1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 226/2017 ಕಲಂ: 279, 337, 304(ಎ) ಐ.ಪಿ.ಸಿ:.
ದಿನಾಂಕ
19-08-2017 ರಂದು ಮೃತ ಚಲುವರಾಜ ಮತ್ತು ಪ್ರಶಾಂತ ಇಬ್ಬರು ತಮ್ಮ ಮೋ.ಸೈ. ನಂ.ಕೆ.ಎ.37/ಯು-2691
ನೇದ್ದರಲ್ಲಿ ಹಳೆ ಬಂಡಿ ಹರ್ಲಾಪುರಕ್ಕೆ ಹೋಗಿ ವಾಪಾಸ್ ಹೊಸಬಂಡಿ ಹರ್ಲಾಪುರಕ್ಕೆ ಬರುತ್ತಿರುವಾಗ
ಮೋ.ಸೈ.ನ್ನು ಪ್ರಶಾಂತ ಇವನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಗಾಳೆಮ್ಮನ ಗುಡಿಯ
ಹತ್ತಿರ ಬರುತ್ತಿದ್ದಾಗ ಮಳೆ ಜೋರಾಗಿ ಬರುತ್ತಿದ್ದು ರಸ್ತೆಯ ಮೇಲೆ ಒಂದು ನಾಯಿ ಅಡ್ಡಬಂದಿದ್ದು
ಒಮ್ಮೆಲೆ ಮೋ.ಸೈ.ಬ್ರೇಕ ಹಾಕಿದ್ದರಿಂದ ಮೋ.ಸೈ.ಸಮೇತವಾಗಿ ಕೆಳಗೆ ಬಿದ್ದಿದ್ದು ಚಿಕಿತ್ಸೆ ಕುರಿತು
ಮುನಿರಾಬಾದ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿಒತ್ಸೆ ಕೊಡಿಸಿ ನಂತರ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ
ಹೋಗಿ ಚಿಕಿತ್ಸೆ ಕೊಡಿಸಿದ್ದು ಹೆಚ್ಚಿನ ಚಿಕಿತ್ಸೆ ಕುರಿತು ಹುಬ್ಬಲ್ಳಿಗೆ ಕರೆದುಕೊಮಡು ಹೋಗುತ್ತಿರುವಾಗ
ಮಾರ್ಗ ಮದ್ಯದಲ್ಲಿ ಚಲುವರಾಜನು ಮೃತ ಪಟ್ಟಿದ್ದು ಇರುತ್ತದೆ, ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಂಡಿರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್
ಠಾಣೆ ಗುನ್ನೆ ನಂ.191/2017 ಕಲಂ: 143, 147, 447, 324, 504, 506 ಸಹಿತ 149 ಐ.ಪಿ.ಸಿ ಮತ್ತು
3(2), 5(ಎ) ಎಸ್.ಸಿ/ಎಸ್.ಟಿ. ಕಾಯ್ದೆ:.
ದಿ: 19-08-2017 ರಂದು ಬೆಳಿಗ್ಗೆ 09-00 ಗಂಟೆಗೆ ಸದರಿ ಜಮೀನುದಲ್ಲಿ
ಫಿರ್ಯಾದಿದಾರರು ಸುರೇಶ ಇವರ ಟ್ರ್ಯಾಕ್ಟರ ತೆಗೆದುಕೊಂಡು ಟ್ರಿಲ್ಲರ ಹೊಡೆಯಲು ಹೋಗಿದ್ದು
ಇರುತ್ತದೆ. ನಂತರ ಇಂದು ಬೆಳಿಗ್ಗೆ 10-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ಕೆಲಸ
ಮಾಡಿಸುತ್ತಿದ್ದಾಗ, ಬಾಜು ಹೊಲದಲ್ಲಿರುವ ಆರೋಪಿತರು ಅಕ್ರಮ ಗುಂಪು ಕಟ್ಟಿಕೊಂಡು ಫಿರ್ಯಾದಿಯ
ಜಮೀನುದಲ್ಲಿ ಅತೀಕ್ರಮ ಪ್ರವೇಶ ಮಾಡಿ ಏಕಾಏಕೀ ಕೆಲಸವನ್ನು ನಿಲ್ಲಿಸಿ ಈಗಾಗಲೇ ಈ ಮೊದಲು ಆ
ಸೂಳೇಮಗ ರಮೇಶಪ್ಪನಿಗೆ ಹೊಡೆದು ಕಳಿಸಿದ್ದೇವೆ. ಆಧರೂ ನೀನು ಹೊಲೆಯ ಸೂಳೇಮಗನೇ ನಮ್ಮ ಹೊಲದಲ್ಲಿ
ಬಂದು ಟ್ರಿಲ್ಲರ ಹೊಡೆಯಲಿಕ್ಕೆ ಎಷ್ಟು ದೈರ್ಯ ಲೇ ಎಂದು ಅವಾಚ್ಯವಾಗಿ ಬೈಯ್ದು ಜಾತಿ ನಿಂದನೆ
ಮಾಡಿ ಅವಮಾನ ಮಾಡಿರುತ್ತಾರೆ. ಅಲ್ಲದೇ ಆರೋಪಿ ಬಸವಂತಪ್ಪನು ಹಿಡಿಗಾತ್ರದ ಕಲ್ಲು ತೆಗೆದುಕೊಂಡು
ಫಿರ್ಯಾದಿಯ ಎಡಹಣೆಗೆ ಹೊಡೆದು ರಕ್ತಗಾಯ ಮಾಡಿದ್ದು ಇರುತ್ತದೆ. ಮತ್ತು ಆರೋಪಿತರೆಲ್ಲರೂ
ಫಿರ್ಯಾದಿಗೆ ಕೆಳಗಡೆ ಕೆಡವಿ ಕೈಗಳಿಂದ ಹಲ್ಲೆ ಮಾಡಿ ಕಾಲಿನಿಂದ ಒದ್ದು ದುಖಾಃಪಾತ ಮಾಡಿದ್ದು
ಇರುತ್ತದೆ. ಅಲ್ಲದೇ ಲೇ ಸೂಳೇಮಗನೇ ಈಗಲೇ ನಿಮ್ಮ ಟ್ರ್ಯಾಕ್ಟರನ್ನು ತೆಗೆದುಕೊಂಡು ಹೊಲ ಖಾಲಿ
ಮಾಡು, ಇಲ್ಲದಿದ್ದರೆ ನಿಮ್ಮನ್ನೆಲ್ಲಾ ಟ್ರ್ಯಾಕ್ಟರ ಸಮೇತ ಸುಟ್ಟು ಬಿಡುತ್ತೇವೆ ಎಂದು ಪ್ರಾಣದ
ಬೆದರಿಕೆ ಹಾಕಿರುತ್ತಾರೆ. ಅಲ್ಲದೇ ಬಿಡಿಸಲು ಬಂದ ಸುರೇಶ ಎಂಬುವವರಿಗೆ ಆರೋಪಿ ಬಸವಂತಪ್ಪನು ತನ್ನ
ಕೈಗಳಿಂದ ಮೈ ಕೈ ಗೆ ಹಲ್ಲೆ ಮಾಡಿದ್ದು ಇರುತ್ತದೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು
ಇರುತ್ತದೆ.
0 comments:
Post a Comment