1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 232/2017 ಕಲಂ: 78, 80 Karnataka Police Act :.
ದಿನಾಂಕ: 26-08-2017 ರಂದು 4-00 ಪಿ.ಎಂ. ಸುಮಾರಿಗೆ
ಮುನಿರಾಬಾದನ ತುಂಗಭದ್ರ ಸ್ಟೋರ್ಟ್ಸ & ರಿಕ್ರಿಯೇಶನ್(ರಿ) ಕ್ಲಬ್ ನಲ್ಲಿ ಆರೋಪಿತರು ಕೌಶಲ್ಯದ ಆಟವನ್ನು
ಆಡದೇ ಕಾನೂನು ಬಾಹೀರ ಅದೃಷ್ಟದ ಆಟದಲ್ಲಿ ತೊಡಗಿದ್ದಾಗ, ಕ್ಕೆ ಶ್ರೀ ಭೀಮಣ್ಣ ಎಂ. ಸೋರಿ ಆರಕ್ಷಕ ವೃತ್ತ ನಿರೀಕ್ಷಕರು ಕೊಪ್ಪಳ
ಗ್ರಾಮೀಣ ವೃತ್ತ ರವರು ಸಿಬ್ಬಂದಿ ಸಮೇತ ಪಂಚರ ಸಮಕ್ಷಮ ಸಾಕ್ಷಿದಾರರೊಂದಿಗೆ ದಾಳಿ ಮಾಡಿ ಆರೋಪಿತರನ್ನು
ಹಿಡಿದುಕೊಂಡು ಅವರಿಂದ 1]
1,88,980-00 ರೂ. ನಗದು ಹಣ, 2] 10 ಕಾರುಗಳು ಅಂ.ಕಿ. 22 ಲಕ್ಷ 50 ಸಾವಿರ ರೂ.ಗಳು., 3] 32 ಮೋಟರ
ಸೈಕಲಗಳು 5 ಲಕ್ಷ 30 ಸಾವಿರ ರೂ.ಗಳು 4] 40 ಮೊಬೈಲ್ ಗಳು 76,300/-, 5] ಪ್ಲಾಸ್ಟಿಕ್ ಖುರ್ಚಿಗಳು
65 ಅಂ.ಕಿ 13 ಸಾವಿರ ರೂ., 6] ಪ್ಲಾಸ್ಟೀಕ್ ಸ್ಟೂಲ್ 5 ಅಂ.ಕಿ. 1 ಸಾವಿರ. ರೂ., 7] ರೌಂಡ ಟೇಬಲ್
9 ಅಂ.ಕಿ. 3 ಸಾವಿರದ 6 ನೂರು. ರೂ.ಗಳು, 7] 1 ಡಿ.ವಿಆರ್ ಮತ್ತು 1 ಮಾನಿಟರ್ ಅಂ.ಕಿ. 5 ಸಾವಿರ.ರೂ.,
8] 1 ಜನರೇಟರ್ ಅಂ.ಕಿ. 20 ಸಾವಿರ. ರೂ.ಗಳು 9] 4 ಇಸ್ಪೇಟ ಎಲೆಗಳ ಬಾಕ್ಸ್ ಮತ್ತು 468 ಇಸ್ಪೇಟ ಎಲೆಗಳು
ಅಂ.ಕಿ. ಇಲ್ಲ. 10] 375 ಪ್ಲಾಸ್ಟೀಕ್ ಬಿಲ್ಲೆಗಳು ಅಂ.ಕಿ. ಇಲ್ಲ. ಇವುಗಳನ್ನು ಜಪ್ತ ಪಡಿಸಿಕೊಂಡಿರುತ್ತದೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
2] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 124/2017 ಕಲಂ: 32,
34 Karnataka Excise Act.
ಶ್ರೀ ವೀರಭದ್ರಪ್ಪ ಪಿ.ಎಸ್.ಐ ಠಾಣೆಯಲ್ಲಿದ್ದಾಗ ಬಂದ ಖಚಿತ ಮಾಹಿತಿಯ ಮೇಲಿನಿಂದ ಸಿಬ್ಬಂದಿಗಳೊಂದಿಗೆ
ಹಾಗೂ ಪಂಚರೊಂದಿಗೆ ಸಂಜೆ 7-00 ಪಿ.ಎಂ ಕ್ಕೆ ಠಾಣೆಯನ್ನು ಬಿಟ್ಟು ಹನುಮನಾಳ ಕ್ರಾಸ್ ಹತ್ತಿರಕ್ಕೆ
ಹೋಗಿ ಜೀಪನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಇಬ್ಬರು ವ್ಯಕ್ತಿಗಳು ಒಂದು ಮೋಟಾರ್ ಸೈಕಲ್ ಮೇಲೆ
ಅಕ್ರಮ ಮಧ್ಯವನ್ನು ಮಾರಾಟ ಮಾಡುವುದಕ್ಕೆ ತೆಗೆದುಕೊಂಡು ಹೋಗುತ್ತಿದ್ದು ಸದರಿಯವರಿಗೆ ಕೂಡಲೇ ಧಾಳಿ
ಮಾಡಿ ಹಿಡಿದು ಆರೋಪಿತರಿಂದ 90 ಎಂ.ಎಲ್. ಅಳತೆಯ ಓರಿಜೀನಲ್ ಚಾಯ್ಸ ವಿಸ್ಕಿಯ 30 ಮಧ್ಯದ ಟೆಟ್ರಾ ಪಾಕೇಟ್
ಗಳನ್ನು ಹಾಗೂ 180 ಎಂ.ಎಲ್. ಅಳತೆಯ ಓಲ್ಡ ಟವರೀನ್ ವಿಸ್ಕಿಯ 07 ಮಧ್ಯದ ಟೆಟ್ರಾ ಪಾಕೇಟ್ ಗಳನ್ನು
ಒಟ್ಟು ರೂ, 1323.82 ಬೆಲೆ ಬಾಳುವವುಗಳನ್ನು ಹಾಗೂ ಮೋಟಾರ್ ಸೈಕಲ್ ಗಳನ್ನು ಪಂಚರ ಸಮಕ್ಷಮದಲ್ಲಿ ಜಫ್ತಿಪಡಿಸಿಕೊಂಡು
ಆರೋಪಿ ಹಾಗೂ ಇತರೇ ಸಾಮಾಗ್ರಿಗಳೊಂದಿಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
0 comments:
Post a Comment