1] ಕನಕಗಿರಿ
ಪೊಲೀಸ್ ಠಾಣೆ ಗುನ್ನೆ ನಂ. 112/2017 ಕಲಂ.
447, 427, 341, 323, 504, 506 ಸಹಿತ 34 ಐ.ಪಿ.ಸಿ ಮತ್ತು 3(1)(10) ಎಸ್.ಸಿ/ಎಸ್.ಟಿ. ಕಾಯ್ದೆ:
ದಿನಾಂಕ 05-08-2017 ರಂದು ಮಧ್ಯಾಹ್ನ 1-30
ಗಂಟೆಯ ಸುಮಾರಿಗೆ ಹಿರೇಖೇಡ ಸೀಮೇಯ ಫಿರ್ಯಾದಿಯ ಹೊಲದಲ್ಲಿ
ಸಜ್ಜೆ ಬೆಳೆ ಇದ್ದುದನ್ನು ಆರೋಪಿತರಾದ ಕಮಲಾಕ್ಷೀ ಗಂಡ ವಿರುಪಾಕ್ಷಪ್ಪ ಹಾಗೂ ಆಕೆಯ ಗಂಡ
ವಿರುಪಾಕ್ಷಪ್ಪ ಮತ್ತು ಟ್ರ್ಯಾಕ್ಟರ್ ಡ್ರೈವರ್ ಇವರು ಕೂಡಿಕೊಂಡು ಹೊಲವನ್ನು
ಅತೀಕ್ರಮ ಪ್ರವೇಶ ಮಾಡಿ ಬೆಳೆ ನಾಶ ಮಾಡುತ್ತಿದ್ದಾಗ ಫಿರ್ಯಾದಿ ತಡೆಯಲು ಹೋದಾಗ
ಕಮಲಾಕ್ಷಿ ಇವಳು ಫಿರ್ಯಾದಿಯ ಕುತ್ತಿಗೆ ಹಿಡಿದು ಮತ್ತು ಆಕೆಯ ಗಂಡನು ಕೈಗಳಿಂದ ಹಲ್ಲೆ ಮಾಡಿದ್ದು
ಮತ್ತು ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಜೀವಸಹಿತ ಉಳಿಸುವುದಿಲ್ಲ
ಅಂತಾ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
2] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 120/2017 ಕಲಂ. 32, 34 Karnataka Excise Act.
ದಿನಾಂಕ: 05-08-2017 ರಂದು
ಮುಂಜಾನೆ 9-05 ಗಂಟೆಗೆ ಠಾಣೆಯಲ್ಲಿದ್ದಾಗ, ಜಹಗೀರಗುಡದೂರ ಗ್ರಾಮದಲ್ಲಿ ಬಶೆಟ್ಟೆಪ್ಪ ತಂದೆ ರಾಚಪ್ಪ
ನರೇಗಲ ಸಾ: ಜಹಗೀರಗುಡದೂರ ರವರು ಅನಧಿಕೃತ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ
ಮೇರೆಗೆ ಕೂಡಲೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಪಿ.ಸಿ-244, 398 ರವರೊಂದಿಗೆ ಠಾಣೆಯಿಂದ
ಹೊರಟು ಜಹಗೀರಗುಡದೂರ ಗ್ರಾಮದಲ್ಲಿ ಸಮುದಾಯ ಭವನದ ಹತ್ತಿರ ಮುಂಜಾನೆ 9-50 ಗಂಟೆಗೆ ತಲುಪಿ ಮುಂಜಾನೆ
9-55 ಗಂಟೆಗೆ ದಾಳಿಮಾಡಿದಾಗ ಬಶೆಟ್ಟೆಪ್ಪ ತಂದೆ ರಾಚಪ್ಪ ನರೇಗಲ್ ಸಾ: ಜಹಗೀರಗುಡದೂರ ಇವನು ಸಿಕ್ಕಿಬಿದಿದ್ದು
ಅವನ 1] 90 .ಎಂ.ಎಲ್.ಅಳತೆಯ 53 ಟೆಟ್ರಾ ಪಾಕೇಟಗಳು HAYWARDS ಪ್ರತಿಯೊಂದಕ್ಕೆ ಎಂ.ಆರ್.ಪಿ.
28.13 ಅಂತಾ ಬೆಲೆ ಇರುತ್ತದೆ. ಇವುಗಳ ಒಟ್ಟು ಅಂ:ಕಿ: 1,490-53 ರೂಪಾಯಿಗಳು ಆಗುತಿದ್ದು. ಹಾಗೂ
ನಗದು ಹಣ 300-00 ರೂಪಾಯಿ
ಸಿಕ್ಕಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
3] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 104/2017 ಕಲಂ. 32, 34 Karnataka Excise Act.
ದಿನಾಂಕ: 05-08-2017 ರಂದು ಸಂಜೆ 6-00 ಗಂಟೆಗೆ ನಮೂದಿತ ಆರೋಪಿತರು ಮುದೇನೂರು ಗ್ರಾಮದ ದೋಟಿಹಾಳ
ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅನಧೀಕೃತವಾಗಿ ಮದ್ಯ
ಮಾರಾಟದಲ್ಲಿ ತೊಡಗಿದ್ದಾಗ ಶ್ರೀ ಈರಣ್ಣ ಎ.ಎಸ್.ಐ, ರವರು ಸಿಬ್ಬಂದಿ ಸಮೇತ ದಾಳಿ ಆರೋಪಿತರಿಂದ ಆರೋಪಿ ನಂ 1 ಶಿವಪ್ಪ ರವರಿಂದ 24 ಓಲ್ಡ್ ಟವರಿನ್ ವಿಸ್ಕಿ ಟೆಟ್ರಾ ಪ್ಯಾಕಗಳನ್ನು ಹಾಗೂ ಆರೋಪಿ
ನಂ 2 ಸುಭಾಸ ರವರಿಂದ 24 ಓಲ್ಡ್ ಟವರಿನ್ ವಿಸ್ಕಿ ಟೆಟ್ರಾ ಪ್ಯಾಕಗಳನ್ನು ಹಿಗೇ 48 ಪ್ಯಾಕೇಟಗಳ ಅಂದಾಜು
ಕಿಮ್ಮತ್ತು 3264-00 ರೂ ಬೆಲೆ ಬಾಳುವವಗಳನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈ ಗೊಂಡಿರುತ್ತಾರೆ.
4] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 105/2017 ಕಲಂ. 32, 34 Karnataka Excise Act.
ದಿನಾಂಕ: 05-08-2017 ರಂದು ಸಂಜೆ 19-00 ಗಂಟೆಗೆ ನಮೂದಿತ ಆರೋಪಿತನು ಮುದೇನೂರ
ಗ್ರಾಮದ ಲಂಡಖೇನ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ
ಅನಧೀಕೃತವಾಗಿ ಮದ್ಯ ಮಾರಾಟದಲ್ಲಿ ತೊಡಗಿದ್ದ ಆರೋಪಿ ಶೇಖಪ್ಪ ಇತನಿಂದ 24 ಟೆಟ್ರಾ
ಒರಿಜನಲ್ ಚಾಯ್ಸ ಡಿಲಕ್ಸ ವಿಸ್ಕಿ ಒಟ್ಟು 1632-00 ಬೆಲೆ ಬಾಳುವವಗಳನ್ನು ಶ್ರೀ
ದೊಡ್ಡಪ್ಪ ಎ.ಎಸ್.ಐ, ರವರು
ಅಕ್ರಮ ದಾಳಿ ಕಾಲಕ್ಕೆ ಪಂಚರ ಸಮಕ್ಷಮ ದಾಳಿ ಮಾಡಿ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
5] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 106/2017 ಕಲಂ. 32, 34 Karnataka Excise Act.
ದಿನಾಂಕ: 05-08-2017 ರಂದು ಸಂಜೆ 6-00 ಗಂಟೆಗೆ ನಮೂದಿತ ಆರೋಪಿತರು ಮುದೇನೂರು ಗ್ರಾಮದ ದೋಟಿಹಾಳ
ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅನಧೀಕೃತವಾಗಿ ಮದ್ಯ
ಮಾರಾಟದಲ್ಲಿ ತೊಡಗಿದ್ದ ಆರೋಪಿ ನಂ 1 ರವರಿಂದ 24 ಓಲ್ಡ್ ಟವರಿನ್
ವಿಸ್ಕಿ ಟೆಟ್ರಾ ಪ್ಯಾಕಗಳನ್ನು ಹಾಗೂ ಆರೋಪಿ ನಂ 2 ರವರಿಂದ 24 ಓಲ್ಡ್ ಟವರಿನ್ ವಿಸ್ಕಿ ಟೆಟ್ರಾ ಪ್ಯಾಕಗಳನ್ನು
ಹಿಗೇ 48 ಪ್ಯಾಕೇಟಗಳ ಅಂದಾಜು ಕಿಮ್ಮತ್ತು 3264-00 ರೂ ಬೆಲೆ ಬಾಳುವವಗಳನ್ನು ಶ್ರೀ ಈರಣ್ಣ ಎ.ಎಸ್.ಐ,
ರವರು ಅಕ್ರಮ ದಾಳಿ ಕಾಲಕ್ಕೆ ಪಂಚರ ಸಮಕ್ಷಮ ದಾಳಿ ಮಾಡಿ ಜಪ್ತಿಪಡಿಸಿಕೊಂಡಿದ್ದು ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಂಡಿದ್ದು ಇರುತ್ತದೆ.
6] ಕೊಪ್ಪಳ
ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ. 182/2017 ಕಲಂ. 279, 338 ಐ.ಪಿ.ಸಿ:.
ದಿ:05-08-2017 ರಂದು ಸಂಜೆ 5-20 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ಕೊಪ್ಪಳದಿಂದ ಹಾಲವರ್ತಿಗೆ
ತಮ್ಮ ಮೋಟಾರ ಸೈಕಲ್ ದಲ್ಲಿ ಹೋಗುವಾಗ ಮಾರ್ಗದ ಕೃಷ್ಣ ಇಟ್ಟಂಗಿ ಇವರ ಕಡಿ ಕ್ರಷರ್ ಮಿಷನ್ ಹತ್ತಿರ
ತನ್ನ ಮುಂದೆ ಹೊರಟಿದ್ದ ಮೋಟಾರ ಸೈಕಲ್ ನಂ: ಕೆಎ-37/ಇಬಿ-2676 ನೇದ್ದರ ಚಾಲಕನು ತನ್ನ ವಾಹನವನ್ನು
ಅತೀವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ
ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ
ಓಡಿಸುತ್ತಾ ಹೋಗುವಾಗ ತನ್ನ ವಾಹನ ನಿಯಂತ್ರಿಸದೇ ಪಲ್ಟಿ ಮಾಡಿಕೊಂಡು
ಬಿದ್ದಿದ್ದರಿಂದ ಭಾರಿ ಪೆಟ್ಟುಗಳಾಗಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
7] ಕುಕನೂರ
ಪೊಲೀಸ್ ಠಾಣೆ ಗುನ್ನೆ ನಂ. 106/2017 ಕಲಂ.
87 Karnataka Police Act.
ದಿನಾಂಕ: 05-08-2017 ರಂದು ಸಾಯಂಕಾಲ 4.00 ಗಂಟೆ ಸುಮಾರಿಗೆ ಆರೋಪಿತರು ಮಂಡಲಗೇರಿ ಗ್ರಾಮದ
ಊರೊಳಗೆ ಹೋಗುವ ರಸ್ತೆಯ ಪಕ್ಕದ ಹುಣಸಿಮರದ ಕೆಳಗಡೆ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು
ಪಣಕ್ಕೆ ಹಣ ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎಂಬ ಜೂಜಾಟದಲ್ಲಿ ತೊಡಗಿದ್ದಾಗ ಅವರ
ಮೇಲೆ ದಾಳಿ ಮಾಡಿದ್ದು, ಸಿಕ್ಕಿಬಿದ್ದ ಆರೋಪಿತರಿಂದ ಹಾಗೂ ಇಸ್ಪೇಟ್ ಜೂಜಾಟದ ಕಣದಿಂದ ಒಂದು ಟಾವೆಲ್ ಮತ್ತು 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 2700=00 ರೂ.ಗಳನ್ನು ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment