1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 124/2017 ಕಲಂ: 392 IPC.
ದಿನಾಂಕ:
15-08-2017 ರಂದು ಬೆಳಗ್ಗೆ 06-00 ಗಂಟೆಗೆ ಫಿರ್ಯಾದಿ ಶ್ರೀಮತಿ ವಿದ್ಯಾ ಗಂಡ ನಾಗೇಶ ರಾಯಭಾಗಿ ಸಾ:
ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ತಾವು ಹಾಗೂ ತಮ್ಮ ಯಜಮಾನರು
ಮತ್ತು ಮಗ ಗಣೇಶ ಇವರು ಕೂಡಿಕೊಂಡು ಗಣೇಶನಿಗೆ ಹೆಣ್ಣು ನೋಡಿಕೊಂಡು ಬರಲು ಇಲಕಲ್ ಕ್ಕೆ ಹೋಗಿದ್ದು,
ವಾಪಾಸ ರಾತ್ರಿ 08-45 ಗಂಟೆಯ ಸುಮಾರಿಗೆ ನಾನು ಹಾಗೂ ನನ್ನ ಗಂಡ ಇಬ್ಬರೂ ನಡೆದುಕೊಂಡು ಜವಾಹರ
ರಸ್ತೆಯಲ್ಲಿ ಬಂದಿದ್ದು, ದಿವಟರ್ ಸರ್ಕಲ್ ದಾಟಿದ ನಂತರ ದಿವಟರ್ ರವರ ಮನೆಯ ಮುಂದೆ ಬರುತ್ತಿರುವಾಗ
ನಮ್ಮ ಹಿಂದುಗಡೆಯಿಂದ ಯಾರೋ ಅಪರಿಚಿತರು ಪಲ್ಸರ್ ಮೋಟಾರ್ ಸೈಕಲ್ ಮೇಲೆ ಬಂದಿದ್ದು, ಸದರಿ 2 ಜನರು
ಸುಮಾರು 30-35 ವರ್ಷದ ವಯೋಮಾನದ ಗಂಡಸರು ಇದ್ದು, ಮಧ್ಯಮ ಮೈಕಟ್ಟು ಹೊಂದಿದವರಿರುತ್ತಾರೆ, ನಾನು ಹಾಕಿಕೊಂಡಿದ್ದ
ಕರಿಮಣಿ ಸರದ ಬಂಗಾರದ ಗುಂಡುಗಳು ಹಾಗೂ ಬಂಗಾರದ ಪದಕವಿರುವ ಅಂದಾಜು 8 ಗ್ರಾಂ ಇರುವ ಒಂದು ತಾಳಿ ಚೈನ್,
ಅಂ.ಕಿ ರೂ- 21,000=00 ರೂಗಳು ಹಾಗೂ ನನ್ನ ಕೊರಳಲ್ಲಿದ್ದ ರಾಣಿ ಹಾರ (ಲಾಂಗ್ ಚೈನ್) ಅಂದಾಜು 48
ಗ್ರಾಂ ಇರುವದು, ಅಂ.ಕಿ ರೂ 1,20,000=00 ರೂಗಳು ಹೀಗೆ ಒಟ್ಟು 1,41,000=00 ಗಳ ಬೆಲೆ ಬಾಳುವ ಬಂಗಾರದ
ಸಾಮಾನುಗಳನ್ನು ಯಾರೋ ಅಪರಿಚಿತ 2 ಗಂಡಸು ವ್ಯಕ್ತಿಗಳು ಜಬರ್ ದಸ್ತಿಯಿಂದ ಸುಲಿಗೆ ಮಾಡಿಕೊಂಡು
ಹೋಗಿದ್ದರಿಂದ ಸದರಿ 2 ಜನ ಸುಲಿಗೆಕೋರರನ್ನು ಪತ್ತೆ ಮಾಡಿ ಹಾಗೂ ನಮ್ಮ ಒಡವೆ ಪತ್ತೆ ಮಾಡಿಕೊಡಲು ವಿನಂತಿ
ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಸಂಚಾರ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 39/2017 ಕಲಂ 279, 304(ಎ) ಐ.ಪಿ.ಸಿ
ದಿನಾಂಕ. 15-08-2017
ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಫಿರ್ಯಾದಿ
ಶ್ರೀಮತಿ ಸಲೀಮಾ ಗಂಡ ಅಲ್ಲಾಭಕ್ಷಿ ಹನಕುಂಟಿ ವಯ. 32 ಜಾತಿ.
ಮುಸ್ಲಿಂ ಉ. ಮನೆ ಕೆಲಸ ಸಾ. ಸರದಾರ ಗಲ್ಲಿ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಹೇಳಿಕೆಯನ್ನು ನೀಡಿದ್ದು ಅವರ ಹೇಳಿಕೆಯನ್ನು ಗಣಕೀಕರಣ ಮಾಡಿಕೊಂಡಿದ್ದು
ಸದರಿ ಗಣಕೀಕರಣ ಫಿರ್ಯಾದಿಯ ಸಾರಾಂಶವೇನೆಂದರೆ, ನಿನ್ನೆ ದಿನಾಂಕ. 14-08-2017 ರಂದು ಮದ್ಯಾಹ್ನ 1-30
ಗಂಟೆಯ ಸುಮಾರಿಗೆ ಫಿರ್ಯಾದಿಯ ಅತ್ತೆ ರಾಜಮ್ಮ ಮತ್ತು ಅವರ ಮಗ
ಅಮೀನಸಾಬ ಇಬ್ಬರೂ ಮೊಟಾರ್ ಸೈಕಲ್ ಮೇಲೆ ಕಾತರಕಿ ಗ್ರಾಮಕ್ಕೆ ಹೋಗುವಾಗ ಕೊಪ್ಪಳ ನಗರದ
ಹಿರೇಸಿಂಧೋಗಿ ರಸ್ತೆಯ ಮೇಲೆ ಚುಕ್ಕನಕಲ್ ಕ್ರಾಸ್ ಸಮೀಪ ಅಮೀನಸಾಬ ಇತನು ಮೋಟಾರ್ ಸೈಕಲ್
ವಾಹನವನ್ನು ನಿಲ್ಲಿಸಿದ್ದು ಫಿರ್ಯಾದಿಯ ಅತ್ತೆ ರಾಜಮ್ಮ ಇವರು ಮೂತ್ರ ವಿಸರ್ಜನೆಯನ್ನು ಮಾಡಲು
ಮೋಟಾರ್ ಸೈಕಲ್ ಇಳಿದು ರಸ್ತೆ ದಾಟುತ್ತಿರುವಾಗ ಕೊಪ್ಪಳದ ಕಡೆಯಿಂದ ಮೋಟಾರ್ ಸೈಕಲ್ ನಂಬರ.KA-37/S-9518 ನೆದ್ದರ ಸವಾರ ಮಾಬುಸಾಬ ಕದರಳ್ಳಿ ಇತನು ತನ್ನ ವಾಹನವನ್ನು ಜೋರಾಗಿ ಮತ್ತು
ನಿರ್ಲಕ್ಷ್ಯತನದಿಂದ ಚಲಾಯಿಸಿ ರಾಜಮ್ಮ ಇವರಿಗೆ ಟಕ್ಕರಮಾಡಿ ಅಪಘಾತಮಾಡಿದ್ದರಿಂದ ಅವರು ರಸ್ತೆಯ
ಮೇಲೆ ಅಂಗಾತವಾಗಿ ಬಿದ್ದು ತಲೆಗೆ ಒಳಪೆಟ್ಟು ಆಗಿರುತ್ತದೆ. ನಂತರ ರಾಜಮ್ಮ ಇವರು ಹುಬ್ಬಳ್ಳಿಯ
ಕಿಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಇಂದು ದಿನಾಂಕ. 15-08-2017 ರಂದು ಬೆಳಿಗ್ಗೆ 7-30
ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾಳೆ ಅಂತಾ ಇದ್ದ
ಫಿರ್ಯಾದಿಯ ಹೇಳಿಕೆಯ ಸಾರಾಂಶದ ಮೇಲಿಂದ.ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ
ನಂ. 124/2017 ಕಲಂ: 107 ಸಿ.ಆರ್.ಪಿ.ಸಿ .
ನಾನು ಬಿ. ತಿಪ್ಪೇಸ್ವಾಮಿ ಪಿ.ಎಸ್.ಐ. ಹನಮಸಾಗರ ಪೊಲೀಸ್ ಇದ್ದು, ಇಂದು ದಿನಾಂಕ: 15-08-2017
ಮುಂಜಾನೆ 9-00 ಗಂಟೆಗೆ ಕಾಟಾಪೂರ ಗ್ರಾಮದಲ್ಲಿ ಗಸ್ತು ಮಾಡುವಾಗ ಪೊಲೀಸ್ ಬಾತ್ಮೀದಾರರಿಂದ ತಿಳಿದು
ಬಂದಿದ್ದೇನಂದರೆ. ಈಗ್ಗೆ ಒಂದು ವಾರದಿಂದ ಗ್ರಾಮದಲ್ಲಿ ರಾಜಪ್ಪ ತಂದೆ ಹನಮಪ್ಪ ಹರಿಜನ ವಯಾ: 36 ವರ್ಷ
ಜಾ: ಮಾದರ ಉ: ಕೂಲಿಕೆಲಸ ಸಾ: ಕಾಟಾಪೂರ ತಾ: ಕುಷ್ಟಗಿ ಈತನು ಹಾಗೂ ಮರಿಯಪ್ಪ ತಂದೆ ಸಂಗಪ್ಪ ಹಾದಿಮನಿ
ವಯಾ: 26 ವರ್ಷ ಜಾ: ಕುರುಬ ಉ: ಒಕ್ಕಲುತನ ಸಾ: ಕಾಟಾಪೂರ ತಾ: ಕುಷ್ಟಗಿ ಇವರುಗಳ ಇವರುಗಳು ಗ್ರಾಮದಲ್ಲಿ ಒಬ್ಬರಿಗೊಬ್ಬರು ಬೈದಾಡಿಕೊಂಡಿದ್ದು.
ಇವರ ಪೈಕಿ 1ನೇ ರಾಜಪ್ಪ ದಲಿತನಿದ್ದು 2ನೇ ಮರಿಯಪ್ಪ ಸವರ್ಣಿಯನಿದ್ದು ಸದರಿಯವರುಗಳ ಮದ್ಯ ದೇಶ ವೈಶ್ಯಮ್ಯ
ಬೆಳೆದಿದ್ದು ಇರುತ್ತದೆ ಈಗ್ಗೆ ಗ್ರಾಮದಲ್ಲಿ ಫಿರ್ಯಾದಿ ನೀಡಲು ಯಾರು ಮುಂದೆ ಬಂದಿರುವುದಿಲ್ಲಾ. ಮುಂದೆ
ಒಬ್ಬರಿಗೊಬ್ಬರು ಜಗಳ ತೆಗೆದು ಹೊಡೆದಾಡಿ, ಜೀವ ಹಾನಿ, ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಯಾಗುವದು
ಹಾಗೂ ಸಾರ್ವಜನಿಕ ಶಾಂತತೆ ಭಂಗವನ್ನುಂಟು ಮಾಡುವ ಸಂಭವ ಹೆಚ್ಚಾಗಿ ಕಂಡು ಬಂದಿದ್ದು ಇರುತ್ತದೆ. ಸದರ ಗ್ರಾಮದಲ್ಲಿ
ಶಾಂತತೆಯನ್ನು ಕಾಪಾಡಲು ಹಾಗೂ ಸಾರ್ವಜನಿಕರ ನೆಮ್ಮದಿಗೆ ಭಂಗವುಂಟಾಗುವದನ್ನು
ತಡೆಯುವುದು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಮುಂಜಾಗೃತೆ ಕ್ರಮವಾಗಿ ಪ್ರಕರಣ ದಾಖಲು
ಮಾಡಿಕೊ0ಡು ತನಿಖೆ ಕೈ ಕೊಂಡಿದ್ದು ಇರುತ್ತದೆ.
4] ಹನಮಸಾಗರ ಪೊಲೀಸ್
ಠಾಣೆ ಗುನ್ನೆ ನಂ. 125/2017 ಕಲಂ 32, 34 ಕೆ.ಇ.
ಕಾಯ್ದೆ.
ಪಿ.ಎ.ಸ್.ಐ. ಹನಮಸಾಗರ ರವರಿಗೆ ಅನಧೀಕೃತ ಮದ್ಯ ಮಾರಾಟ
ಮಾಡಲು ಮತ್ತು ಸಾಗಿಸುತಿದ್ದ ಖಚಿತ ಬಾತ್ಮೀ ಬಂದ ಮೇರೆಗೆ ಕೂಡಲೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ
ಹೆಚ್.ಸಿ-83, ಪಿ.ಸಿ-223 ರವರೊಂದಿಗೆ ಠಾಣೆಯಿಂದ
ಹೊರಟು ಬಾದಿಮನಾಳ, ಜಹಗೀರಗುಡದೂರ ದಾಟಿ ಹನಮನಾಳ ಜೂನಿಯರ್ ಕಾಲೇಜ್ ಹತ್ತಿರ ಮಧ್ಯಾಹ್ನ 13-20 ಗಂಟೆಗೆ
ತಲುಪಿ ಮಧ್ಯಾಹ್ನ 13-25 ಗಂಟೆಗೆ ದಾಳಿಮಾಡಿದಾಗ ಮೋಹನ್ ದಾನಿ ಸಾ: ಹನಮನಾಳ ಇವನು ಸಿಕ್ಕಿಬಿದಿದ್ದು
ಅವನ 1] 180 .ಎಂ.ಎಲ್.ಅಳತೆಯ 25 ಟೆಟ್ರಾ ಪಾಕೇಟಗಳು HAYWARDS ಪ್ರತಿಯೊಂದಕ್ಕೆ ಎಂ.ಆರ್.ಪಿ. 68.56 ಅಂತಾ ಬೆಲೆ ಇರುತ್ತದೆ. ಇವುಗಳ ಒಟ್ಟು ಅಂ:ಕಿ:
1714-00 ರೂಪಾಯಿಗಳು ಆಗುತಿದ್ದು. ಹಾಗೂ 2] 180 ಎಂ.ಎಲ್. ಅಳತೆಯ 9 ಟೆಟ್ರಾ ಪಾಕೇಟಗಳು OLD TAVERN ಪ್ರತಿಯೊಂದಕ್ಕೆ ಎಂ.ಆರ್.ಪಿ. 68.56 ಅಂತಾ ಬೆಲೆ ಇರುತ್ತದೆ. ಇವುಗಳ
ಒಟ್ಟು ಅಂ:ಕಿ: 607-04 ರೂಪಾಯಿಗಳು ಆಗುತ್ತಿದ್ದು, ಹಾಗೂ ನಗದು ಹಣ 850-00 ರೂಪಾಯಿ ಸಿಕ್ಕಿದ್ದು ಸದರ ದಾಳಿ ಪಂಚನಾಮೆಯನ್ನು ಇಂದು ಮಧ್ಯಾಹ್ನ 13-25 ಗಂಟೆಯಿಂದ
ಮಧ್ಯಾಹ್ನ 14-35 ಗಂಟೆಯವರಗೆ ನಿರ್ವಹಿಸಿದ್ದು ಇರುತ್ತದೆ. ಸದರ ಆರೋಪಿತನು ತನ್ನ ಲಾಬಕ್ಕೋಸ್ಕರ
ಯಾವುದೇ ಪರವಾನಿಗೆ ಪಡೆಯದೆ ಮಾರಾಟ ಮಾಡಿ ಅಪರಾದ ಮಾಡಿದ್ದರಿಂದ ಸದರಿಯವನನ್ನು ವಶಕ್ಕೆ
ತೆಗೆದುಕೊಂಡು ಮೂಲ ಪಂಚನಾಮೆ, ಮುದ್ದೆಮಾಲು ಸಮೇತ ವಾಪಸ್ ಠಾಣೆಗೆ ಮಧ್ಯಾಹ್ನ 15-00 ಗಂಟೆಗೆ
ಬಂದು ಸದರಿ ಆರೋಪಿ ಮೋಹನ ತಂದೆ ರೆವಣಸಾ ದಾನಿ ಸಾ: ಹನಮನಾಳ ಇವನ ವಿರುದ್ದ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5] ಕನಕಗಿರಿ ಪೊಲೀಸ್
