1] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 143/2017 ಕಲಂ: 379 IPC and MMRD 1957 Rule 4, 4(1),4(A).
ಶ್ರೀ ಶಂಕರಪ್ಪ ಎಲ್
ಪಿ.ಎಸ್.ಐ. ಅಳವಂಡಿ ಪೊಲೀಸ್ ಠಾಣೆ ರವರಿಗೆ ದಿನಾಂಕ: 14-08-2017
ರಂದು ಮುಂಜಾನೆ 10-30 ಗಂಟೆ
ಸುಮಾರಿಗೆ ಠಾಣೆ ವ್ಯಾಪ್ತಿಯ ಚಿಕ್ಕಸಿಂಧೋಗಿ
ಕಡೆಯಿಂದ ಒಂದು ವಾಹನದಲ್ಲಿ ಆಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಖಚಿತವಾದ ಭಾತ್ಮೀ
ಬಂದ ಮೇರೆಗೆ ತಮ್ಮ ಸಿಬ್ಬಂದಿಯವರೊಂದಿಗೆ ಹಿರೇಸಿಂಧೋಗಿ ಗ್ರಾಮ ಸೀಮಾ ಹಳ್ಳದ ಹತ್ತಿರ ಹೋಗಿ ಕೊಳೂರ-ಕಾಟ್ರಳ್ಳಿ
ಕ್ರಾಸ ಹತ್ತಿರ ನಿಂತಿರುವಾಗ ಬೆಳಿಗ್ಗೆ 11:00 ಗಂಟೆಯ ಸುಮಾರಿಗೆ ಆರೋಪಿತರು ಕೂಡಿಕೊಂಡು ನಂಬರ ಇರಲಾರದ
ಹೊಸ ಟಾಟಾ 207 ವಾಹನದಲ್ಲಿ ಕಾಟ್ರಳ್ಳಿ ಗ್ರಾಮದ
ಹತ್ತಿರ ಸರಕಾರಕ್ಕೆ ಸೇರಿದ ಹಿರೇ ಹಳ್ಳದಲ್ಲಿ ಅಂದಾಜು 2,000-00 ರೂ. ಬೆಲೆ ಬಾಳುವ ಮರಳನ್ನು ಸರ್ಕಾರದಿಂದ
ಅಥವಾ ಸಂಭಂದಿಸಿದ ಇಲಾಖೆಯಿಂದ ಯಾವುದೇ ಪಾಸ್ ಅಥವಾ ಪರ್ಮೀಟ್ ಪಡೆಯದೇ ಕಳ್ಳತನ ಮಾಡಿಕೊಂಡು, ಮಾರಾಟ ಮಾಡಿ ಲಾಭ ಗಳಿಸುವ ಉದ್ಧೇಶದಿಂದ ಲೋಡ ಮಾಡಿಕೊಂಡು ಬರುತ್ತಿರುವಾಗ ಹಿಡಿದಿದ್ದು
ಈ ಬಗ್ಗೆ ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಮರಳು
ತುಂಬಿದ ಟಾಟಾ ಬುಲೆರೋ ವಾಹನ ಹಾಗೂ ಆರೋಪಿತರನ್ನು ವಶಕ್ಕೆ ತಗೆದುಕೊಂಡು ಠಾಣೆಗೆ ಬಂದು ಪ್ರಕರಣ
ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ
ನಂ. ಗುನ್ನೆ ನಂ 123/2017 ಕಲಂ 143, 341,
427, 504 ಸಹಿತ 149 ಐಪಿಸಿ.
