1] ಹನುಮಸಾಗರ
ಪೊಲೀಸ್ ಠಾಣೆ ಗುನ್ನೆ ನಂ. 123/2017 ಕಲಂ.
420, 506 ಐ.ಪಿ.ಸಿ:.
ದಿನಾಂಕ: 09-08-2017 ರಂದು ರಾತ್ರಿ 08-30 ಗಂಟೆಗೆ ಫಿರ್ಯಾದಿದಾರರಾದ
ವೀರಭದ್ರಯ್ಯ ತಂದೆ ಮಹಾಲಿಂಗಯ್ಯ ಸೊಪ್ಪಿಮಠ, ಸಾ: ಹೂಲಗೇರಿ, ಹಾ/ವ:
ಹಿರೇಮನ್ನಾಪೂರ, ರವರು ಠಾಣೆಗೆ ಹಾಜರಾಗಿ
ಗಣಕೀಕೃತ ಫಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ತಾವು
ತಮ್ಮ ತಂದೆ ತಾಯಿಗೆ 6 ಜನ ಗಂಡು ಮಕ್ಕಳಿದ್ದು, ನಮ್ಮ ಸಹೋದರರಿಗೆ ಸಂಬಂಧಪಟ್ಟಂತೆ ಕುಷ್ಟಗಿ ತಾಲೂಕ ಹೂಲಗೇರಿ ಸೀಮಾದ ಜಮೀನು ಸರ್ವೆ
ನಂ: 374/1 ನೇದ್ದರಲ್ಲಿ 5 ಎಕರೆ
ಜಮೀನು ಇದ್ದು, ಈ ಜಮೀನು ನಮ್ಮ ಸಹೋದರರ ಹೆಸರಿಗೆ ಜಂಟಿಯಾಗಿ
ನಮೂದಿರುತ್ತದೆ. ಹಾಗೂ ಈ ಜಮೀನು ಎಲ್ಲರೂ ಜಂಟಿಯಾಗಿ ಸ್ವಾದೀನ
ಇರುತ್ತದೆ. ನನ್ನ ಅಣ್ಣನಾದ ಸಿದ್ದರಾಮಯ್ಯ ಈತನು ಸನ್-2003
ನೇ ಸಾಲಿನ ಜನೇವರಿ ತಿಂಗಳಿನ 7 ನೇ
ತಾರೀಖಿನಂದು ಮೃತಪಟ್ಟಿದ್ದು ಇರುತ್ತದೆ. ನಮ್ಮ ಅಣ್ಣತಮ್ಮಂದಿರಿಗೆ
ಸಂಬಂಧಪಟ್ಟ ಜಮೀನಿನಲ್ಲಿ ಬೆಲೆಬಾಳುವ ಗ್ರೈನೆಟ್ ಕಲ್ಲು ಬರುತ್ತದೆ ಎಂದು ತಿಳಿದು ನನ್ನ ಅಣ್ಣ
ಶಿವಮೂರ್ತಯ್ಯ ಈತನು ನಮ್ಮ ಅಣ್ಣತಮ್ಮಂದಿರಿಗೆ ಎಲ್ಲರಿಗೂ ಗೊತ್ತಾಗದಂತೆ ದಿನಾಂಕ:
05-10-2006 ರಂದು 1] ಶರಣಪ್ಪ ತಂದೆ ಯಲ್ಲಪ್ಪ
ಹುಲ್ಲೂರ, ಸಾ: ಹನಮಸಾಗರ, 2]
ನಾಗರಾಜ ತಂದೆ ಹನಮಪ್ಪ ಮೇಲಿನಮನಿ, ಸಾ:
ಕುಷ್ಟಗಿ ಇವರಿಗೆ ಗುತ್ತಿಗೆ ಆಧಾರದ ಮೇಲೆ ತನ್ನ ಮನೆಯಲ್ಲಿ ಕುಳಿತುಕೊಂಡು
ಅವರಿಗೆ 4 ವರ್ಷಗಳ ವರೆಗೆ ಕರಾರು ಒಪ್ಪಂದ ಮಾಡಿಕೊಂಡಿದ್ದು ಹಾಗೂ
ಒಂದು ಕ್ಯೂಬಿಕ್ ಮೀಟರಿಗೆ 2500/- ರೂ ಹಾಗೂ ಪ್ರತಿ ಒಂದು ಖಂಡಾ
ಕಲ್ಲಿಗೆ ರೂ 70 ರೂಪಾಯಿಯಂತೆ ಈ ಹಣವನ್ನು ಪ್ರತಿ ತಿಂಗಳು ತಮಗೆ
ರಾಯಲ್ಟಿ ಹಣವನ್ನು ಕೊಡಬೇಕೆಂದು ತಮ್ಮಷ್ಟಕ್ಕೆ ತಾವೇ ಕರಾರು ಮಾಡಿಕೊಂಡು ಇದಕ್ಕೆ ಶಾಂತಗೌಡ
ಪಾಟೀಲ್, ಸಾ: ಚೆನ್ನಪಟ್ಟಣ, ಹಾಗೂ ಎಂ.ಸಿ. ಚೌಡ್ಕಿ,
ಸಾ: ಹನಮಸಾಗರ, ಮತ್ತು
ನಾಗರಾಜ ಹಕ್ಕಿ, ಸಾ: ಹನಮಸಾಗರ,
ಇವರುಗಳು ಸಾಕ್ಷಿ ಸಹಿ ಮಾಡಿಸಿ ಈ ಕರಾರು ಪತ್ರದ ಹಿಂದೆ ಪ್ರತಿಜ್ಞಾಧಾರಕರು
ಅಂತಾ ನನ್ನ ಮತ್ತು ಇನ್ನೂಳಿದ ಸಹೋದರರ ಹೆಸರನ್ನು ಬರೆದು ಅದರಲ್ಲಿ ಮೃತಪಟ್ಟ ಸಿದ್ರಾಮಯ್ಯನ
ಸಹಿಯನ್ನು ಖೊಟ್ಟಿ ಮಾಡಿ ತನ್ನ ಸಹಿ ಮಾಡಿ ಲೀಜ್ ಕರಾರು ಮಾಡಿದ್ದು, ಗೊತ್ತಾಗಿ ಈ ವಿಷಯವನ್ನು ನನ್ನ ಅಣ್ಣ ಶಿವಮೂರ್ತಯ್ಯ ಈತನಿಗೆ ಕೇಳಲಾಗಿ ನಾನು
ಮಾಡಿನಿ ನೀವೇನ್ ಮಾಡ್ಕೊಂತೀರಿ ಮಾಡ್ಕೊರಿ ಇನ್ನೊಂದು ಸಲ ಬಂದರೆ ನಿಮ್ಮ ಕೊಲೆ ಮಾಡಲು
ಹೇಸುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ. ಕಾರಣ 2003
ರಲ್ಲಿ ಮೃತಪಟ್ಟ ನನ್ನ ಅಣ್ಣ ಸಿದ್ರಾಮಯ್ಯನ ಸಹಿಯನ್ನು ತಾನೇ ಮಾಡಿ ಹಾಗೂ
ತನ್ನ ಸಹಿ ಮಾಡಿ ಇನ್ನೂಳಿದವರ ಹೆಸರನ್ನು ಮಾತ್ರ ಬರೆದು ಸಹಿ ಮಾಡಿಸದೇ ನಮಗೆ ಮೋಸ ಮಾಡುವ
ಉದ್ದೇಶದಿಂದ ಲೀಜಗೆ ಕೊಟ್ಟ ಹೊಲದ ಹಣವನ್ನು ತಾನೇ ತನ್ನ ಲಾಭಕ್ಕಾಗಿ ಉಪಯೋಗಿಸಿಕೊಂಡು ಸಹೋದರರಿಗೆ
ಮೋಸ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಫಿರ್ಯಾದಿ ಸಾರಾಂಶ ಇರುತ್ತದೆ.
0 comments:
Post a Comment