1] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ
ನಂ. 155/2017
ಕಲಂ. 379 ಐ.ಪಿ.ಸಿ:
ದಿನಾಂಕ:
21-10-2015 ರಂದು ರಾತ್ರಿ 10-00 ಗಂಟೆಗೆ ನಾನು ಊಟ
ಮಾಡಿ ನಮ್ಮ ಮೋಟಾರ ಸೈಕಲನ್ನು ತೆಗೆದುಕೊಂಡು ನಮ್ಮ ಪಂಚರ ಶಾಪಗೆ ಹೋಗಿ ಶಾಪ್ ಮುಂದೆ ಮೋಟಾರ್
ಸೈಕಲ್ ನಿಲ್ಲಿಸಿ ಹ್ಯಾಂಡಲಾಕ ಮಾಡಿ ನಾನು ಮಲಗಿಕೊಂಡಿದ್ದು, ನಂತರ ದಿನಾಂಕ:
22-10-2017 ರಂದು ಬೆಳಗಿನ ಜಾವ 2-00 ಗಂಟೆಗೆ ಮೂತ್ರ
ವಿಸರ್ಜನೆ ಮಾಡಲು ಎದ್ದಾಗ ನಮ್ಮ ಮೋಟಾರ್ ಸೈಕಲ್ ಇದ್ದು, ನಂತರ ಮೂತ್ರ ವಿಸರ್ಜನೆ ಮಾಡಿ ಮಲಗಿ ಬೆಳಗಿನ ಜಾವ 5-30 ಗಂಟೆಗೆ ಎದ್ದು ನೋಡಲು ನಮ್ಮ ಮೋಟಾರ್ ಸೈಕಲ್ ಇರಲಿಲ್ಲ. ಆಗ ನಾನು ಅಕ್ಕಪಕ್ಕದಲ್ಲಿ ಹುಡುಕಾಡಿ, ನಮ್ಮ ಅಣ್ಣ ಅನ್ವರನನ್ನು
ವಿಚಾರಿಸಲು ತೆಗೆದುಕೊಂಡು ಹೋಗಿರುವುದಿಲ್ಲ ಅಂತಾ ತಿಳಿಸಿದರು. ನಂತರ ಅಲ್ಲಿ ಇಲ್ಲಿ ಹುಡುಕಾಡಲಾಗಿ ಇಲ್ಲಿಯವರೆಗೂ ನಮ್ಮ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲ. ನಮ್ಮ ಮೋಟಾರ್ ಸೈಕಲ್ಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ನಮ್ಮ ಮೋಟಾರ್ ಸೈಕಲ್ ವಿವರ 1] ಕಪ್ಪು ಮತ್ತು
ಸಿಲ್ವರ ಬಣ್ಣದ ಹಿರೋ ಸ್ಪ್ಲೆಂಡರ್ ಪ್ರೋ ಮೋಟಾರ್ ಸೈಕಲ್ ನಂ: ಕೆ.ಎ-37/ಇಎ-2373,
2] ಚೆಸ್ಸಿ ನಂ: MBLHA10BFFHB15888 3] ಇಂಜನ್ ನಂ:
HA10ERFHB30227 ಇದರ ಅಂದಾಜು ಕಿಮ್ಮತ್ತು 35,000/- ರೂಪಾಯಿ ಆಗುತ್ತಿದ್ದು,
ಅದರ ಡೂಮಿಗೆ ತಲ್ವಾರ ರೇಡಿಯಮ್ ಕಟಿಂಗ್ ಚಿತ್ರ ಅಂಟಿಸಿದ್ದು
ಇರುತ್ತದೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 239/2017 ಕಲಂ. 379 ಐ.ಪಿ.ಸಿ:
ದಿನಾಂಕ 24-10-2017 ರಂದು ಮದ್ಯಾಹ್ನ
12-30 ಗಂಟೆಗೆ ಶ್ರೀ ಕುಮಾರ.ಪಿ ತಂದೆ ಪಟ್ಟಾಬಿರಾಮಣ್ಣ
ವಯಾ: 40 ವರ್ಷ ಜಾ: ಬಲಿಜ ಉ: ಗೃಹ ರಕ್ಷಕ ಸಾ: ಅಂಗಡಿ ಸಂಗಣ್ಣ ಕ್ಯಾಂಪ, ಗಂಗಾವತಿ ರವರು ಫಿರ್ಯಾದಿ ನೀಡಿದ್ದು ದಿ: 30-09-2017 ರಂದು ಮಧ್ಯರಾತ್ರಿ
12-30 ಗಂಟೆಯಿಂದ ಬೆಳಗಿನ 6-00 ಗಂಟೆಯ ಮಧ್ಯದ ಅವಧಿಯಲ್ಲಿ. ಯಾರೋ ಕಳ್ಳರು ಗಂಗಾವತಿ ಕೆಇಬಿ ಯ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ
ಪಿರ್ಯಾಧಿದಾರರ ಹೊಂಡ್ ಸಿಬಿಶೈನ್ ಸೈಕಲ್ ಮೋಟಾರ ನಂ ಕೆ,ಎ 37 ವಿ 5037 ಚಾಸ್ಸಿ
ನಂ ME4JC36JBD7325823
ಇಂಜಿನ್ ನಂ. JC36E77500151 ಇದ್ದು ಕಪ್ಪು ಬಣ್ಣದ್ದು ಇರುತ್ತದೆ. ಅಂ.ಕಿ 30,000-00 ಬೆಲೆ ಬಾಳುವುದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment