1] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 211/2017 ಕಲಂ: : 143, 147, 148, 448, 323,
324, 354, 504, 506 ಸಹಿತ 149 ಐ.ಪಿ.ಸಿ.
ದಿನಾಂಕ 16-09-2017 ರಂದು ಸಂಜೆ
4-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಸುದರ್ಶನರಾವ್ ತಂದೆ ಯಲ್ಲಪ್ಪರಾವ್ ತಾಂದಳೆ, ವಯಸ್ಸು
45 ವರ್ಷ, ಜಾ: ಭಾವಸಾರ ಕ್ಷತ್ರಿಯ, ಉ: ಜಿ.ಎಸ್.ಪಿ.ಎನ್. ಚಾನೆಲ್ ಪಾಲುದಾರ, ಸಾ: ವಾರ್ಡ ನಂ.
15, ಜೋಗೇರವಾಡಾ, ಗಂಗಾವತಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಹಾಜರುಪಡಿಸಿದ್ದು ಸಾರಾಂಶವೇನೆಂದರೆ,
ನನ್ನ ಮನೆಯಲ್ಲಿ ನನ್ನ ಅಣ್ಣಂದಿರು ಹಾಗೂ ಹಿರಿಯರ ಸಮ್ಮುಖದಲ್ಲಿ ಪಂಚಾಯತಿ ನಡೆದ ಸಂದರ್ಭದಲ್ಲಿ
(1) ಟಿ.ಹೇಮಂತರಾವ್ ತಂದೆ ಟಿ.ಚಂದ್ರಾರಾವ್ (2) ಟಿ. ಕೀರ್ತಿರಾವ್ ತಂದೆ ಟಿ.ಚಂದ್ರಾರಾವ್ (3) ಟಿ.ಪ್ರೇಮಕುಮಾರ್
ತಂದೆ ಟಿ.ಚಂದ್ರಾರಾವ್ (4) ಟಿ.ಪ್ರಶಾಂತಕುಮಾರ ತಂದೆ ಟಿ.ಶಂಕರರಾವ್ (5) ಟಿ.ಶಂಕರ್ @ ಬಾಬು ತಂದೆ
ಟಿ.ಮೀನೋಜಿರಾವ್ (6) ಟಿ. ವಿನಯಕುಮಾರ ತಂದೆ ಟಿ.ಮೀನೋಜಿರಾವ್ (7) ಟಿ. ಚಂದ್ರಕಾಂತ್ @ ಅಪ್ಪಿ ತಂದೆ
ಟಿ. ಲೋಕೋಜಿರಾವ್ (8) ಟಿ.ಸಚಿನ್ ತಂದೆ ಟಿ. ಪ್ರೇಮಕುಮಾರ್ 8 ಜನರ ಗುಂಪು ಕಟ್ಟಿಕೊಂಡು ಬಂದು
ಕೈಯಲ್ಲಿ ಕ್ರಿಕೆಟ್ ಬ್ಯಾಟ್, ರಾಡು, ಬಡಿಗೆ(ಕಟ್ಟಿಗೆ) ಹಿಡಿದುಕೊಂಡು ಏಕಾಏಕಿ ನನ್ನ ಮನೆಗೆ ನುಗ್ಗಿ
ನನ್ನ ಮೇಲೆ ಹಲ್ಲೆ ನಡೆಸಿದ್ದು ಮತ್ತು “ಲೇ ಸೂಳೇಮಗನೇ ನಿನ್ನನ್ನು ಕೊಂದು ಬಿಡುತ್ತೇನೆ, ನೀನು ನಮ್ಮ
ಮೇಲೆ ಇಲ್ಲಸಲ್ಲದ ಮಾತನಾಡಿರುವೆ” ಎಂದು ಅವಾಚ್ಯ ಶಬ್ದಗಳಿಂದ ಬೈದು ಮನಸೋ ಇಚ್ಛೆ ಬಡಿದಿರುತ್ತಾರೆ.
ನನ್ನ ಪತ್ನಿ ಟಿ.ಎಸ್. ಲತಾ ಹಾಗೂ ನನ್ನ ತಾಯಿ ಟಿ. ರತ್ನಾಬಾಯಿ ಇವರ ಮೇಲೆಯೂ ಸಹಾ ಹಲ್ಲೆ ಮಾಡಿದ್ದು,
ಕಾರಣ ಮೇಲ್ಕಂಡ 8 ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಫಿರ್ಯಾದಿ
ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ
ಪೊಲೀಸ್ ಠಾಣೆ ಗುನ್ನೆ ನಂ.279/2017 ಕಲಂ: 160 ಐ.ಪಿ.ಸಿ..
