1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 198/2017 ಕಲಂ. 15(C) NDPS Act.
ದಿನಾಂಕ: 27-07-2017 ರಂದು ಮದ್ಯಾಹ್ನ
2-15 ಗಂಟೆಗೆ ಪಿರ್ಯಾದಿದಾರರು ಗಸಗಸೆ ಸಿಪ್ಪೆಯ ಮಾದಕ ವಸ್ತುವಿನ ದಾಳಿ ಪಂಚನಾಮೆ, ಮುದ್ದೆಮಾಲು ಹಾಗೂ
ಒಬ್ಬ ಆರೋಪಿತನೊಂದಿಗೆ ವರದಿಯನ್ನು ಹಾಜರ ಪಡಿಸಿದ್ದು ಅದರ ಸಾರಾಂಶವೇನಂದರೆ, ಇಂದು ದಿನಾಂಕ: 27-07-2017 ರಂದು ಮುಂಜಾನೆ 11-30 ಗಂಟೆ
ಸುಮಾರಿಗೆ ಕೂಕನಪಳ್ಳಿ ಸೀಮಾದಲ್ಲಿರುವ ಬಲ್ ಪಂಜಾಬಿ ಡಾಬಾದ ಮಾಲೀಕರನಾದ ಮೇಲ್ಕಂಡ ಆರೋಪಿತನು ತನ್ನ
ಡಾಬಾದ ಹಿಂದೆ ಹೊಲದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಗಸಗಸೆ ಸಿಪ್ಪೆಯ ಮಾದಕ ವಸ್ತುವನ್ನು
ಅಕ್ರಮವಾಗಿ ಇಟ್ಟುಕೊಂಡಿದ್ದು, ಸದರಿ ಗಸಗಸೆ ಸಿಪ್ಪೆಯ ಮಾದಕ ವಸ್ತುವನ್ನು ಪಿರ್ಯಾದಿದಾರರು ದಾಳಿ
ಮಾಡಿ ಹಿಡಿದಿದ್ದು, ಆ ಕಾಲಕ್ಕೆ 5 ಳಿ ಕೆ.ಜಿ. ಗಸಗಸೆ ಸಿಪ್ಪೆಯ ಮಾದಕ ವಸ್ತು ಅಂದಾಜು ಮೌಲ್ಯ
5500-00 ರೂ. ವಸ್ತುವನ್ನು ಪಂಚರ ಸಮಕ್ಷಮದಲ್ಲಿ ಜಪ್ತ ಪಡಿಸಿಕೊಂಡಿರುತ್ತಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತದೆ.
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 109/2017 ಕಲಂ. 505 ಐ.ಪಿ.ಸಿ:
ದಿನಾಂಕ: 27-07-2017 ರಂಧು ಬೆಳಿಗ್ಗೆ 10-45 ಗಂಟೆಯ ಸುಮಾರಿಗೆ ನನ್ನ ವಾಟ್ಸಾಪ್ ನ ಹಾಲುಮತ
ಮಹಾಸಭಾದ ಗ್ರುಪ್ ನಲ್ಲಿ ನೋಡುತ್ತಿದ್ದಾಗ ಹಾಲುಮತ ಮಹಾಸಭಾದ ಸದಸ್ಯರಾಧ ನಿಂಗಜ್ಜ ಇವರ ಫೋನ್ ನಂ:
8123494264 ನೇದ್ದರಿಂದ ಒಂದು ಪೋಟೋ ಬಂದಿದ್ದು, ಅದರಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ
ಸಿದ್ದರಾಮಯ್ಯ ರವರಿಗೆ ಹೂವಿನ ಹಾರ ಹಾಕಿ ಶವದಂತೆ ಕುಳಿಸಿರುವ ಪೋಟೋ ಇದ್ದು ಆಗ ನಾನು ಕೂಡಲೇ
ನಿಂಗಜ್ಜ ರವರಿಗೆ ವಿಚಾರಿಸಲಾಗಿ ಸದರಿ ಪೋಟೋವನ್ನು ಗಂಗಾವತಿ ತಾಲೂಕ ಮೈಲಾಪೂರ ಗ್ರಾಮದ ವಾಗೀಶ
ನವಲಿ ಹಿರೇಮಠ ಈತನು ದಿನಾಂಕ: 26-07-2017 ರಂದು ಸಂಜೆ 07-32 ಗಂಟೆಗೆ ತನ್ನ ಮೊಬೈಲ್ ಫೇಸ್
ಬುಕ್ಕಿನಲ್ಲಿ ಈ ರೀತಿ ಮಾಡಿ ಪೋಟೋ ತಯಾರಿಸಿ ಹರಿಬಿಟ್ಟು ಸಮಾಜಿಕ ಜಾಲತಾಣದ ಮೂಲಕ ಅವಮಾನ
ಮಾಡಿರುತ್ತಾನೆ. ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು.
0 comments:
Post a Comment