Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, August 5, 2017

1]  ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 211/2017 ಕಲಂ. 279, 283, 304(ಎ) ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:
ದಿನಾಂಕ: 04-08-2017 ರಾತ್ರಿ 9-45 ಗಂಟೆ ಸುಮಾರಿಗೆ ಹೊಸನಿಂಗಾಪೂರ-ಮುನಿರಾಬಾದ ಸರ್ವಿಸ್ ರಸ್ತೆಯಲ್ಲಿ ಪೋಚಮ್ಮ ದೇವಿ ಗುಡಿಯ ಮುಂದೆ ತಮ್ಮ ಕ್ಲಬನಲ್ಲಿ ಕ್ಲಬ್ ಬಾಯ್ ಕೆಲಸ ಮಾಡಿಕೊಂಡಿದ್ದ ಅರುಣ ತಂದೆ ಜಡಿಯಪ್ಪ ನೇಕಾರ ವಯ: 21, ಜಾತಿ: ನೇಕಾರ, ಉ: ಕ್ಲಬ್ ಬಾಯ್ ಸಾ: ಹೊಸಪೇಟೆ ಇತನು ತನ್ನ ಮೋಟರ ಸೈಕಲ್ ನಂ. ಕೆಎ-36/ಜೆ-3824 ನೇದ್ದನ್ನು ಹೊಸನಿಂಗಾಪೂರ ಕಡೆಯಿಂದ ನಿರ್ಲಕ್ಷತನದಿಂದ ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು, ಇಂಡಿಕೇಟರ್ ಇಲ್ಲದೇ ರಸ್ತೆಯಲ್ಲಿ ತಿರುಗಾಡುವ ವಾಹನಗಳಿಗೆ ಅಡತಡೆಯಾಗಿ ತೊಂದರೆಯಾಗುವಂತೆ ನಿಲ್ಲಿಸಿದ್ದ ಟಿಪ್ಪರ ಲಾರಿ ನಂ. ಕೆಎ-37/6579 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿಕೊಂಡು ಅರುಣ ನೇಕಾರ ಇತನು ಮೃತಪಟ್ಟಿರುತ್ತಾನೆ.  ಆದ್ದರಿಂದ ಈ ಅಪಘಾತಕ್ಕೆ ಕಾರಣವಾದ ಟಿಪ್ಪರ ಲಾರಿ ನಂ. ಕೆಎ-37/6579 ಮತ್ತು ಅದರ ಚಾಲಕನ ಮೇಲೆ ಮತ್ತು ಅರುಣ ತಂದೆ ಜಡಿಯಪ್ಪ ನೇಕಾರ ಸಾ: ಹೊಸಪೇಟೆ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ.  ಟಿಪ್ಪರ ಲಾರಿ ನಂ. ಕೆಎ-37/6579 ನೇದ್ದರ ಚಾಲಕನು ತನ್ನ ಟಿಪ್ಪರ ಲಾರಿಯನ್ನು ಸ್ಥಳದಲ್ಲಿ ನಿಲ್ಲಿಸಿ ಹೋಗಿದ್ದರಿಂದ ಆತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ ಎಂದು ಮುಂತಾಗಿ ಪಿರ್ಯಾದಿಯ ಸಾರಾಂಶ ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2]  ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 119/2017 ಕಲಂ. 32, 34 Karnataka Excise Act.
ದಿನಾಂಕ: 04-08-2017 ರಂದು ಸಾಯಾಂಕಾಲ 19-15 ಗಂಟೆಗೆ ಠಾಣೆಯಲ್ಲಿದ್ದಾಗ, ಹನಮಸಾಗರ ಎ.ಪಿ.ಎಂ.ಸಿ. ಹತ್ತಿರ ಅನಧಿಕೃತ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಕೂಡಲೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಪಿ.ಸಿ-244, 398  ರವರೊಂದಿಗೆ ಠಾಣೆಯಿಂದ ಹೊರಟು ಜಿ.ಬಿ. ಸರ್ಕಲ್ ಹತ್ತಿರ ಸಾಯಾಂಕಾಲ 19-30 ಗಂಟೆಗೆ ತಲುಪಿ ಸಾಯಾಂಕಾಲ 19-35 ಗಂಟೆಗೆ ದಾಳಿಮಾಡಿದಾಗ ಅಣ್ಣಪ್ಪ ತಂದೆ ಯಲ್ಲಪ್ಪ ಬದಾಮಿ ಸಾ: ಹನಮಸಾಗರ ಸಿಕ್ಕಿಬಿದಿದ್ದು ಅವನ 1] 90 .ಎಂ.ಎಲ್.ಅಳತೆಯ 52 ಟೆಟ್ರಾ ಪಾಕೇಟಗಳು HAYWARDS   ಪ್ರತಿಯೊಂದಕ್ಕೆ ಎಂ.ಆರ್.ಪಿ. 28.13 ಅಂತಾ ಬೆಲೆ ಇರುತ್ತದೆ. ಇವುಗಳ ಒಟ್ಟು ಅಂ:ಕಿ: 1,462-76 ರೂಪಾಯಿಗಳು ಆಗುತಿದ್ದು. ಹಾಗೂ ನಗದು ಹಣ 220-00 ರೂಪಾಯಿ ಸಿಕ್ಕಿದ್ದು ಸದರ ದಾಳಿ ಪಂಚನಾಮೆಯನ್ನು ಇಂದು ಸಾಯಾಂಕಾಲ 19-35 ಗಂಟೆಯಿಂದ ಸಾಯಾಂಕಾಲ 20-45  ಗಂಟೆಯವರಗೆ ನಿರ್ವಹಿಸಿದ್ದು ಇರುತ್ತದೆ. ಸದರ ಆರೋಪಿತನು ತನ್ನ ಲಾಬಕ್ಕೋಸ್ಕರ ಯಾವುದೇ ಪರವಾನಿಗೆ ಪಡೆಯದೆ ಮಾರಾಟ ಮಾಡಿ ಅಪರಾದ ಮಾಡಿದ್ದರಿಂದ ಸದರಿಯವನನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
3]  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 181/2017 ಕಲಂ. 34 ಕರ್ನಾಟಕ ಅಬಕಾರಿ ಕಾಯ್ದೆ:
ದಿ:04-08-2017 ರಂದು ಬೆಳಿಗ್ಗೆ 10-10 ಗಂಟೆಗೆ ಠಾಣಾ ವ್ಯಾಪ್ತಿಯ ಯಲಮಗೇರಿ ತಾಂಡಾದಲ್ಲಿ ಓರ್ವ ಮಹಿಳೆ ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದರಿಂದ, ಫಿರ್ಯಾದಿದಾರರು ಸಿಬ್ಬಂದಿ ಸಂಗಡ ಕರೆದುಕೊಂಡು ಸ್ಥಳಕ್ಕೆ ಭೇಟಿ ನೀಡಿ ಬೆಳಿಗ್ಗೆ 10-50 ಗಂಟೆಗೆ ದಾಳಿ ಮಾಡಿ ಆರೋಪಿತಳನ್ನು ವಶಕ್ಕೆ ತೆಗೆದುಕೊಂಡು, ವಿಂಡ್ಸರ ಡೀಲಕ್ಸ ವಿಸ್ಕಿ. 90 ಎಮ್.ಎಲ್. ಅಳತೆಯ ಒಂದು ಟೆಟ್ರಾಪಾಕೇಟ್ ಅಂ.ಕಿ. 28=13 ರೂ. ಹೀಗೆ ಒಟ್ಟು 35 ಟೆಟ್ರಾಪಾಕೇಟಗಳು ಅಂ.ಕಿ. 984=55. ರೂ. ಬೆಲೆಬಾಳುವವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.


0 comments:

 
Will Smith Visitors
Since 01/02/2008