Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, October 14, 2017

1] ತಾವರಗೇರಾ ಪೊಲೀಸ್  ಠಾಣೆ  ಗುನ್ನೆ ನಂ. 131/2017 ಕಲಂ. 78 (3) ಕರ್ನಾಟಕ ಪೊಲೀಸ್ ಕಾಯ್ದೆ:
ದಿನಾಂಕ: 13-10-2017 ರಂದು ರಾತ್ರಿ 9:30 ಗಂಟೆಗೆ ಎ.ಎಸ್.ಐ. ತಾವರಗೇರಾ ಪೊಲೀಸ್ ಠಾಣೆರವರು ಗಣಕೀಕೃತ ವರದಿ, ದಾಳಿ ಪಂಚನಾಮೆ, ಮುದ್ದೇಮಾಲು ಸಿಕ್ಕಿಬಿದ್ದ ಒಬ್ಬ ಆರೋಪಿಯನ್ನು ಹಾಜರಪಡಿಸಿದ್ದು, ವರದಿಯಲ್ಲಿ ತಾವರಗೇರಾ ಪಟ್ಟಣದ ಸಿಂಧನೂರು ವೃತ್ತದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟವನ್ನು ಆಡುತ್ತಿದ್ದು, ಆ ಕಾಲಕ್ಕೆ ಅಧಿಕಾರಿ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಜೂಜಾಟದ ಒಟ್ಟು ನಗದು ಹಣ ರೂ. 4500=00, ಜಪ್ತ ಮಾಡಿಕೊಂಡಿದ್ದು, ಸಿಕ್ಕಿಬಿದ್ದ ಒಬ್ಬ ಆರೋಪಿ ಚಂದ್ರಪ್ಪ ತಂದೆ ಶಿವಪ್ಪ ಕುರಿ ಸಾ: ತೆಗ್ಗಿಹಾಳ ಹಾಗೂ ಮಟ್ಕಾ ಪಟ್ಟಿಯನ್ನು ತೆಗೆದುಕೊಳ್ಳುವ ಕೆ.ವಿ.ಎನ್ ಸಾ: ರೋಣ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿಯನ್ನು ನೀಡಿದ್ದು ಸದರಿ ಗಣಕೀಕೃತ ವರದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆಯನ್ನು ಕೈ ಕೊಂಡಿದ್ದು ಇರುತ್ತದೆ.
2] ಹನುಮಸಾಗರ ಪೊಲೀಸ್  ಠಾಣೆ  ಗುನ್ನೆ ನಂ. 145/2017 ಕಲಂ: 87 ಕೆ.ಪಿ. ಕಾಯ್ದೆ.
ದಿನಾಂಕ: 13-10-2017 ರಂದು 19-25 ಗಂಟೆಗೆ ಪಿ.ಎಸ್.. ಸಾಹೇಬರು ಠಾಣೆಗೆ ಹಾಜರಾಗಿ ಇಸ್ಪೀಟ್ ದಾಳಿ ಪಂಚನಾಮೆ ಹಾಗೂ 4 ಜನ ಆರೋಪಿತರನ್ನು ಮತ್ತು ಮುದ್ದೆಮಾಲು ಸಮೇತ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ವರದಿ ನೀಡಿದ್ದರ ಸಾರಾಂಶವೇನೆಂದರೆ, ಪಿ.