Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, September 3, 2017

1] ಕುಷ್ಟಗಿ ಪೊಲೀಸ್  ಠಾಣೆ  ಗುನ್ನೆ ನಂ. 246/2017 ಕಲಂ: 87 Karnataka Police Act.
ದಿನಾಂಕ : 02-09-2017 ರಂದು ಚಳಗೇರಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಶ್ರೀ. ಪುಂಡಪ್ಪ ಎ.ಎಸ್.ಐ ಮತ್ತು ಸಿಬ್ಬಂದಿಯವರಾದ, PC-109 ಅಮರೇಶ, PC-116 ಸಂಗಮೇಶ , PC-117 ಶ್ರೀಧರ, PC-426 ಮಹಾಂತೇಶ,  ಹಾಗೂ ನಮ್ಮ ಸರಕಾರಿ ಜೀಪ ನಂ: ಕೆ.-37-ಜಿ-292 ನೇದ್ದರಲ್ಲಿ ಅದರ ಚಾಲಕ ಶ್ರೀನಾಥ ಎ.ಪಿ.ಸಿ-180 ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 03 ಜನ ಆರೋಪಿತರು ಸಿಕ್ಕಿದ್ದು ಇರುತ್ತದೆ. ಹಾಗೂ 04 ಜನ ಆರೋಪಿತರು ಓಡಿಹೋಗಿರುತ್ತಾರೆ. ಸಿಕ್ಕಿ ಬಿದ್ದ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ನಗದು ಹಣ 2330=00 ರೂ, 52 ಇಸ್ಪೆಟ್ ಎಲೆಗಳು, ಹಾಗೂ ಒಂದು ಹಳೆ ನ್ಯೂಸ್ ಪೇಪರನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ  ಪೊಲೀಸ್  ಠಾಣೆ ಗುನ್ನೆ ನಂ. 269/2017 ಕಲಂ: 87 Karnataka Police Act..
ದಿನಾಂಕ:- 03-09-2017 ರಂದು 00-15 ಎ.ಎಂ.ಕ್ಕೆ. ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ರವರು ಠಾಣೆಯಲ್ಲಿರುವಾಗ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಮುಷ್ಟೂರು ಗ್ರಾಮದ ಬೀರಣ್ಣ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದು ಸಿಬ್ಬಂದಿಯವರಾದ ಮ.ಎ.ಎಸ್.ಐ ಶಾರವ್ವ, ಹೆಚ್.ಸಿ. 29, 44, 191 ಪಿ.ಸಿ 363, 328, 80 ಹಾಗೂ 2 ಇಬ್ಬರು ಪಂಚರೊಂದಿಗೆ ಹೋಗಿ ಮುಷ್ಟೂರು ಗ್ರಾಮದ ಬೀರಪ್ಪ ದೇವಸ್ಥಾನದ ಮುಂದೆ ದೇವಸ್ಥಾನದ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು, ಆಗ ಸಮಯ 00-45 ಎ.ಎಂ. ಗಂಟೆಯಾಗಿತ್ತು. ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 8 ಜನರು ಸಿಕ್ಕಿ ಬಿದ್ದಿದ್ದು,  ಸದರಿ ದಾಳಿಯಲ್ಲಿ ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 20,500/- ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಹಳೆಯ ಪ್ಲಾಸ್ಟಿಕ್ ಬರಕಾ ಸಿಕ್ಕಿದ್ದು ಇರುತ್ತವೆ. ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
3] ಕೊಪ್ಪಳ ಗ್ರಾಮೀಣ  ಪೊಲೀಸ್  ಠಾಣೆ ಗುನ್ನೆ ನಂ. 199/2017 ಕಲಂ: 34 Karnataka Excise Act..

ಫಿರ್ಯಾದಿದಾರರು ದಿ:02-09-2017 ರಂದು ಸಂಜೆ 4-50 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೇ, ಇಂದು ದಿ:02-09-2017 ರಂದು ಮದ್ಯಾಹ್ನ 2-00 ಗಂಟೆಗೆ ಠಾಣಾ ವ್ಯಾಪ್ತಿಯ ಕಿನ್ನಾಳ ಗ್ರಾಮದ ಚಿತ್ರಗಾರ ಓಣಿಯ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಅಕ್ರಮವಾಗಿ ಮದ್ಯದ ಟೆಟ್ರಾಪಾಕೇಟಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದರಿಂದ, ಫಿರ್ಯಾದಿದಾರರು ಸಿಬ್ಬಂದಿ ಮತ್ತು ಪಂಚರಿಗೆ ಸಂಗಡ ಕರೆದುಕೊಂಡು ಸ್ಥಳಕ್ಕೆ ಭೇಟಿ ನೀಡಿ ಮದ್ಯಾಹ್ನ 2-45 ಗಂಟೆಗೆ ದಾಳಿ ಮಾಡಿ ಆರೋಪಿತನನ್ನು ವಶಕ್ಕೆ ತೆಗೆದುಕೊಂಡು ಮತ್ತು ಹಾಯವರ್ಡ್ಸ ಚಿಯರ್ ವಿಸ್ಕಿ 90 ಎಮ್.ಎಲ್ ಅಳತೆಯೆ ಒಂದು ಟೆಟ್ರಾಪಾಕೆಟ್ ಅಂ.ಕಿ. 28.13 ರೂ ಹೀಗೆ ಒಟ್ಟು 48 ಪಾಕೇಟಗಳು ಅಂ,ಕಿ 1,350=24 ರೂ. ಬೆಲೆಬಾಳುವ ಮದ್ಯವನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008