Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, October 1, 2017

1]  ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 254/2017 ಕಲಂ: 279, 337, 304(ಎ) .ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ: 30-09-2017 ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ ಎನ್.ಎಚ್-50 ರಸ್ತೆಯಲ್ಲಿ ಶಹಪೂರ ಕ್ರಾಸ್ ಹತ್ತಿರ ಮೃತ ಬಸಪ್ಪ ತಂದೆ ಸಂಗಪ್ಪ ತೋಟದ ಮತ್ತು ಆತನ ಮಗನಾದ ಬಸಲಿಂಗಪ್ಪ ತಂದೆ ಬಸಪ್ಪ ತೋಟದ ಇಬ್ಬರು ತಮ್ಮ ಮೋಟರ ಸೈಕಲ್ ನಂ. ಕೆಎ-37/ಇಬಿ-0203 ನೇದ್ದರಲ್ಲಿ ಹುಲಗಿಯಿಂದ ಕ್ಯಾದಗುಂಪಾಕ್ಕೆ ಬರುತ್ತಿರುವಾಗ ಹಿಂದಿನಿಂದ ಆರೋಪಿತನು ತನ್ನ ಲಾರಿ ನಂ. ಹೆಚ್.ಆರ್-55/ಎಂ-9978 ನೇದ್ದನ್ನು ಅತೀ ಜೋರಾಗಿ ಮತ್ತು ನಿರ್ಲಕ್ಷತನದಿಂದ ಓಡಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತ ಪಡಿಸಿದ್ದರಿಂದ ಬಸಪ್ಪ ತಂದೆ ಸಂಗಪ್ಪ ತೋಟದ ಇತನು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಬಸಲಿಂಗಪ್ಪ ತಂದೆ ಬಸಪ್ಪ ತೋಟದ ಇತನು ಗಾಯಗೊಂಡಿದ್ದು ಇರುತ್ತದೆ.  ಆದ್ದರಿಂದ ಈ ಅಪಘಾತಕ್ಕೆ ಕಾರಣವಾದ ಲಾರಿ ನಂ. ಹೆಚ್.ಆರ್-55/ಎಂ-9978 ಮತ್ತು ಅದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಮುಂತಾಗಿದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ. 
2]  ಯಲಬುರ್ಗಾ ಪೊಲೀಸ್  ಠಾಣೆ  ಗುನ್ನೆ ನಂ. 126/2017 ಕಲಂ. 32, 34 Karnataka Excise Act.
ದಿನಾಂಕ : 30-09-2017 ರಂದು ಸಾಯಂಕಾಲ 6-50 ಗಂಟೆ ಸುಮಾರಿಗೆ ಆರೋಪಿತನು ಕೋನಸಾಗರ ಗ್ರಾಮದಿಂದ ಚಿಕ್ಕಬನ್ನಿಗೋಳ ಗ್ರಾಮಕ್ಕೆ ಹೋಗುವ ರಸ್ತೆಯ ಪಶ್ಚಿಮಭಾಗದಲ್ಲಿರುವ ಶುದ್ದಕುಡಿಯುವ ನೀರಿನ ಘಟಕದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಧ್ಯಸಾರ ಮಾರಾಟ ಮಾಡಲು ಯಾವುದೇ ಪರವಾನಿಗೆ ಪಡೆದುಕೊಳ್ಳದೆ ಅನಧೀಕೃತವಾಗಿ ಮಧ್ಯಸಾರದ ಟ್ರೇಟ್ರಾ ಪಾಕೀಟಗಳನ್ನು ಜನರಿಗೆ ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ ಯಲಬುರ್ಗಾ ರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ಮಾಡಿ ಆರೋಪಿತನಿಂದ 1] 90 ML ನ HAYWARDS CHEERS WHISKY -ಒಟ್ಟು 64 (ಅರವತ್ತು ನಾಲ್ಕು] ಟೇಟ್ರಾ ಪಾಕೀಟಗಳು. ಪ್ರತಿಯೊಂದಕ್ಕೆ -28.13 ರೂ. ಗಳಂತೆ ಒಟ್ಟು 1800.32 ರೂ. 2] ಒಂದು ಪ್ಲಾಸ್ಟಿಕ್ ಚೀಲ ಅ.ಕಿ.ಇಲ್ಲ 3] ಮಧ್ಯಾಸಾರ ಮಾರಾಟದಿಂದ ಬಂದ ನಗದು ಹಣ : 130/- ರೂಗಳು. ಹೀಗೆ ಎಲ್ಲಾ ಸೇರಿ ಒಟ್ಟು 1950.32/- ರೂ ಸಿಕ್ಕಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ನಗರ ಪೊಲೀಸ್  ಠಾಣೆ  ಗುನ್ನೆ. ನಂ. 150/2017 ಕಲಂ. 392  ಐ.ಪಿ.ಸಿ:.
ದಿನಾಂಕ: 30-09-2017 ರಂದು ರಾತ್ರಿ 10-00 ಗಂಟೆಗೆ ಫಿರ್ಯಾದಿದಾರರಾದ ಶಾಂತಾ ಗಂಡ ಶಿವಾಜಿ ಮುಂಡರಗಿ ಸಾ: ಅಭಿಷೆಕ ಬಡಾವಣೆ ಭಾಗ್ಯನಗರ ಕೊಪ್ಪಳ ಇವರು ದೂರಿನ್ನು ನೀಡಿದ್ದು, ರಾತ್ರಿ 8-30 ಗಂಟೆಯ ಸುಮಾರಿಗೆ ತಾನು ಮತ್ತು ತನ್ನ ಮಗಳು ಕೂಡಿಕೊಂಡು ತಮ್ಮ ಓಣಿಯಲ್ಲಿ ತಮಗೆ ಪರಿಚಯವಿರು ಹನುಮಂತಗೌಡ ಇವರ ಮನೆಗೆ ಬನ್ನಿ ಕೋಡಲು ಹೋಗುತ್ತಿದ್ದಾಗ ಯಾರೊ ಒಬ್ಬ ಅಪರಿಚಿತ ವ್ಯಕ್ತಿ ಹಿಂದಿನಿಂದ ಮೋಟಾರ ಸೈಕಲ್ ಮೆಲೆ ಬಂದು ಫೀರ್ಯಾದಿದಾರರ ಕೋರಳಲ್ಲಿದ್ದ ಬಂಗಾರದ ಮಾಂಗಲ್ಯ ಸರ ಅಂ.ತೂ 45 ಗ್ರಾಂ ನೇದ್ದನ್ನು ಬಲವಂತವಾಗಿ ಕಿತ್ತುಕೊಂಡು ಮುಂದಿನಿಂದ ಹೋಗಿದ್ದು ಇರುತ್ತದೆ. ಮೋಟಾರ ಸೈಕಲ್ ಚಲಾಯಿಸುತ್ತಿದ್ದವನು ಸ್ವಲ್ಪ ದಪ್ಪಗೆ ಇದ್ದನು, ಆದರೆ ಮೋಟಾರ ಸೈಕಲ್ ಬಣ್ಣ ಗೊತ್ತಿರುವುದಿಲ್ಲಾ, ಹಾಗೂ ಅವನು ಮುಖಕ್ಕೆ ಬಟ್ಟೆಯನ್ನು ಕಟ್ಟಿದ್ದನು. ಕಾರಣ ಮಾನ್ಯರವರು ನನ್ನ ಮಾಂಗಲ್ಯ ಸರವನ್ನು ಬಲವಂತವಾಗಿ ಕಿತ್ತುಕೊಂಡು ಹೋದವನನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
4] ಕಾರಟಗಿ ಪೊಲೀಸ್  ಠಾಣೆ  ಗುನ್ನೆ. ನಂ. 226/2017 ಕಲಂ. 87 Karnataka Police Act.

ದಿನಾಂಕ 30-09--2017 ರಂದು ರಾತ್ರಿ 11-45 ಗಂಟೆಯ ಸುಮಾರಿಗೆ ಕಾರಟಗಿಯ ದಲಾಲಿ ಬಜಾರದ ಮಾತೃಮಂದಿರ ಶಾಲೆಯ ಹತ್ತಿರ  ಸಾರ್ವಜನಿಕರ ಸ್ಥಳದಲ್ಲಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ ಆರೋಪಿತರ ಮೇಲೆ ಶ್ರೀ ಎಂ. ಶಿವಕುಮಾರ ಪಿ.ಎಸ್.ಐ. ಹಾಗೂ  ಸಿಬ್ಬಂದಿಯವರು ಹಾಗೂ ಪಂಚರ ಪಂಚರ ಸಮಕ್ಷದಲ್ಲಿ ದಾಳಿ ಮಾಡಿದಾಗ 14  ಜನ ಆರೋಪಿ ನೇದ್ದವರು ಸಿಕ್ಕಿಬಿದ್ದಿದ್ದು ಸದರ್ ಸಿಕ್ಕಿಬಿದ್ದಿರುವ ಆರೋಪಿತರ ವಶದಿಂದ ರೂ. 22,550/- ಹಾಗೂ ಇಸ್ಪೇಟ್ ಜೂಜಾಟದ ಸಾಮಾಗ್ರಿಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇದೆ.    

0 comments:

 
Will Smith Visitors
Since 01/02/2008