1] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 130/2017 ಕಲಂ. 498(ಎ), 506 ಸಹಿತ 34 ಐ.ಪಿ.ಸಿ ಮತ್ತು 3 & 4
ವರದಕ್ಷಿಣೆ ನಿಷೇಧ ಕಾಯ್ದೆ:
ಪಿರ್ಯಾದಿದಾರರ ಮಗಳಾದ ನಾಗರತ್ನ
ಇವಳನ್ನು ಈಗ್ಗೆ ಸುಮಾರು 1 ವರ್ಷ 6 ತಿಂಗಳದ ಹಿಂದೆ ಆರೋಪಿ ಚೆನ್ನಬಸವ ತಂದೆ ಸಿದ್ದಪ್ಪ ಗಾದಾರಿ ಈತನೊಂದಿಗೆ
ಬೋದೂರು ಗ್ರಾಮದ ಶ್ರೀ ಈಶ್ವರ ಜಾತ್ರಾ ಮಹೋತ್ಸವದ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿ ಕೊಟ್ಟಿದ್ದು, ಮದುವೆಗೆ ಮುಂಚೆ ಪಿರ್ಯಾದಿದಾರರು
ಆರೋಪಿತರಿಗೆ
25,000/- ರೂಪಾಯಿ
ವರದಕ್ಷಿಣೆ ಮತ್ತು 1 ತೊಲೆ ಬಂಗಾರ ಹಾಗೂ
ಬಾಂಡೆ ಸಾಮಾನ ಮತ್ತು ಬಟ್ಟೆ ಬರೆಗಳನ್ನು ಕೊಟ್ಟಿದ್ದು, ಮದುವೆಯಾದ ನಂತರ
ನಾತರತ್ನಳಿಗೆ ಸುಮಾರು 2 ತಿಂಗಳ ಚೆನ್ನಾಗಿ ನೋಡಿಕೊಂಡಿದ್ದು, ನಂತರ ಆರೋಪಿ ನಂ: 1 ರಿಂದ 4 ನೇದ್ದವರು
ನಾಗರತ್ನಳಿಗೆ ಇನ್ನೂ
ಹೆಚ್ಚಿನ 40,000/0 ರೂಪಾಯಿ ವರದಕ್ಷಿಣೆ ಮತ್ತು 1 ತೊಲೆ ಬಂಗಾರ ತರುವಂತೆ ಕೈಯಿಂದ ಹೊಡೆಬಡಿ ಮಾಡುತ್ತಾ
ಚಿತ್ರಹಿಂಸೆ
ನೀಡುತ್ತಾ
ಬಂದಿದ್ದು, ಈ
ವಿಷಯವನ್ನು ನಾಗರತ್ನ ಇವಳು 2, 3 ಸಲ ತನ್ನ
ತವರು ಮನೆಗೆ ಬಂದಾಗ ತನ್ನ
ಮನೆಯವರಿಗೆ ತಿಳಿಸಿದ್ದು ಆಗ ಪಿರ್ಯಾದಿದಾರರು
ಅವಳಿಗೆ ಸಮಾಧಾನ ಮಾಡಿ ಕಳುಹಿಸಿದ್ದು ಇರುತ್ತದೆ.
ಆರೋಪಿ ತರು ನಾಗರತ್ನಳಿಗೆ ಇನ್ನೂ ಹೆಚ್ಚಿಗೆ
40,000=00 ರೂಪಾಯಿ ವರದಕ್ಷಿಣೆ ಹಾಗೂ 1 ತೊಲೆ ಬಂಗಾರ ತೆಗೆದುಕೊಂಡು ಬಾ ಅಂತಾ ಕೈಯಿಂದ ಹೊಡೆ ಬಡೆ
ಮಾಡುತ್ತಾ ಚಿತ್ರ ಹಿಂಸೆ ನೀಡುತ್ತಾ ಬಂದಿದ್ದರಿಂದ ಅವಳು ಅದನ್ನು ಸಹಿಸಿಕೊಳ್ಳಲಾರದೆ ದಿನಾಂಕ:
10-10-2017 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ಬೋದೂರು ಗ್ರಾಮದ ಸೀಮಾದಲ್ಲಿರುವ ತಮ್ಮ ಜಮೀನದಲ್ಲಿ
ಬೆಳೆಗೆ ಹೊಡೆಯುವ ಯಾವದೋ ಕ್ರಿಮೀನಾಶಕ ಔಷದಿ ಸೇವಿಸಿದ್ದು ನಂತರ ಅವಳನ್ನು ಚಿಕಿತ್ಸೆಗಾಗಿ ಕುಷ್ಟಗಿ
ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲ ಮಾಡಿದ್ದು ಅಲ್ಲಿಯ ವೈಧ್ಯರು ಅವಳಿಗೆ ಚಿಕಿತ್ಸೆ
ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆ, ಕೊಪ್ಪಳಕ್ಕೆ ಕರೆದುಕೊಂಡು ಹೋಗುವಂತೆ ಸಲಹೆ ಮಾಡಿದ್ದರಿಂದ
ಆ ಪ್ರಕಾರ ಅವಳಿಗೆ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆ, ಕೊಪ್ಪಳಕ್ಕೆ ಕರೆದುಕೊಂಡು
ಬಂದು ದಾಖಲ ಮಾಡಿದ್ದು ಇರುತ್ತದೆ. ಸದ್ರಿಯವಳು ಸಧ್ಯ ಇಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ.
ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 238/2017 ಕಲಂ. 379 ಐ.ಪಿ.ಸಿ:
ದಿನಾಂಕ:
12-10-2017 ರಂದು ಮುಂಜಾನೆ 7-30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಲಿಖಿತ ದೂರು ಹಾಜರುಪಡಿಸಿದ್ದು ಅದರ ಸಾರಾಂಶದಲ್ಲಿ ದಿನಾಂಕ
04-10-2017 ರಂದು ಸಂಜೆ 6-00 ಗಂಟೆಯಿಂದ 6-30 ಅವಧಿಯಲ್ಲಿ ಕಾರಟಗಿಯ ಪಟ್ಟಣದ ಸಂತೆ ಮಾರ್ಕೆಟ ಹತ್ತಿರ ಬಿಟ್ಟ ನನ್ನ ಹಿರೋ ಹೊಂಡಾ ಸ್ಲ್ಪೆಂಡರ್ ಪ್ಲಸ್ ಮೋಟಾರ ಸೈಕಲ್ ನಂ.ಕೆಎ-36/ಎಲ್-6547 ಅದರ ಚಾಸ್ಸಿ ನಂ.04M16C22462 ಮತ್ತು ಇಂಜಿನ್ ನಂ. 04M15M22380 ಅ.ಕಿ.ರೂ.15000/- ಗಳ ಬೆಲೆ ಬಾಳವುದನ್ನು
ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಕಾರಟಗಿ, ಚನ್ನಳ್ಳಿ, ಹಂಚಿನಾಳ ಕ್ಯಾಂಪ್, ಗೋರೆಬಾಳ ಕ್ಯಾಂಪ್ ಮುಂತಾದ ಕಡೆಗಳಲ್ಲಿ ಹಾಗೂ
ನಮ್ಮ ಸ್ನೇಹಿತರಲ್ಲಿ ವಿಚಾರ ಮಾಡಲಾಗಿ, ಕಳೆದು ಹೋದ ನಮ್ಮ ಮೋಟಾರ್ ಸೈಕಲ್ ಸಿಗದೆ ಇದ್ದುದ್ದರಿಂದ ಈ ದಿವಸ ತಡವಾಗಿ ಠಾಣೆಗೆ ಬಂದು ದೂರ ನೀಡಿರುತ್ತೇನೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment