1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ
ನಂ. 252/2017
ಕಲಂ. 341, 323, 354, 504, 506 r/w
34 IPC & The SC/ST (prevention of atrocities) Amendment act-2015 U/s 3 (1)
(r), (s), 3 (2) V
ದಿನಾಂಕ:-27-10-2017 ರಂದು ಮದ್ಯಾಹ್ನ 3-15 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ
ಜಯಶ್ರೀ
ಗಂಡ ಧೀರಲಾಲ ಜಾದವ್ ವಯಾ-29ವರ್ಷ ಒಂದು ಲಿಖಿತ
ದೂರು ನೀಡಿದ್ದುದಿನಾಂಕ:-26-10-2017 ರಂದು ರಾತ್ರಿ 8-20 ಗಂಟೆಯ ಸುಮಾರಿಗೆ ನಮ್ಮ ಚಿಕನ್ ಅಂಗಡಿ
ಮುಚ್ಚಿಕೊಂಡು ಮನೆಯ ಕಡೆಗೆ ಹೋಗಬೆನ್ನುವಾಗ ಸಿದ್ದಾಪೂರ ಗ್ರಾಮದ ಶಾಕೀರ್ ತಂದೆ
ಅಬ್ದುಲ್ ಹಮೀದ, ಯಾಸೀನ್ ತಂದೆ ಮೋದಿನ್ ಸಾಬ ಇವರು ಇಬ್ಬರು ಬಂದು ಚಿಕನ್ ಕೊಡುವಂತೆ ಕೇಳಿದ್ದರಿಂದ
ನಾನು ಈಗ ರಾತ್ರಿ ತಡವಾಗಿದೆ ಚಿಕನ್ ಖಾಲಿಯಾಗಿದೇ ಅಂತಾ ಅಂದಿದ್ದಕ್ಕೆ
ಇಬ್ಬರು ಕೂಡಿ ನಮಗೆ ಚಿಕನ್ ಬೇಕೆ ಬೇಕು ಅಂತಾ ಅಂದು ಶಾಕೀರ್ ಈತನು ಇಲ್ಲಿ ಅಂಗಡಿಯನ್ನು ಸೆಂಟಾ ಹರಿಯಾಕ
ಇಟ್ಟಿಯನ ಲೇ ಲಂಬಾಣಿ ಸೂಳೆ ಅಂತಾ ಜಾತಿ ಎತ್ತಿ ಬೈದನು. ನಾನು ಜಾತಿ ಎತ್ತಿ ಬೈಯಬೇಡಿರಿ ಅಂತಾ ಅನ್ನುತ್ತಾ
ಮನೆಯ ಕಡೆಗೆ ಹೋಗುತ್ತಿದ್ದಂತೆ ಯಾಸೀನ್ ಈತನು ನನಗೆ ಅಡ್ಡ ಬಂದು ನಿಂತು ಮೈಮೇಲಿನ ಬಟ್ಟೆ ಹಿಡಿದು
ಹರಿದು ಕೈಹಿಡಿದು ದಬ್ಬಾಡಿ, ಕೈಯಿಂದ ಕಪಾಳಕ್ಕೆ ಹೊಡೆದಿದ್ದರಿಂದ ನಾನು ರಸ್ತೆಗೆ ಬಿದ್ದೆನು. ಅಷ್ಟರಲ್ಲಿ
ಅಲ್ಲಿ ಮನೆಗೆ ಬರುತ್ತಿದ್ದ ಸಲ್ಮಾನ್ ತಂದೆ ಎಮ್ ಎ ಗಣಿ ಈತನು ಪ್ರತ್ಯೇಕ್ಷವಾಗಿ ಘಟನೆಯನ್ನು ನೋಡಿ
ಕೆಳಗೆ ಬಿದ್ದ ನನಗೆ ಮೇಲೆತ್ತಿದನು ಅಷ್ಟರಲ್ಲಿ ನನಗೆ ಕರೆದುಕೊಂಡು ಹೋಗಲು ಬರುತ್ತಿದ್ದ ನನ್ನ ಗಂಡ
ದೀರುಲಾಲ್ ಮತ್ತು ನಮ್ಮ ಅಣ್ಣ ಜಯರಾಮ ರವರು ಬಂದು ಏನು ಏನು ಅಂತಾ ಕೇಳಿದ್ದಕ್ಕೆ ನನ್ನ ಗಂಡನಿಗೆ ಶಾಕೀರ
ಈತನು ದಬ್ಬಾಡಿ ನಾವು ಕೇಳಿದರೆ ಚೀಕನ್ ಕೊಡುವುದಿಲ್ಲಾ ಬೆಳಿಗ್ಗೆ ಬಂದು ನೋಡಿಕೊಳ್ಳುತ್ತೇನೆ ಅಂತಾ
ಜೀವದ ಬೇದರಿಕೆ ಹಾಕಿರುತ್ತಾನೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ
ನಂ. 158/2017
ಕಲಂ. 143, 147, 447, 427, 323, 354, 354(A)(1)(v),
504, 506 ಸಹಿತ 149 ಐ.ಪಿ.ಸಿ
ದಿನಾಂಕ: 27-10-2017 ರಂದು ಮಧ್ಯಾಹ್ನ 12-30 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ನೀಲಮ್ಮ ದೂರಣ್ಣವರ, ಸಾ: ಕಾಟಾಪೂರ ರವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ಫಿರ್ಯಾದಿದಾರರು ದಿನಾಂಕ:
22-10-2017 ರಂದು
ಸಾಯಾಂಕಾಲ 17-00 ಗಂಟೆಗೆ
ತಮ್ಮ ಹೊಲಕ್ಕೆ ಹೋದಾಗ ಆರೋಪಿ ಶರಣವ್ವ ತಮ್ಮ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ಹೊಲದಲ್ಲಿ ಬೆಳೆದ
ಬೆಳೆಯನ್ನು ನಾಶ ಮಾಡಿದ್ದು, ಆಗ
ಫಿರ್ಯಾದಿದಾರರು ಹೊಲದಲ್ಲಿ ಯಾಕೆ ಅಡ್ಡಾಡುತ್ತೀರಿ ಅಂತಾ ಕೇಳಿದಾಗ ಸದರಿ ಆರೋಪಿ ಶರಣವ್ವಳು
ಅವಾಚ್ಯ ಅಶ್ಲೀಲ
ಬೈದಾಡಿದಾಗ,
ಉಳಿದ ಆರೋಪಿತರು ಲೇ ಸೂಳೆ ಹಡಸಲಿ ನಿನ್ನ ನೋಡಕೊಳ್ಳಾಕ ನಾವು ಬಂದಿವಿ ನಿನಗ
ಮುಗಿಸ್ತೀವಿ ಒಂದ ಕೈ ನೋಡ್ಕೊಂತೀವಿ ಅಂತಾ ತಮ್ಮ ಗುಪ್ತಾಂಗಗಳನ್ನು ಪ್ರದರ್ಶಿಸಿ ಅಣಕ
ಮಾಡಿದ್ದಲ್ಲದೇ ಫಿರ್ಯಾದಿಯನ್ನು ಎಳೆದಾಡಿ, ಕೈಯಿಂದ ಹೊಡೆಬಡೆ
ಮಾಡಿದ್ದು, ಆಗ ಪಕ್ಕದ ಹೊಲದ ಹನಮವ್ವ ಗಂಡ ಚಂದಪ್ಪ ವಾಲಿಕಾರ ರವರು
ಜಗಳ ಬಿಡಿಸಿಕೊಂಡಿದ್ದು ಆಗ ಬಿಟ್ಟು ಹೋಗುವಾಗ ಮತ್ತೆ ಬೈದಾಡುತ್ತಾ ಅವಾಚ್ಯ ಇಲ್ಲಿಗೆ ಮುಗಿಲಿಲ್ಲ
ನಿನ್ನ ಒಂದ ಕೈ ನೋಡಕ್ಕೊಂತೀವಿ ಅಂತಾ ಜೀವದ ಬೆದರಿಕೆ ಹಾಕಿದ್ದು, ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
3] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ
ನಂ. 159/2017
ಕಲಂ. 87 Karnataka Police Act.
ದಿನಾಂಕ: 27-10-2017 ರಂದು ಮಧ್ಯಾಹ್ನ 14-40 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಶರಣವ್ವ ಗಂಡ
ಮುತ್ತಪ್ಪ ದೂರಣ್ಣವರ್, ಸಾ: ಕಾಟಾಪೂರ ರವರು ಫಿರ್ಯಾದಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ಫಿರ್ಯಾದಿದಾರರು ದಿನಾಂಕ: 22-10-2017 ರಂದು ಸಾಯಾಂಕಾಲ 17-00 ಗಂಟೆಗೆ ತಮ್ಮ ಹೊಲಕ್ಕೆ ಹೋದಾಗ ಆರೋಪಿತರೆಲ್ಲರೂ ಗುಂಪು ಕಟ್ಟಿಕೊಂಡು ಬಂದು ಪಿರ್ಯಾದಿ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ,ಅವಾಚ್ಯ ಶಬ್ದಗಳಿಂದ ನಿಂದಿಸಿ ಉಳಿದ ಆರೋಪಿತರು ಲೇ ಸೂಳೆ ಹಡಸಲಿ ನಿನ್ನ ಹಡತಿನಿ, ನೋಡಕೊಳ್ಳಾಕ
ನಾವು ಬಂದಿವಿ ನಿನಗ ಮುಗಿಸ್ತೀವಿ ಒಂದ ಕೈ ನೋಡ್ಕೊಂತೀವಿ ಅಂತಾ,ದೂರಪ್ಪ ತನು ಫಿರ್ಯಾದಿಯನ್ನು ಎಳೆದಾಡಿ,ಸೀರೆಯನ್ನು ಬಿಚ್ಚಿ,ಕೆಳಕ್ಕೆ ಹಾಕಿ ಪಿರ್ಯಾದಿಯ ಮರ್ಮಾಂಗಕ್ಕೆ
ಒದ್ದನು ಹಾಗೂ ನೀಲವ್ವಳು ಇವಳನ್ನು ಬಿಡಬ್ಯಾಡ ಮಾನಭಂಗ ಮಾಡು ಅಂತಾ ಪ್ರಚೊದಿಸಿದಳು ನಂತರ ಉಳಿದ ಆರೋಪಿತರು,
ಕೈಯಿಂದ ಹೊಡೆಬಡೆ ಮಾಡಿದ್ದು, ಆಗ ಪಿರ್ಯಾದಿಯ ಹೊಲಕ್ಕೆ
ಕೋಲಿ ಕೆಲಸಕ್ಕೆ ಬಂದ ಬಸಪ್ಪ ತಂದೆ ಕಳಕಪ್ಪ ಹೂಲಗೇರಿ ಹಾಗೂ ಪ್ರವೀಣ ಅಂಗಡಿ ಸೇರಿ ಜಗಳ ಬಿಡಿಸಿಕೊಂಡಿದ್ದು
ಆಗ ಬಿಟ್ಟು ಹೋಗುವಾಗ ಮತ್ತೆ ಬೈದಾಡುತ್ತಾ ಅವಾಚ್ಯ ವಾಗಿ ಬೈದಾಡಿ ಇಲ್ಲಿಗೆ ಮುಗಿಲಿಲ್ಲ ನಿನ್ನ ಒಂದ
ಕೈ ನೋಡಕ್ಕೊಂತೀವಿ ಅಂತಾ ಜೀವದ ಬೆದರಿಕೆ ಹಾಕಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿದ್ದು
ಇರುತ್ತದೆ.
4] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 242/2017 ಕಲಂ. 279, 338 ಐ.ಪಿ.ಸಿ:.