ದಿನಾಂಕ 14-08-2017 ರಂದು ಮದ್ಯಾಹ್ನ 12-00 ಗಂಟೆಗೆ ಪಿರ್ಯಾಧಿ ನಾಗಪ್ಪ
ಎ.ಎಸ್.ಐ. ರವರು ಠಾಣೆಗೆ ಹಾಜರಾಗಿ ಸಲ್ಲಿಸಿದ ಪಿರ್ಯಾಧಿಯ ಸಾರಾಂಶ ವೇನೆಂದರೆ, ಇಂದು ದಿನಾಂಕ 14-08-2017 ರಂದು 11-30 ಗಂಟೆಗೆ ಸುಮಾರಿಗೆ ಪಿರ್ಯಾಧಿದಾರರು ಹಾಗೂ ಠಾಣೆಯ ಸಿಬ್ಬಂದಿಗಳಾದ ಪಿಸಿ-214 ಹಾಗೂ ಹೆಚ್.ಸಿ-85 ರವರೊಂದಿಗೆ ನಗರದ ಕೊಪ್ಪಳ-ಗದಗ ರಸ್ತೆಯ ಜಿಲ್ಲಾ ಕ್ರೀಡಾಂಗಣದ ಹತ್ತಿರ ಗಲಾಟೆ ನಡೆಯುತ್ತಿದ್ದರ ಬಗ್ಗೆ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಹೋದಾಗ ಸದರಿ ಸ್ಥಳದಲ್ಲಿ ಶಾಮಿಯಾನ ಹಾಕುವುದರ ಬಗ್ಗೆ ಗಲಾಟೆ ನಡೆಯುತ್ತಿದ್ದು, ಯೂನಿಸ್ ಡೆಕೋರೆಟರ್ ಕೆಲಸಗಾರರು ಕೆಲಸ ಮಾಡುತ್ತಿರುವಾಗ ಆರೋಪಿತರು ಚನ್ನಬಸಪ್ಪ ಬಳ್ಳಾರಿ ಹಾಗೂ ಇತರೇ ಆರೋಪಿತರು ಎಲ್ಲರೂ ಸೇರಿಕೊಂಡು ಕೆಲಸಗಾರರಿಗೆ ನೀವು ಯಾಕೆ ಇಲ್ಲಿ ಶಾಮಿಯಾನ ಹಾಕುತ್ತೀರಿ ನಮಗೆ ಗಣಪತಿ ಹಬ್ಬದ ಸಲುವಾಗಿ ಡಿಜೆ ಮತ್ತು ಶಾಮಿಯಾನ ಹಾಕಲು ಅನುಮತಿ ನೀಡಿರುವುದಿಲ್ಲಾ, ಅನುಮತಿ ನೀಡುವವರೆಗೆ ಯಾವುದೇ ಕಾರ್ಯಕ್ರಮಕ್ಕೆ ಶಾಮಿಯಾನ ಹಾಕಬೇಡಿ ಅಂತಾ ಮೀಟಿಂಗ್ ಮಾಡಿ ಹೇಳಿದ್ದರೂ ಕೂಡ ನೀವು ಯಾಕೆ ಶಾಮಿಯಾನ ಹಾಕುತ್ತೀರಿ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡಿ ಶಾಮಿಯಾನದ ಬಟ್ಟೆಯನ್ನು ಹರಿದು ಹಾಕಿ ಲುಕ್ಸಾನು ಮಾಡಿದ್ದು ಸದರಿಯವರ ಮೇರೆ
ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಸಲ್ಲಿಸಿದ ಪಿರ್ಯಾಧಿಯ ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಅಳವಂಡಿ ಪೊಲೀಸ್ ಠಾಣೆ ಗುನ್ನೆ
ನಂ. 142/2017 ಕಲಂ: 32, 34 ಕೆ.ಇ. ಆ್ಯಕ್ಟ.
