1] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 119/2017 ಕಲಂ: 379 ಐ.ಪಿ.ಸಿ:
ಫಿರ್ಯಾದಿದಾರರು ರಾಜೂರು ಸೀಮಾದಲ್ಲಿ
3 ಎಕರೆ ಹೊಲವನ್ನು ಖರೀದಿ ಮಾಡಿದ್ದು, ಸದರ ಹೊಲವನ್ನು ಖರೀದಿ ನೊಂದಣಿ ಮಾಡಿಸಿಕೊಳ್ಳುವ ಸಲುವಾಗಿ
ಇಂದು ದಿನಾಂಕ:15-09-017 ರಂದು ಮದ್ಯಾಹ್ನ 1-20 ಗಂಟೆಯ ಸುಮಾರು ತಮ್ಮ ಇನೋವಾ ಕಾರ ನಂ: ಕೆಎ-37
ಎನ್-6313 ನೇದ್ದರಲ್ಲಿ ಯಲಬುರ್ಗಾ ಪಟ್ಟಣಕ್ಕೆ ಬಂದಿದ್ದು, ಇನೋವಾ ಕಾರನ್ನು ಯಲಬುರ್ಗಾ-ಕೊಪ್ಪಳ ರಸ್ತೆಯ
ಮೇಲೆ ರಸ್ತೆಯ ಎಡಗಡೆಗೆ ಕಚ್ಚಾ ರಸ್ತೆಯ ಮೇಲೆ ಮಲ್ಲಿಗೆ ಪಾಸ್ಟ ಪುಡ್ ಅಂಗಡಿಯ ಮುಂದೆ ನಿಲ್ಲಿಸಿ
ಅದರಲ್ಲಿ ಒಂದು ಪ್ಲಾಸ್ಟೀಕ್ ಕ್ಯಾರಿ ಬ್ಯಾಗನಲ್ಲಿ ಇಟ್ಟಿದ್ದ ನಗದು ಹಣ 16 ಲಕ್ಷ ರೂಗಳನ್ನು
ಯಾರೋ ಕಳ್ಳರು ಕಾರಿನ ಎಡಗಡೆಯ ಮುಂದಿನ ಡೋರಿನ ಗ್ಲಾಸನ್ನು ಒಡೆದು ಹಣವನ್ನು ಬ್ಯಾಗ ಸಮೇತ ಕಳ್ಳತನ
ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಾರಣ ಇನ್ನೋವ ಕಾರ ನಂ. ಕೆ.ಎ-37 ಎನ್-6313 ನೇದ್ದರಲ್ಲಿ ಒಂದು
ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟಿದ್ದ 16 ಲಕ್ಷ ರೂ. ಗಳನ್ನು ಇಂದು ದಿನಾಂಕ. 15-09-2017 ರಂದು ಮದ್ಯಾಹ್ನ
01-20 ಗಂಟೆಯಿಂದ 01-30 ಗಂಟೆಯ ಅವದಿಯಲ್ಲಿ ನಮ್ಮ ಕಾರಿನ ಮುಂದಿನ ಡೊರಿನ ಗ್ಲಾಸನ್ನು ಹೊಡೆದು ಕಳುವು
ಮಾಡಿಕೊಂಡು ಹೋಗಿದ್ದು, ಸದರಿ ಕಳ್ಳರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ
ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 215/2017 ಕಲಂ: 78(3)
Karnataka Police Act.
ದಿನಾಂಕ:- 15-09-2017 ರಂದು
ರಾತ್ರಿ 8-10 ಗಂಟೆಗೆ ಶ್ರೀ
ಎಂ.ಶಿವಕುಮಾರ
ಪಿ.ಎಸ್.ಐ ಕಾರಟಗಿ ರವರು ಠಾಣೆಗೆ ಹಾಜರಾಗಿ ಮಟ್ಕಾ ಜೂಜಾಟದ ವರದಿ ಮೂಲ ಪಂಚನಾಮೆ ಮತ್ತು ಮಾನ್ಯ
ನ್ಯಾಯಾಲಯದ ಪರವಾನಿಗೆಯೊಂದಿಗೆ ಠಾಣೆಗೆ ಹಾಜರಾಗಿ ಕೊಟ್ಟ ವರದಿಯ ಸಾರಾಂಶದಲ್ಲಿ ದಿನಾಂಕ:-15-09-2017 ರಂದು
ಸಂಜೆ 6-45 ಗಂಟೆಗೆ
ನಮೂದು ಮಾಡಿದ ಆರೋಪಿನಂ.1 ಮತ್ತು 2 ರವರು ಕಾರಟಗಿಯ ಶ್ರೀ ವೆಂಕಟೇಶ್ವರ್ ರೈಸ್ ಮಿಲ್ ಹತ್ತಿರ
ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಪಿ.ಎಸ್.ಐ
ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿ ನಂ.1 ಮತ್ತು 2 ಇವರು
ಹಿಡಿದಿದ್ದು ಸಿಕ್ಕಿಬಿದ್ದವನ ಕಡೆಯಿಂದ 1370=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು
ಇರುತ್ತದೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment