1] ಗಂಗಾವತಿ
ಸಂಚಾರಿ ಪೊಲೀಸ್ ಠಾಣೆ
ಗುನ್ನೆ ನಂ. 22/2017 ಕಲಂ. 279, 337, 338, 283, 304(ಎ) ಐ.ಪಿ.ಸಿ:.
ದಿನಾಂಕ 08-08-2017 ರಂದು ಬೆಳಗ್ಗೆ
10-00 ಗಂಟೆಗೆ ನಾನು ಮನೆಯಲ್ಲಿ ಇರುವಾಗ ನನ್ನ ತಂದೆ ನನಗೆ ಪೊನ್ ಮಾಡಿ ನೀಲಕಂಠಶ್ವೇರ ಸರ್ಕಲ್ ಹತ್ತಿರ
ತನಗೆ ಬಸ್ ಅಪಘಾತ ಮಾಡಿದೆ ಕೂಡಲೇ ಬಾ ಅಂತಾ ಹೇಳಿ ಪೊನ್ ಮಾಡಿದನು ನಾನು ಕೂಡಲೇ ನೀಲಕಂಠಶ್ವೇರ ಸರ್ಕಲ್
ಹತ್ತಿರ ಬಂದು ನೋಡಲಾಗಿ ನಮ್ಮ ತಂದೆ ನೀಲಕಂಠ ಗುಡಿ ಎದರುಗಡೆ ಇರುವ ಬಸ್ ನಿಲ್ದಾಣದ ಹತ್ತಿರ ರಸ್ತೆ
ಮೇಲೆ ಮಲಗಿದ್ದು ನಾನು ನನ್ನ ತಂದೆಗೆ ವಿಚಾರಿಸಲಾಗಿ ನನ್ನ ತಂದೆ ತಿಳಿಸಿದ್ದೇನೆಂದರೆ ನಾನು ಜಿಎಂಎಸ್
ಕೋರಿಯರ್ ಸವರ್ಿಸ್ ಆಫೀಸ್ದಿಂದ ಪಾರ್ಸಲ್ ತೆಗೆದುಕೊಂಡು ನೀಲಕಂಠ ಸರ್ಕಲ್ ಹತ್ತಿರ ಬಂದು ಬಳ್ಳಾರಿ
ಹೋಗುವ ಬಸ್ಗೆ ಕಾಯುತ್ತಿರುವಾಗ ಬೆಳಗ್ಗೆ 09-45 ಗಂಟೆಗೆ ಬಸ್ ನಿಲ್ದಾಣದ ಕಡೆಯಿಂದ ಕುಷ್ಟಗಿ -ಬಳ್ಳಾರಿ ಬಸ್ ಕೆಎ 37 ಎಫ್ 0467 ಬಂದಿದ್ದು ನಾನು ಸದರಿ ಬಸ್ನ ಡ್ರೈವರ್ಗೆ
ಪಾರ್ಸಲ್ ಕೊಡುವಾಗ ಒಮ್ಮೇಲೆ ನೀಲಕಂಠ ಸರ್ಕಲ್ ಕಡೆಯಿಂದ ಇನ್ನೂಂದು ಬಸ್ ಅತಿ ಜೋರಾಗಿ ಮತ್ತು ಅಲಕ್ಷತನದಿಂದ
ಚಾಲನೆ ಮಾಡಿಕೊಂಡು ಓವರ್ ಟೇಕ್ ಮಾಡಿಕೊಂಡು ಬಂದಾಗ ಬಸ್ ನಿಯಂತ್ರಣ ತಪ್ಪಿ ನನಗೆ ಟಕ್ಕರ್ ಕೊಟ್ಟು
ಅಪಘಾತ ಮಾಡಿರುತ್ತಾನೆ ಅಂತಾ ಹೇಳಿದನು ಸ್ಥಳದಲ್ಲಿದ್ದ ಅಪಘಾತ ಮಾಡಿದ ಬಸ್ ನಂಬರ್ ನೋಡಲಾಗಿ ಕೆಎ
36 ಎಫ್ 1239 ಅಂತಾ ಇದ್ದು ನನ್ನ ತಂದೆ ನೋಡಲಾಗಿ ಹಣೆಗೆ ಭಾರಿ ಒಳಾಪೆಟ್ಟಾಗಿದ್ದು ಮೂಗಿಗೆ ಒಳಪೆಟ್ಟಾಗಿ
ಮೂಗಿನಿಂದ ರಕ್ತ ಶ್ರಾವವಾಗಿದ್ದು ಹಾಗೂ ಎದೆಗೆ ತೆರಚಿದ ಗಾಯ ವಾಗಿದ್ದು ಎರಡು ಪಕ್ಕಾಡಿಗೆ ಒಳಪೆಟ್ಟಾಗಿದ್ದು
ಇರುತ್ತದೆ. ಗಂಗಾವತಿ ಸರಕಾರಿ ಆಸ್ಪತ್ರೆಯಿಂದ ಹೆಚ್ಚಿನ
ಇಲಾಜು ಕುರಿತು ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಇಲಾಜು ಕುರಿತು ಹೋಗಿದ್ದು ಇರುತ್ತದೆ ಸದರಿ ನೀಲಕಂಠರಾವ್
ತಂದೆ ಚಿದಂಬರ್ರಾವ್ ಕುಲಕಣರ್ಿ ವ:50 ಸಾ: ಗಂಗಾವತಿ ಇತನು ಚಿಕಿತ್ಸೆ ಪಡೆಯುತ್ತಿರುವಾಗ ಗುಣಮುಖವಾಗದೆ
12-05 ಪಿಎಂ ಗೆ ಮೃತಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2] ಯಲಬುರ್ಗಾ
ಪೊಲೀಸ್ ಠಾಣೆ ಗುನ್ನೆ ನಂ. 105/2017 ಕಲಂ.
279, 337, 338 ಐ.ಪಿ.ಸಿ:.
ದಿನಾಂಕ: 08-08-2017 ರಂದು ಸಂಜೆ 7-00 ಗಂಟೆಯ ಸುಮಾರಿಗೆ ಆರೋಪಿತನು ತಾನು ನಡೆಸುತ್ತಿದ್ದ
ಮೋಟಾರ್ ಸೈಕಲ್ ನಂ: ಕೆಎ-25/ಯು-1776 ನೇದ್ದರ ಮೇಲೆ ಫಿರ್ಯಾದಿದಾರರನ್ನು ಕೂಡಿಸಿಕೊಂಡು ತುಮ್ಮರಗುದ್ದಿಯಿಂದ
ಯಲಬುರ್ಗಾಕ್ಕೆ ಬರುತ್ತಿದ್ದಾಗ, ತಾನು ನಡೆಸುತ್ತಿದ್ದ ಮೋಟಾರ್ ಸೈಕಲನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ
ನಡೆಸಿಕೊಂಡು ಬಂದು, ರಸ್ತೆಯ ಬದಿಗೆ ಹೋಗುತ್ತಿದ್ದ ಬಂಡಿಗೆ ಟಕ್ಕರ್ ಕೊಟ್ಟು ಅಫಘಾತ ಮಾಡಿ, ಮೋಟಾರ್
ಸೈಕಲ್ ನೊಂದಿಗೆ ರಸ್ತೆಯ ಮೇಲೆ ಬಿದ್ದಾಗ, ಫಿರ್ಯಾದಿದಾರರಿಗೆ ಎಡಗಾಲಿ, ಮೋಣಕಾಲ ಹತ್ತಿರ, ಎಡಗಾಲಿನ
ಕಿರುಬೆರಳಿನ ಹತ್ತಿರ, ಎಡ ಭುಜಕ್ಕೆ ತೆರಚಿದ ಗಾಯವಾಗಿದ್ದು, ಆರೋಪಿತನಿಗೆ ತಲೆಯ ಮೇಲೆ, ಎಡಮೋಣಕಾಲ
ಕೆಳಗೆ ಭಾರಿ ಸ್ವರೂಪದ ರಕ್ತಗಾಯವಾಗಿದ್ದು, ಬಲಗೈ ಮುಂಗೈ ಮೇಲೆ, ಬಲ ಕಿವಿಯ ಹತ್ತಿರ, ಎಡಗಾಲ ಹಿಮ್ಮಡಿಗೆ
ತೆರೆಚಿದ ಗಾಯವಾಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 244/2017 ಕಲಂ. 353, 323, 504,
506 ಐ.ಪಿ.ಸಿ:
ಫಿರ್ಯಾದಿದಾರರಾದ ಶ್ರೀ
ಮಲಿಯಪ್ಪ ತಂದೆ ಮಲ್ಲಪ್ಪ, ವಯಸ್ಸು 29 ವರ್ಷ, ಉ: ಕಂಪ್ಯೂಟರ್ ಆಪರೇಟರ್, ಗ್ರಾಮ ಪಂಚಾಯತ ಮಲ್ಲಾಪೂರು
ಸಾ: ಮಲ್ಲಾಪೂರು ತಾ: ಗಂಗಾವತಿ, ಫಿರ್ಯಾದಿಯನ್ನು ನೀಡಿದ್ದು, ದಿನಾಂಕ:- 08-08-2017 ರಂದು ಮಧ್ಯಾಹ್ನ
12:10 ಗಂಟೆಯ ಸುಮಾರಿಗೆ ಪಂಚಾಯತಿಯ ಪಿ.ಡಿ.ಓ. ರವರು ನನಗೆ ಆಶ್ರಯ ಯೋಜನೆಯ ಫಲಾನುಭವಿಗಳ ಪಟ್ಟಿ
& ಕೋಡ್ ಸಂಖ್ಯೆಯು ಜಿ.ಪಿ.ಎಸ್. ಮಾಡಲಾಗಿದೆಯೋ ಅಥವಾ ಇಲ್ಲವೆಂದು ಪ್ರಶ್ನಿಸಿದಾಗ, ನಾನು ಈಗಾಗಲೇ
ಜಿ.ಪಿ.ಎಸ್. ಮಾಡಲಾಗಿದೆ ತಾಂತ್ರಿಕ ಹಾಗೂ ಇಂಟರ್ ನೆಟ್ ಸೌಲಭ್ಯ ಸರಿಯಾಗಿ ಇಲ್ಲದಿರುವದರಿಂದ ಕೆಲವೊಂದು
ಅಪಲೋಡ್ ಆಗಿಲ್ಲವೆಂದು ಹೇಳಿದೆನು. ಆಗ ಅಲ್ಲಿಯೇ ಇದ್ದ ಪಂಚಾಯತಿ ಸದಸ್ಯರಾದ ಜೆ.ಪಿ. ನಾರಾಯಣಗೌಡ
ಇವರು ನನಗೆ ಏಕಾಏಕಿಯಾಗಿ ಈ ಸೂಳೇ ಮಗ ತನಗೆ ಬೇಕಾದ ಫಲಾನುಭವಿಗಳನ್ನು ಬೇರೆ ಒಬ್ಬ ಸದಸ್ಯರ ಮಾತು ಕೇಳಿ
ಅಪ್ ಲೋಡ್ ಮಾಡಿಸಿದ್ದಾನೆಂದು ಹೇಳಿ ಮೈಮೇಲಿನ ಶರ್ಟ ಹಿಡಿದು ಎಳೆದಾಡಿ ಹಿಗ್ಗಾ ಮುಗ್ಗಾ ತಳಿಸಿ ಹೊಡಿ-ಬಡಿ
ಮಾಡಿದನು. ಅಲ್ಲದೇ ಲೇ ಸೂಳೇ ಮಗನೇ ನೀ ಯಾವನಲೇ ಯಾರಲೇ ನಿನಗೆ ಕೆಲಸ ಮಾಡಲು ಹೇಳಿರುತ್ತಾರೆ
ಅಲ್ಲದೇ ನನ್ನ ಮನೆಯವರೆಲ್ಲರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ ಮತ್ತು ಇನ್ನು ಮುಂದೆ
ನೀನು ಕೆಲಸ ಹೇಗೆ ಮಾಡುತ್ತೀಯಾ ಮಾಡಲೇ ನೀನೇನಾದರೂ ಇಲ್ಲಿ ಬಂದು ಕೆಲಸ ಮಾಡಿದ್ದಲ್ಲಿ ನಿನಗೆ ಜೀವ
ಸಹಿತ ಉಳಿಸುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುತ್ತಾನೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು
ಇರುತ್ತದೆ.
0 comments:
Post a Comment