1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 211/2017 ಕಲಂ: 78(3) Karnataka Police Act.
ದಿನಾಂಕ:- 12-09-2017 ರಂದು
ರಾತ್ರಿ 8-45 ಗಂಟೆಗೆ ಶ್ರೀ
ಎಂ.ಶಿವಕುಮಾರ
ಪಿ.ಎಸ್.ಐ ಕಾರಟಗಿ ರವರು ಠಾಣೆಗೆ ಹಾಜರಾಗಿ ಮಟ್ಕಾ ಜೂಜಾಟದ ವರದಿ ಮೂಲ ಪಂಚನಾಮೆ ಮತ್ತು ಮಾನ್ಯ
ನ್ಯಾಯಾಲಯದ ಪರವಾನಿಗೆಯೊಂದಿಗೆ ಠಾಣೆಗೆ ಹಾಜರಾಗಿ ಕೊಟ್ಟ ವರದಿಯ ಸಾರಾಂಶದಲ್ಲಿ ಇಂದು ದಿನಾಂಕ:-12-09-2017 ರಂದು
ರಾತ್ರಿ 7-10 ಗಂಟೆಗೆ
ನಮೂದು ಮಾಡಿದ ಆರೋಪಿತನು ತೊಂಡಿಹಾಳ ಕಾರಟಗಿ ಮುಖ್ಯ ರಸ್ತೆಯ ಪಕ್ಕದ ಬಸರಿ ಕಟ್ಟೆಯ
ಹತ್ತಿರ ಇರುವ ಸಾರ್ವಜನಿಕರ ಸ್ಥಳದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ
ಸಮಕ್ಷಮದಲ್ಲಿ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ
ತೊಡಗಿದ್ದ ಆರೋಪಿತನಿಗೆ ಹಿಡಿದಿದ್ದು ಸಿಕ್ಕಿಬಿದ್ದವನ ಕಡೆಯಿಂದ 520=00 ಗಳನ್ನು
ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಗುನ್ನೆ ದಾಖಲು ಮಾಡಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
2] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 244/2017 ಕಲಂ: 143, 147, 323, 324, 504, 506 ಸಹಿತ 149 ಐ.ಪಿ.ಸಿ:
ದಿನಾಂಕ 12-09-2017 ರಂದು 03-00 ಪಿ.ಎಂ.ಕ್ಕೆ ಪಿರ್ಯಾದುದಾರರು ಠಾಣೆಗೆ ಬಂದು ಲಿಖಿತ ಪಿರ್ಯಾದಿಯನ್ನು ಹಾಜರ ಪಡಿಸಿದ್ದು ಸಾರಾಂಶವೆನೆಂದರೆ, ಹಳೆ ಬಂಡಿ ಹರ್ಲಾಪುರ ಗ್ರಾಮದಲ್ಲಿ ಪಿತ್ರಾರ್ಜಿತ ಆಸ್ಥಿಯ ವಿಷಯದಲ್ಲಿ ಪಿರ್ಯಾದುದಾರಿಗೆ ಮತ್ತು ಆರೋಪಿತರಿಗೆ ಜಗಳವಾಗಿ ವೈಮನಸ್ಸಿದ್ದು ಗ್ರಾಮದ ಹಿರಿಯರು ಬುದ್ದಿ ಹೇಳಿದರು ಕೇಳದೆ ದಿನಾಂಕ 11-09-2017 ರಂದು ಬೆಳಿಗ್ಗೆ 7-00 ಗಂಟೆಗೆ ಆರಪಿತರೆಲ್ಲರು ಅಕ್ರಮ ಕೂಟ ರಚಿಸಿಕೊಂಡು ಬಂದು ಪಿರ್ಯಾದುದಾರರ ಮನೆಯ ಹತ್ತಿರ ಹೋಗಿ ಪಿರ್ಯಾದಿದಾರರಗೆ ಆರೋಪಿತರು ಅವಾಚ್ಯವಾಗಿ ಬೈದಾಡಿ ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡಿಬಡಿ ಮಾಡಿದ್ದು ಬಿಡಿಸಲು ಹೋದ ಪಿರ್ಯಾದಿಯ ಹೆಂಡತಿಗೆ ಮತ್ತು ಮಗನಿಗೂ ಸಹ ಆರೋಪಿತರು ಅವಾಚ್ಯವಾಗಿ ಬೈದಾಡಿ ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡಿಬಡಿ ಮಾಡಿ ಗಾಯಗೊಳಿಸಿ ಜೀವದ ಬೆದರಿಕೆ ಹಾಕಿರುತ್ತಾರೆ. ಪ್ರರಕಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
3] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ
ನಂ. 208/2017 ಕಲಂ:
504, 506, 186 ಐ.ಪಿ.ಸಿ:
ದಿನಾಂಕ 12-09-2017 ರಂದು ಸಂಜೆ 5-00 ಗಂಟೆಗೆ ಫಿರ್ಯಾದಿ
ಖಾಜಾಮೋಯಿನುದ್ದೀನ್ ಪೌರಾಯುಕ್ತರು ನಗರಸಭೆ ಗಂಗಾವತಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾದಿಯನ್ನು ಹಾಜರುಪಡಿಸಿದ್ದು, ಅದರ ಸಾರಾಂಶವೇನೆಂದರೆ,
ಇಂದು ದಿನಾಂಕ 12-09-2017 ರಂದು ಮಧ್ಯಾಹ್ನ 1-00 ಗಂಟೆ ಸುಮಾರಿ ಫಿರ್ಯಾದಿಯು ನಗರಸಭೆ ಕಾರ್ಯಾಲಯದಲ್ಲಿ
ಕೆಲಸ ಮಾಡುತ್ತಿದ್ದಾಗ ಆರೋಪಿ ಶಬ್ಬೀರ್ ಹುಸೇನ್ ಈತನು ಬಂದು ಫಿರ್ಯಾದಿಯ ಕೊಠಡಿಗೆ ಬಂದು ನಮ್ಮ ವಾರ್ಡ್
ನಲ್ಲಿ ಅನಧಿಕೃತವಾಗಿ ಎನ್ ಎ ಇಲ್ಲದೆ ಕಟ್ಟಡಗಳನ್ನು ಕಟ್ಟುತ್ತಿದ್ದಾರೆ ನೀವು ಏನ್ ಮಾಡುತ್ತೀಯಾ ಅಂತಾ
ಫಿರ್ಯದಿಯೊಂದಿಗೆ ಜಗಳ ತಗೆದು ಬಾಯಿ ಮಾಡಿ ಅವಾಚ್ಯ ಶಬ್ದಗಳಿಂದ ಬೈದಾಡಿ ನೀನು ಗಂಗಾವತಿಯಲ್ಲಿ ಇದ್ದು
ಹೇಗೆ ಕೆಲಸ ಮಾಡುತ್ತೀಯ ನೋಡುತ್ತೇನೆ ಅಂತಾ ಜೀವಬೆದರಿಕೆ ಹಾಕಿ ಕಛೇರಿಯ ಬೇರೆ ಕೆಲಸಕ್ಕೆ ಹೋಗಲು ಬಿಡದೆ
ಸರಕಾರಿ ಕೆಲಸಕ್ಕೆ ಅಡ್ಡಿಯುಂಟು ಮಾಡಿರುತ್ತಾನೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
0 comments:
Post a Comment