1] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 207/2017 ಕಲಂ: 78(3) Karnataka Police Act.
ದಿನಾಂಕ 11-09-2017
ರಂದು 8-15 ಪಿ.ಎಮ್ ಗಂಟೆಯ ಸುಮಾರಿಗೆ
ಆರೋಪಿತನಾದ ಖಾಸಿಂ
ಅಲಿ ತಂದೆ ಬುಡನ್ ಸಾಬ ಕಡದಾಲ್ @ ತೌಡ್ ವಯಾ: 48 ವರ್ಷ, ಜಾ: ಮುಸ್ಲಿಂ, ಉ: ತೌಡ ವ್ಯಾಪಾರ, ಸಾ:
ಗುಂಡಮ್ಮ ಕ್ಯಾಂಪ್ ಗಂಗಾವತಿ ಈತನು ಗಂಗಾವತಿ ನಗರದ ಗುಂಡಮ್ಮ ಕ್ಯಾಂಪಿನ
ಆಂಜಿನೇಯ ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು
1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಸಾರ್ವಜನಿಕರನ್ನು ಕರೆದು ಸಾರ್ವಜನಿಕರಿಂದ ಹಣ
ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುವಾಗ ಸದರಿಯವನ ಮೇಲೆ
ಪಂಚರ ಸಮಕ್ಷಮ ಶ್ರೀ ರಾಜಕುಮಾರ ವಾಜಂತ್ರಿ ಪಿ.ಐ ಸಿಬ್ಬಂದಿಯೊಂದಿಗೆ ದಾಳಿ
ಸದರಿಯವನಿಗೆ ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ 01] ಮಟಕಾ ಜೂಜಾಟದ ಹಣ ನಗದು ಹಣ ರೂ. 890-00. 02] ಮಟಕಾ ನಂಬರ ಬರೆದ 2 ಮಟ್ಕಾ ಪಟ್ಟಿ ಅಂ. ಕಿ 00 03] 01 ಬಾಲ್ ಪೆನ್ ಅಂ.ಕಿ
00-00 ದೊರೆತಿದ್ದು. ಸದರಿ ಆರೋಪಿತನ ಹತ್ತಿರ
ದೊರೆತ ಮುದ್ದೇಮಾಲನ್ನು ಜಪ್ತಿ ಪಡಿಸಿಕೊಂಡು ಪ್ರತ್ಯೇಕವಾಗಿ ಪಂಚನಾಮೆಯನ್ನು ಬರೆದು ಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 243/2017 ಕಲಂ: 457, 380 ಐ.ಪಿ.ಸಿ:
ದಿನಾಂಕ: 11-09-2017 ರಂದು ಸಂಜೆ 6-45 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಲಿಖಿತ
ಪಿರ್ಯಾದಿಯನ್ನು ಹಾಜರ ಪಡಿಸಿದ್ದು ಅದರ ಸಾರಾಂಶವೇನಂದರೆ, ಹುಲಗಿ ಗ್ರಾಮದಲ್ಲಿರುವ ತಮ್ಮ ಮೊಬೈಲ್ ಅಂಗಡಿ ರಿಹಾನ್ ಮೊಬೈಲ್ ಶಾಪ್ ನಲ್ಲಿ ದಿನಾಂಕ: 10-09-2017 ರಂದು ರಾತ್ರಿ 9-00 ಗಂಟೆಯಿಂದ ದಿನಾಂಕ: 11-09-2017 ರಂದು ಬೆಳಗಿನ ಜಾವ 5-30 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಸದರಿ ಅಂಗಡಿಯ ಶೆಟ್ರಸ್ ನ್ನು ಮುರಿದು ಒಳ ಪ್ರವೇಶ ಮಾಡಿ ಅಂಗಡಿಯಲ್ಲಿದ್ದ 1] HP ಕಂಪನಿಯ 1 ಲ್ಯಾಪ್ ಟಾಪ್ ಅಂ.ಕಿ. 10,000-00 ರೂ., 2] ಒಂದು ಸ್ಯಾಮಸಂಗ್ ಜೆ-7 ಮೊಬೈಲ್ ಪೋನ್ ಅಂ.ಕಿ. 5000-00 ರೂ., 3] ಒಂದು ಏಸಸ್ ಜೆನ್-3 ಮೊಬೈಲ್ ಪೋನ್ ಅಂ.ಕಿ. 5000-00 ರೂ., 4] ಒಂದು ಏಸಸ್ ಮ್ಯಾಕ್ಸ್ ಮೊಬೈಲ್ ಪೋನ್ ಅಂ.ಕಿ. 4900-00 ರೂ. ಒಟ್ಟು 24,900-00 ರೂ. ಮೌಲ್ಯದ ಲ್ಯಾಪಟಾಪ್ ಮತ್ತು ಮೊಬೈಲ್ ಪೋನಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪ್ರಕರಣ ದಾಖಲಸಿಕೊಂಡು ತನಿಖೆ
ಕೈಕೊಂಡಿರುತ್ತದೆ.
0 comments:
Post a Comment