ಎಸ್.. ಹಾಗೂ ಸಿಬ್ಬಂದಿಯವರು ಇಂದು 17-30 ಗಂಟೆಗೆ ಠಾಣೆಯಲ್ಲಿದ್ದಾಗ ಹನಮಸಾಗರ ಹನಂತದೇವರ ಕಟ್ಟೆಯ ಮೆಲೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ 1] ಹುಸೇನಸಾಬ ತಂದೆ ದಾದೇಸಾಬ ಕಟಗಿ ಸಾ: ಹನಮಸಾಗರ 2] ಹುಲಗಪ್ಪ ತಂದೆ ಮುಕ್ಕಣ್ಣ ಗಡೇಕರ ಸಾ: ಹನಮಸಾಗರ ಹಾಗೂ ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪ್ ನೇದ್ದರಲ್ಲಿ ಹೊರಟು ಹನಂತ ದೇವರ ಗುಡಿಯನ್ನು ತಲುಪಿ 17-55 ಗಂಟೆಗೆ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಚಾಲಕನನ್ನು ಜೀಪ್ ಹತ್ತಿರ ಬಿಟ್ಟು ಮರೆಯಾಗಿ ನಿಂತು ನೋಡಲಾಗಿ ಹನಮಂತದೇವರ ಗುಡಿಯ ಮಂದಿನ ಕಟ್ಟೆಯ ಹಾಸಗಲ್ಲಿನ ಮೇಲೆ ಇಸ್ಪೀಟ್ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಲು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 4 ಜನ ಆರೋಪಿತರು ಸಿಕ್ಕಿಬಿದ್ದಿದ್ದು, ಸದರಿ ಆಪಾದಿತರು ಜೂಜಾಟಕ್ಕೆ ಉಪಯೋಗಿಸಿದ 52 ಇಸ್ಪೀಟ್ ಎಲೆಗಳು ಹಾಗೂ 1510/- ನಗದು, ಸಿಕ್ಕಿದ್ದು, ದಾಳಿ ಪಂಚನಾಮೆಯನ್ನು 18-00 ಗಂಟೆ ಯಿಂದ 19-00 ಗಂಟೆಯವರೆಗೆ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಜರುಗಿಸಿ ಹಾಗೂ 4 ಜನ ಆರೋಪಿತರು ಮುದ್ದೆಮಾಲು ಸಮೇತ ವಾಪಸ್ ಠಾಣೆಗೆ 19-15 ಗಂಟೆಗೆ ಬಂದು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿ ತಯಾರಿಸಿ 19-25 ಗಂಟೆಗೆ ವರದಿ ನೀಡಿದ್ದು, ಸದರಿ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ವಿನಂತಿ ಯಾದಿಯೊಂದಿಗೆ ಅನುಮತಿ ಪಡೆದುಕೊಂಡು. ಮಾನ್ಯ ನ್ಯಾಯಾಲಯದ ಅನುಮತಿ ಆದೇಶದ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಹನುಮಸಾಗರ ಪೊಲೀಸ್  ಠಾಣೆ  ಗುನ್ನೆ ನಂ. 146/2017 ಕಲಂ. 32, 34 ಕರ್ನಾಟಕ ಅಬಕಾರಿ ಕಾಯ್ದೆ  
ದಿನಾಂಕ: 13-10-2017 ರಂದು ರಾತ್ರಿ 22-10 ಗಂಟೆಗೆ ಪಿ..ಸ್.. ರವರು ಒಬ್ಬ ಆರೋಪಿ ಹಾಗೂ ಅನಧೀಕೃತ ಮದ್ಯ ಮಾರಾಟ ಮಾಡುತ್ತಿದ್ದ ದಾಳಿ ಪಂಚನಾಮೆ ಹಾಗೂ ಮುದ್ದೆ ಮಾಲು ಸಮೇತ ಠಾಣೆಗೆ ಹಾಜರಾಗಿ ವರದಿ ನೀಡಿದ್ದರ ಸಾರಾಂಶವೇನೆಂದರೆ ದಿನಾಂಕ: 13-10-2017 ರಂದು ಸಾಯಾಂಕಾಲ 19-40 ಗಂಟೆಗೆ ಹನಮಸಾಗರದ ಬಾಲಕೀಯರ ಪ್ರೌಢಶಾಲೆಯಲ್ಲಿ ಖೋ ಖೋ ಪಂದ್ಯಾವಳಿ ಬಂದೋಬಸ್ತ ಕರ್ತವ್ಯದಲ್ಲದ್ದಾಗ ಗುಡದೂರಕಲ್ ಗ್ರಾಮದ ಮಾವಿನ ಇಟಗಿ ವೆಂಕಟಾಪೂರ ರಸ್ತೆ ಕಪಾಟಿನ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಮುತ್ತಣ್ಣ ತಂದೆ ಮಲ್ಲಪ್ಪ ಸಾಂತಗೇರಿ ಸಾ: ಗುಡದೂರಕಲ್ ರವರು ಅನಧಿಕೃತ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಕೂಡಲೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಪಿ.ಸಿ-28, 162, 398, 452 ರವರೊಂದಿಗೆ ಠಾಣೆಯಿಂದ ಹೊರಟು ಗುಡದೂರಕಲ್ ಗ್ರಾಮದ ಮಾವಿನ ಇಟಗಿ ರಸ್ತೆಯಲ್ಲಿ ರಾತ್ರಿ 20-10 ಗಂಟೆಗೆ ತಲುಪಿ ರಾತ್ರಿ 20-15 ಗಂಟೆಗೆ ದಾಳಿಮಾಡಿದಾಗ ಮುತ್ತಣ್ಣ ತಂದೆ ಮಲ್ಲಪ್ಪ ಸಾಂತಗೇರಿ ರವರು ಸಿಕ್ಕಿಬಿದಿದ್ದು ಅವನ ಹತ್ತಿರ 1] 90 .ಎಂ.ಎಲ್.ಅಳತೆಯ 54 ಟೆಟ್ರಾ ಪಾಕೇಟಗಳು HAYWARDS CHEERS WHISKY ಪ್ರತಿಯೊಂದಕ್ಕೆ ಎಂ.ಆರ್.ಪಿ. 23.45 ಅಂತಾ ಬೆಲೆ ಇರುತ್ತದೆ. ಇವುಗಳ ಒಟ್ಟು ಅಂ:ಕಿ: 1266.03 ರೂಪಾಯಿಗಳು ಆಗುತಿದ್ದು. ಹಾಗೂ ನಗದು ಹಣ 550-00 ರೂಪಾಯಿ ಸಿಕ್ಕಿದ್ದು, ಸದರ ದಾಳಿ ಪಂಚನಾಮೆಯನ್ನು ಇಂದು ರಾತ್ರಿ 20-15 ಗಂಟೆಯಿಂದ ರಾತ್ರಿ 21-45 ಗಂಟೆಯವರಗೆ ಸರ್ಚಲೈಟ್ ಸಹಾಯದಿಂದ ಸ್ಥಳದಲ್ಲಿಯೇ ನಿರ್ವಹಿಸಿದ್ದು ಇರುತ್ತದೆ. ಸದರ ಆರೋಪಿತನು ತನ್ನ ಲಾಬಕ್ಕೋಸ್ಕರ ಯಾವುದೇ ಪರವಾನಿಗೆ ಪಡೆಯದೆ ಮಾರಾಟ ಮಾಡಿ ಅಪರಾದ ಮಾಡಿದ್ದರಿಂದ ಸದರಿಯವನನ್ನು ವಶಕ್ಕೆ ತೆಗೆದುಕೊಂಡು ಮೂಲ ಪಂಚನಾಮೆ, ಮುದ್ದೆಮಾಲು ಸಮೇತ ವಾಪಸ್ ಠಾಣೆಗೆ ರಾತ್ರಿ 22-00 ಗಂಟೆಗೆ ಬಂದು ಸದರಿ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಲು ರಾತ್ರಿ 22-10 ಗಂಟೆಗೆ ವರದಿ ಸಲ್ಲಿಸಿದ್ದು ಇರುತ್ತದೆ.
4] ಕನಕಗಿರಿ ಪೊಲೀಸ್  ಠಾಣೆ  ಗುನ್ನೆ ನಂ. 144/2017 ಕಲಂ: 397 ಐ.ಪಿ.ಸಿ.  
