Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, July 25, 2017

1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 195/2017 ಕಲಂ. 279, 338 ಐ.ಪಿ.ಸಿ:
ದಿನಾಂಕ 21-07-2017 ರಂದು ಪಿರ್ಯಾದುದಾರರು ಮುನಿರಾಬಾದ - ಹೊಸಪೇಟೆ ರಸ್ತೆಯೆ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಅದೇ ರಸ್ತೆಯೆ ಮೇಲೆ ಅವರ ಮಾವನಾದ ಅಬ್ದುಲ್ ಜಬ್ಬರ ಇವರು ಮುಂದೆ ಹೋಗುತ್ತಿರುವಾಗ ಮೋ,ಸೈ,ನಂ,ಕೆ.ಎ.37/ಇ.ಡಿ.3682 ನೇದ್ದರ ಚಾಲಕನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಅಬ್ದುಲ್ ಜಬ್ಬರ್ ಇವರಿಗೆ ತಲೆಗೆ ರಕ್ತಗಾಯವಾಗಿ ಕಾಲಿಗೆ ಗಾಯ ಒಳಪೆಟ್ಟಾಗಿದ್ದು ಮಾತನಾಡುತ್ತಿರಲಿಲ್ಲಾ ಮತ್ತು ಮೋ.ಸೈ.ಹಿಂದೆ ಕುಳಿತ ಮಹೇಶ ಇವರಿಗೂ ಗಾಯ ಪೆಟ್ಟುಗಳಾಗಿರುತ್ತವೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ. 
2] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 112/2017 ಕಲಂ. 32, 34 Karnataka Excise Act.
ದಿನಾಂಕ: 24-07-2017 ರಂದು ರಾತ್ರಿ 8-10 ಗಂಟೆಗೆ ಠಾಣೆಯಲ್ಲಿದ್ದಾಗ ಹನಮಸಾಗರದ ನಾರಾಯಣಪ್ಪ ನಾಗೂರ ರವರ ಗೊಬ್ಬರದ ಅಂಗಡಿಯ ಮುಂದೆ ಬುಲೋರ ವಾಹನದಲ್ಲಿ ಸಾಗಿಸುತ್ತಿದ್ದಾನೆ ಅಂತಾ  ಖಚಿತ ಬಾತ್ಮೀ ಪಿ.ಎಸ್.ಐ. ರವರಿಗೆ ಬಂದ ಮೇರೆಗೆ ಕೂಡಲೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಹೆಚ್.ಸಿ-83, ಪಿ.ಸಿ-28, ರವರೊಂದಿಗೆ ಹನಮಸಾಗರದ ನಾರಾಯಣಪ್ಪ ನಾಗೂರ ರವರ ಅಂಗಡಿಯ ಮುಂದೆ ಬುಲೋರ ವಾಹನವಿದ್ದು ಅಲ್ಲಿಗೆ ರಾತ್ರಿ 8-40 ಗಂಟೆಗೆ ತಲುಪಿ ಆರೋಪಿ ಸುಬಾಷಚಂದ್ರ ನನ್ನು ಮತ್ತು 180 ಎಂ.ಎಲ ಓಲ್ಡ ಟವರನ್ 2 ಮದ್ಯದ ಬಾಟಲಿಗಳು ಅಂದಾಜು ಕಿಂ:137-12 ಹಾಗೂ ಒಂದು ಬುಲೋರ ವಾಹನ ನಂ: ಕೆ.ಎ-37 -9059 ಅಂದಾಜ ಕಿಂ: 50,000/- ರೂಪಾಯಿ ಆಗ ಬಹುದು ಹಾಗೂ 300/- ರೂಪಾಯಿ ನಗದು ಹಣ ಸಿಕ್ಕಿದ್ದು ಸದರ ದಾಳಿ ಪಂಚನಾಮೆಯನ್ನು ಇಂದು ರಾತ್ರಿ 8-40 ಗಂಟೆಯಿಂದ 09-55 ಗಂಟೆಯವರಗೆ ನಿರ್ವಹಿಸಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿದ್ದು ಇರುತ್ತದೆ.
3]  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 233/2017 ಕಲಂ 34 Karnataka Excise Act.
ದಿನಾಂಕ:- 24-07-2017 ರಂದು  ಮುಕ್ಕುಂಪಿ ಗ್ರಾಮದಲ್ಲಿ ಬೆಟ್ಟದಪ್ಪ ಪೂಜಾರ ಎಂಬುವವನ ಅಕ್ರಮ ಮಧ್ಯ ಮಾರಾಟ ದಾಳಿ ಮುಗಿದ ನಂತರ ಪುನ: ಮುಕ್ಕುಂಪಿ ಗ್ರಾಮದ ಬನ್ನಿ ಕಟ್ಟೆಯ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತವಾದ ಭಾತ್ಮೀ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ ರವರಿಗೆ ಬಂದ ಮೇರೆಗೆ ಸಿಬ್ಬಂದಿಯವರು ಹಾಗೂ ಪಂಚರು ಕೂಡಿಕೊಂಡು ಸಂಜೆ 5:00 ಗಂಟೆಗೆ  ಬನ್ನಿ ಕಟ್ಟೆಯ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ  ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮಧ್ಯದ ಟೆಟ್ರಾ ಪಾಕೇಟಗಳನ್ನು ಇಟ್ಟುಕೊಂಡು ಯಾವುದೇ ಲೈಸೆನ್ಸ್ ಇಲ್ಲದೇ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ   ಇಂದ್ರೇಶ ತಂದೆ ಈಶಪ್ಪ ಕೆಂಗೇರಿ, ವಯಸ್ಸು 20 ವರ್ಷ, ಜಾತಿ: ಕುರುಬರು ಉ: ಒಕ್ಕಲುತನ ಸಾ: ಮುಕ್ಕುಂಪಿ.  ತಾ- ಗಂಗಾವತಿ  ಜಿ- ಕೊಪ್ಪಳ ಎಂಬುವನ ಮೇಲೆ ದಾಳಿ ಮಾಡಿ ಹಿಡಿದು  ಅಕ್ರಮವಾಗಿ ಮಾರಾಟ ಮಾಡಲು ಇಟ್ಟಿದ್ದ  (1) 8 PM Whisky 180 ml.ನ 7 ಟೆಟ್ರಾ ಪಾಕೇಟಗಳು (ಪ್ರತಿಯೊಂದರ ಬೆಲೆ ರೂ. 68.56)  ಅಂ.ಕಿ. ರೂ. 479.92  (2) Old Tavern Whisky  180 ml . ನ 15  ಟೆಟ್ರಾ ಪಾಕೇಟಗಳು (ಪ್ರತಿಯೊಂದರ ಬೆಲೆ ರೂ. 68.56) ಅಂ.ಕಿ. ರೂ. 1028.40  (3) Original Choise Whisky 180 ml. n 44 ಟೆಟ್ರಾ ಪಾಕೀಟ್ ಗಳು (ಪ್ರತಿಯೊಂದರ ಬೆಲೆ ರೂ. 56.27)  ಅಂ.ಕಿ. ರೂ. 2,475.88 ಈ ಪ್ರಕಾರ ಒಟ್ಟು 11.880 ಲೀಟರ್ ಮಧ್ಯ ಅಂದಾಜು ಕಿಮ್ಮತ್ತು  ರೂ. 3,984.20 /- ಹಾಗೂ ಮಧ್ಯ ಮಾರಾಟದಿಂದ ಬಂದ ನಗದು ಹಣ ರೂ. 50-00 ಗಳನ್ನು ಜಪ್ತು ಮಾಡಿದ್ದು ಇರುತ್ತದೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.  
4] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 185/2017 ಕಲಂ. 323, 353, 504, 506 ಐ.ಪಿ.ಸಿ:

