1] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 113/2017 ಕಲಂ. 78(3) Karnataka Police Act.
ಪಿ.ಎಸ್.ಐ. ಹಾಗೂ ಸಿಬ್ಬಂದಿಯವರು ಇಂದು ಸಾಯಾಂಕಾಲ 16-00
ಗಂಟೆಗೆ ಠಾಣೆಯಲ್ಲಿದ್ದಾಗ ಹನಮಸಾಗರದ ಚನ್ನಮ್ಮ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಇಬ್ಬರು ಪಂಚರ ಸಮೇತ
ಹೋಗಿ ದಾಳಿ ಮಾಡಲಾಗಿ ಮಟಕಾ
ಬರೆದುಕೊಂಡು ಹಣ ಪಡೆದುಕೊಳ್ಳುವವನು ಸಿಕ್ಕಿಬಿದಿದ್ದು, ಮಟಕಾ ಚೀಟಿ ಬರೆದುಕೊಡುವವನ ಹೆಸರು
ವಿಳಾಸ ವಿಚಾರಿಸಲು ತನ್ನ ಹೆಸರು ಖಾಜೇಸಾಬ ತಂದೆ ದಾದೇಸಾಬ ಚೌಧರಿ, ವಯಾ:
61 ವರ್ಷ, ಜಾತಿ: ಮುಸ್ಲಿಂ, ಸಾ: ಹನಮಸಾಗರ,
ಅಂತಾ ತಿಳಿಸಿದ್ದು ಅವನ ಹತ್ತಿರ ಮಟಕಾ ಚೀಟಿ, 1110=00 ರೂಪಾಯಿ ನಗದು ಹಣ ಹಾಗೂ ಒಂದು ಬಾಲಪೆನ್ನ ಜಪ್ತಮಾಡಿಕೊಂಡಿದ್ದು ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈ ಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 173/2017 ಕಲಂ. 34 ಅಬಕಾರಿ ಕಾಯ್ದೆ:
ಫಿರ್ಯಾದಿದಾರರು ದಿ:28-07-2017 ರಂದು ರಾತ್ರಿ
9-45 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೇ, ಇಂದು ದಿ:28-07-2017 ರಂದು
ರಾತ್ರಿ 7-10 ಗಂಟೆಗೆ
ಠಾಣಾ ವ್ಯಾಪ್ತಿಯ ಹಾಸಗಲ್ ಗ್ರಾಮದ ಗಂಗನಾಳ ಕ್ರಾಸ್ ಸಮೀಪ ಮೂರು ಜನ ವ್ಯಕ್ತಿಗಳು ಅಕ್ರಮವಾಗಿ
ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದರಿಂದ, ಫಿರ್ಯಾದಿದಾರರು
ಸಿಬ್ಬಂದಿ ಸಂಗಡ ಕರೆದುಕೊಂಡು ರಾತ್ರಿ 8-00
ಗಂಟೆಗೆ ದಾಳಿ ಮಾಡಿ ಆರೋಪಿ ನಂ: 01 ನೇದ್ದವರಿಗೆ ವಶಕ್ಕೆ ತೆಗೆದುಕೊಂಡು, ಹಾಯವಾರ್ಡ್ಸ
ಚೀಯರ್ಸ ವಿಸ್ಕಿ. 90 ಎಮ್.ಎಲ್. ಅಳತೆಯ ಒಂದು ಟೆಟ್ರಾಪಾಕೇಟ್ ಅಂ.ಕಿ. 28=13 ರೂ. ಹೀಗೆ ಒಟ್ಟು 62 ಟೆಟ್ರಾಪಾಕೇಟಗಳು ಅಂ.ಕಿ. 1,744=06. ರೂ. ಬೆಲೆಬಾಳುವುಗಳನ್ನು ಪಂಚರ ಸಮಕ್ಷಮ
ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿದ್ದು ಇರುತ್ತದೆ.
0 comments:
Post a Comment