Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, October 27, 2017

1] ಕುಷ್ಟಗಿ ಪೊಲೀಸ್  ಠಾಣೆ  ಗುನ್ನೆ ನಂ. 294/2017 ಕಲಂ. 78(3) Karnataka Police Act.
ದಿನಾಂಕ 25-10-2017 ರಂದು ರಾತ್ರಿ 9-15 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆರವರು ಒಂದು ವರದಿ ಮತ್ತು ಪಂಚನಾಮೆಯನ್ನು ಹಾಗೂ ಆರೋಪಿತರನ್ನು ಹಾಜರು ಪಡಿಸಿದ್ದು ಸಾರಾಂಶವೆನಂದರೆ ಕುಷ್ಟಗಿ ಪಟ್ಟಣದ ಗೌರಿ ನಗರದ ಮಲ್ಲಿಕಾರ್ಜುನ ತಳಕಲ್ ರವರ ಮನೆಯ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟಕಾ ಜೂಜಾಟ ನಡೆದಿದೆ ಅಂತಾ ಬಾತ್ಮೀ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಹೋಗಿ ರೇಡ್ ಮಾಡಿ ಆರೋಪಿ  ಶಂಕ್ರಪ್ಪ ತಂದೆ ರಾಜಪ್ಪ ಈಳಿಗೇರ ವಯಾ: 46 ವರ್ಷ ಜಾತಿ: ಈಳಿಗೇರ ಉ: ಡ್ರೈವರ್ ಕೆಲಸ ಸಾ: ವಣಗೇರಿ ಹಾಲಿ ವಸ್ತಿ: ಗೌರಿ ನಗರ ಕುಷ್ಟಗಿ ಇತನನ್ನು ಹಾಗೂ ಜೂಜಾಟದ ಒಟ್ಟು ಹಣ 3500=00 ರೂ, ಒಂದು ಬಾಲ್ ಪೆನ್ನು, ಒಂದು ಮಟಕಾ ಚೀಟಿ ಹಾಗೂ ಒಂದು ಮೊಬೈಲ್ ನ್ನು ಜಪ್ತಿ ಮಾಡಿಕೊಂಡಿದ್ದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ  ಪೊಲೀಸ್  ಠಾಣೆ  ಗುನ್ನೆ ನಂ. 240/2017 ಕಲಂ. 279, 304(ಎ) ಐ.ಪಿ.ಸಿ:
ದಿ:26-10-2017 ರಂದು ಬೆಳಿಗ್ಗೆ 08-10 ಗಂಟೆಗೆ ಹಲಿಗೇರಿ ಸಮೀಪ ವಾಹನ ಅಪಘಾತವಾದ ಬಗ್ಗೆ ಬಾತ್ಮಿ ಬಂದಿದ್ದು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸ್ಥಳದಲ್ಲಿದ್ದ ಭರಮಗೌಡ ಪಾಟೀಲ. ಸಾ: ಗೌರಿಅಂಗಳ ಕೊಪ್ಪಳ ಇವರ ಲಿಖಿತ ಫಿರ್ಯಾದಿಯನ್ನು ಪಡೆದುಕೊಂಡಿದ್ದು, ಸಾರಾಂಶವೇನೆಂದರೆ, ದಿ:26-10-2017 ರಂದು 04-30 ಎ.ಎಮ್ ದಿಂದಾ ಬೆಳಿಗ್ಗೆ 07-00 ಗಂಟೆಯ ಅವಧಿಯಲ್ಲಿ ಫಿರ್ಯಾದಿದಾರರ ಚಿಕ್ಕಪ್ಪನ ಮಗ ಪ್ರಭು ತಂದೆ ಬಸನಗೌಡ ಪಾಟೀಲ. ಸಾ: ಕೊಪ್ಪಳ ಇವರು ಗದಗ ಕಡೆಯಿಂದ ತಮ್ಮ ಕಾರ್ ನಂ: ಕೆಎ-37/ಎಮ್-9120 ನೇದ್ದನ್ನು ಓಡಿಸಿಕೊಂಡು ವಾಪಾಸ್ ಕೊಪ್ಪಳದ ಕಡೆಗೆ ಅಂತಾ ಕೊಪ್ಪಳ-ಗದಗ ಎನ್.ಹೆಚ್-63 ರಸ್ತೆಯ ಕಾವೇರಿ ಪೆಟ್ರೋಲಬಂಕ್ ಸಮೀಪ ತಮ್ಮ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬರುವಾಗ ತನ್ನ ವಾಹನವನ್ನು ನಿಯಂತ್ರಿಸದೇ ಅಪಘಾತ ಮಾಡಿಕೊಂಡು ಬಿದ್ದಿದ್ದರಿಂದ ಆತನಿಗೆ ಭಾರಿಪೆಟ್ಟುಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.  
3] ಅಳವಂಡಿ ಪೊಲೀಸ್  ಠಾಣೆ  ಗುನ್ನೆ ನಂ. 173/2017 ಕಲಂ. 87 Karnataka Police Act.
ದಿನಾಂಕ: 26-10-2017 ರಂದು ಮಧ್ಯಾಹ್ನ 1-45 ಗಂಟೆಗೆ ಠಾಣಾ ವ್ಯಾಪ್ತಿಯ ಬೇಟಗೇರಿ ಗ್ರಾಮದ ರಾಜರಾಜೇಶ್ವರಿ ದೇವಸ್ಥಾನದ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಹಣವನ್ನು ಕಟ್ಟಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟವನ್ನು ಆಡುತ್ತಿರುವಾಗ ಪಿ.ಎಸ್.ಐ ರವರು ಸಿಬ್ಬಂದಿ ಸಮೇತ ದಾಳಿ ಮಾಡಿದ್ದು, 05 ಜನ ಆರೋಪಿತರು ಸಿಕ್ಕಿದ್ದು, ದಾಳಿಯಲ್ಲಿ ಸಿಕ್ಕ ಆರೋಪಿತರಿಂದ ಜೂಜಾಟಕ್ಕೆ ಬಳಸಿದ ನಗದು ಹಣ ರೂ. 730=00 ಗಳನ್ನು, 52 ಇಸ್ಪೇಟ್ ಎಲೆಗಳನ್ನು, ಹಾಗೂ ಒಂದು ಪ್ಲಾಸ್ಟಿಕ್ ಬರಕಾವನ್ನು ಜಪ್ತ ಮಾಡಿ ಸ್ಥಳದಲ್ಲಿ ಪಂಚನಾಮೆಯನ್ನು ತಯಾರಿಸಿ ವಾಪಾಸ್ ಠಾಣೆಗೆ ಬಂದು ಐದು ಜನ ಆರೋಪಿತರೊಂದಿಗೆ ಮೂಲ ಪಂಚನಾಮೆಯೊಂದಿಗೆ ಒಂದು ವರದಿಯನ್ನು ಹಾಜರುಪಡಿಸಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 
4] ಹನುಮಸಾಗರ ಪೊಲೀಸ್  ಠಾಣೆ  ಗುನ್ನೆ ನಂ. 157/2017 ಕಲಂ. 32, 34 Karnataka Excise Act.

ದಿನಾಂಕ: 26-10-2017 ರಂದು ಸಾಯಂಕಾಲ 4-10 ಗಂಟೆಗೆ ಠಾಣೆಯಲ್ಲಿದ್ದಾಗ ಕಬ್ಬರಗಿ ಗ್ರಾಮದ ಕಾಟಾಪೂರ ರಸ್ತೆಯ ಕಪಾಟಿನ ಮುಂದೆ ಸಾರ್ವಜನಿಕ ಸ್ಥಳದಲ್ಲಿ ನೀಲಮ್ಮ ಗುರಿಕಾರ ಸಾ: ಕಬ್ಬರಗಿ ರವರು ಅನಧಿಕೃತ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಪಿ.ಎಸ್.ಐ. ರವರಿಗೆ ಬಂದ ಮೇರೆಗೆ ಕೂಡಲೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಪಿ.ಸಿ-28, ಪಿ.ಸಿ-256, ಮ.ಪಿ.ಸಿ-241  ರವರೊಂದಿಗೆ ಠಾಣೆಯಿಂದ ಹೊರಟು ಕಬ್ಬರಗಿ ಗ್ರಾಮದ  ಹತ್ತಿರ ಸಾಯಂಕಾಲ 4-40 ಗಂಟೆಗೆ ತಲುಪಿ ಸಾಯಂಕಾಲ 4-45 ಗಂಟೆಗೆ ದಾಳಿಮಾಡಿದಾಗ ನೀಲಮ್ಮ ಗುರಿಕಾರ ಇವಳು ಸಿಕ್ಕಿಬಿದಿದ್ದು ಅವಳ ಹತ್ತಿರ 1] 180 .ಎಂ.ಎಲ್.ಅಳತೆಯ 6 ಟೆಟ್ರಾ ಪಾಕೇಟಗಳು HAYWARDS CHEERS WHISKY ಪ್ರತಿಯೊಂದಕ್ಕೆ ಎಂ.ಆರ್.ಪಿ. 56.27 ಅಂತಾ ಬೆಲೆ ಇರುತ್ತದೆ. ಇವುಗಳ ಒಟ್ಟು ಅಂ:ಕಿ: 337-62 ರೂಪಾಯಿಗಳು ಆಗುತಿದ್ದು. 2] 180 .ಎಂ.ಎಲ್.ಅಳತೆಯ 11 ಟೆಟ್ರಾ ಪಾಕೇಟಗಳು OLD TAVAREN ಪ್ರತಿಯೊಂದಕ್ಕೆ ಎಂ.ಆರ್.ಪಿ. 68-56 ಅಂತಾ ಬೆಲೆ ಇರುತ್ತದೆ. ಇವುಗಳ ಒಟ್ಟು ಅಂ:ಕಿ: 754-16 3] 180 ml THREE ACES WHISKY mÉmÁæ MlÄÖ 9 ¥ÁPÉÃlUÀ¼ÀÄ ¥ÀæwAiÉÆAzÀPÉÌ gÀÆ: 47-75 gÀÆ¥Á¬ÄUÀ¼ÀAvÉ MlÄÖ 729-75 ರೂಪಾಯಿಗಳು ಆಗುತಿದ್ದು. ಹಾಗೂ ನಗದು ಹಣ 500-00 ರೂಪಾಯಿ ಸಿಕ್ಕಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.

0 comments:

 
Will Smith Visitors
Since 01/02/2008