1] ಕೊಪ್ಪಳ
ಗ್ರಾಮೀಣ ಪೊಲೀಸ್
ಠಾಣೆ ಗುನ್ನೆ ನಂ. 212/2017 ಕಲಂ: 279, 338 ಐ.ಪಿ.ಸಿ
ಮತ್ತು 187 ಐ.ಎಂ.ವಿ. ಕಾಯ್ದೆ:
ದಿ:29-09-2017 ರಂದು ಮದ್ಯಾಹ್ನ 3-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಪ್ರಶಾಂತ ಹೈದ್ರಾಬಾದ.
ಸಾ: ಅಲ್ಲಾನಗರ, ತಾ: ಕೊಪ್ಪಳ. ಕಿನ್ನಾಳದಲ್ಲಿ ತಮ್ಮ
ವೈಯಕ್ತಿಕ ಕೆಲಸ ಮುಗಿಸಿಕೊಂಡು ವಾಪಾಸ್ ಕೊಪ್ಪಳಕ್ಕೆ ಅಂತಾ ಆರೋಪಿ ನಂ: 01 ನೇದ್ದವರ ಆಟೋದಲ್ಲಿ ಕುಳಿತುಕೊಂಡು
ಮಾರ್ಗದ ಚಿಲವಾಡಗಿ ದಾಟಿ ಟೈಲ್ಸ ಫ್ಯಾಕ್ಟರಿ ಸಮೀಪ ಬರುವಾಗ ಸದರಿ ಆಟೋ ಚಾಲಕ ಮತ್ತು ಎದುರುಗಡೆ ಬಂದ
ಆರೋಪಿ ನಂ: 02 ಟಿ.ವಿ.ಎಸ್ ಮೋಟಾರ ಸೈಕಲ್ ನಂ:ಕೆಎ-37/ಇಸಿ-3053 ನೇದ್ದರ ಚಾಲಕ ಹೀಗೆ ಇಬ್ಬರೂ ಚಾಲಕರು
ತಮ್ಮ ತಮ್ಮ ವಾಹನಗಳನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ
ಚಲಾಯಿಸಿಕೊಂಡು ಬಂದು ಅಪಘಾತ ಮಾಡಿದ್ದರಿಂದ, ಆಟೋದಲ್ಲಿದ್ದ ಫಿರ್ಯಾದಿದಾರರಿಗೆ ಹಾಗೂ ಆರೋಪಿ ನಂ:
02 ನೇದ್ದವರಿಗೆ ಭಾರಿಗಾಯಗಳಾಗಿದ್ದು ಇರುತ್ತದೆ. ಅಪಘಾತ ಮಾಡಿದ ಆಟೋ ಚಾಲಕನು ತನ್ನ ವಾಹನ ಸಮೇತ ಹೋಗಿದ್ದು
ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 225/2017 ಕಲಂ. 32, 34 Karnataka Excise Act.
ದಿನಾಂಕ : 29-09-2017 ರಂದು ರಾತ್ರಿ 9-30 ಗಂಟೆಗೆ ಶ್ರೀ ಎಂ.ಶಿವಕುಮಾರ ಪಿ.ಎಸ್.ಐ.
ಕಾರಟಗಿ ಠಾಣೆ ರವರು ಠಾಣೆಗೆ ಹಾಜರಾಗಿ, ಪಂಚನಾಮೆ, ವರದಿಯನ್ನು ಪಡಿಸಿದ್ದು, ಸದ್ರಿ ವರದಿಯ ಸಾರಾಂಶವೇನೆಂದರೆ,
ದಿನಾಂಕ 29-09-2017 ರಂದು ರಾತ್ರಿ 8-10 ಗಂಟೆಗೆ ಕಾರಟಗಿ ನಗರದ ಕಾರಟಗಿ-ನವಲಿ ರಸ್ತೆಯ
ಪಕ್ಕದಲ್ಲಿ ಇರುವ ವೈಟ್ ಹಾರ್ಸ್ ಡಾಬಾದಲ್ಲಿ ಮೇಲ್ಕಂಡ ಆರೋಪಿತನು ಅನಧಿಕೃತವಾಗಿ ಮದ್ಯದ
ಬಾಟಲಿಗಳನ್ನು ಇಟ್ಟುಕೊಂಡು ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ.
ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದ್ದು, ಆ ಕಾಲಕ್ಕೆ ಆರೋಪಿತನು ಪೊಲೀಸ್ ರನ್ನು
ನೋಡಿ ಓಡಿ ಹೋಗಿರುತ್ತಾನೆ. ಸದ್ರಿ ಆರೋಪಿತನ ಡಾಬಾದಿಂದ ಒಟ್ಟು 21 ಮದ್ಯದ ಬಾಟಲಿಗಳು ಅಂದಾಜು ಕಿಮ್ಮತ್ತು
ರೂ. 2595=00 ಬೆಲೆ ಬಾಳುವುಗಳನ್ನು ಪಂಚರ ಸಮಕ್ಷಮ
ಜಪ್ತ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ
ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ.
ನಂ. 148/2017
ಕಲಂ. 143, 147 ,148, 341, 354, 355, 324, 323, 448, 404, 506 ಸಹಿತ 149 ಐ.ಪಿ.ಸಿ:.
ದಿನಾಂಕ: 29-09-2017 ರಂದು 7-00 ಗಂಟೆಗೆ ಫಿರ್ಯಾದಿ ಮಂಜುಳಾ ಮುದೋಳ ಸಾ: ಬೆಂಕಿನಗರ ಕೊಪ್ಪಳ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ನಮ್ಮ ಅಕ್ಕನಾದ ಶಿಲ್ಪಾ ಇವಳಿಗೆ ಬೆಂಕಿನಗರದ ನಿವಾಸಿಯಾದ ಬಸವರಾಜ ವಣಗೇರಿ ಈತನ ಅಳಯನಾದ ಮಂಜುನಾಥ ಈತನು 03 ದಿನಗಳ ಹಿಂದೆ ಅಪಹರಣ ಮಾಡಿಕೊಂಡು ಹೋಗಿದ್ದಾನೆಂದು ತಿಳಿದು ಆತನ ಮೇಲೆ ದೂರು ನೀಡಲು ಅನವಟ್ಟಿಗೆ ಹೋಗಿದ್ದು, ಅದನ್ನೆ ನಮ್ಮ ಮೇಲೆ ಸಿಟ್ಟು ಮಾಡಿಕೊಂಡು ಮುಂಜಾನೆ 06-30 ಗಂಟೆಗೆ ಆರೋಪಿತರೆಲ್ಲರೂ ನಮ್ಮ ಮನೆಯಲ್ಲಿ ಅತೀಕ್ರಮ ಪ್ರವೇಶ ಮಾಡಿ ನನ್ನ ತಾಯಿಗೆ ಮನೆಯ ಹೊರಗಡೆ ಎಳೆದುಕೊಂಡು ಬಂದು ಅವಳಿಗೆ ಕಟ್ಟಿಗೆಯಿಂದ ಕೈಯಿಂದ ಹೊಡಿಬಡಿ ಮಾಡಿ ಸಾರ್ವಜನಿಕರ ಮುಂದೆ ಅವಮಾನ ಮಾಡಿದ್ದು ಅಲ್ಲದೆ ಬಿಡಿಸಲು ಹೋದ ನನಗೆ ಮತ್ತು ನನ್ನ ಅಜ್ಜಿಗೆ ಚೆಪ್ಪಲಿಯಿಂದ ಹೊಡೆದು ದುಖಾಪತ್ ಗೊಳಿಸಿದ್ದು ಅಲ್ಲದೆ ಅವಾಚ್ಯವಾಗಿ ಬೈದಾಡಿ ಜೀವದ ಬೆದರಿಕೆ ಹಾಕಿದ್ದಾರೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ.
ನಂ. 149/2017
ಕಲಂ. 341, 324, 323, 504, 506 ಸಹಿತ 34 ಐ.ಪಿ.ಸಿ ಮತ್ತು 3[1][10][11] ಎಸ್.ಸಿ/ಎಸ್.ಟಿ. ಕಾಯ್ದೆ:.
ದಿನಾಂಕ: 29-09-2017 ರಂದು ಬೆಳಿಗ್ಗೆ 08-30 ಗಂಟೆ ಸುಮಾರಿಗೆ ಫಿರ್ಯಾದಿ ವಿಜಯಶ್ರೀ ಸಾ: ವಣಗೇರಿ ಹಾಲಿ: ಬೆಂಕಿನಗರ ಕೊಪ್ಪಳ ನಮ್ಮ ದೊಡ್ಡಪ್ಪನ ಮನೆಯ ಹತ್ತಿರ ಇರುವ ಶಿಲ್ಪಾ ಇವರ ತಾಯಿ ಮತ್ತು ಅವಳ ತಂಗಿ, ಮತ್ತು ಅಜ್ಜಿ ಹಾಗೂ ಶಿಲ್ಪಾಳ ಮಾವ ಪರಶುರಾಮ ಇವರು ಇದ್ದಾಗ ನಾನು ಅವರಿಗೆ ನನ್ನ ಸಂಸಾರ ಹಾಳು ಮಾಡಿದಿರಿ ನಾನು ಏನು ಅನ್ಯಾಯ ಮಾಡಿದ್ದೆನು. ಅಂತಾ ಕೇಳಿದ್ದರಿಂದ ಶಿಲ್ಪಾಳ ತಾಯಿ ಮತ್ತು ತಂಗಿ ನನ್ನ ಮೇಲೆ ಏರಿ ಬಂದು ಬೋಸೂಡಿ ವಡ್ಡರ ಸೂಳೆಯರ ನಮಗೇನು ಗೊತ್ತು ನೀನು ಏನ ಮಾಡತೀಯಾ ಮಾಡಿಕೋ ನಿಮ್ಮ ಮನೆಯವರನ್ನು ನೋಡಿಕೊಳ್ಳುತ್ತೇನೆ, ಮಂಜುಳಾ ನನ್ನ ಬಲತೊಡೆಯನ್ನು ಕಚ್ಚಿದ್ದಾಳೆ. ಅವರ ಅಜ್ಜಿ ಮತ್ತು ತಾಯಿ ಇಬ್ಬರು ನಮ್ಮ ತಾಯಿಯನ್ನು ಗಟ್ಟಿಯಾಗಿ ಹಿಡಿದಿದ್ದು, ಪರಶುರಾಮ ಈತನು ಕುಂಡಲವನ್ನು ತೆಗೆದುಕೊಂಡು ನನ್ನ ತಾಯಿ ಮೇಲೆ ಎತ್ತಿ ಹಾಕಿದನು. ಅವರ ತಾಯಿ ಮತ್ತು ಅಜ್ಜಿ ಸೇರಿ ನನ್ನ ಬಟ್ಟೆಗಳನ್ನು ಹರಿದು ತಾಳಿ ಹರಿದರು ನಮ್ಮ ಹುಡುಗಿಗೆ ನಾವೇ ಮದುವೆ ಮಾಢಿದ್ದೀವಿ ನೀವು ಏನ್ ಮಾಡಿಕೊಳ್ಳುತ್ತೀರಿ ಅಂತಾ ಕುದಲು ಹಿಡಿದು ಬಡಿದರು. ಕಾರಣ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿ ಮಾನ ಅಪಮಾನ ಮಾಡಿ ಗಾಯಗೊಳಿಸಿರುತ್ತಾರೆ. ಪ್ರಕರಣ ದಾಖಲಿಸಿಕೊಂಡು ತನಿಕೆ ಕೈ ಗೊಂಡಿರುತ್ತಾರೆ.
0 comments:
Post a Comment