Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, October 19, 2017

1] ಯಲಬುರ್ಗಾ ಪೊಲೀಸ್  ಠಾಣೆ  ಗುನ್ನೆ ನಂ. 137/2017 ಕಲಂ. 87 Karnataka Police Act.
ದಿನಾಂಕ: 18-10-2017 ರಂದು ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ಆರೋಪಿತರು ಚಿಕ್ಕಮ್ಯಾಗೇರಿ ಗ್ರಾಮ ಹುಚ್ಚಿರೇಶ್ವರ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಿದ್ದು, 3 ಜನ ಆರೋಪಿತರು ಸಿಕ್ಕಿ ಬಿದ್ದಿದ್ದು, ಜೂಜಾಟದಲ್ಲಿ ತೋಡಗಿದ್ದ 3 ಜನರು ಓಡಿ ಹೋಗಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 600=00 ರೂಪಾಯಿ ನಗದು ಹಣ, 52 ಇಸ್ಪೀಟ ಎಲೆಗಳು ಅಂ.ಕಿ. ಇಲ್ಲ ಮತ್ತು ಒಂದು ಪ್ಲಾಸ್ಟೀಕ ಬರ್ಕಾ ಅಂ.ಕಿ. ಇಲ್ಲ ಇವುಗಳು ಸಿಕ್ಕಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್  ಠಾಣೆ  ಗುನ್ನೆ ನಂ. 234/2017 ಕಲಂ. 87 Karnataka Police Act.
ದಿ: 18-10-2017 ರಂದು 6-35 ಪಿ.ಎಮ್ ಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಇರಕಲಗಡಾ ಗ್ರಾಮದ ತಾಳಕನಕಾಪೂರ ರಸ್ತೆಯ ಅಡಿವೆಪ್ಪ ಹೋಟೆಲ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ 07 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್,ಐ ರವರು ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಹೋಗಿ ಪಂಚರ ಸಮಕ್ಷಮ ದಾಳಿ ಮಾಡಿದ್ದು 04 ಜನರು ಸಿಕ್ಕಿಬಿದ್ದಿದ್ದು, ಸಿಕ್ಕಿಬಿದ್ದವರಿಂದ ಜೂಜಾಟಕ್ಕೆ ಉಪಯೋಗಿಸಿ ನಗದು ಹಣ, 1050=00 ರೂ, 52 ಇಸ್ಪೇಟ್ ಎಲೆ, ಒಂದು ಹಾಳೆಯ ಚೀಲ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
3] ಹನುಮಸಾಗರ ಪೊಲೀಸ್  ಠಾಣೆ  ಗುನ್ನೆ ನಂ. 148/2017 ಕಲಂ. 87 Karnataka Police Act.
ಪಿ.ಎಸ್.. ಹನುಮಸಾಗರ ಹಾಗೂ ಸಿಬ್ಬಂದಿಯವರು ಇಂದು 07-40 ಗಂಟೆಗೆ ಠಾಣೆಯಲ್ಲಿದ್ದಾಗ ಕಲ್ಲಗೋನಾಳ ಗ್ರಾಮದಲ್ಲಿ ಶ್ರೀ ದುರಗಮ್ಮ ದೇವರ ಗುಡಿಯ  ಮುಂದೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಹೋಗಿ  ನೋಡಲಾಗಿ ದುರಗಮ್ಮ ದೇವರ ಗುಡಿಯ ಮಂದೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಲು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಜನರು ಓಡಿ ಹೋಗಿದ್ದು ಸಿಬ್ಬಂದಿಯವರು ಬೆನ್ನು ಹತ್ತಿ 4 ಜನ ಆರೋಪಿತರನ್ನು ಹಿಡಿದುಕೊಂಡು ಬಂದಿದ್ದು ಸಿಕ್ಕಿಬಿದಿದ್ದು ಅವರಿಂದ ಸದರಿ ಆಪಾದಿತರು ಜೂಜಾಟಕ್ಕೆ ಉಪಯೋಗಿಸಿದ 52 ಇಸ್ಪೀಟ್ ಎಲೆಗಳು ಹಾಗೂ 1400/- ನಗದು, ಸಿಕ್ಕಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕಾರಟಗಿ ಪೊಲೀಸ್  ಠಾಣೆ  ಗುನ್ನೆ ನಂ. 240/2017 ಕಲಂ. 87 Karnataka Police Act.