ಠಾಣೆ ಗುನ್ನೆ ನಂ. 118/2017 ಕಲಂ 341, 323, 324, 504, 506 ಸಿಹಿತ 34 ಐ.ಪಿ.ಸಿ
ದಿನಾಂಕ
15-08-2017 ರಂದು ರಾತ್ರಿ 1-30 ಗಂಟೆಗೆ ಗಂಗಾವತಿ ಸರಕಾರಿ ಆಸ್ಪತ್ರೆಯಿಂದ ಒಂದು ಎಂ.ಎಲ್.ಸಿ ಮಾಹಿತಿಯು
ಬಂದಿದ್ದು ಬೆಳಿಗ್ಗೆ 6-00 ಗಂಟೆಗೆ ಗಂಗಾವತಿ ಸರಕಾರಿ ಆಸ್ಪತ್ರೆಗೆ ಹೋಗಿ ಫಿರ್ಯಾದಿ ಗಂಗಮ್ಮ ಗಂಡ
ಯಮನೂರಪ್ಪ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೇ ನಿನ್ನೆ ದಿನಾಂಕ
14-08-2017 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ಫಿರ್ಯಾದಿ ಗಂಗಮ್ಮ ಇವರ ಮಕ್ಕಳು ತಮ್ಮ ಹೊಲಕ್ಕೆ
ಹೋದಾಗ ಫಕೀರಪ್ಪನ ಮಕ್ಕಳಾದ ಪರಸಪ್ಪನು ಫಿರ್ಯಾದಿಯ ಮಗನ ಸಂಗಡ ಜಗಳ ಮಾಡಿದ್ದು ಈ ವಿಷಯವನ್ನು ಫಿರ್ಯಾದಿಯು
ತನ್ನ ಗಂಡನಿಗೆ ಊರಿನಿಂದ ಬಂದ ನಂತರ ತಿಳಿಸಿದ್ದು ಸಂಜೆ 7-00 ಗಂಟೆಯ ಸುಮಾರಿಗೆ ಯಮನೂರಪ್ಪ ಈತನು
ಆರೋಪಿತರಿಗೆ ನಡೆದ ಘಟನೆಯ ಬಗ್ಗೆ ಮನೆಯ ಹತ್ತಿರ ವಿಚಾರಿಸುತ್ತಿದ್ದಾಗ ಆರೋಪಿತರೆಲ್ಲರೂ ಕೂಡಿಕೊಂಡು
ಮೈಮೇಲೆ ಬಂದು ಯಾಕಲೇ ಸೂಳೆ ಮಗನೇ ನಿಮ್ಮದು ತುಂಬಾ ಜಾಸ್ತಿಯಾಗಿದೆ ಅಂತಾ ಮುಂತಾಗಿ ಅವಾಚ್ಯವಾಗಿ ಬೈದಾಡಿ
ಕೈಯಿಂದ ಹೊಡಿ ಬಡಿ ಮಾಡಿ ಕಾಲಿನಿಂದ ಒದ್ದು ಅಲ್ಲಿಯೇ ಇದ್ದ ಕಟ್ಟಿಗೆಯಿಂದ ಹೊಡೆದು ನಂತರ ಮನೆಯೊಳಗಿನಿಂದ
ತಂದ ಕೊಡಲಿಯ ತುಂಬಿನಿಂದ ತಲೆಗೆ ಹೊಡೆದು ರಕ್ತಗಾಯವನ್ನುಂಟು ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ
ನೀಡಿದ ಹೇಳಿಕೆ ಫಿರ್ಯಾದಿಯನ್ನು ತೆಗದುಕೊಂಡು ಮರಳಿ ಠಾಣೆಗೆ ಬಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
6] ಬೇವೂರು ಪೊಲೀಸ್
ಠಾಣೆ ಯು.ಡಿ.ಆರ್ .ನಂ. 12/2017 ಕಲಂ 174 ಸಿ.ಆರ್.ಪಿ.ಸಿ.
ಮೃತ ಗ್ಯಾನಪ್ಪ ತಂದೆ
ಸಿದ್ದಪ್ಪ ಕಟಗಿಹಳ್ಳಿ ಸಾ: ತಿಪ್ಪನಾಳ ಇತನಿಗೆ ತಿಪ್ಪನಾಳ ಗ್ರಾಮದ ಸೀಮಾದಲ್ಲಿ ಜಮೀನ ಸರ್ವೇ ನಂ
34 ವಿಸ್ತಿರ್ಣ 6 ಎಕರೆ ಮತ್ತು ಸವರ್ೇ ನಂ 35 ವಿಸ್ತಿರ್ಣ 3 ಎಕರೆ 20 ಗುಂಟೆ ಜಮೀನ ಹೊಂದಿದ್ದು ಸದರಿಯವನು
ಎಸ್.ಬಿ.ಐ ಬ್ಯಾಂಕ್ ಯಲಬುಗರ್ಾದಲ್ಲಿ 80000=00 ರೂಪಾಯಿ ಬೆಳೆಸಾಲ ಪಡೆದುಕೊಂಡಿದ್ದು ಅದರಂತೆ ಯಲಬುಗರ್ಾ
ಪಿ.ಎಲ್.ಡಿ ಬ್ಯಾಂಕ, ಹಿರೇವಂಕಲಕುಂಟಾ ಗ್ರಾಮದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಗಳಲ್ಲಿ ಸಹ ಸಾಲ
ಪಡೆದುಕೊಂಡಿದ್ದು ಆದರೆ ಎಷ್ಟು ಸಾಲ ಪಡೆದುಕೊಂಡಿರುತ್ತಾನೆ ಎಂಬುವುದು ತಿಳಿದುಬಂದಿರುವದಿಲಮ,್ಲ ಸದರಿಯವನು
ಬೆಳೆಸಾಲ ಹೇಗೆ ತುಂಬಬೇಕು ಎಂದು ಮನನೊಂದು ಇತ್ತೀಚೆಗೆ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು
ಇರುತ್ತದೆ. ದಿನಾಂಕ 14-08-2017 ರಂದು ರಾತ್ರಿ 11:45 ಗಂಟೆಯ ಸುಮಾರಿಗೆ ತಿಪ್ಪನಾಳ ಗ್ರಾಮಕ್ಕೆ
ಹೊಂದಿಕೊಂಡಿರುವ ತನ್ನ ಜಮೀನದಲ್ಲಿ ಕಟ್ಟಿಸಿರುವ ಜನತಾ ಮನೆಯಲ್ಲಿ ತನ್ನ ಸಣ್ಣ ಮಕ್ಕಳಾದ ಕರಿಯಮ್ಮ,
ಮುತ್ತಪ್ಪ, ಮತ್ತು ಸಿದ್ದಪ್ಪ ಇವರಿಗೆ ಇತ್ತೀಚೆಗೆ ಮಳೆ ಬಾರದೇ ಸರಿಯಾಗಿ ಬೆಳೆಗಳು ಬಾರದೇ ಇರುವುದರಿಂದ
ತಾನು ಮಾಡಿದ ಸಾಲವನ್ನು ಹೇಗೆ ತೀರಿಸಬೇಕೆಂದು ಮನನೊಂದು ಮಾನಸಿಕ ಅಸ್ತವ್ಯಸ್ಥನಾಗಿ ನಾನು ಸತ್ತು ಹೋಗುತ್ತೇನೆ
ನಿಮ್ಮಿಂದ ಸಾಲವನ್ನು ಕಟ್ಟಲು ಸಾಧ್ಯವಾಗುವುದಿಲ್ಲ ನೀವು ಸಣ್ಣ ಮಕ್ಕಳು ಇರುತ್ತೀರಿ ಅಂತಾ ತನ್ನ ಮಕ್ಕಳಿಗೆ
ಹೇಳಿ ಪೂಜೆ ಸಲುವಾಗಿ ಇಟ್ಟಿದ್ದ ಖಡ್ಗದಿಂದ ತನ್ನ ಹಣೆಗೆ ಮತ್ತು ನೆತ್ತಿಯ ಮೇಲೆ ಹೊಡೆದುಕೊಂಡು ನಂತರ
ತನ್ನ ದೋತರವನ್ನು ಬಿಚ್ಚಿ ಮನೆಯ ಛಾವಣಿಯ ಡಂಬಿಗೆ ಕಟ್ಟಿ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ
ಸದರಿಯವನ ಮರಣದ ಬಗ್ಗೆ ಯಾರ ಮೇಲೆ ಯಾವದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಮುಂತಾಗಿ ಶರಣಪ್ಪ ತಂದೆ
ಬಸಪ್ಪ ಕಟಗಿಹಳ್ಳಿ ಸಾ: ತಿಪ್ಪನಾಳ ತಾ: ಯಲಬುರ್ಗಾ ಇವರು ನೀಡಿದ ವರದಿಯ ಸಾರಾಂಶದ ಮೇಲಿಂದ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
7] ಗಂಗಾವತಿ ಗ್ರಾಮಿಣ
ಪೊಲೀಸ್ ಠಾಣೆ ಗುನ್ನೆ ನಂ. 252/2017 ಕಲಂ: 279, 337, 338 ಐ.ಪಿ.ಸಿ
ಫಿರ್ಯಾದಿದಾರಾದ ಹನಮಂತಪ್ಪ ತಂದೆ ಮಲ್ಲಪ್ಪ ಪುರದ
ವಯಾ 45, ಜಾ. ಕುರುಬರು. ಉ. ಒಕ್ಕಲುತನ ಸಾ. ಮಲ್ಲಾಪುರ. ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ
ನೀಡಿದ್ದು ಸಾರಾಂಶವೆನಂದರೆ. “ ಫಿರ್ಯಾದಿದಾರರು ನಿನ್ನೆ ದಿನಾಂಕ. 14-08-2017 ರಂದು ಭತ್ತದ ಸಸಿ
ಮಡಿಗೆ ನೀರು ಹರಿಸಲು ಹೋಗಿದ್ದು ರಾತ್ರಿ 09-30 ಗಂಟೆಗೆ ಹೊಲದ ಹತ್ತಿರ ಇರುವಾಗ ಸಂಗಾಪುರ ಮಲ್ಲಾಪುರ
ರಸ್ತೆಯ ಮೇಲೆ ಇಬ್ಬರು ಪಾದಚಾರಿಗಳು ಹೊರಟಿದ್ದು, ಸಂಗಾಪುರ ಕಡೆಯಿಂದ ಮೋಟಾರ ಸೈಕಲ ನಂ. ಕೆ.ಎ.01/ಈ.ಜೆ.1643
ನೇದ್ದರ ಚಾಲಕ ನಾಗರಾಜ ಈತನು ಮೋಟಾರ ಸೈಕಲನ್ನು ಎರ್ರಿಬಿರ್ರಿಯಾಗಿ ಚಲಾಯಿಸಿಕೊಂಡು ಬಂದು ರಸ್ತೆ ಬದಿಗೆ
ಹೊರಟಿದ್ದ ವೆಂಕಟೇಶ ತಂದೆ ಪಾಮಯ್ಯ ಬೆಣಕಲ್ ಸಾ. ಮಲ್ಲಾಪುರ, ನಿಂಗಪ್ಪ ತಂದೆ ಗಂಗಪ್ಪ ಸಾ. ಮಲ್ಲಾಪುರ
ಇವರು ಇಬ್ಬರು ಪಾದಚಾರಿಗಳಿಗೆ ಡಿಕ್ಕಿ ಕೊಟ್ಟು ಅಪಘಾತ ಮಾಡಿದ್ದರಿಂದ ವೆಂಕಟೇಶನಿಗೆ ಬಲಗಾಲು ಮೊಣಕಾಲಿಗೆ,
ಸೊಂಟಕ್ಕೆ ಮತ್ತು ಇತರೆ ಕಡೆಗೆ ಭಾರಿ ಒಳಪೆಟ್ಟಾಗಿದ್ದು ಇರುತ್ತದೆ. ನಿಂಗಪ್ಪನಿಗೆ ಮುಖಕ್ಕೆ, ಬಾಯಿಗೆ,
ತಲೆಗೆ ಕೈಕಾಲುಗಳಿಗೆ ಭಾರಿ ರಕ್ತಗಾಯವಾಗಿರುತ್ತದೆ” ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಸಾರಾಂಶದ
ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಂಡಿದ್ದು ಇರುತ್ತದೆ.
0 comments:
Post a Comment