Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, July 6, 2017

1]  ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 192/2017 ಕಲಂ. 279, 304(ಎ) ಐ.ಪಿ.ಸಿ:
ದಿನಾಂಕ :05-07-2017 ರಂದು ಮುಂಜಾನೆ 6-00 ಗಂಟೆಯ ಸುಮಾರಿಗೆ ಪಿರ್ಯಾದಿಯ ಅಣ್ಣನು ತನಗೆ ಕರೆಮಾಡಿ ನಾನು ಊರಿಗೆ ಬರುತ್ತಿದ್ದೆನೆಂದು ಹೇಳಿದ್ದು ಸುಮಾರು 9-50 ಗಂಟೆಯ ವೇಳೆಗೆ ನನಗೆ ಪರಿಚಯವಿದ್ದ ಶಂಕರಗೌಡ ತಂದೆ ಅಮರೇಗೌಡ ಇವರು ನನಗೆ ಪೋನಮಾಡಿ ನಿಮ್ಮ ಅಣ್ಣನ ಕಾರು ಕುಷ್ಟಗಿ-ತಾವರಗೇರಾ ರಸ್ತೆಯ  ಮೇಲೆ ಗುಮಗೇರಾ ಹತ್ತಿರ ರಸ್ತೆಯಲ್ಲಿ ಸುಮಾರು 9-30 ಗಂಟೆಯ ವೇಳೆಗೆ ಪಲ್ಟಿಯಾಗಿದ್ದು ನಿಮ್ಮ ಅಣ್ಣನನ್ನು 108 ವಾಹನದಲ್ಲಿ ಹಾಕಿಕೊಂಡು ಕುಷ್ಟಗಿಗೆ ಕರೆದುಕೊಂದು ಹೋಗಿರುತ್ತಾರೆಂದು ತಿಳಿಸಿ ನಾನು ಕುಷ್ಟಗಿಗೆ ಹೋಗಿ ನೋಡುತ್ತಾನೆಂದು ಹೇಳಿದ್ದು ತಕ್ಷಣ ನಾನು ನಮ್ಮ ಚಿಕ್ಕಪ್ಪನಾದ ಜಿ. ಬಸಪ್ಪ ನಮ್ಮ ತಮ್ಮ ಚನ್ನಬಸವ ಕೂಡಿಕೊಂಡು ಊರಿಂದ ಹೊರಟಿದ್ದು ನಂತರ ಶಂಕರಗೌಡ ಇವರು ನನಗೆ ಕರೆಮಾಡಿ ನಿಮ್ಮ ಅಣ್ಣನವರು ಮುಂಜಾನೆ 11-00 ಗಂಟೆಯ ಸುಮಾರಿಗೆ ಕುಷ್ಟಗಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ತಿಳಿಸಲು ನಾವು ಗುಮಗೇರ ಹತ್ತಿರ ಅಪಘಾತವಾದ ಸ್ಥಳದಲ್ಲಿ ಬಂದು ನೋಡಲು ಸಂಗತಿಯು ನಿಜವಿದ್ದು ಅಪಘಾತವಾದ ಕಾರು ನಮ್ಮದೆ ಇದ್ದು ಇದನ್ನು ನಮ್ಮ ಅಣ್ಣನು ನಡೆಸುತ್ತಿದ್ದನು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ 
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 160/2017 ಕಲಂ. 279, 338 ಐ.ಪಿ.ಸಿ 187 ಐ.ಎಂ.ವಿ. ಕಾಯ್ದೆ:
ದಿ:05-07-2017  ರಂದು 01-10 ¦.ಎಮ್ ಕ್ಕೆ ಫಿರ್ಯಾದಿದಾರರಾದ ಶರಣಪಪ್ಪ ತಂದಿ ಗಿರಿಯಪ್ಪ ಹಡಪದ್ : ಖಾಸಗಿ ಕೆಲಸ ಇವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿ:04-07-2017 ರಂದು 02-30 ಪಿ,ಎಮ್ ಸುಮಾರಿಗೆ ಫಿರ್ಯಾದಿದಾರರು  ತನ್ನ ಮೋ. ಸೈಕಲ್ ನಂ: ಕೆ.ಎ:37/,ಸಿ -0113 ನೇದ್ದನ್ನು ಓಡಿಸಿಕೊಂಡು ಗಿಣಗೇರದ ಗಂಗಾವತಿ ಸರ್ಕಲ್ ಹತ್ತಿರ ವಾಹನ ಹೋಗುವಾಗ ಅದೇ ಸಮಯಕ್ಕೆ ಮುಂದುಗಡೆಯಿಂದ ಹೊಂಡಾ ಸೈನ್  ವಾಹನಂ: ನಂ: ಕೆಎ-37/ಇ.ಸಿ: 9930 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸುತ್ತಾ ಮುಂದೆ ಹೊರಟಿದ್ದ ಫಿರ್ಯಾದಿದಾರರ ಮೋಟಾರ ಸೈಕಲ್ ಗೆ ನಿಗದಿತ ಅಂತರ ಕಾಯ್ದುಕೊಳ್ಳದೇ ಬಂದು ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಗಾಡಿ ಸಮೇತ ರಸ್ತೆಯ ಬಲತಗ್ಗಿನಲ್ಲಿ ಬಿದ್ದಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಫಿರ್ಯಾದಿ ಮಾವನಾದ ಕರಿಬಸಪ್ಪವರಿಗೆ ಬಲಗಾಲು ಮೊಣಕಾಲು ಕೆಳಗೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ, ಕಾರಣ ಅಪಘಾತ ಮಾಡಿದ ಹೊಂಡಾಸೈನ್ ವಾಹನದ ನಂ: ಕೆಎ-37/ಇಸಿ: 9930 ನೇದ್ದರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ತಡವಾಗಿ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 74/2017 ಕಲಂ. 87 Karnataka Police Act.
ದಿನಾಂಕ:-04.07.2017 ರಂದು ಮದ್ಯಾಹ್ನ 2:15 ಗಂಟೆ ಸುಮಾರಿಗೆ ಗುಂತಮಡು ಗ್ರಾಮದ ಮಾರುತೇಶ್ವರ ದೇವಸ್ಥಾನದ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಇಸ್ಪೆಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ದಾಳಿ ಮಾಡಿದಾಗ 04 ಜನ ಆರೋಪಿತರು ಸಿಕ್ಕಿ ಬಿದ್ದಿದ್ದು ನಂತರ ದಾಳಿಯ ಕಾಲಕ್ಕೆ 03 ಜನ ಆರೋಪಿತರು ಓಡಿ ಹೋಗಿದ್ದು ಸದರಿ ಸಿಕ್ಕಿಬಿದ್ದ ಆರೋಪಿತರಿಂದ 390=00 ರೂ ನಗದು ಹಣ ಹಾಗೂ ಇಸ್ಪೆಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.  
4] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 78/2017 ಕಲಂ. 87 Karnataka Police Act.
 ದಿನಾಂಕ:-04.07.2017 ರಂದು ಸಾಯಂಕಾಲ 6:15 ಗಂಟೆ ಸುಮಾರಿಗೆ  ಹಿರೇವಡ್ರಕಲ್ ಸೀಮಾದಲ್ಲಿರುವ ಸಾರ್ವಜನಿಕ ಸ್ಥಳದ ಜಾಲಿ ಹಳ್ಳದಲ್ಲಿ ಇಸ್ಪೆಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ದಾಳಿ ಮಾಡಿದಾಗ 10 ಜನ ಆರೋಪಿತರೆಲ್ಲರೂ ಸಿಕ್ಕಿ ಬಿದ್ದಿದ್ದು ಸದರಿ ಸಿಕ್ಕಿಬಿದ್ದ ಆರೋಪಿತರಿಂದ 3000=00 ರೂ ನಗದು ಹಣ ಹಾಗೂ ಇಸ್ಪೇಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008