ದಿ: 27-10-2017 ರಂದು 00-45 ಎ.ಎಮ್ ಕ್ಕೆ ಪಡೆದುಕೊಂಡಿದ್ದು, ಸಾರಾಂಶವೇನೆಂದರೆ,
ದಿ: 26.10.2017 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತನ್ನ ಮಗ ಫಕೀರಪ್ಪ ಇವರ
ಮೋಟಾರ ಸೈಕಲ್ ನಂ: ಕೆಎ-36/ಡಬ್ಲ್ಯೂ-1361 ನೇದ್ದರಲ್ಲಿ ಕುಳಿತುಕೊಂಡು ಕೊಪ್ಪಳದಿಂದಾ ವಾಪಾಸ್ ಊರಿಗೆ
ಅಂತಾ ಕೊಪ್ಪಳ-ಗಂಗಾವತಿ ರಸ್ತೆಯ ಬಸಾಪೂರ ದಾಟಿ ಕೊಟ್ರಬಸಯ್ಯ ಇವರ ಇಟ್ಟಂಗಿಭಟ್ಟಿ ಹತ್ತಿರ ಹೋಗುವಾಗ
ರಸ್ತೆಯ ಕರ್ವಿಂಗ್ ದಲ್ಲಿ ಫಿರ್ಯಾದಿಯ ಮಗನು ಹಾಗೂ ಅದೇ ಸಮಯಕ್ಕೆ ಎದುರುಗಡೆ ಗಿಣಿಗೇರಿ ಕಡೆಯಿಂದ
ಬಂದ ಇನ್ನೊಂದು ಮೋಟಾರ ಸೈಕಲ್ ನಂ: ಕೆಎ-36/ಇಎಫ್-5467 ನೇದ್ದರ ಚಾಲಕ ಬಸಪ್ಪ ಸುಕಾಲಪೇಟೆ ಹೀಗೆ ಇಬ್ಬರೂ
ಚಾಲಕರು ತಮ್ಮ ತಮ್ಮ ವಾಹನಗಳನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ
ಚಲಾಯಿಸಿಕೊಂಡು ಹೋಗುವಾಗ ಒಂದಕ್ಕೊಂದು ಟಕ್ಕರ ಕೊಟ್ಟು ಅಪಘಾತ ಮಾಡಿಕೊಂಡಿದ್ದು ಇರುತ್ತದೆ. ಸದರಿ
ಅಪಘಾತದಲ್ಲಿ ಫಿರ್ಯಾದಿ ಮತ್ತು ಎರಡೂ ಮೋಟಾರ ಸೈಕಲ್ ಚಾಲಕರುಗಳಿಗೆ ಭಾರಿಪೆಟ್ಟುಗಳಾಗಿದ್ದು ಇರುತ್ತದೆ.
ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
5] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 243/2017 ಕಲಂ. 279, 338 ಐ.ಪಿ.ಸಿ:.
ದಿ: 27-10-2017 ರಂದು ರಾತ್ರಿ 7-00 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆ
ಫಿರ್ಯಾದಿಯನ್ನು ನೀಡಿದ್ದು ಸಾರಾಂಶವೇನೆಂದರೆ, ದಿ:14-10-2017 ರಂದು ರಾತ್ರಿ 9-15 ಗಂಟೆಗೆ ಆಪಾದಿತರಾದ
ಪಿ.ಆರ್. ಕುಲಕರ್ಣಿ ಇವರು ತಮ್ಮ ಮೋಟಾರ ಸೈಕಲ್ ನಂ: ಕೆಎ-37/ಇಸಿ-1539 ನೇದ್ದನ್ನು ಗಿಣಿಗೇರಿ ಕಡೆಯಿಂದ
ಕೊಪ್ಪಳದ ಕಡೆಗೆ ಅಂತಾ ಬರುವಾಗ ಬಸಾಪೂರ ದಾಟಿ ತಮ್ಮ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ
ಮಾನವ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬರುವಾಗ ವಾಹನ ನಿಯಂತ್ರಿಸದೇ ಅಪಘಾತ ಮಾಡಿಕೊಂಡು ಬಿದ್ದು
ಭಾರಿ ಪೆಟ್ಟುಗಳಾಗಿದ್ದು ಇರುತ್ತದೆ. ಕಾರಣ ಸದರಿ ಪಿ.ಆರ್. ಕುಲಕರ್ಣಿ ಮೋಟಾರ ಸೈಕಲ್ ಸವಾರ ಇವರ ಮೇಲೆ
ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ತಡವಾಗಿ ನೀಡಿದ ದೂರಿನ ಸಾರಾಂಶದ ಪ್ರಕರಣ
ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment