1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ.
254/2017
ಕಲಂ: 279, 337, 338 ಐ.ಪಿ.ಸಿ:.
ದಿನಾಂಕ:-
18-08-2017 ರಂದು ಬೆಳಿಗ್ಗೆ 11:00 ಗಂಟೆಗೆ ನಾನು ಮತ್ತು ಆಟೋ ಚಾಲಕ ಲೋಹಿತ್ ಕುಮಾರ
ಕೂಡಿಕೊಂಡು ಆಟೋ ನಂಬರ್: ಕೆ.ಎ-34/ ಬಿ-5773 ನೇದ್ದರಲ್ಲಿ ನಮ್ಮೂರಿನಿಂದ ಗಂಗಾವತಿಗೆ
ಬರುತ್ತಿರುವಾಗ ಬಸಾಪಟ್ಟಣ ದಾಟಿ ಆಟೋ ಚಾಲಕನು ಆಟೋವನ್ನು ಅತೀ ಜೋರಾಗಿ ಮತ್ತು ತೀವ್ರ
ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಿದ್ದು, ಅದೇ ರೀತಿಯಾಗಿ ನಮ್ಮ ಎದುರುಗಡೆ ಗಂಗಾವತಿ
ಕಡೆಯಿಂದ ಕಾರ್ ನಂ: ಕೆ.ಎ- 35 / ಎನ್- 5692 ನೇದ್ದರ ಚಾಲಕ ಅರ್ಜುನ ತಂದಿ
ರಾಮ ಕಿಶನ್ ಸಿಂಗ್, ಸಾ: ಗಂಗಾವತಿ ಈತನು ಸಹ ತನ್ನ ಕಾರನ್ನು ಅತೀ ಜೋರಾಗಿ ಮತ್ತು ತೀವ್ರ
ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಿದ್ದು, ಇದರಿಂದ ಎರಡೂ ವಾಹನಗಳು ಪರಸ್ಪರ ಎದುರುಬದುರಾಗಿ
ಟಕ್ಕರ್ ಕೊಟ್ಟು ಅಪಘಾತ ಮಾಡಿದ್ದು, ಇದರಿಂದ ನನಗೆ ಎಡ ಮೊಣಕೈ ಹಾಗೂ ಇತರೆ ಕಡೆ ಗಾಯಗಳಾಗಿದ್ದು,
ಲೋಹಿತಕುಮಾರನಿಗೆ ತಲೆಗೆ ಹಾಗೂ ಎರಡೂ ಕೈ ಕಾಲುಗಳಿಗೆ ಹಾಗೂ ಎಡ ಹಿಂಬಡಿಗೆ ಪೆಟ್ಟಾಗಿದ್ದು, ಕಾರು
ಚಾಲಕ ಅರ್ಜುನ್ ಈತನಿಗೆ ತಲೆಗೆ ಮುಖಕ್ಕೆ ಕೈ ಕಾಲುಗಳಿಗೆ ರಕ್ತಗಾಯ ಮತ್ತು ಪೆಟ್ಟುಗಳಾಗಿದ್ದು,
ಅದೇ ಕಾರಿನಲ್ಲಿದ್ದ ಸುನೀತಾ ಮತ್ತು ಜ್ಯೋತಿಲಕ್ಷ್ಮೀ ತಂದೆ ರಾಮಕಿಶನ್ ಸಿಂಗ್ ಎಂಬುವವರಿಗೆ
ತಲೆಗೆ ಹಾಗೂ ಕೈಕಾಲುಗಳಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು ಇರುತ್ತದೆ. ಪ್ರಕರಣ ದಾಖಲು
ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 183/2017 ಕಲಂ: 379 ಐ.ಪಿ.ಸಿ KMCC Role 3, 36 & 42 ಸಹಿತ 44 ಹಾಗೂ MMRD Act 1957
Role 4, 4(1), 4(a) R/w 21(4), 21
ದಿನಾಂಕ 18-08-2017
ರಂದು ಸಂಜೆ 5-20 ಗಂಟೆಗೆ ಶ್ರೀ
ಎಂ. ಶಿವಕುಮಾರ ಪಿ.ಎಸ್.ಐ ಕಾರಟಗಿ ಠಾಣೆ ರವರು ಠಾಣೆಗೆ
ಹಾಜರಾಗಿ ಒಂದು
ಮರಳು ತುಂಬಿದ ಟ್ರ್ಯಾಕ್ಟರ್ , ಮೂಲ ವರದಿ ಹಾಗೂ ಮೂಲ ಪಂಚನಾಮೆಯನ್ನು ಹಾಜರುಪಡಿಸಿದ್ದು ಅದರ ಸಾರಂಶವೇನೆಂದರೆ, ಇಂದು ದಿನಾಂಕ 18-08-2017
ರಂದು ಮದ್ಯಾಹ್ನ 3-30 ಗಂಟೆಗೆ
ಸಿದ್ದಾಪೂರದಿಂದ ಬರಗೂರ ಕಡೆಗೆ ಹೋಗುವ ಹಳ್ಳದಲ್ಲಿ ನಮೂದು ಮಾಡಿದ ಆರೋಪಿತನು ತನ್ನ ಟ್ರ್ಯಾಕ್ಟರ್
ಇಂಜೀನ್ ನಂ 3100ELI33I3684F3 ಹಾಗೂ ಚೆಸ್ಸಿ ನಂ
DZESV369459S3 ಮತ್ತು ಇದಕ್ಕೆ ಹೊಂದಿಕೊಂಡು ಟ್ರೆಲರ್ ನಂ. KA-37/TA-322 ನೆದ್ದರಲ್ಲಿ ಮರಳನ್ನು
ತುಂಬಿಕೊಂಡು ಬರಗೂರು ರಸ್ತೆಯಲ್ಲಿ ಸಾಗಣಿಕೆ ಮಾಡುತ್ತಿದ್ದಾಗ್ಗೆ ನಿಲ್ಲಿಸಿ ಹೆಸರು ವಿಳಾಸ ವಿಚಾರಿಸಿ
ಪರವಾನಿಗೆಯ ಬಗ್ಗೆ ಕೇಳಲು ಪರವಾನಿಗೆ ಹುಡಿಕಿದಂತೆ ಮಾಡಿ ಚಾಲಕ ಓಡಿ ಹೋಗಿದ್ದು ಪಂಚರ
ಸಮಕ್ಷಮದಲ್ಲಿ ಸದ್ರಿ ಟ್ರ್ಯಾಕ್ಟರ್, ಟ್ರೇಲರ್ ಮತ್ತು ಅದರಲ್ಲಿ ಇದ್ದ ಅಂದಾಜು 2 ಕ್ಯೂಬಿಕ್ ಮಿಟರ್
ಅ.ಕಿ ರೂ.1500/- ಬೆಲೆಬಾಳುವ ಮರಳನ್ನು ಜಪ್ತಮಾಡಿಕೊಂಡಿದ್ದು ಮತ್ತು ಸದ್ರಿ ಟ್ರ್ಯಾಕ್ಟರ್ ಚಾಲಕನು
ತನ್ನ ಚಾಲಾಯಿಸಿಕೊಂಡು ಬರುವಾಗ ಟ್ರ್ಯಾಕ್ಟರ್ ಬಿಟ್ಟು ಓಡಿ ಹೋಗಿದ್ದು ಗುನ್ನೆ ದಾಖಲು ಮಾಡಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment