1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 229/2017 ಕಲಂ: 279, 337 ಐ.ಪಿ.ಸಿ. ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ: 22-08-2017 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಗಾಯಾಳು ಯಮನಪ್ಪ ತಂದೆ ಯಲ್ಲಪ್ಪ ಬಿಂಗಿ ಇತನು ಎನ್.ಎಚ್-50 ರಸ್ತೆಯಲ್ಲಿ ವೈಷ್ಣವಿ ಪೆಟ್ರೋಲ್ ಬಂಕ್
ಹತ್ತಿರ ತಮ್ಮ ಲಾರಿಗೆ ಬೋಲ್ಟ್ ತೆಗೆದುಕೊಂಡು ರಸ್ತೆಯನ್ನು ದಾಟಿಕೊಂಡು ಹೋಗುತ್ತಿರುವಾಗ ಆರೋಪಿತನು
ತನ್ನ ಲಾರಿಯನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಪಘಾತ ಪಡಿಸಿ ಲಾರಿಯನ್ನು
ನಿಲ್ಲಿಸದೇ ಹೋಗಿರುತ್ತಾನೆ. ಈ ಅಪಘಾತದಿಂದಾಗಿ ಗಾಯಾಳು ಯಮನಪ್ಪನಿಗೆ ತಲೆಗೆ ಒಳಪೆಟ್ಟಾಗಿ,
ಎಡಗಣ್ಣಿಗೆ ಮತ್ತು ಕಣ್ಣಿನ ಕೆಳಗೆ ಹಾಗೂ ಮೂಗಿಗೆ ರಕ್ತಗಾಯವಾಗಿ, ಎಡಗಡೆ ಭುಜಕ್ಕೆ ಮತ್ತು ಎಡಗಡೆ
ಪಕ್ಕಡಿಗೆ ಒಳಪೆಟ್ಟುಗಳಾಗಿರುತ್ತವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 259/2017 ಕಲಂ: 279,
337, 338 ಐ.ಪಿ.ಸಿ:
ದಿನಾಂಕ. 24-08-2017 ರಂದು
ರಾತ್ರಿ 20-15 ಗಂಟೆಗೆ ಆಂಜಿನೇಯ ತಂದೆ ರಾಮಪ್ಪ, ವಯಸ್ಸು 55 ಫಿರ್ಯಾದಿ ನೀಡಿದ್ದು ದಿನಾಂಕ:-
23-08-2017 ರಂದು ಸಂಜೆ 4:30 ಗಂಟೆಯ ಸುಮಾರಿಗೆ ನನ್ನ ಮಕ್ಕಳಾದ ಎ. ಅನುಷಾ ಗಂಡ ಜಿ.ನಿಂಗಪ್ಪ, ವಯಸ್ಸು
28 ವರ್ಷ, ಸಾ: ಧರ್ಮಾಪೂರ ತಾ: ಸೊಂಡೂರು, ಎ. ಅಕ್ಷತಾ-20 ವರ್ಷ, ಅಳಿಯ ಜಿ. ನಿಂಗಪ್ಪ ತಂದೆ ಜಿ.ಎಸ್.
ಹನುಮಂತಪ್ಪ-35 ವರ್ಷ, ಮೊಮ್ಮಗಳು ಜಿ.ಎನ್. ಕ್ರಿಷಾ ತಂದೆ ಜಿ. ನಿಂಗಪ್ಪ-3 ವರ್ಷ, ಪಿಯುಷ್ ತಂದೆ
ಜಿ. ನಿಂಗಪ್ಪ-1 ವರ್ಷ ಇವರುಗಳು ಕೂಡಿಕೊಂಡು ಬುಲೆರೋ ವಾಹನ ನಂ: ಕೆ.ಎ-35/ ಎಂ-9917 ನೇದ್ದರಲ್ಲಿ
ಗಂಗಾವತಿಯಿಂದ ಧರ್ಮಾಪೂರಕ್ಕೆ ಹೋಗುತ್ತಿರುವಾಗ ಗಂಗಾವತಿ-ಆನೇಗುಂದಿ ಮುಖ್ಯ ರಸ್ತೆಯ ಸಂಗಾಪೂರು ಸೀಮಾದಲ್ಲಿ
ಚಾಲಕ ಲಕ್ಷ್ಮಣ. ಎಂ ತಂದೆ ಕುಮಾರಪ್ಪ. ಎಂ. ವಯಸ್ಸು 37 ವರ್ಷ, ಸಾ: ಧರ್ಮಾಪೂರು ಈತನು ವಾಹನವನ್ನು
ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ಚಲಾಯಿಸಿದ್ದರಿಂದ ವೇಗವನ್ನು ನಿಯಂತ್ರಿಸಲು ಆಗದೇ
ರಸ್ತೆಯ ಎಡ ಪಕ್ಕದ ಕಾಲುವೆಯಲ್ಲಿ ಉರುಳಿ ಬಿದ್ದು ಅಪಘಾತವಾಗಿ ವಾಹನದಲ್ಲಿದ್ದ ಎ. ಅನುಷಾ, ಎ. ಅಕ್ಷತಾ,
ಜಿ. ನಿಂಗಪ್ಪ ಇವರುಗಳಿಗೆ ಕೈ ಕಾಲುಗಳಿಗೆ, ಮೈಗೆ, ತಲೆಗೆ ಗಾಯಗಳಾಗಿರುತ್ತವೆ. ನಂತರ ವಿಷಯ ತಿಳಿದು
ನಾನು ಸ್ಥಳಕ್ಕೆ ಹೋಗಿ ಗಾಯಗೊಂಡವರನ್ನು ಗಂಗಾವತಿಯ ಶ್ರೀ ಮಲ್ಲಿಕಾರ್ಜುನ ನರ್ಸಿಂಗ್ ಹೋಮ್ ಗೆ ಕರೆದುಕೊಂಡು
ಬಂದು ದಾಖಲು ಮಾಡಿ ಅವರಿಗೆ ಚಿಕಿತ್ಸೆ ಕೊಡಿಸಲಾಯಿತು. ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು
ಇರುತ್ತದೆ.
0 comments:
Post a Comment