ದಿನಾಂಕ 24-07-2017 ರಂದು ಬೆಳಿಗ್ಗೆ 11-00 ಗಂಟೆಗೆ ಶ್ರೀ ಟಿ.ಜೆ. ನಾಗರಾಜ ಪಿ.ಎಸ್.ಐ.-1, ಸಂಚಾರಿ ಪೊಲೀಸ್ ಠಾಣೆ, ಗಂಗಾವತಿ ರವರು ಒಂದು ಲಿಖಿತ ಫಿರ್ಯಾದಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ 24-07-2017 ರಂದು ಬೆಳಿಗ್ಗೆ 9-30 ಗಂಟೆಗೆ ಗಂಗಾವತಿ ನಗರದಲ್ಲಿ ಪಟ್ರೋಲಿಂಗ್ ಮಾಢುತ್ತಾ ಗಾಂಧಿ ಸರ್ಕಲ್ ಗೆ ಬಂದು ಸಾರ್ವಜನಿಕ ಸುಗಮ ಸಂಚಾರಕ್ಕಾಗಿ ಇಡ್ಲಿ ಬಂಡಿಯನ್ನು ತೆಗೆಯುವಂತೆ ಖಾಸೀಂಸಾಬ ತಂದೆ ಖಾದರ್ ಸಾಬ, ವಯಸ್ಸು 50 ವರ್ಷ, ಉ: ಇಡ್ಲಿ ವ್ಯಾಪಾರ, ಸಾ: ಗಂಗಾವತಿ ಇವನಿಗೆ ಹೇಳಿದ್ದು, ಅಲ್ಲದೇ ನಿನ್ನೆ ದಿನಾಂಕ 23-07-2017 ರಂದು ನೀಡಿದ ಲಘು ಪ್ರಕರಣದ ನೋಟೀಸ್ ಕುರಿತಂತೆ ಮಾನ್ಯ ನ್ಯಾಯಾಲಯಕ್ಕೆ ಹೋಗಿ ದಂಡ ಪಾವತಿಸುವಂತೆ ತಿಳಿಸಿ ಸಿ.ಬಿ. ಸರ್ಕಲ್ ಕಡೆಗೆ ಹೋಗಿದ್ದು ಇರುತ್ತದೆ.  ನಂತರ ಬೆಳಿಗ್ಗೆ 10-30 ಗಂಟೆ ಸುಮಾರಿಗೆ ವಾಪಸ್ ಗಾಂಧಿ ಸರ್ಕಲ್ ಗೆ ಬಂದು ನೋಡಿದಾಗ ಸದರಿ ಖಾಸಿಂಸಾಬ ಇವನು ಗಾಂಧಿ ಸರ್ಕಲ್ ಮಧ್ಯದಲ್ಲಿಯೇ ನಿಂತುಕೊಂಡು ಇಡ್ಲಿ ವ್ಯಾಪಾರ ಮಾಡುತ್ತಿದ್ದು ಗಾಂಧಿ ಸರ್ಕಲ್ ದಲ್ಲಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದ ಮೇಘರಾಜ ಹೆಚ್.ಸಿ. 192 ರವರಿಗೆ ಬಂಡಿ ತೆಗೆಸುವಂತೆ ಹೇಳಿದ್ದು, ಅವರು ಖಾಸಿಂಸಾಬನಿಗೆ ಬಂಡಿ ತೆಗೆಯುವಂತೆ ಹೇಳಿದಾಗ ಬಂಡಿ ಮಾಲೀಕನು “ನಾನು ಬಂಡಿ ತೆಗೆಯುವುದಿಲ್ಲ, ನೀನು ನಿಮ್ಮ ಪಿ.ಎಸ್.ಐ. ಏನು ಮಾಡಿಕೊಳ್ಳುತ್ತೀರಿ ಮಾಡಿಕೊಳ್ಳಿ” ಅಂತಾ ಏರುಧ್ವನಿಯಲ್ಲಿ ಹೇಳಿದ್ದು, ಅದಕ್ಕೆ ನಾನು “ಏಕೆ ಬಂಡಿ ತೆಗೆಯುವುದಿಲ್ಲ, ಸಾರ್ವಜನಿಕರಿಗೆ ಏಕೆ ತೊಂದರೆ ನೀಡುತ್ತೀ” ಅಂತಾ ಹೇಳಿದ್ದಕ್ಕೆ ಸದರಿಯವನು “ಲೇ ಪೊಲೀಸ್ ಸೂಳೇಮಕ್ಕಳೇ ನೀವೇನು ಶಂಟಾ ನನಗೆ ಬಂಡಿ ತೆಗಿ ಅಂತಾ ಹೇಳುತ್ತೀರಿ, ನಿಮ್ಮದು ಪೊಲೀಸರದು ಬಹಳ ಆಗಿದೆ ನಿಮ್ಮನ್ನು ಜೀವ ಸಹಿತ ಉಳಿಸಬಾರದು ನನ್ನನ್ನು ನೀವು ಯಾರು ಅಂತಾ ತಿಳಿದುಕೊಂಡಿದ್ದೀರಿ ನನ್ನ ತಂಟೆಗೆ ಬಂದವರು, ಇದುವರೆಗೂ ಯಾರೂ ಜೀವಂತ ಉಳಿದುಕೊಂಡಿಲ್ಲಾ ನಿಮಗೆ ಈಗ ಒಂದು ಗತಿ ಕಾಣಿಸುತ್ತೇನೆ” ಅಂತಾ ಹೇಳುತ್ತಾ ಸಮವಸ್ತ್ರದಲ್ಲಿದ್ದ ನನ್ನ ಎದೆಯ ಮೇಲಿನ ಅಂಗಿಯನ್ನು ಹಿಡಿದುಕೊಂಡು ಎಳೆದಾಡಿದನು.  ಅಲ್ಲಿಯೇ ಇದ್ದ ಮೇಘರಾಜ, ಪ್ರಭುಗೌಡ ಎ.ಪಿ.ಸಿ. ರವರು ನನ್ನನ್ನು ಬಂದು ಬಿಡಿಸಿದರು.  “ಇನ್ನೊಮ್ಮೆ ಬಂದು ನನ್ನ ಬಂಡಿ ತೆಗೆಯೆಂದರೆ ನೀನು ಗಂಗಾವತಿಯಲ್ಲಿ ಕೆಲಸ ಮಾಡುವುದು ಕಷ್ಟ ಆಗುತ್ತದೆ” ಅಂತಾ ಬೆದರಿಕೆ ಹಾಕಿದ್ದು ಇರುತ್ತದೆ.  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008