1] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ
ನಂ. 153/2017
ಕಲಂ. 87 Karnataka Police Act.
ಪಿ.ಎಸ್.ಐ. ಹಾಗೂ ಸಿಬ್ಬಂದಿಯವರು ಇಂದು 05-25 ಗಂಟೆಗೆ ಠಾಣೆಯಲ್ಲಿದ್ದಾಗ ಹನಮಸಾಗರ ಚೆನ್ನಮ್ಮ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಮತ್ತು ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪ್ ನೇದ್ದರಲ್ಲಿ ಹೊರಟು ಹನಮಸಾಗರದ ಚೆನ್ನಮ್ಮ ಸರ್ಕಲ ಹತ್ತಿರ 5-40 ಗಂಟೆಗೆ ತಲುಪಿ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಚಾಲಕನನ್ನು ಜೀಪ್ ಹತ್ತಿರ ಬಿಟ್ಟು. ಅಲ್ಲಿಯೇ ಕೀರಾಣಿ
ಅಂಗಡಿಯ ಹತ್ತಿರ ಮರೆಯಾಗಿ ನಿಂತು ನೋಡಲಾಗಿ ಸೆನ್ನಮ್ಮ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಲು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 9 ಜನರು ಆರೋಪಿತರು ಸಿಕ್ಕಿಬಿದಿದ್ದು ಅವರಿಂದ ಸದರಿ ಆಪಾದಿತರು ಜೂಜಾಟಕ್ಕೆ ಉಪಯೋಗಿಸಿದ 52 ಇಸ್ಪೀಟ್ ಎಲೆಗಳು ಹಾಗೂ 11070/- ನಗದು ಒಂದು ಪ್ಲಾಸ್ಟಿಕ್ ಬರ್ಕಾ ಸಿಕ್ಕಿದ್ದು, ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ
ನಂ. 248/2017
ಕಲಂ. 87 Karnataka Police Act.
ದಿನಾಂಕ 22-10-2017 ರಂದು ರಾತ್ರಿ 9-30 ಗಂಟೆಯಿಂದ 10-30 ಗಂಟೆಯ ಅವಧಿಯಲ್ಲಿ ಸಿದ್ದಾಪೂರ
ಗ್ರಾಮದ ಮಲ್ಲಿಕಾರ್ಜುನ ಚಿತ್ರಮಂದಿರದ ಮುಂದುಗಡೆ ಲೈಟಿನ ಬೆಳಕಿನಲ್ಲಿ ಸಾರ್ವಜನಿಕರ
ಸ್ಥಳದಲ್ಲಿ ಅಂದರ-ಬಾಹರ ಎಂಬ ನಸೀಬದ ಇಸ್ಪೇಟ್
ಜೂಜಾಟದಲ್ಲಿ ತೊಡಗಿದ್ದಾಗ ಆರೋಪಿತರ ಮೇಲೆ ಶ್ರೀ ಎಂ. ಶಿವಕುಮಾರ ಪಿ.ಎಸ್.ಐ. ಹಾಗೂ
ಸಿಬ್ಬಂದಿಯವರು ಹಾಗೂ ಪಂಚರ ಪಂಚರ ಸಮಕ್ಷದಲ್ಲಿ ದಾಳಿ ಮಾಡಿದಾಗ 05 ಜನ ಸಿಕ್ಕಿಬಿದ್ದಿದ್ದು
ಉಳಿದವರು ಓಡಿ ಹೋಗಿದ್ದು, ಸದ್ರಿ ಸಿಕ್ಕ ಆರೋಪಿತರ ವಶದಿಂದ
ರೂ.9110/- ಹಾಗೂ ಇಸ್ಪೇಟ್ ಜೂಜಾಟದ ಸಾಮಾಗ್ರಿಗಳನ್ನು ಪಂಚರ
ಸಮಕ್ಷಮದಲ್ಲಿ ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆ
ಕೈಗೊಂಡಿದ್ದು ಇದೆ.
0 comments:
Post a Comment