ದಿನಾಂಕ:-
16-09-2017 ರಂದು ಮದ್ಯಾಹ್ನ 3-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಪ್ರಕಾಶ ಮಾಳಿ
ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ನಾನು ಮತ್ತು ನಮ್ಮ ಸಿಬ್ಬಂದಿಯವರಾದ ಪಿ.ಸಿ-
363, ಎ.ಪಿ.ಸಿ- 15 ರವರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಗ್ರಾಮ
ಬೇಟಿ ಕುರಿತು ಜಂಗಮರಕಲ್ಗುಡಿ, ಹೊಸಕೇರಾ ಕ್ಯಾಂಪ್, ಹಾಗೂ ಹೊಸಕೇರಕ್ಕೆ
ಹೊಗಿದ್ದಾಗ್ಗೆ ಬೆಳಗ್ಗೆ 11-00 ಗಂಟೆಯ ಸುಮಾರಿಗೆ ಹೊಸಕೇರಾ
ಗ್ರಾಮ ಪಂಚಾಯತ್ ಆವರಣದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ತಮ್ಮ ವೈಯಕ್ತಿಕ
ವಿಷಯದಲ್ಲಿ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿಕೊಂಡು ಬಾಯಿಮಾಡಿಕೊಳ್ಳುತ್ತಿದ್ದಾರೆ ಅಂತಾ
ಮಾಹಿತಿ ಬಂದ ಕೂಡಲೇ ನಾನು ಮತ್ತು ನಮ್ಮ ಸಿಬ್ಬಂದಿಯವರಾದ ಪಿ.ಸಿ- 363, ಎಪಿಸಿ-15 ರವರೊಂದಿಗೆ
ಹೊಗಿ ನೋಡಲು ಪಂಚಾಯತ್ ಆವರಣದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ
ರೀತಿಯಲ್ಲಿ ಒಬ್ಬರಿಗೊಬ್ಬರು ಕೈಕೈ ಮಿಲಾಯಿಸಿಕೊಂಡು ಬಾಯಿಮಾಡಿಕೊಳ್ಳುತ್ತಿದ್ದುದನ್ನು ಕಂಡು
ನಾವು ಹೊಗಿ ಇಬ್ಬರನ್ನು ಬಿಡಿಸಿ ವಿಚಾರಿಸಲಾಗಿ 1) ಶ್ರೀನಿವಾಸ ತಂದಿ ಸತ್ಯನಾರಾಯಣ
ಚಿಲಕೂರಿ ವಯಾ- 40 ವರ್ಷ ಜಾ- ಕಮ್ಮಾ ಉ- ಒಕ್ಕಲುತನ ಸಾ- ಹೊಸಕೇರಾಕ್ಯಾಂಪ್ ತಾ- ಗಂಗಾವತಿ 2) ರವಿಶ್ಚಂದ್ರ
ತಂದಿ ಏಸಪ್ಪ ಮುಂದಲಮನಿ ವಯಾ- 23 ವರ್ಷ ಜಾ- ಮಾದಿಗ ಉ- ಕೂಲಿ ಕೆಲಸ ಸಾ- ಸವಳಕ್ಯಾಂಪ್
ತಾ- ಗಂಗಾವತಿ. ಅಂತಾ ಹೇಳಿದ್ದು ಇರುತ್ತದೆ. ಸದರಿಯವರು ನಾವು ಬಿಡಿಸದೆ ಇದ್ದರೆ ಒಬ್ಬರಿಗೊಬ್ಬರೂ
ಹೆಚ್ಚಿನ ರೀತಿಯಲ್ಲಿ ಹೊಡೆದಾಟ ಮಾಡಿಕೊಂಡು ಸಾರ್ವಜನಿಕರ ನೆಮ್ಮದಿಯನ್ನು ಹಾಳುಮಾಡಬಹುದೆಂದು ಸದರಿ
ಇಬ್ಬರು ಆರೋಪಿತರನ್ನು ಠಾಣೆಗೆ ಕರೆದುಕೊಂಡು ಬಂದಿದ್ದು, ಕಾರಣ ಸದರಿ ಈ ಇಬ್ಬರು ಸಾರ್ವಜನಿಕ
ಸ್ಥಳದಲ್ಲಿ ಕೈ ಕೈ ಮಿಲಾಯಿಸಿ ಒಬ್ಬರಿಗೊಬ್ಬರು ಬಾಯಿ ಮಾಡಿಕೊಂಡಿದ್ದು ಸದರಿಯವರ ಮೇಲೆ ಕಾನೂನು
ರೀತಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 143/2017 ಕಲಂ. 324, 323,341, 447, 504 ಸಹಿತ 34 ಐ.ಪಿ.ಸಿ..
ದಿನಾಂಕ: 16-09-2017 ರಂದು ಸಂಜೆ 07-00 ಗಂಟೆಗೆ ಜಾಕೀರಹುಸೇನ ಅಡ್ಡವಾಲೆ ಸಾ: ಕೊಪ್ಪಳ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 13-09-2017 ರಂದು ಮಧ್ಯಾಹ್ನ 02-30 ಗಂಟೆಗೆ ಕೊಪ್ಪಳ ನಗರದ ಕಾಳಿದಾಸ ನಗರದ ಬೇಲ್ದಾರ ಕಾಲೋನಿ ಹತ್ತಿರ ಜಮೀನು ಸೀಮಾ ನಂ: 88/6 ಜಮೀನು ಇದ್ದು, ಸದರಿ ಜಮೀನನ್ನು ಸರ್ವೆ ಇಲಾಖೆಯವರು ಹದ್ದ ಬಸ್ತಿ ಮಾಡಿ ಕೊಟ್ಟಿದ್ದು, ಅದರಂತೆ ನಾವು ತಂತಿ ಬೇಲಿ ಕಂಬ ಹಾಕುತ್ತಿದ್ದಾಗ ಬೇಲ್ದಾರ ಕಾಲೋನಿ ನಿವಾಸಿಗಳಾದ ಹನಮಂತಪ್ಪ ಸಜ್ಜಿಉಂಡಿ ಮತ್ತು ಆತನ ಮಗ ಮಂಜುನಾಥ ಇವರು ಬಂದು ನಮ್ಮ ಜಾಗೆಯಲ್ಲಿ ಅತೀಕ್ರಮ ಪ್ರವೇಶ ಮಾಡಿ ನನಗೆ ಲೇ ಬೋಸೂಡಿ ಮಕ್ಕಳ ಇಲ್ಲಿ ಎನು ಶೆಂಟಾ ಹರಿಯಲ್ಲಿಕ್ಕೆ ಹತ್ತಿರಿ ಅಂತಾ ಅವಾಚ್ಯವಾಗಿ ಬೈಯುತ್ತಾ ನನಗೆ ಮತ್ತು ನನ್ನ ತಮ್ಮನಿಗೆ ಕಬ್ಬಿಣದ ಪೈಪಿನಿಂದ ಕೈ ಕಾಲುಗಳಿಗೆ ಹನಮಂತಪ್ಪ ಬಡಿದನು. ಆತನ ಮಗನಾದ ಮಂಜುನಾಥನು ನನ್ನ ತಮ್ಮನ ಅಂಗಿ ಹಿಡಿದು ಕಪಾಳಕ್ಕೆ ಹಾಗೂ ಹೊಟ್ಟೆಗೆ ಗುದ್ದಿದನು. ಇದರಿಂದ ನಮಗೆ ತುಂಬಾ ನೋವಿನಿಂದ ಚೀರಾಡಲು ಸ್ಥಳದಲ್ಲಿ ಹೋಗುತ್ತಿದ್ದವರು ಬಂದು ಬಿಡಿಸಿಕೊಂಡರು. ನಂತರ ನಾನು ಆಸ್ಪತ್ರೆಗೆ ಚಿಕಿತ್ಸೆ ಕುರಿತು ಹೋಗಿದ್ದು, ಕಾರಣ ನನಗೆ ಮತ್ತು ನನ್ನ ತಮ್ಮನಿಗೆ ಹೊಡಿಬಡಿ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇಲಿಂದ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ತಾವರಗೇರಾ ಪೊಲೀಸ್ ಠಾಣೆ ಗುನ್ನೆ
ನಂ. 121/2017 ಕಲಂ 409, 420, ಐಪಿಸಿ.