ದಿನಾಂಕ: 13-10-2017 ರಂದು ಬೆಳಿಗ್ಗೆ 6:00 ಗಂಟೆಗೆ ಫಿರ್ಯಾದಿದಾರರಾದ  ಪಂಪಾಪತಿ ತಂದೆ ಸಣ್ಣ ವೀರಭದ್ರಪ್ಪ ರೊಟ್ಟಿ  ಇವರು ಠಾಣೆಗೆ ಹಾಜರಾಗಿ  ಒಂದು ಗಣಕೀಕೃತ ಫೀರ್ಯಾದಿ ಹಾಜರಪಡಿಸಿದ್ದು ಸಾರಂಶವೆನಂದರೆ ದಿನಾಂಕ : 12/10/2017 ರಂದು ರಾತ್ರಿ 11 :00 ಗಂಟೆಗೆ  ಫಿರ್ಯಾದಿ  ಮತ್ತು ಅವರ  ಅಳಿಯ ಶಿವುಕುಮಾರ ಅಂಗಡಿಯನ್ನು ಸ್ವಚ್ಚಮಾಡಿದ್ದು ನಂತರ ಶಿವುಕುಮಾರನು  ಅಂಗಡಿಯ ಒಳಗೆ ಮಲಗಿಕೊಂಡನು ಅಂಗಡಿಯ ಸೆಟ್ರಾಸ್ ಹಾಕಿದ ನಂತರ ಅರದ ಮುಂದೆ  ಫಿರ್ಯಾದಿದಾರರು ಮಲಗಿ ಕೊಂಡಿದ್ದು . ಇಂದು ದಿನಾಂಕ : 13/10/2017 ರಂದು ಬೆಳಿಗ್ಗೆ 4 :00 ಯಾಗಿರಬಹುದು. ಒಳಗೆ ಮಲಗಿದ್ದ  ಫಿರ್ಯಾದಿಯ ಅಳಿಯ ಶಿವುಕುಮಾರ ಇತನು ಒಮ್ಮೇಲೆ ಸೆಟ್ರಾಸ್  ಕೈಯಿಂದ ಬಡಿಯುತ್ತಾ.ಮಾವ ನನಗೆ ಕೊಲೆ ಮಾಡುತ್ತಾರೆ ಭಾ  ಅಂತಾ ಚೀರಾಡ ಹತ್ತಿದನು ಫಿರ್ಯಾದಿ ಎದ್ದೇಳಲು ಅವನು ಒಳಗೆ ಸೆಟ್ರಾಸ್ ಗೆ ಹಾಕಿದ ನಟ್ ಬೋಲ್ಟ್ ತಗೆದು ಸೆಟ್ರಾಸ್ ಎತ್ತಿ  ಹೊರಗೆ ಬರಲು ಅವನಿಗೆ ನೋಡಲು ಅವನ ತಲೆಗೆ ತೀವ್ರ  ರಕ್ತಗಾಯವಾಗಿ ಮೈ ಮೇಲೆ ಅಂಗಿ ಪ್ಯಾಂಟಿಗೆ ರಕ್ತ ಸೋರಿತ್ತು. ನಂತರ ಅವನಿಗೆ ವಿಚಾರಿಸಲು ಆತನು ಹೇಳಿದ್ದೆನಂದರೆ. ಈಗ ಬೆಳಗಿನ ಜಾವ ಸುಮಾರು 4 :00 ಗಂಟೆ ಸುಮಾರಿಗೆ ಯಾರೋ ಅಪರಿಚಿತ  ದುಷ್ರ್ಮಿಗಳು   ಅಂಗಡಿಯ ಹಿಂದಿನ ಚನಲ್ ಗೇಟ್ ಭೀಗ ಮುರಿದು ಬಾಗಿಲು ಹೊಡೆದು ಒದ್ದು ಒಳಗೆ ಪ್ರವೇಶಿಸಿದ್ದು. ಮಲಗಿದ್ದ ನನಗೆ ಏಳೆದು ರಾಡಿನಿಂದ ನನ್ನ ತಲೆಗೆ ಹೊಡೆದು ತೀವ್ರರಕ್ತಗಾಯಮಾಡಿ ನನ್ನ ಜೇಬಿನಲ್ಲಿ ಇದ್ದ ಗಲ್ಲೇದ ಕೀಲಿಯನ್ನು ತಗೆದುಕೊಂಡು ಅದರಲ್ಲಿದ್ದ ಹಣವನ್ನು ತಗೆದುಕೊಂಡು ಹಿಂದಿನ ಬಾಗಿಲಿನಿಂದ ಹೋಗಿರುತ್ತಾರೆ ಅಂತಾ ತಿಳಿಸಿದನು.  ನಂತರ ಕೂಡಲೇ  ಫಿರ್ಯಾದಿ  ತಮ್ಮ ಅಳಿಯ ಗಣೇಶನಿಗೆ ಪೋನ್ ಮಾಡಲು ಆತನು ಕಾರ ತಗೆದುಕೊಂಡು ಬಂದು ಗಾಯಗೊಂಡ  ಶಿವುಕುಮಾರ  ಇತನನ್ನು ಆಸ್ಪತ್ರೆಗೆ ಇಲಾಜ ಕುರಿತು ಕರೆದುಕೊಂಡು ಹೋದರು. ಸದರಿ ಕಿರಾಣಿ ಅಂಗಡಿಯಲ್ಲಿದ್ದ  ಹಣದ ಬಗ್ಗೆ ನಮ್ಮ ಅಳಿಯನಿಗೆ ವಿಚಾರಿಸಲು ಈಗ 2-3 ದಿನಗಳ ವ್ಯಾಪಾರದ ಹಣ & ಗುಟಕಾ ವ್ಯಾಪಾರದ ಹಣ ಕೂಡಿ ಸುಮಾರು ಮೂರುವರೆ ಲಕ್ಷ ರೂಪಾಯಿ ಇದ್ದು ಅವುಗಳನ್ನು ಸದರಿ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ತಿಳಿಸಿದರು. ಸದರಿ ಯಾರೋ ಅಪರಿಚಿತ 4 ಜನ ದುಷ್ಕರ್ಮಿಗಳು  ಇಂದು 13/10/2017 ರಂದು ಬೆಳಿಗ್ಗೆ 4 :00 ಗಂಟೆಯ ಸುಮಾರಿಗೆ  ನಮ್ಮ ಅಂಗಡಿಯ ಹಿಂದಿನ ಬಾಗಿಲು ಕೀಲಿ ಮುರಿದು ಒಳಗೆ ಪ್ರವೇಶಿಸಿ ನಮ್ಮ ಅಳಿಯ ಶಿವುಕುಮಾರ ಇತನಿಗೆ ತಲೆಗೆ ಹೊಡೆದು ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ತಿವ್ರ ರಕ್ತಗಾಯಮಾಡಿ ಅಂಗಡಿಯ ಗಲ್ಲೆಯಲ್ಲಿದ್ದ ಸುಮಾರು ಮೂರುವರೆ ಲಕ್ಷ ರೂಪಾಯಿಗಳನ್ನು ದೋಚಿಕೊಂಡು ಹೋಗಿದ್ದು ಕಳ್ಳರನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕಾನೂನ ಕ್ರಮ ಕೈ ಗೊಳ್ಳಲು ವಿನಂತಿ. ಅಂತಾ ನೀಡಿದ ಲಿಖಿತ ಫಿರ್ಯಾದಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ: 144/2017 ಕಲಂ: 397 ಐ.ಪಿ.ಸಿ ನೇದ್ದರಲ್ಲಿ ಪ್ರಕರಣದಾಖಲಿಸಿಕೊಂಡು ತನಿಖೆಯನ್ನು ಕೈ UÉÆAqÉ£ÀÄ.
5] ಕೊಪ್ಪಳ ಗ್ರಾಮೀಣ ಪೊಲೀಸ್  ಠಾಣೆ  ಗುನ್ನೆ ನಂ. 227/2017. ಕಲಂ: 341,504,323,506 ಸಹಿತ 34 ಐಪಿಸಿ ಹಾಗೂ ಕಲಂ: 3,[1],[ಆರ್], 3,[1],[ಎಸ್], 3,[2],[5],[ಎ] ಎಸ್.ಸಿ/ಎಸ್ಟಿ ಕಾಯ್ದೆ.
ದಿ:13-10-2017 ರಂದು ಸಂಜೆ 5-45 ಗಂಟೆಗೆ ಫಿರ್ಯಾದಿದಾರರಾದ ದೇವೇಂಧ್ರಪ್ಪ ದೊಡ್ಡಮನಿ. ಸಾ: ಕುವೆಂಪುನಗರ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೇನೆಂದರೆ, ಫಿರ್ಯಾದಿದಾರರು ಇಂದು ದಿ: 13-10-2017 ರಂದು ಸಂಜೆ 4-10 ಗಂಟೆಗೆ ಕಿಮ್ಸ ಮೆಡಿಕಲ್ ಕಾಲೇಜದಲ್ಲಿ ಸಲ್ಲಿಸಿದ ಮಾಹಿತಿ ಹಕ್ಕು ಅರ್ಜಿಯ ಬಗ್ಗೆ ಪತ್ರವನ್ನು ನೀಡಲು ಹೋದಾಗ ಆರೋಪಿತರು ತಡೆದು ನಿಲ್ಲಿಸಿ ಏಕಾಏಕಿ ಕೈಗಳಿಂದ ಹಲ್ಲೆ ಮಾಡಿ ಎದೆ ಮತ್ತು ಗದ್ದಕ್ಕೆ ಜೋರಾಗಿ ಗುದ್ದಿದ್ದು ಆಗ ಫಿರ್ಯಾದಿ ಸುಮ್ಮನೆ ನಿಂತಾಗ, ಆರೋಪಿತರೆಲ್ಲರೂ ಲೇ ಬೋಳಿ ಮಗನೆ ನೀನೇನು ದೊಡ್ಡ ಡಿಗ್ರಿ ಹೋಲ್ಡರ್ ಏನಲೇ ನಿನಗ್ಯಾಕೆ ಈ ಕಿಮ್ಸ ಮಾಹಿತಿ ಬೇಕು ಸೂಳೇಮಗನೇ ಎಂದು ಬೈಯ್ದಿದ್ದಲ್ಲದೇ ಲೇ ಮಾದಿಗ ಸೂಳೆಮಗನೇ ನಿಮ್ಮ ಜನರದು ಬರೀ ಇದೆ ಕೆಲಸವೇನ್ಲೇ ನಾಚಿಕೆಯಾಗಲ್ಲವೇನಲೇ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಹಾನಿ ಮಾಡಿರುತ್ತಾರೆ. ಅಲ್ಲದೇ ಆರೋಪಿ ಹನುಮೇಶ ಇತನು ಕಟ್ಟಿಗೆಯನ್ನು ತರಿಸಿ ಫಿರ್ಯಾದಿಗೆ ಕೊಂದು ಹಾಕುತ್ತೇನೆ. ಎಂದು ಜೀವದ ಬೆದರಿಕೆ ಹಾಕಿದಾಗ ಫಿರ್ಯಾದಿತರು ಅಲ್ಲಿಂದ ಓಡಿ ಬಂದಿರುತ್ತಾರೆ. ಕಾರಣ ಸದರಿ 03 ಜನ ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮುಂತಾಗಿ ತಡವಾಗಿ ನೀಡಿದ  ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತಪಾಸಣೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008