1] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 133/2017 ಕಲಂ. 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ: 16-10-2017 ರಂದು ಸಂಜೆ 6-00
ಗಂಟೆಗೆ ತಾವರಗೇರಾ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದಿದ್ದು ಕೂಡಲೇ ಆಸ್ಪತ್ರೆಗೆ ಭೇಟಿ
ನೀಡಿ ಗಾಯಾಳು ಫಿರ್ಯಾದಿದಾರರು ಮತ್ತು ಅವರ ಗಂಡ ಶ್ಯಾಮಣ್ಣ ಹಾಗೂ ಅವರ ಗ್ರಾಮದ ಸುಮಾರು 8-10 ಜನ
ಸೇರಿ ತಾವರಗೇರಾದಿಂದ ಲಿಂಗದಹಳ್ಳಿಗೆ ಹೋಗುತ್ತಿರುವಾಗ ತಾವರಗೇರಾ-ಗಂಗಾವತಿ ರಸ್ತೆಯ ಶರಣಪ್ಪ ಕೇಸರಹಟ್ಟಿ
ರವರ ಹೊಲದ ಹತ್ತಿರ ಸಂಜೆ 5-00 ಗಂಟೆಗೆ ವಾಹನ ಚಾಲಕ ನರಸಪ್ಪ ಡೊಳ್ಳಿನ್ ಈತನು ತಾನು ನಡೆಸುತ್ತಿದ್ದ
ಮಹೀಂದ್ರಾ ಜೀತೋ ವಾಹನ ನೇದ್ದನ್ನು ಮೋಬಲ್ ಬಳಕೆ ಮಾಡುತ್ತಾ ಅತಿವೇಗ ಮತ್ತು ಅಲಕ್ಷತನದಿಂದ ರಸ್ತೆಯಲ್ಲಿ
ಅಡ್ಡ ದಿಡ್ಡಿ ನಡೆಯಿಸಿ ಬ್ರೀಡ್ಜ್ ಮೇಲೆ ವಾಹನವನ್ನು ಬಲಮಗ್ಗಲಾಗಿ ಕೆಡವಿದ್ದು ನೋಡಲು ಫಿರ್ಯಾದಿದಾರರಿಗೆ.
ಹಾಗೂ ಅವರ ಗಂಡ ಶ್ಯಾಮಣ್ಣ, ಮತ್ತು ಅವರ ಗ್ರಾಮದ ದ್ಯಾಮಮ್ಮ, ನಾಗಮ್ಮ, ಯಮನೂರ. ಅಮರೇಶ, ಗುನ್ನೆಪ್ಪ,
ಸೋಮಪ್ಪ, ಭೀಮೇಶ ರವರುಗಳಿಗೆ ತಲೆಗೆ, ಮೈ ಕೈಗಳಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯಪೆಟ್ಟುಗಳನ್ನುಂಟು
ಮಾಡಿದ್ದು ಅಲ್ಲದೇ ಅಪಘಾತ ಮಾಡಿದ ನಂತರ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ
ನಂ. 287/2017
ಕಲಂ: 323, 324, 504, 506 ಐ.ಪಿ.ಸಿ:.
ದಿನಾಂಕ
:- 16-10-2017 ರಂದು ಮದ್ಯಾಹ್ನ 2-00 ಗಂಟೆಯ ವೇಳೆಗೆ ಪಿರ್ಯಾಧಿದಾರರಾದ ಸಿದ್ದಪ್ಪ ತಂದೆ ದುರಗಪ್ಪ ಪೂಜಾರ, ವಯಾ 37 ವರ್ಷ, ಜಾತಿ : ಮಾದರ, ಉ : ಕೂಲಿ ಕೆಲಸ ಸಾ : ಕಲಾಲಬಂಡಿ, ಇವರು ಠಾಣೆಗೆ
ಹಾಜರಾಗಿ ನೀಡಿದ ಗಣಕೀಕೃತ ಪಿರ್ಯಾದಿಯ ಸಾರಾಂಶವೆನೆಂದರೆ, ತಮ್ಮ ಅಣ್ಣನಾದ ಗುರುರಾಜ ಇತನಿಗೆ ಕಾಕನ ಮಗನಾದ ಅರೋಪಿ ಬಸಪ್ಪ ತಂದೆ
ಯಮನಪ್ಪ ಮಾದರ, ಜಾತಿ : ಮಾದರ, ಇತನು ಹಳೇ
ವೈಶಮ್ಯಾವನ್ನಿಟ್ಟುಕೊಂಡು, ವಿನಾಃ ಕಾರಣ ಕೈಗಳಿಂದ ತಲೆಗೆ ಹೊಡೆದು ಕಾಲಿನಿಂದ ಒದ್ದು ದುಃಖಪತ ಗೋಳಿಸಿದ್ದು ಅಲ್ಲದೇ
ಬಾಯಿಂದ ಕಚ್ಚಿ ರಕ್ತಗಾಯ ಗೋಳಿಸಿದ್ದು ನಮ್ಮ ಅಣ್ಣನಿಗೆ ಇಲಾಜು ಕುರಿತು ಸೇರಿಕೆಮಾಡಿ ತಡವಾಗಿ
ಬಂದು ದೂರನ್ನು ನೀಡಿದ್ದು ಇರುತ್ತದೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment