Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, July 8, 2017

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 146/2017 ಕಲಂ. 87 Karnataka Police Act:
ದಿನಾಂಕಃ-07-07-2017 ರಂದು ಸಾಯಂಕಾಲ 5-20 ಗಂಟೆಗೆ ಶ್ರೀ ಯಲ್ಲಪ್ಪ, ಪಿ.ಎಸ್.ಐ ಕಾರಟಗಿರವರು ಒಂದು ಇಸ್ಪೀಟ್ ಜೂಜಾಟದ ದಾಳಿಯ ವರದಿ ಮೂಲ ಪಂಚನಾಮೆ ಮತ್ತು ಮಾನ್ಯ ನ್ಯಾಯಾಲಯದ ಅನುಮತಿ ಪತ್ರದೊಂದಿಗೆ ವರದಿಯನ್ನು ಹಾಜರುಪಡಿಸಿದ್ದು ಸಾರಾಂಶವೆನಂದರೆ, ಇಂದು ದಿನಾಂಕ 07-07-2017 ರಂದು ಮದ್ಯಾಹ್ನ 3-40 ಗಂಟೆಗೆಯ ಸುಮಾರಿಗೆ ಸಿದ್ದಾಪೂರ ಸೀಮಾ ಮೊಹಮ್ಮದ ಉಮರಸಾಬ ರವರ ಹೊಲದ ಪಕ್ಕದ ಹಳ್ಳದಲ್ಲಿ ದಂಡೆಯಲ್ಲಿ ಸಾರ್ವಜನಿಕರ ಸ್ಥಳದಲ್ಲಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ ಆರೋಪಿತರ ಮೇಲೆ ಪಿ.ಎಸ್.. ಹಾಗೂ ಸಿಬ್ಬಂದಿಯವರು ಹಾಗೂ ಪಂಚರ ಸಮಕ್ಷದಲ್ಲಿ ದಾಳಿ ಮಾಡಿದಾಗ ಆರೋಪಿ ನಂ-1 ರಿಂದಾ 8 ನೇದ್ದವರು ಸಿಕ್ಕಿಬಿದ್ದಿದ್ದು ಎ-9 ಓಡಿ ಹೋಗಿದ್ದು ಸದರ್ ಸಿಕ್ಕಿಬಿದ್ದಿರುವ ಆರೋಪಿತರ ವಶದಿಂದ ರೂ. 3830/- ಹಾಗೂ ಇಸ್ಪೇಟ್ ಜೂಜಾಟದ ಸಾಮಾಗ್ರಿಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 147/2017 ಕಲಂ. 78(3) Karnataka Police Act:
ದಿನಾಂಕ:-07-07-2017 ರಂದು ಸಂಜೆ 5-20 ಗಂಟೆಗೆ ಸಿದ್ದಾಪೂರ ಗ್ರಾಮದ ಬಸವಣ್ಣ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಮೂದು ಮಾಡಿದ ಆರೋಪಿತನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ನೀಲಪ್ಪ ಎ.ಎಸ್.ಐ ರವರು ಮತ್ತು ಪಿ.ಸಿ 90ರವರು ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿ ಸಿಕ್ಕಿಬಿದ್ದದ್ದು ಆರೋಪಿತನಿಂದ ರೂ. 820=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಅಂತಾ ನೀಡಿದ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 119/2017 ಕಲಂ. 78(3) Karnataka Police Act:
ದಿನಾಂಕ: 07-07-2017 ರಂದು ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ ಆರೋಪಿತನು ಕಾತರಕಿ ಗ್ರಾಮದಲ್ಲಿ ಬರುವ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ನಿರತನಾಗಿದ್ದಾಗ, ಪಿಯರ್ಾದಿದಾರರು ತಮ್ಮ ಸಿಬ್ಬಂದಿ ಮತ್ತು ಪಂಚರೊಂದಿಗೆ ಮಟಕಾ ಜೂಜಾಟದ ದಾಳಿ ಮಾಡಿ, ಮಟಕಾ ಜೂಜಾಟದಲ್ಲಿ ನಿರತನಾಗಿದ್ದ ಆರೋಪಿತನಿಂದ ಮಟಕಾ ಜೂಜಾಟದ ಸಾಮಗ್ರಿಗಳನ್ನು ಹಾಗೂ ನಗದು ಹಣ 670=00 ರೂ.ಗಳನ್ನು ಜಪ್ತ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  
4] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 200/2017 ಕಲಂ. 78(3) Karnataka Police Act.
ದಿನಾಂಕ: 07-07-2017 ರಂದು ಸಂಜೆ 7:00 ಗಂಟೆಗೆ ಶ್ರೀ ಪ್ರಕಾಶ. ಎಲ್. ಮಾಳಿ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಇವರು ಆರೋಪಿತನೊಂದಿಗೆ ಮೂಲ ಪಂಚನಾಮೆ, ಮುದ್ದೆಮಾಲು ಹಾಗೂ ವರದಿಯನ್ನು ಸಲ್ಲಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ಇಂದು

ದಿ:- 07-07-2017 ರಂದು ಸಂಜೆ ಶ್ರೀ ಪ್ರಕಾಶ. ಎಲ್. ಮಾಳಿ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯ ಬರುವ ದಾಸನಾಳ ಬ್ರಿಡ್ಜ್ ಹತ್ತಿರ ಒಂದು ಬಂಡಿ ಹೋಟಲ್ ಮುಂಭಾಗದಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿ ಮತ್ತು ಇಬ್ಬರು ಪಂಚರು ಕರೆದುಕೊಂಡು ಹೋಗಿ ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಮಟಕಾ ಪಟ್ಟಿ ಬರೆಯುತ್ತಿದ್ದವನು ಸಿಕ್ಕಿಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ಸಿಕ್ಕವನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಸೈಯ್ಯದ್ ದಾದಾ ತಂದೆ ಸೈಯ್ಯದ್ ಮೀರ ಹೋಟಲ್, ವಯಸ್ಸು 30 ವರ್ಷ, ಜಾತಿ: ಮುಸ್ಲೀಂ ಉ: ಆಟೋ ಚಾಲಕ ಸಾ: ದಾಸನಾಳ ಬ್ರಿಡ್ಜ್. ತಾ: ಗಂಗಾವತಿ ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 950/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ್ಪೆನ್ನು ದೊರೆತಿದ್ದು ಇದೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008