ದಿನಾಂಕ 18-10-2017 ರಂದು ರಾತ್ರಿ 10-00  ಗಂಟೆಗೆ ಬಸವಣ್ಣ ಕ್ಯಾಂಪ್ ಉಣ್ಣೆ ಬಸವೇಶ್ವರ್ ಗುಡಿಯ ಮುಂದೆ ಲೈಟಿನ ಬೆಳಕಿನಲ್ಲಿ ಸಾರ್ವಜನಿಕರ ಸ್ಥಳದಲ್ಲಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ ಆರೋಪಿತರ ಮೇಲೆ ಪಿ.ಎಸ್.ಐ. ಹಾಗೂ  ಸಿಬ್ಬಂದಿಯವರು ಹಾಗೂ ಪಂಚರ ಪಂಚರ ಸಮಕ್ಷದಲ್ಲಿ ದಾಳಿ ಮಾಡಿದಾಗ 06 ಜನ ಆರೋಪಿತರು ಸಿಕ್ಕಿಬಿದ್ದಿದ್ದು ಸದ ಸಿಕ್ಕಿಬಿದ್ದಿರುವ ಆರೋಪಿತರ ವಶದಿಂದ ರೂ.2040/- ಹಾಗೂ ಇಸ್ಪೇಟ್ ಜೂಜಾಟದ ಸಾಮಾಗ್ರಿಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇದೆ.
5] ಗಂಗಾವತಿ ಗ್ರಾಮೀಣ  ಪೊಲೀಸ್  ಠಾಣೆ  ಗುನ್ನೆ ನಂ. 313/2017 ಕಲಂ. 87 Karnataka Police Act.
ದಿನಾಂಕ:- 18-10-2017 ರಂದು ರಾತ್ರಿ 10-15 ಗಂಟೆಗೆ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ ಠಾಣೆಯಲ್ಲಿರುವಾಗ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಉಡಮಕಲ್ ಗ್ರಾಮದಲ್ಲಿ ಶರಣಸವೇಶ‍್ವರ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿ ಹಾಗೂ ಪಂಚರ ಸಮೇತ ಹೋಗಿ ಭಾತ್ಮೀ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಶರಣಬಸವೇಶ್ವರ ಗುಡಿಯ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ  ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 06 ಜನರು ಸಿಕ್ಕಿ ಬಿದ್ದಿದ್ದು,  ಸದರಿ ದಾಳಿಯಲ್ಲಿ ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 4,090/- ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಖಾಲಿ ಪ್ಲಾಸ್ಟಿಕ್ ಚೀಲ ಸಿಕ್ಕಿದ್ದು ಇರುತ್ತವೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.  
6] ಯಲಬುರ್ಗಾ ಪೊಲೀಸ್  ಠಾಣೆ  ಗುನ್ನೆ ನಂ. 138/2017 ಕಲಂ. 87 Karnataka Police Act.
ದಿನಾಂಕ: 18-10-2017 ರಂದು ರಾತ್ರಿ 11-05 ಗಂಟೆಯ ಸುಮಾರಿಗೆ ಆರೋಪಿತರು ಹಿರೇ ಅರಳಿಹಳ್ಳೀ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದ ಮುಂದೆ ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಿದ್ದು, 3 ಜನ ಆರೋಪಿತರು ಸಿಕ್ಕಿ ಬಿದ್ದಿದ್ದು,  ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 4610=00 ರೂಪಾಯಿ ನಗದು ಹಣ, 52 ಇಸ್ಪೀಟ ಎಲೆಗಳು ಅಂ.ಕಿ. ಇಲ್ಲ ಮತ್ತು ಒಂದು ಪ್ಲಾಸ್ಟೀಕ ಬರ್ಕಾ ಅಂ.ಕಿ. ಇಲ್ಲ ಇವುಗಳು ಸಿಕ್ಕಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.
7] ಯಲಬುರ್ಗಾ ಪೊಲೀಸ್  ಠಾಣೆ  ಗುನ್ನೆ ನಂ. 139/2017 ಕಲಂ. 87 Karnataka Police Act.
ದಿನಾಂಕ: 19-10-2017 ರಂದು ಬೆಳಗಿನ ಜಾವ 12-40 ಗಂಟೆಯ ಸುಮಾರಿಗೆ ಆರೋಪಿತರು ಕಲಕಬಂಡಿ ಗ್ರಾಮದ ಶ್ರೀ ಈಶ್ವರ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಿದ್ದು, 8 ಜನ ಆರೋಪಿತರು ಸಿಕ್ಕಿ ಬಿದ್ದಿದ್ದು, ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 11,350=00 ರೂಪಾಯಿ ನಗದು ಹಣ, 52 ಇಸ್ಪೀಟ ಎಲೆಗಳು ಅಂ.ಕಿ. ಇಲ್ಲ ಮತ್ತು ಒಂದು ಪ್ಲಾಸ್ಟೀಕ ಬರ್ಕಾ ಅಂ.ಕಿ. ಇಲ್ಲ ಇವುಗಳು ಸಿಕ್ಕಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.
8] ಹನುಮಸಾಗರ ಪೊಲೀಸ್  ಠಾಣೆ  ಗುನ್ನೆ ನಂ. 149/2017 ಕಲಂ. 279, 338, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:

ದಿನಾಂಕ: 19-10-20174 ರಂದು ಬೆಳಗಿನ ಜಾವ 1-30 ಗಂಟೆಗೆ ಫಿರ್ಯಾದಿದಾರರಾದ ವೀರನಗೌಡ ಹಿರೇಹನಮಗೌಡ್ರ ಸಾ: ಮೂಗನೂರ ರವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಸಲ್ಲಿಸಿದ್ದರ ಸಾರಾಂಶವೇನೆಂದರೆ, ಫಿರ್ಯಾದಿದಾರ ತಾಯಿ ಶಾಂತಮ್ಮಳು ನಿನ್ನೆ ದಿನಾಂಕ: 18-10-2017 ರಂದು ಸಾಯಾಂಕಾಲ 5-00 ಗಂಟೆಯ ಸುಮಾರಿಗೆ ಚರಗಿ ತೆಗೆದುಕೊಂಡು ಹೊರಗಡೆ ಕುಂಬಳಾವತಿ ರಸ್ತೆಯ ಕಳಕಪ್ಪ ಕಮತರ ರವರ ಹೊಲದ ಕಡೆಗೆ ಹೋಗುವಾಗ ಹಿಂದಿನಿಂದ ಮೂಗನೂರ ಕಡೆಯಿಂದ ಕುಂಬಳಾವತಿ ಕಡೆಗೆ ಯಾವುದೋ ಒಂದು ಮೋಟಾರ್ ಬೈಕ್ ಸವಾರನು ತನ್ನ ಬೈಕನ್ನು ಅತೀವೇಗ ಹಾಗೂ ಆಲಕ್ಷತನದಿಂದ ನಡೆಸಿಕೊಂಡು ಫಿರ್ಯಾದಿಯ ತಾಯಿಗೆ ಟಕ್ಕರಕೊಟ್ಟು ಅಪಘಾತಪಡಿಸಿ ಓಡಿ ಹೋಗಿದ್ದು, ಅಪಘಾತದಲ್ಲಿ ಶಾಂತಮ್ಮಳಿಗೆ ಎಡಗಡೆ ತಲೆಗೆ ಹಾಗೂ ಬಲಕಪಾಳಕ್ಕೆ ಭಾರಿ ರಕ್ತಗಾಯವಾಗಿ, ಬಾಯಲ್ಲಿ, ಮೂಗಲ್ಲಿ ರಕ್ತ ಸೋರಿ ಬಿದ್ದದ್ದನ್ನು ಕಳಕಪ್ಪ ಕಮತರ ರವರು ನೋಡಿ ಫಿರ್ಯಾದಿದಾರರಿಗೆ ವಿಷಯ ತಿಳಿಸಿ ಫಿರ್ಯಾದಿ ಹಾಗೂ ಅವರ ಮನೆಯವರು ಬಂದು ನೋಡಿ ಉಪಚಾರ ಕುರಿತು ಗಜೇಂದ್ರಗಡ ಸರ್ಕಾರಿ ಆಸ್ಪತ್ರೆ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಗದಗ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಉಪಚಾರ ಫಲಿಸದೇ ದಿನಾಂಕ: 18-10-2017 ರಂದು ರಾತ್ರಿ 8-20 ಗಂಟೆಗೆ ಮೃತಪಟ್ಟಿದ್ದು ಫಿರ್ಯಾದಿ ಅಲ್ಲಿಂದ ತಮ್ಮೂರಾದ ಮೂಗನೂರಿಗೆ ಊರಲ್ಲಿ ವಿಷಯ ತಿಳಿಸಿ ನಂತರ ತಡವಾಗಿ ಠಾಣೆಗೆ ಬಂದು ತಮ್ಮ ತಾಯಿಗೆ ಅಪಘಾತಪಡಿಸಿ ಓಡಿ ಹೋದ ಮೋಟಾರ ಬೈಕ ಸವಾರನನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಮುಂತಾಗಿ ಫಿರ್ಯಾದಿ ನೀಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008