ದಿನಾಂಕ:
16-09-2017 ರಂದು ಸಂಜೆ 6:00 ಗಂಟೆಗೆ ಫಿರ್ಯಾಧಿದಾರರಾದ ಶ್ರೀ ಚಿನ್ನಪ್ಪ ತಂದೆ ಲಕ್ಷ್ಮಪ್ಪ ವಜ್ರಮಟ್ಟಿ
ಹಾ.ವಸ್ತಿ: ಕುಷ್ಟಗಿ. ಪ್ರಭಾರ ಮುಖ್ಯ ಕಾರ್ಯನಿರ್ವಾಹಕರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ
ಕಳಮಳ್ಳಿ. ರವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಫಿರ್ಯಾಧಿಯನ್ನು ಹಾಜರುಪಡಿಸಿದ್ದು ಸಾರಾಂಶವೆನೆಂದರೆ
ಫಿರ್ಯಾಧಿದಾರರಾದ ಸಹಕಾರ ಸಂಘ ಕಳಮಳ್ಳಿಯಲ್ಲಿ ದಿನಾಂಕ: 02-05-2017 ರಿಂದ ಪ್ರಭಾರಿ ಮುಖ್ಯ ಕಾರ್ಯನಿರ್ವಾಹಕ
ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದು, ಇವರಿಗಿಂತ ಮುಂಚೆ ಪ್ರಾಣೇಶರಾವ್ ತಂದೆ ಭೀಮಸೇನರಾವ್ ಜೋಷಿ
ಸಾ: ಕಳಮಳ್ಳಿ ಇವರು ಸದರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಂತಾ ಕರ್ತವ್ಯ ನಿರ್ವಹಿಸಿದ್ದು ಇರುತ್ತದೆ.
ಸದರಿಯವರು ಕರ್ತವ್ಯ ನಿರ್ವಹಿಸುವ ಕಾಲಕ್ಕೆ ದಿನಾಂಕ: 01-04-2013 ರಿಂದ 31-08-2014 ರ ಅವಧಿಯಲ್ಲಿ
ನಮ್ಮ ಸಂಘದಿಂದ ಒಟ್ಟು 28 ಜನರಿಗೆ ಕೆ.ಸಿ.ಸಿ ಸಾಲ ಒಟ್ಟು ಹಣ 4,25,534=00 ರೂ. ಗಳನ್ನು ನೀಡಿದ್ದು,
ಸದರಿ ಅವಧಿಯಲ್ಲಿ ಜನರು ಮರುಪಾವತಿ ಮಾಡಿದ ಸಾಲದ ಹಣವನ್ನು ಪಡೆದ ಮುಖ್ಯ ಕಾರ್ಯದರ್ಶಿ ಶ್ರೀ ಪ್ರಾಣೇಶರಾವ್
ಬಿ. ಜೋಷಿ ರವರು ಜನರಿಗೆ ರಶೀದಿಯನ್ನು ನೀಡಿದ್ದು, ಆದರೆ ಸದರಿ ಮರುಪಾವತಿಯಾದ ಹಣ 4,25,534=00 ರೂ
ಗಳನ್ನು ನಗದು ಪುಸ್ತಕಕ್ಕೆ ಜಮಾ ಮಾಡಿಕೊಳ್ಳದೆ, ಹಾಗೂ ಬ್ಯಾಂಕಿಗೂ ತುಂಬದೇ ಹಣವನ್ನು ತನ್ನ ಸ್ವಂತಕ್ಕೆ
ಬಳಸಿಕೊಂಡು ಸಹಕಾರ ಸಂಘಕ್ಕೆ ವಂಚನೆ ಮಾಡಿದ್ದು ಕಾರಣ ಸದರಿ ಮುಖ್ಯ ಕಾರ್ಯದರ್ಶಿ ಶ್ರೀ ಪ್ರಾಣೇಶರಾವ್
ಬಿ. ಜೋಷಿ ಸಾ: ಕಳಮಳ್ಳಿ ರವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ವಿನಂತಿ ಇರುತ್ತದೆ. ಅಂತಾ ಮುಂತಾಗಿ
ಇದ್ದ ಫಿರ್ಯಾಧಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಿ ತಪಾಸಣೆಯನ್ನು ಕೈ ಕೊಂಡಿದ್ದು ಇರುತ್ತದೆ.
0 comments:
Post a Comment