನು ಡ್ರಾ ಮಾಢಿಕೊಳ್ಳಲು ಕೊಪ್ಪಳದ ಯೂನಿಯನ್
ಬ್ಯಾಂಕ್ ಗೆ ಬಂದು ರೂ 1,50,000=00 ಹಣವನ್ನು ಡ್ರಾ ಮಾಡಿಕೊಂಡು ಆ ಹಣವನ್ನು ತಮ್ಮ ಬ್ಯಾಗಿನಲ್ಲಿ
ಹಾಕಿಕೊಂಡು ಬಸ್ ನಿಲ್ದಾಣಕ್ಕೆ ಬಂದು ಬಸ್ ನಿಲ್ದಾಣದ ಹತ್ತಿರ ಹಲಗೇರಿಗೆ ಹೋಗುವ ಆಟೋದ ಹತ್ತಿರ
ಬಂದು ತಮ್ಮೂರಿಗೆ ಹೋಗುವ ಆಟೋವನ್ನು ಹತ್ತಿ ಕೂಳಿತುಕೊಂಡಾಗ ಆಗ ರೇಣುಕಾ ಇವರು ಬ್ರೇಡ್ ತರಲು
ಕೆಳಗೆ ಇಳಿದಾಗ ಯಾರೋ ಒಬ್ಬನು ಫಿರ್ಯಾದಿದಾರರ ಹತ್ತಿರ ಬಂದು ಇಲ್ಲಿ ಹಣ ಬಿದ್ದಿರುತ್ತವೆ ನೋಡಿ
ಅಂದಾಗ ಫಿರ್ಯಾದಿದಾರರು ಹಣ ತೆಗೆದುಕೊಳ್ಳಲು ಕೆಳಗೆ ಇಳಿದಾಗ ಯಾರೋ ಕಳ್ಳರು ಆಟೋದಲ್ಲಿದ್ದ ನನ್ನ
ಹಣ ರೂ 1,50,000=00 ಮತ್ತು ಬ್ಯಾಂಕ್ ದಾಖಲಾತಿಗಳು ಮತ್ತು ಎ.ಟಿ.ಎಮ್ ಕಾರ್ಡಾ
ಇರುವ ಬ್ಯಾಗ್ ನ್ನು ತೆಗೆದುಕೊಂಡು ಹೋದನು ಆಗ ಫಿರ್ಯಾದಿದಾರರು ಚಿರಾಡಿದಾಗ ಅವನು ಬ್ಯಾಗ್ ನ್ನು
ತೆಗೆದುಕೊಂಡು ಹೋದನು ಅಂತಾ ಮುಂತಾಗಿ ಮುಂತಾಗಿ ಇರುವ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ
ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 218/2017 ಕಲಂ. 87 Karnataka Police Act.
ದಿನಾಂಕ :
21-07-2017 ರಂದು ರಾತ್ರಿ
07-30 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರಿಗೆ ಮಾಹಿತಿ ಬಂದಿದ್ದು ಕಲಾಲಬಂಡಿ
ಗ್ರಾಮದ ಮಾರುತೇಶ್ವರ ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ಇಸ್ಪಿಟ್
ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಪಿರ್ಯಾಧಿದಾರರು ಮತ್ತು ಸಿಬ್ಬಂದಿಯವರಾದ
ಪುಂಡಲೀಕಪ್ಪ ಎ.ಎಸ್.ಐ, PC-344,
117, 407 ಹಾಗೂ ನಮ್ಮ ಸರಕಾರಿ ಜೀಪ ನಂ: ಕೆ.ಎ-37-ಜಿ-292 ನೇದ್ದರಲ್ಲಿ ಅದರ ಚಾಲಕ ಶ್ರೀನಾಥ ಎ.ಪಿ.ಸಿ-180 ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 4 ಜನ
ಆರೋಪಿತರು ಸಿಕ್ಕಿದ್ದು ಇರುತ್ತದೆ.
ಹಾಗೂ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ನಗದು ಹಣ 3800=00 ರೂ, 52 ಇಸ್ಪೆಟ್ ಎಲೆಗಳು, ಹಾಗೂ ಒಂದು ಹಳೆ ನ್ಯೂಸ್ ಪೇಪರನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 107/2017 ಕಲಂ. 78(3) Karnataka Police Act.
ದಿನಾಂಕ:
21-07-2017 ರಂದು ಪಿ.ಎಸ್.ಐ. ಹಾಗೂ ಸಿಬ್ಬಂದಿಯವರು ಸಾಯಾಂಕಾಲ 16-00 ಗಂಟೆಗೆ ಠಾಣೆಯಲ್ಲಿದ್ದಾಗ ವೆಂಕಟಾಪೂರ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಇಬ್ಬರು ಪಂಚರನ್ನು ಕರೆದುಕೊಂಡು ಹೋಗಿ ದಾಳಿ ಮಾಡಲಾಗಿ ಮಟಕಾ ಬರೆದುಕೊಂಡು ಹಣ
ಪಡೆದುಕೊಳ್ಳುವವನು ಸಿಕ್ಕಿಬಿದಿದ್ದು,
ಮಟಕಾ ಚೀಟಿ ಬರೆದುಕೊಡುವವನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು
ಕೃಷ್ಣಪ್ಪ ತಂದೆ ಪಾಲಪ್ಪ ನಾಯಕ, ವಯಾ: 23 ವರ್ಷ, ಜಾತಿ: ಲಂಬಾಣಿ,
ಸಾ: ವೆಂಕಟಾಪೂರ ಅಂತಾ ತಿಳಿಸಿದ್ದು ಅವನ
ಹತ್ತಿರ ಮಟಕಾ ಚೀಟಿ, 1070=00 ರೂಪಾಯಿ ನಗದು ಹಣ ಹಾಗೂ ಒಂದು
ಬಾಲಪೆನ್ನ ಜಪ್ತಮಾಡಿಕೊಂಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
4] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 224/2017 ಕಲಂ. 78(3)
Karnataka Police Act.
ದಿನಾಂಕ: 21-07-2017 ರಂದು ಸಂಜೆ ಶ್ರೀಮತಿ ಶಾರವ್ವ, ಮ.ಎ.ಎಸ್.ಐ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯ ಬರುವ ಹೊಸ ಹಿರೆಬೆಣಕಲ್ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದ ಬೀಳು ಜಾಗೆಯ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಶ್ರೀ ಪ್ರಕಾಶ. ಎಲ್. ಮಾಳಿ, ಪಿ.ಎಸ್.ಐ. ರವರ ಮಾರ್ಗದರ್ಶನದಲ್ಲಿ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಪಿ.ಸಿ. ನಂ: 180, 363 ಇವರು ಮತ್ತು ಇಬ್ಬರು ಪಂಚರು ಕೂಡಿಕೊಂಡು ಮಾಹಿತಿ ಇದ್ದ ¸ÀܼÀPÉÌ
ºÉÆÃV ಅವರ ಮೇಲೆ ದಾಳಿ ಮಾಡಲಾಗಿ ಮಟಕಾ ಪಟ್ಟಿ ಬರೆಯುತ್ತಿದ್ದವನು ಸಿಕ್ಕಿಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ಸಿಕ್ಕವನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಸೈಯ್ಯದ್ ಜಿಲಾನಿ ತಂದೆ ಸೈಯ್ಯದ್ ಮೀರಾ ಸಾಬ, ವಯಸ್ಸು 48 ವರ್ಷ, ಜಾತಿ: ಮುಸ್ಲೀಂ ಉ: ಆಟೋ ಚಾಲಕ ಸಾ: ಹೊಸ ಹಿರೇಬೆಣಕಲ್. ತಾ: ಗಂಗಾವತಿ ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 810/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ್ಪೆನ್ನು ದೊರೆತಿದ್ದು ಇದೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment