1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 194/2017 ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ,:.
ದಿನಾಂಕಃ 01-09-2017 ರಂದು ಸಂಜೆ 7-15 ಗಂಟೆಗೆ ಶ್ರೀ ಎಂ.ಶಿವಕುಮಾರ ಪಿ.ಎಸ್.ಐ. ಕಾರಟಗಿ
ಠಾಣೆ ರವರು ಠಾಣೆಗೆ ಹಾಜರಾಗಿ, ಪಂಚನಾಮೆ, ವರದಿ, ಆರೋಪಿತನನ್ನು ಹಾಜರ ಪಡಿಸಿದ್ದು, ಸದ್ರಿ ವರದಿಯ
ಸಾರಾಂಶವೇನೆಂದರೆ, ದಿನಾಂಕ 01-09-2017 ರಂದು ಸಂಜೆ 5-30 ಗಂಟೆಗೆ ಕಾರಟಗಿ ಪಟ್ಟಣದ ಹೊರ ವಲಯದ ಸಮರ್ಥ
ಹೊಟೇಲ್ ದಲ್ಲಿ ಆರೋಪಿ ಅಮರೇಶ ತಂದೆ ಹನುಮಂತಪ್ಪ ಛತ್ರ ವಯ: 23 ವರ್ಷ ಜಾ: ಕುರುಬರ ಸಾ: ಚನ್ನಳ್ಳಿ
ಕ್ರಾಸ್ ಕಾರಟಗಿ ಈತನು ಯಾವುದೇ ಅಧಿಕೃತವಾದ
ದಾಖಲಾತಿಗಳನ್ನು ಇಟ್ಟುಕೊಳ್ಳದೇ ಅಕ್ರಮವಾಗಿ ಮಧ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿರುವಾಗ ಪಿ.ಎಸ್.ಐ. ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನು ಸಮರ್ಥ
ಹೊಟೇಲ್ ದಲ್ಲಿ ಯಾವುದೇ ಅಧಿಕೃತವಾದ ದಾಖಲಾತಿಗಳನ್ನು ಇಟ್ಟುಕೊಳ್ಳದೇ ಅಕ್ರಮವಾಗಿ ಮದ್ಯದ ಬಾಟಲಿಗಳನ್ನು
ಮಾರಾಟ ಮಾಡುತ್ತಿದ್ದಾಗ ವಿವಿಧ ಒಟ್ಟು 59 ಮದ್ಯದ ಬಾಟಲಿಗಳು ಅಂದಾಜು ರೂ 6575=00 ಬೆಲೆಯುಳವನ್ನು
ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ವಾಪಸ್ ಠಾಣೆಗೆ
ಬಂದು ವರದಿ ಕೊಟ್ಟಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 245/2017 ಕಲಂ: 341,354,
504, 506 ಐಪಿಸಿ.
ದಿನಾಂಕ : 01-09-2017 ರಂದು ರಾತ್ರಿ 8-15
ಗಂಟೆಗೆ
ಪಿರ್ಯಾದಿದಾರರಾದ ಶ್ರೀಮತಿ ಲಕ್ಷ್ಮಮ್ಮ ಗಂಡ ಭೀಮಣ್ಣ ತೆಗ್ಗಿಹಾಳ ಇವರು ಠಾಣೆಗೆ ಹಾಜರಾಗಿ ನೀಡಿದ
ಗಣಕೀಕೃತ ಪಿರ್ಯಾದಿಯ ಸಾರಾಂಶವೆನೆಂದರೆ, ಪಿರ್ಯಾದಿಯ ಮನೆಯ ಬಾಜು ಮಲ್ಲಪ್ಪ ತಂದೆ ಬಸಪ್ಪ ಮಡಿವಾಳರ ಇವರ ಮನೆ ಇದ್ದು
ಈತನು ನನ್ನ ಸಂಗಡ ವಿನಾಃಕಾರಣ ನೀರು ಚೆಲ್ಲುವ, ಕಸ ಗೂಡಿಸುವ ವಿಷಯವಾಗಿ ಆಗಾಗ ಬಾಯಿ ಮಾತಿನಿಂದ ಜಗಳ ಮಾಡುತ್ತಿದ್ದನು. ನಾನು ಸಹಿಸಿಕೊಂಡು ಸುಮ್ಮನಿರುತ್ತಿದ್ದೇನು. ನಿನ್ನೆ ದಿನಾಂಕ :31-08-2017 ರಂದು ಮುಂಜಾನೆ 07-00 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಮುಂದೆ
ಅಂಗಳ ಗಸ ಹೊಡೆಯುತ್ತಿರುವಾಗ ಮಲ್ಲಪ್ಪ ಮಡಿವಾಳರ ಈತನು ನಮ್ಮ ಮನೆಯ ಕಡೆ ಕಸ ಹೊಡಿಬೇಡ ಅಂದನು ಆಗ
ನಾನು ನಿಮ್ಮ ಮನೆ ಕಡೆ ಕಸ ಹೊಡಿದಿಲ್ಲಾ ಅಂತಾ ಅನ್ನುತ್ತಿದ್ದಾಗ ಮಲ್ಲಪ್ಪನು ಒಮ್ಮಿಂದೊಮ್ಮಲೇ
ಸಿಟ್ಟಿಗೆ ಬಂದು ಲೇ ಭೋಸುಡಿ ರಂಡಿ ನಿನಗೆ ಎಷ್ಟು ಸಾರಿ ಹೇಳಬೇಕು ನೀನು ನಮ್ಮ ಮನೆ ಕಡೆ ಕಸ, ನೀರು ಚೆಲ್ಲಾಬೇಡ ಅಂತಾ ಅನ್ನುತ್ತಲೇ
ನನ್ನನ್ನು ಮನೆಯ ಕಡೆಗೆ ಹೋಗದಂತೆ ಅಡ್ಡಗಟ್ಟಿ ತೆಡೆದು ನಿಲ್ಲಿಸಿ ನನ್ನ ಸೀರೆಯ ಸೆರಗನ್ನು
ಹಿಡಿದು ಎಳೆದಾಡಿ ಮಾನಭಂಗ ಮಾಡಿದನು. ಇನ್ನೊಮ್ಮೆ ನಮ್ಮ ಮನೆ ಕಡೆ ಕಸಪಸ ಹೊಡಿದಿ ಅಂದರಾ ನಿನ್ನ ಜೀವ ಸಹಿತ
ಬಿಡುವುದಿಲ್ಲಾ ಅಂತಾ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ
ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 237/2017 ಕಲಂ: 498(A), 307,323,324,504 IPC
ದಿನಾಂಕ 01-09-2017 ರಂದು 4-00 ಪಿ.ಎಂ,ಕ್ಕೆ
ಪಿರ್ಯಾದು ಶ್ರೀಮತಿ ನಾಗವೇಣಿ ತಂದೆ ಭೀಮಣ್ಣ ಎಲಗಾರ ವಯ: 25 ವರ್ಷ ಜಾ: ಕುರುಬರ ಉ: ಮನೆಗೆಲಸ ಸಾ:
ಹೊಸಲಿಂಗಾಪೂರ ಇವರು ಠಾಣೆಗೆ ಬಂದು ನೀಡಿದ ಗಣಕಿಕೃತ
ಪಿರ್ಯಾದಿಯ ಸಾರಾಂಶವೆನೆಂದರೆ, ದಿನಾಂಕ 31-08-2017 ರಾತ್ರಿ 11-00 ಗಂಟ ಸುಮಾರಿಗೆ ಪಿರ್ಯಾದುದಾರರ
ಗಂಡ ಭೀಮಪ್ಪ ಇವನು ಮನೆಗೆ ಬಂದು ಕುಡಿದ ಅಮಲಿನಲ್ಲಿ ಮನೆಗೆ ಬಂದು ಹೆಂಡತಿಗೆ ಮಕ್ಕಳಾಗದಿದ್ದುದರಿಂದ
ಅವಳಿಗೆ ಅವಾಚ್ಯವಾಗಿ ಬೈದಾಡುತ್ತಾ ನೀನು ನನಗೆ ಇಷ್ಟವಿಲ್ಲಾ ಎಂದು ಅವಳಿಗೆ ತವರು ಮನೆಗೆ ಹೋಗಿ ಎಂದು
ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಾ ಅವಳಿಗೆ ಕೊಲೆ ಮಾಡುವ ಉದ್ದೇಶದಿಂದ ಕಬ್ಬಣದ
ರಾಡಿನಿಂದ ಹೊಡಿ ಬಡಿ ಮಾಡಿರುತ್ತಾನೆ ಸದರಿ ಭೀಮಪ್ಪನ ಮೇಲೆ ಕಾನೂನುನಕ್ರಮ ಕೈಗೊಳ್ಳಿ ಅಂತಾ ಮುಂತಾಗಿದ್ದ
ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
4] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 152/2017 ಕಲಂ: 279,
304(ಎ) ಐ.ಪಿ.ಸಿ. ಹಾಗೂ 187 ಐ.ಎಂ.ವಿ. ಕಾಯ್ದೆ.
ದಿನಾಂಕ: 30-08-2017 ರಂದು ಸಾಯಂಕಾಲ 4-30 ಗಂಟೆಗೆ ಜಿಲ್ಲಾ ಆಸ್ಪತ್ರೆ
ಕೊಪ್ಪಳದಿಂದ ಆರ್.ಟಿ.ಎ. ಬಗ್ಗೆ ಎಂ.ಎಲ್.ಸಿ. ಸ್ವೀಕೃತವಾಗಿದ್ದು ವಿಚಾರಣೆ ಕುರಿತು ಆಸ್ಪತ್ರೆಗೆ
ಬೇಟಿ ಕೊಟ್ಟು ಗಾಯಾಳು ಸಂಭಂದಿ ಶ್ರೀ ಹನುಮಂತಪ್ಪ ತಂದೆ ಸಿದ್ದಪ್ಪ ದೊಡ್ಡಮನಿ, 48 ವರ್ಷ ಜಾತಿ: ಪರಿಶಿಷ್ಟ ಜಾತಿ, ಉ:ಸಮಾಜ ಸೇವಕ, ಸಾ:ಹಿರೇಸಿಂದೋಗಿ, ತಾ:ಜಿ:ಕೊಪ್ಪಳ ಇವರು ಹಾಜರಪಡಿಸಿದ ಲಿಖಿತ ದೂರನ್ನು ಪಡೆದುಕೊಂಡಿದ್ದು ಅದರ ಸಾರಾಂಶ ಏನಂದರೆ, ದಿನಾಂಕ: 30-08-2017 ರಂದು ಬೆಳಿಗ್ಗೆ 10-15 ಗಂಟೆಯ ಸುಮಾರಿಗೆ ಫಿರ್ಯಾದಿ ದೊಡ್ಡಪ್ಪನಾದ ಮಳ್ಳಪ್ಪ ತಾಯಿ ಮರಿಯಮ್ಮ 70 ವರ್ಷ ಇವರು ವೈಯಕ್ತಿಕ ಕೆಲಸದ ನಿಮಿತ್ಯ ಮುಂಡರಗಿ-ಹಿರೇಸಿಂಧೋಗಿ ಮುಖ್ಯ ರಸ್ತೆಯಲ್ಲಿ
ಕಾತರಕಿ ಕ್ರಾಸದಿಂದ ಬಸ್ ನಿಲ್ದಾಣದ ಕಡೆಗೆ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ
ಮುಂಡರಗಿ ಕಡೆಯಿಂದ ಕ್ರೂಷರ್ ವಾಹನ ನಂ: ಕೆ.ಎ-22/ಎನ್-7435 ರ ಚಾಲಕನು ಅತೀವೇಗ ಮತ್ತು
ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿ ದೊಡ್ಡಪ್ಪನಿಗೆ ಟಕ್ಕರು ಕೊಟ್ಟು ಅಪಘಾತ ಪಡಿಸಿ
ತೀವ್ರವಾಗಿ ಗಾಯಗೊಳಿಸಿದ ನಂತರ ಅಲ್ಲಿಂದ ಹೊರಟು ಹೋಗಿದ್ದು ಅಪಘಾತದ ನಂತರ ಗಾಯಾಳನ್ನು
ಹಿರೇಸಿಂಧೋಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಮಾಡಿಸಿ ಅಲ್ಲಿಂದ ಹೆಚ್ಚಿನ
ಚಿಕಿತ್ಸೆ ಕುರಿತು ಕೊಪ್ಪಳ ಜಿಲ್ಲಾ ಆಸ್ಪತ್ರಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು
ಇರುತ್ತದೆ. ಕಾರಣ ಮಾನ್ಯರು ಅಪಘಾತ ಪಡಿಸಿ ಹೊರಟು ಹೋದ ಕ್ರೂಷರ್ ವಾಹನ ನಂ: ಕೆ.ಎ-22/ಎನ್-7435 ರ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರನ್ನು
ಪಡೆದುಕೊಂಡು ರಾತ್ರಿ 8:15 ಗಂಟೆಗೆ ವಾಪಸ್ಸು ಠಾಣೆಗೆ ಬಂದಿದ್ದು ಅದರ ಸಾರಾಂಶದ ಮೇಲಿಂದ ಠಾಣೆಯ ಎ.ಎಸ್.ಐ. ಶ್ರೀ ಮಲ್ಲಪ್ಪ ರವರು ಅಳವಂಡಿ ಠಾಣಾ ಗುನ್ನೆ ನಂ: 152/2017 ಕಲಂ: 279, 338 ಐ.ಪಿ.ಸಿ. ಮತ್ತು 187 ಐ.ಎಂ.ವಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಂಡಿದ್ದು ಇರುತ್ತದೆ. ನಂತರ ಪ್ರಕರಣದ ತನಿಖಾಧಿಕಾರಿ ಶ್ರೀ ಮಲ್ಲಪ್ಪ
ಎ.ಎಸ್.ಐ. ರವರು ರವರು ಘಟನಾ ಸ್ಥಳಕ್ಕೆ ಬೇಟಿ ಕೊಟ್ಟು ಪಂಚರ ಸಮಕ್ಷಮದಲ್ಲಿ ಪಂಚನಾಮೆಯನ್ನು ನಿರ್ವಹಿಸಿ
ಸಾಕ್ಷಿದಾರರ ಹೇಳಿಕೆ ಪಡೆದುಕೊಂಡಿದ್ದು ಇರುತ್ತದೆ. ನಂತರ ಸದರಿ ಪ್ರಕರಣದ ಮುಂದಿನ ತನಿಖೆ ಕುರಿತು
ಕಡತವನ್ನು ತಗೆದುಕೊಂಡು ಪರಿಶೀಲಿಸಿ ತನಿಖೆಯನ್ನು ಮುಂದುವರಿಸಿದಾಗ ಇಂದು ದಿನಾಂಕ: 01-09-2017 ರಂದು
ಮುಂಜಾನೆ 7:30 ಗಂಟೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಿಂದ ನಿಸ್ತಂತು ಮುಖಾಂತರ ಪ್ರಕರಣದಲ್ಲಿಯ ಗಾಯಾಳು
ಮಳ್ಳಪ್ಪ ತಾಯಿ ಮರಿಯಮ್ಮ ಇವರು ಚಿಕಿತ್ಸೆ ಪಡೆಯುವ ಕಾಲಕ್ಕೆ ಇಂದು ದಿನಾಂಕ: 01-09-2017 ರಂದು ಮುಂಜಾನೆ
7 ಗಂಟೆಯ ಸುಮಾರಿಗೆ ಮೃತ ಪಟ್ಟ ಬಗ್ಗೆ ಎಮ್.ಎಲ್.ಸಿ ಸ್ವೀಕೃತವಾಗಿದ್ದು ಇರುತ್ತದೆ. ಕಾರಣ
ಈ ಪ್ರಕರಣದಲ್ಲಿಯ ಗಾಯಾಳು ಮಳ್ಳಪ್ಪ ತಾಯಿ ಮರಿಯಮ್ಮ ದೊಡ್ಡಮನಿ, 70 ವರ್ಷ ಸಾ: ಹಿರೇಸಿಂದೋಗಿ ಈತನು
ಮೃತಪಟ್ಟಿದ್ದರಿಂದ ಈ ಪ್ರಕರಣದಲ್ಲಿ ಕಲಂ: 304(ಎ) ಐಪಿಸಿ ನೇದ್ದನ್ನು ಅಳವಡಿಸಿ ತನಿಖೆ ಕೈಗೊಂಡಿದ್ದು
ಇರುತ್ತದೆ.
5] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 133/2017 ಕಲಂ: 379,
ಐ.ಪಿ.ಸಿ
ದಿನಾಂಕ 01-09-2017 ರಂದು ಸಂಜೆ 6-30 ಗಂಟೆಗೆ
ಫಿರ್ಯಾದಿದಾರರಾದ ಕೃಷ್ಣಾಜಿ ತಂದೆ ನಾನಪ್ಪ ನಾಯಕ ಸಾ: ಬಿಟಿ ಪಾಟೀಲ್ ನಗರ ಕೊಪ್ಪಳ ಇವರು ಠಾಣೆಗೆ
ಹಾಜರಾಗಿ ಹಾಜರು ಪಡಿಸಿದ ಫಿರ್ಯಾದಿಯ ಸಾರಾಂಶವೇನೆಂದರೆ. ಫಿರ್ಯಾದಿದಾರರಿಗೆ ತಾವು ಕೆಲಸ ಮಾಡುವ
ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರದಿಂದ ನೀಡಿದ್ದ ಹೋಂಡಾ ಶೈನ್ ಮೋಟಾರ ಸೈಕಲ್ ನಂ KA 37/G 0426 ನೇದ್ದನ್ನು ಅವರು ತಮ್ಮ ದಿನನೀತ್ಯದ ಕರ್ತವ್ಯಕ್ಕೆ
ಉಪಯೋಗಿಸುತ್ತಿದ್ದರು. ದಿನಾಂಕ: 30-08-2017 ರಂದು ಮದ್ಯಾಹ್ನ 2-45 ಗಂಟೆಗೆ ತಾವು ತಮ್ಮ
ಇಲಾಖೆಯು ನೀಡಿದ್ದ ಹೊಂಡಾ ಶೈನ್ ಮೋಟಾರ ಸೈಕಲ್ ನ್ನು ಜಿಲ್ಲಾ ಆಸ್ಪತ್ರಗೆ ತೆಗೆದುಕೊಂಡು ಹೋಗಿ
ಅದನ್ನ ಆಸ್ಪತ್ರೆಯ ಮುಂದೆ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿ ತಮ್ಮ ಆಫೀಸ್ ಗೆ ಹೋಗಿ
ಕರ್ತವ್ಯ ಮುಗಿಸಿಕೊಂಡು ವಾಪಸು ಮದ್ಯಾಹ್ನ 4-30 ಗಂಟೆಗೆ ಆಸ್ಪತ್ರೆಯ ಹೊರಗಡೆ ಬಂದು ನೋಡಿದಾಗ
ತಮ್ಮ ಮೋಟಾರ ಸೈಕಲ್ ಕಾಣಲಿಲ್ಲಾ, ಕೂಡಲೇ
ತಾನು ಅಲ್ಲಿ ಸುತ್ತಾಮುತ್ತ ಹುಡುಕಾಡಲು ಎಲ್ಲಿಯೂ ಕಂಡು ಬರಲಿಲ್ಲಾ, ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ
ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ
0 comments:
Post a Comment