1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 227/2017 ಕಲಂ. 87
Karnataka Police Act.
ದಿನಾಂಕ:- 23-07-2017 ರಂದು ಮಧ್ಯಾಹ್ನ ನಾನು ಠಾಣೆಯಲ್ಲಿರುವಾಗ ಗಂಗಾವತಿ ಗ್ರಾಮೀಣ
ಪೊಲೀಸ್ ಠಾಣೆ ವ್ಯಾಪ್ತಿಯ ಮುಷ್ಟೂರು ಸೀಮಾದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ
ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಶ್ರೀ
ಪ್ರಕಾಶ ಮಾಳಿ, ಪಿ.ಎಸ್.ಐ. ರವರಿಗೆ ಬಂದ
ಮೇರೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಶ್ರೀ ವೆಂಕಟೇಶ ಚೌವ್ಹಾಣ ಎ.ಎಸ್.ಐ. ಹಾಗೂ ಸಿಬ್ಬಂದಿಯವರಾದ
ಹೆಚ್.ಸಿ. 44, 191, ಪಿ.ಸಿ. 354, 363, 366, 110 ರವರನ್ನು ಕರೆದುಕೊಂಡು ಹೋಗಿ ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ
ತೊಡಗಿದ್ದ 4 ಜನರು ಸಿಕ್ಕಿ
ಬಿದ್ದಿದ್ದು, ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 7,440 /- ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ
ಹಾಸಿದ್ದ ಒಂದು ಹಳೆಯ ಪ್ಲಾಸ್ಟಿಕ್
ಬರಕಾ ಸಿಕ್ಕಿದ್ದು ಇರುತ್ತವೆ.
ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
2] ಗಂಗಾವತಿ
ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ. 228/2017 ಕಲಂ 457, 380 ಐ.ಪಿ.ಸಿ:
ದಿನಾಂಕ: 23-07-2017 ರಂದು 7:00 ಪಿಎಂ.ಕ್ಕೆ ಫಿರ್ಯಾದಿದಾರರಾದ ಸುದರ್ಶನ
ವೈದ್ಯ ತಂದೆ ದಿ: ವೆಂಕಟರಾವ್ ವೈದ್ಯ, ವಯಸ್ಸು 51 ವರ್ಷ, ಫಿರ್ಯಾದಿ ನೀಡಿದ್ದು “ನಿನ್ನೆ ದಿನಾಂಕ.
22-07-2017 ರಂದು ರಾತ್ರಿ 9-00 ಗಂಟೆಯಿಂದ ಇಂದು ದಿನಾಂಕ. 23-07-2017 ರಂದು ಬೆಳಿಗ್ಗೆ
08:00 ಗಂಟೆಯ ಅವಧಿಯೊಳಗೆ ಯಾರೋ ಕಳ್ಳರು ಶ್ರೀರಾಮನಗರದ ಗುಂಡೂರು ರಸ್ತೆಯ ಪಕ್ಕದ
ಪೆಟ್ರೋಲ್ ಬಂಕ್ ಹಿಂಭಾಗದಲ್ಲಿರುವ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿ ದೇವಸ್ಥಾನದ ಬೀಗವನ್ನು ಮುರಿದು
ಒಳಗೆ ಪ್ರವೇಶ ಮಾಡಿ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿ ಮತ್ತು ಗೋವಿಂದಮಾಂಬ ಇವರ ತಲೆಯ ಮೇಲಿದ್ದ ಎರಡು
ಬೆಳ್ಳಿಯ ಕಿರೀಟಗಳು ಅಂದಾಜು 500 ಗ್ರಾಂ ಅಂ.ಕಿ. ರೂ. 81,000-00 (2 ವರ್ಷಗಳ ಹಿಂದಿನ ಬೆಲೆ) ಬೆಲೆ
ಉಳ್ಳದ್ದನ್ನು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು
ಇರುತ್ತದೆ.
3] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 194/2017 ಕಲಂ. 13, 32, 34 Karnataka Excise
Act.
ದಿನಾಂಕ: 23-07-2016 ರಂದು ಆರೋಪಿತನು ಮಹ್ಮದನಗರದ ತನ್ನ
ಮನೆಯಲ್ಲಿ ಯಾವುದೇ ಅಧೀಕೃತ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಅಕ್ರಮ ಮಧ್ಯವನ್ನು ತಯಾರಿಸುತ್ತಿದ್ದು,
ಆ ಕಾಲಕ್ಕೆ ಶ್ರೀ. ಜಯಪ್ರಕಾಶ ಪಿ.ಎಸ್.ಐ. ಹಾಗೂ ಸಿಬ್ಬಂದಿ ಸಮೇತ ದಾಳಿ ಮಾಡಿದ್ದು, ಆರೋಪಿ ಪುಲ್ಲಿನಾಯ್ಕ
ತಂದೆ ತಿಪ್ಪಾನಾಯ್ಕ ವಯ: 58, ಜಾತಿ: ಲಮಾಣಿ, ಉ: ಕೂಲಿ ಕೆಲಸ ಸಾ: ಮಹ್ಮದನಗರ ಎಂದು ತಿಳಿಸಿರುತ್ತಾನೆ.
ಸದರಿಯವನಿಂದ 250 ಎಂ.ಎಲ್.ನಷ್ಟು ಮಧ್ಯ ತಯಾರಿಕೆಯ ರಸಾಯನಿಕ ವಸ್ತು ಮತ್ತು ಒಂದು ಹುಟ್ಟು (ಕೋಲು)
ಇವುಗಳನ್ನು ಜಪ್ತ ಪಡಿಸಿಕೊಂಡಿರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
0 comments:
Post a Comment