ದಿನಾಂಕ:
13-08-2017 ರಂದು ರಾತ್ರಿ 9-05 ಗಂಟೆಯ ಸುಮಾರಿಗೆ ಆರೋಪಿತನು ಠಾಣೆ ವ್ಯಾಪ್ತಿಯ ಬಿಸರಳ್ಳಿ ಗ್ರಾಮದಲ್ಲಿ
ಬರುವ ಮರಳುಸಿದ್ದೇಶ್ವರ ಮಠದ ಹತ್ತಿರ ರಸ್ತೆ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಮಧ್ಯವನ್ನು ಮಾರಾಟ ಮಾಡಲು
ಮತ್ತು ಇಟ್ಟುಕೊಳ್ಳಲು ಯಾವುದೇ ಪರವಾನಿಗೆ ಮತ್ತು ದಾಖಲಾತಿ ಇಲ್ಲದೇ ಮಧ್ಯವನ್ನು ಮಾರಾಟ ಮಾಡುತ್ತಿದ್ದಾಗ,
ಶ್ರೀ ಶಂಕರಪ್ಪ ಎಲ್. ಪಿ.ಎಸ್.ಐ. ಅಳವಂಡಿ ಠಾಣೆರವರು ಹಾಗೂ ತಮ್ಮ ಸಿಬ್ಬಂದಿ ಮತ್ತು ಪಂಚರೊಂದಿಗೆ
ದಾಳಿ ಮಾಡಲಾಗಿ ಆರೋಪಿತನು ಓಡಿ ಹೋಗಿದ್ದು ಅವನ ಹೆಸರು
ಮತ್ತು ವಿಳಾಸ ವಿಚಾರಿಸಲು ಹನಮಂತ ತಂದೆ ನಾಗಪ್ಪ ಸಲಬಗೌಡ್ರ ವಯ: 28 ವರ್ಷ ಜಾತಿ: ಕುರಬರ ಉ: ಒಕ್ಕಲುತನ
ಉ: ಒಕ್ಕಲುತನ ಸಾ: ಬಿಸರಳ್ಳಿ ತಾ: ಕೊಪ್ಪಳ ಅಂತಾ ಗೊತ್ತಾಗಿದ್ದು ಸ್ಥಳದಲ್ಲಿ ಒಂದು ಚೀಲದಲ್ಲಿ 1] Haywards Cheers Whisky 90 ML -30 ಟೆಟ್ರಾ ಪಾಕೇಟ್ಗಳು.
ಪ್ರತಿಯೊಂದಕ್ಕೆ 28.13 ರೂ. ಗಳಂತೆ ಒಟ್ಟು ಅಂ.ಕಿ- 843.9 ರೂ.ಗಳು. ಬೆಲೆಯುಳ್ಳ ಟೆಟ್ರಾ ಪಾಕೇಟಗಳುಗಳನ್ನು,
ಒಂದು ಚೀಲ ಅಂ.ಕೀ ಇಲ್ಲಾ ಅವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಮಾಲಿನೊಂದಿಗೆ ವಾಪಸ್ ಠಾಣೆಗೆ
ಬಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕೂಕನೂರು ಪೊಲೀಸ್
ಠಾಣೆ ಗುನ್ನೆ ನಂ. 113/2017 ಕಲಂ 323, 324,
326, 306, 504, 506 ಸಹಿತ 34 ಐ.ಪಿ.ಸಿ.
ದಿನಾಂಕ: 14-08-2017 ರಂದು ಸಾಯಂಕಾಲ 6:30 ಗಂಟೆಗೆ ಕೊರ್ಟ ಕರ್ತವ್ಯ
ನಿರ್ವಹಿಸುವ ಪಿಸಿ-378 ರವರು ಠಾಣೆಗೆ ಹಾಜರಾಗಿ ಯಲಬುರ್ಗಾ ಮಾನ್ಯ ಸಿನಿಯರ್ ಸಿವಿಲ್ ಜಡ್ಜ್
& ಜೆ.ಎಂ.ಎಫ್.ಸಿ ನ್ಯಾಯಾಲಯದ ಆದೇಶ ಪತ್ರ ಸಂ: 1392/2017 ದಿನಾಂಕ: 09-08-2017 ನೇದ್ದಕ್ಕೆ
ಲಗತ್ತಿಸಿಕೊಟ್ಟ ನ್ಯಾಯಾಲಯದಲ್ಲಿ ಉಲ್ಲೇಖಿತಗೊಂಡ ಒಂದು ಖಾಸಗಿ ಫಿಯರ್ಾದಿ ಸಂ: 05/2017 ನೇದ್ದನ್ನು
ತಂದು ಹಾಜರಪಡಿಸಿದ್ದು ಅದರ ಸಾರಾಂಶ ಏನೆಂದರೆ ದಿನಾಂಕ: 18-06-2017 ರಂದು ಮಧ್ಯಾಹ್ನ 2-30 ಗಂಟೆ
ಸುಮಾರಿಗೆ ಆರೋಪಿ 1) ತಿಮ್ಮಾರಡ್ಡಿ ತಂದೆ ಚನ್ನಪ್ಪ ಬೆನ್ನಳ್ಳಿ ವಯಾ: 40 ಉ: ಒಕ್ಕಲುತನ 2) ರವಿರಡ್ಡಿ ತಂದೆ ವೆಂಕರೆಡ್ಡಿ ಬೆನ್ನಳ್ಳಿ ವಯ: 34 ವರ್ಷ
ಉ: ಒಕ್ಕಲುತನ 3) ಸಿಮಿತ್ರಾ ಗಂಡ ವೆಂಕರಡ್ಡಿ ಬೆನ್ನಳ್ಳೀ
ವಯಾ: 50 ಉ: ಮನೆಕೆಲಸ ಎಲ್ಲರೂ ಸಾ: ತಳಕಲ್ ತಾ: ಯಲಬುರ್ಗಾ ಇವರು ಫಿರ್ಯಾದಿ ನಾಗರಾಜ ತಂದೆ ಸುಬಾಷರಡ್ಡಿ
ನರೇಗಲ್ ವಯಾ: 32 ಉ: ಒಕ್ಕಲುತನ ಸಾ: ತಳಕಲ್ ತಾ: ಯಲಬುರ್ಗಾರವರ ಮನೆಯ ಮುಂದೆ ಬಂದು ಫಿರ್ಯಾಧಿದಾರರಿಗೆ
ಲೆ ಬೋಸೂಡಿ ಮಗೆ ಹೊರಗೆ ಬಾ ಅಂತಾ ಕರೆದು ಆರೋಪಿ ನಂ;
2 ಇವನು ಕಬ್ಬಿಣದ ರಾಡಿನಿಂದ ಫಿರ್ಯಾದಿದಾರನ ತಲೆಗೆ ಹೊಡೆದು ಭಾರಿ ಗಾಯ ಮಾಡಿ ಆರೋಪಿತರೆಲ್ಲರೂ ಫಿರ್ಯಾದಿಗೆ
ಸುಳೆಮಗನೆ ನಿಮ್ಮ ಅವ್ವನ ಕಡೆಯಿಂದ ನ್ಯಾಯಾಲಯದಲ್ಲಿ ಓ.ಎಸ್ ನಂ; 259/2012 ಅಂತಾ ಕೆಸ್ ಹಾಕಿತೀ ಏನಲೇ
ಮಗನೆ ನಿನ್ನ ಮತ್ತು ನಿಮ್ಮ ಅವ್ವನ ಜೀವ ಸಹಿತ ಬಿಡುವುದಿಲ್ಲಾ ಕೊಂದು ಹಾಕುತ್ತೆವೆ ಅಂತಾ ಜೀವ ಹೋಗುವ ರೀತಿ ರಾಡಿನಿಂದ ಹೊಡಿಬಡಿ ಮಾಡಿ ಜೀವ ತೆಗೆಯಲು
ಪ್ರಯತ್ನಿಸಿರುತ್ತಾರೆ ಆಗ ಅಲ್ಲಿಯೇ ಇದ್ದ ಫಿರ್ಯಾಧಿದಾರನ ಹೆಂಡತಿ ಮತ್ತು ಅವನ ತಂದೆ ತಾಯಿ ಜಗಳ ಬಿಡಿಸಲು
ಬಂದಾಗ ಅವರಿಗೂ ಕೂಡಾ ಜೀವ ಬೆದರಿಕೆ ಹಾಕಿರುತ್ತಾರೆ ನಂತರ ಫಿರ್ಯಾಧಿದಾರನು ತನ್ನ ಅಳಿಯ ವಿರುಪಾಕ್ಷಿಯೊಂದಿಗೆ
ಮೊಟಾರ್ ಸೈಕಲ್ ಮೇಲೆ ಕುಕನೂರು ಸಕರ್ಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಮಾಡಿಸಿಕೊಂಡು ನಂತರ ಕೊಪ್ಪಳ
ಜಿಲ್ಲಾ ಆಸ್ಪತ್ರೆ ಗೆ ಚಿಕಿತ್ಸೆ ಮಾಡಿಸಿಕೊಂಡಿದ್ದು ಇರುತ್ತದೆ, ಅಂತಾ ಮುಂತಾಗಿ ಇದ್ದ ಖಾಸಗಿ ಫಿರ್ಯಾದಿ
ಸಾರಾಂಶದ ಮೆಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment