Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, November 25, 2017

1]  ಕನಕಗಿರಿ ಪೊಲೀಸ್  ಠಾಣೆ  ಗುನ್ನೆ ನಂ: 169/2017 ಕಲಂ: 279,338, 304(ಎ) ಐ.ಪಿ.ಸಿ.
ದಿನಾಂಕ:  24/11/2017 ರಂದು  ಸಾಯಾಂಕಾಲ 06:30 ಗಂಟೆಗೆ ಫಿರ್ಯಾದಿದಾರರಾದ  ಹನುಮಂತ ತಂದೆ ದುರುಗಪ್ಪ ನಾಡದಾಳ ವಯಾ : 35 ವರ್ಷ ಜಾತ : ನಾಯಕ : ಕೂಲಿಕೆಲಸ ಸಾ : ವಡಕಿ ತಾ : ಗಂಗಾವತಿ  ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಫಿರ್ಯಾದಿಯನ್ನು  ನೀಡಿದ್ದು  ಸಾರಂಶ  ಕೆಳಗಿನಂತೆ ಇರುತ್ತದೆ.   ಫಿರ್ಯಾದಿ ದಾರನು ಈಗ್ಗೆ ಸುಮಾರು 7-8 ವರ್ಷಗಳ ಹಿಂದೆ ತನ್ನ  ತಂಗಿಯಾದ ಶ್ರೀಮತಿ ದುರುಗಮ್ಮ ಇವಳನ್ನು  ಸಿಂದನೂರ ತಾಲೂಕಿನ ಮ್ಯಾದರಾಳ ಗ್ರಾಮದ ಮಾನಪ್ಪ ಮ್ಯಾದರಾಳ ಬುವರೊಂದಿಗೆ ಮದುವೆ ಮಾಡಿಕೊಟ್ಟಿದ್ದು. ಇವರಿಗೆ ಇಬ್ಬರೂ ಮಕ್ಕಳಿರುತ್ತಾರೆ. ಈಗ್ಗೆ ಮೂರು ತಿಂಗಳ ಹಿಂದೆ ತನ್ನ ತಂಗಿ ದುರುಗಮ್ಮಳು ತವರು ಮನೆಗೆ ಬಂದು ನಮ್ಮ ವಡಕಿ ಗ್ರಾಅಮದಲ್ಲಿಯ ಇದ್ದಳು ನನ್ನ ಅಳಿಯನಾದ ಮಾನಪ್ಪ ಇತನು ನಿನ್ನೆ ದಿನಾಂಕ : 23/11/2017 ರಂದು ರಾತ್ರಿ 8 :00 ಗಂಟೆಗೆ ತಮ್ಮೂರಾದ ತಾವಿರುವ ಜಾಲಿ ಹಾಳ ಕ್ಯಾಂಪ್  ದಿಂದ ತನ್ನ ಹಿರೋ ಹೊಂಡ ಮೋಟರ್ ಸೈಕಲ್ ನಂ : ಕೆ.ಎ-36/ಆರ- 3372 ನೇದ್ದನ್ನು ತಗೆದುಕೊಂಡು ಫಿರ್ಯಾದಿದಾರರ ರಾದ ವಡಕಿ ಗ್ರಾಮಕ್ಕೆ  ಬಂದು ಹೆಂಡತಿ – ಮಕ್ಕಳ ಯೋಗಕ್ಷಮದ ಬಗ್ಗೆ ವಿಚಾರಿಸಿಕೊಂಡು ರಾತ್ರಿ ಇದ್ದು . ಇಂದು ದಿನಾಂಕ : 24/11/2017 ರಂದು ಬೆಳಿಗ್ಗೆ 9 :00 ಗಂಟೆಯ ಸುಮಾರಿಗೆ  ವಾಪಸ್ ತಮ್ಮೂರಿಗೆ ಹೋಗಿ ಬರುವದಾಗಿ ಹೇಳಿ ತನ್ನ ಮೋಟರ್ ಸೈಕಲ್ ತಗೆದುಕೊಂಡು ಹೋದನು. ಇಂದು ನಾನು ಮದ್ಯಾಹ್ನ 1 :00 ಗಂಟೆ ಸುಮಾರಿಗೆ  ಮನೆಯಲ್ಲಿದ್ದಾಗ  ಫಿಅರ್ಯಾದಿಯ  ಅಳಿಯಾನಾದ ಮಾನಪ್ಪ ತಂದೆ ದುರುಗಪ್ಪ ಮ್ಯಾದರಾಳ ತನು ಇತನು ನವಲಿಕಡೆಯಿಂದ ನಮ್ಮೂರ ಕಡೆಗೆ ತನ್ನ ಮೋಟರ್ ಸೈಕಲ್ ನ್ನು ಅತಿಜೋರಾಗಿ ಹಾಗೂ ಅಲಕ್ಷತನದಿಂದ  ನಡೆಸಿಕೊಂಡು ಕಂಟ್ರೂಲ್ ಮಾಡದೆ ಸ್ಕೀಡ್ ಆಗಿ ನವಲಿ ಸೀಮಾದಲ್ಲಿ ಬರುವ ಗಂಗಾಧರ ಪಟ್ಟಣ ಶೆಟ್ಟರ ಇವರ ಹೊಲದ ಹತ್ತಿರ ರಸ್ತೆಯ ಮೇಲೆ   ಮದ್ಯಾಹ್ನ 12 :15 ಗಂಟೆಯ ಸುಮಾರಿಗೆ ಮೋಟರ್ ಸೈಕಲ್ ಸ್ಕೀಡ್ ಮಾಡಿಕೊಂಡು ಬಿದ್ದು ಅಪಘಾತ ಹೊಂದಿ ತಲೆಯ ಹಾಗೂ ಮುಖದ ಎಡಭಾಗಕ್ಕೆ ಮೈ ಮೇಲೆ ಅಲ್ಲಲಿ ಭಾರಿ ಒಳಪೆಟ್ಟು ಹಾಗೂ ರಕ್ತಗಾಯವಾಗಿದ್ದು. ಇತನನ್ನು ಪಕ್ಕದ ಹೊಲದವರಾದ ಗಂಗಾಧರ ತಂದೆ ವಿರುಪಾಕ್ಷಪ್ಪ ಸಾ : ನವಲಿ & ಸುಭಾಷಚಂದ್ರ ತಂದೆ ಲಕ್ಷ್ಮನಗೌಡ ಸಾ : ಆಕಳಕುಂಪಿ ಇವರು ನೋಡಿ ಇತನಿಗೆ ನೀರುಕುಡಿಸಿ 108 ವಾಹನದಲ್ಲಿ ಹಾಕಿ ಇಲಾಜ ಕುರಿತು ಕಾರಟಗಿ  ಸರಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿಂದ ಹೆಚ್ಚಿನ ಇಲಾಜ ಕುರಿತು ಸಿಂದನೂರ ಸರಕಾರಿ ಆಸ್ಪತ್ರೆಗೆ ಹೋಗಿದ್ದು ಅಲ್ಲಿ ನನ್ನ ಅಳಿಯನಿಗೆ ಇಲಾಜ ಫಲಿಸದೆ ತನಗಾದ  ಮೋಟರ್ ಸೈಕಲ್ ಅಪಘಾತದ ಗಾಯಗಳ ಭಾದೆ  ಇಂದು ದಿನಾಂಕ : 24/11/2017 ರಂದು ಸಾಯಾಂಕಾಲ 4 :00 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವದಾಗಿ ಗೋತ್ತಾಯಿತು. ಕಾರಣ ನನ್ನ ಅಳಿಯನಾದ ಮಾನಪ್ಪ ತಂದೆ ದುರುಗಪ್ಪ ಮ್ಯಾದರಾಳ ವಯಾ : 35 ವರ್ಷ ಜಾತಿ : ನಾಯಕ : ಕೂಲಿಕೆಲಸ ಸಾ : ಮ್ಯಾದರಾಳ ಹಾ : ವ : ಜಾಲಿಹಾಳ ಕ್ಯಾಂಪ್ ತಾ :ಸಿಂದನೂರ  ಇತನು ನವಲಿಯಿಂದ - ವಡಕಿ ಕಡೆ ಬರುವಾಗ ತನ್ನ ಹಿರೋ ಹೊಂಡ ಮೋಟರ್ ಸೈಕಲ್ ನಂ : ಕೆ.ಎ-36/ಆರ- 3372 ನೇದ್ದನ್ನು ಅತಿವೇಗ ಹಾಗೂ ಅಲಕ್ಷತದಿಂದ ನಡೆಸಿ ಮೋಟರ್ ಸೈಕಲ್ ನಿಯಂತ್ರಣ ಸಾಧಿಸದೆ ತಾನೇ ಸ್ಕೀಡ್ ಮಾಡಿಕೊಂಡು ಭಾರಿಗಾಯಗೊಂಡು ಮೃತಪಟ್ಟಿದ್ದು .ತಾವು  ಮುಂದಿನ ಕಾನೂನು ಕ್ರಮ ಜರಗಿಸ ಬೆಕೆಂದು ಲಿಖಿತ ಫಿರ್ಯಾದಿ  ಆಧಾರದ ಮೇಲಿಂದ ಪ್ರಕರಣದಾಖಲಿಸಿ ಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
2]  ಯಲಬುರ್ಗಾ ಪೊಲೀಸ್  ಠಾಣೆ  ಗುನ್ನೆ ನಂ: 160/2017 ಕಲಂ: 143,147,341,323,324,504,.506 ಸಹಿತ 149 ಐ.ಪಿ.ಸಿ.
ದಿನಾಂಕ:23-11-2017 ರಂದು ರಾತ್ರಿ 8-15 ಗಂಟೆಗೆ  ಕುಷ್ಟಗಿ ಪೊಲೀಸ ಠಾಣೆಯಿಂದ  ಮೋ.ಸೈಕಲ ಅಪಘಾತವಾಗಿ ಇಲಾಜ ಕುರಿತು ಕುಷ್ಟಗಿ  ಸರ್ಕಾರಿ ಆಸ್ಪತ್ರೆಯಿಂದ  ಎಂ.ಎಲ್.ಸಿ ಬಂದಿರುವುದಾಗ ತಿಳಿಸಿದ್ದು, ಮತ್ತು ಸದರಿ ಗಾಯಾಳು ಶರಣಪ್ಪನಿಗೆ ಕೊಪ್ಪಳಕ್ಕೆ ಹೆಚ್ಚಿನ ಇಲಾಜ ಕುರಿತು ಕಳುಹಿಸಿದ ನಂತರ ತಿಳಿಸಿದ್ದು , ಆ ವೇಳೆಯಲ್ಲಿ ಬಸ್ಸಿನ ಸೌಕರ್ಯ ಇರಲಾರದಿದ್ದರಿಂದ ಇಂದು ದಿನಾಂಕ; 24-11-2017 ರಂದು ಬೆಳಿಗ್ಗೆ 7-30 ಗಂಟೆಗೆ  ಯಲಬುರ್ಗಾದಿಂದ ಕೊಪ್ಪಳಕ್ಕೆ ಹೊರಟು  ಬೆಳಿಗ್ಗೆ 9-30 ಗಂಟೆಗ ಕೊಪ್ಪಳ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಇಲಾಜ ಪಡೆಯುತ್ತಿದ್ದ ಶರಣಪ್ಪನಿಗೆ ವಿಚಾರ ಮಾಡಿ ಹೇಳಿಕೆಯನ್ನು ಪಡೆದುಕೊಂಡಿದ್ದು, ಸದರಿಯವನು ತನ್ನ ಹೇಳಿಕೆಯಲ್ಲಿ ತಮಗೂ ಮತ್ತು ಆರೋಪಿತರ ನಡುವೆ ಬಂಡಿ ಹೋಗುವ ರಸ್ತೆಯ ಸಂಬಂಧ ತಿರುಗಾಡುವ ವಿಷಯದಲ್ಲಿ ಆಗಾಗ ಇಬ್ಬರ ನಡುವೆ ಜಗಳವಾಗುತ್ತಿತ್ತು.  ಇದೇ ವಿಷಯವಾಗಿ ಆರೋಪಿತರಿಗೂ ಮತ್ತು ತಮಗೂ ದ್ವೇಷ ಇರುತ್ತದೆ. ಇದೇ ವೈಷಮ್ಯದಿಂದ ನಿನ್ನೆ ದಿನಾಂಕ: 23-11-2017 ರಂದು ಸಂಜೆ 5-00 ಗಂಟೆಯ ಸುಮಾರಿಗೆ ಪಿರ್ಯಾದಿದಾರ ಮತ್ತು ಆತನ ಸ್ನೇಹಿತ ಹನಮಂತಪ್ಪ ತಂದೆ ಪರಪಸ್ಪ ಸುದ್ದಿ ಕೂಡಿ ತಮ್ಮ ಹೊಲ ನೋಡುವ ಕುರಿತು ಆರೋಪಿತರ ಹೊಲದಲ್ಲಿ ಹಾದು ಹೋಗುತ್ತಿದ್ದಾಗ ಸದರಿ ಆರೋಪಿತರ ಪೈಕಿ ಬಸಮ್ಮ ಗಂಡ ಸಿದ್ದಪ್ಪ ಹವಾಲ್ದಾರ  ಈಕೆಯು ತನಿಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ಬದಗಳಿಂದ ಬೈಯ್ದು ಜಗಳ ತೆಗೆದಿದ್ದು, ಅಲ್ಲಿಯೇ ಇದ್ದ ಉಳಿದ ಆರೋಪಿತರು ಸಹ ಬಂದು ಫೀರ್ಯಾದಿದಾರರಿಗೆ ತಡೆದು ನಿಲ್ಲಿಸಿ ಲೇ ಬೋಸುಡಿ ಮಗನೇ ನಮ್ಮ ಹೊಲದಲ್ಲಿ ತಿರುಗಾಡಬೇಡ ಅಂತಾ ಹೇಳಿದರೂ ಸಹ ನೀನು ಕೇಳುವುದಿಲ್ಲ. ಎನಲೇ ಸೂಳೆ ಮಗನೇ ಅಂತಾ ಅವಾಚ್ಯ ಶಬ್ಬದಗಳಿಂದ ಬೈಯ್ದು ಎಲ್ಲರೂ ಕೈಗಳಿಂದ ಹೊಡೆ-ಬಡಿ ಮಾಡಿದ್ದು, ಆರೋಪಿ ನಾಗರಾಜನು ಬಡಿಗೆಯಿಂದ ತಲೆಗೆ ಜೋರಾಗಿ  ಹೊಡೆದು ರಕ್ತಗಾಯ ಪಡಿಸಿದ್ದು ಅಲ್ಲದೇ ಆರೋಪಿತರು ಲೇ ಸೂಳೆ ಮಗನೇ ಇನ್ನೊಮ್ಮೆ ಇಲ್ಲಿ ತಿರುಗಾಡಿದರೇ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಭಯಹಾಕಿದ್ದು ಅದೇ, ತಾನು ಅರೇ ಪ್ರಜ್ಞಾವಸ್ಥೆಯಲ್ಲಿ ಇರುವದರಿಂದ ಕುಷ್ಟಗಿ ಮತ್ತು ಕೊಪ್ಪಳದ ಆಸ್ಪತ್ರೆಯಲ್ಲಿ ತಾನು  ವೈದ್ಯಾಧಿಕಾರಿಗಳ ಮುಂದೆ ರಸ್ತೆ ಅಪಘಾತವಾಗಿ ತನಿಗೆ ಗಾಯವಾಗಿರುತ್ತದೆ ಅಂತಾ ಹೇಳಿರುವೇನು ಆದರೆ ತನಿಗೆ ಆರೋಪಿತರು  ಹೊಡೆ –ಬಡಿ ಮಾಡಿ ರಕ್ತಗಾಯಪಡಿಸಿದ್ದು ಅದೇ ಅಂತಾ ಮುಂತಾಗಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣಾ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.  
3]  ಯಲಬುರ್ಗಾ ಪೊಲೀಸ್  ಠಾಣೆ  ಗುನ್ನೆ ನಂ: 161/2017 ಕಲಂ: 447, 504, 323, 354, 324, 341, 506 ಸಹಿತ 34 ಐ.ಪಿ.ಸಿ.
ದಿನಾಂಕ: 24-11-2017 ರಂದು ರಾತ್ರಿ 9-00 ಗಂಟೆಗೆ ಫಿರ್ಯಾದಿ ಬಸಮ್ಮ ಗಂಡ ಸಿದ್ಧಪ್ಪ ಹವಾಲ್ದಾರ,  ವಯ: 58 ವರ್ಷ ಜಾ: ಲಿಂಗಾಯತ ಉ: ಹೊಲಮನೆಕೆಲಸ ಸಾ: ಬಂಡಿ  ತಾ: ಯಲಬುರ್ಗಾ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾದಿಯನ್ನು ಹಾಜರು ಪಡಿಸಿದ್ದು, ಸದರಿ ಪಿರ್ಯಾದಿಯನ್ನು ಪಡೆದುಕೊಂಡು ಪರಿಶೀಲನೆ ಮಾಡಿನೋಡಲು, ಸದರಿ ಫಿರ್ಯಾದಿಯ ಸಾರಾಂಶವೇನೆಂದರೆ, ಈಗ್ಗೆ ಸುಮಾರು ದಿನಗಳಿಂದ ಫಿರ್ಯಾದಿದಾರರ ಹೊಲದಲ್ಲಿ ಆರೋಪಿ ನಂ: 01 ಈತನು ದಾರಿ ಇಲ್ಲದಿದ್ದರೂ, ಅವರ ಹೊಲದಲ್ಲಿ ಅಡ್ಡಾಡುತ್ತಿದ್ದು, ತಮ್ಮ ಹೊಲದಲ್ಲಿ ಅಡ್ಡಾಡ ಬೇಡಿರೀ, ಅಂತಾ ಫಿರ್ಯಾದಿದಾರರು ಆರೋಪಿತನಿಗೆ ತಿಳಿಸಿದ್ದು, ಈ ವಿಷಯವಾಗಿ ಫಿರ್ಯಾದಿದಾರರಿಗೆ ಹಾಗೂ ಆರೋಪಿತರಿಗೂ ಆಗಾಗ್ಗೆ ಜಗಳವಾಗಿದ್ದು, ಈ ಬಗ್ಗೆ ಆರೋಪಿತನು ಫಿರ್ಯಾದಿದಾರರ ಮೇಲೆ ಸಿಟ್ಟಾಗಿದ್ದು ಇರುತ್ತದೆ. ಇದೇ ವಿಷಯವಾಗಿ ದಿನಾಂಕ: 24-11-2017 ರಂದು ಸಂಜೆ 5-00 ಗಂಟೆಗೆ ಫಿರ್ಯಾದಿದಾರರು ಹಾಗೂ ಅವರ ಮಗನಾದ ಚಂದ್ರಶೇಖರ ಇಬ್ಬರು ಕೂಡಿಕೊಂಡು ತಮ್ಮ ಹೊಲದಲ್ಲಿ ಮೆಕ್ಕೆಜೋಳದ ರಾಶಿ ಮಾಡುತ್ತಿದ್ದಾಗ, ಆರೋಪಿತರಿಬ್ಬರೂ ಕೂಡಿಕೊಂಡು ಫಿರ್ಯಾದಿದಾರರ ಹೊಲದಲ್ಲಿ ಅತೀಕ್ರಮ ಪ್ರವೇಶ ಮಾಡಿ, ಫಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹಾಗೂ ಕಟ್ಟಿಗೆಯಿಂದ ಮೈಕೈಗೆ ಹೊಡೆ ಬಡೆ ಮಾಡಿ, ಮೈ ಕೈ ಮುಟ್ಟಿ, ತಲೆ ಕೂದಲು, ಸೀರೆ ಹಿಡಿದು ಎಳೆದಾಡಿ, ಅವಮಾನ ಮಾಡಿದ್ದು, ಅಲ್ಲದೇ ಚಂದ್ರಶೇಖರನಿಗೂ ಸಹ ಮುಂದೆ ಹೋಗದಂತೆ ಹಿಡಿದುಕೊಂಡು ಕೈಯಿಂದ ಹೊಡೆ ಬಡೆ ಮಾಡಿ, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಕಾರಣ ತಮಗೆ ಹೊಡೆ ಬಡೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4]  ಕಾರಟಗಿ ಪೊಲೀಸ್  ಠಾಣೆ  ಗುನ್ನೆ ನಂ.275/2017 ಕಲಂ 363 ಐಪಿಸಿ.
ದಿನಾಂಕ:-24-11-2017 ರಂದು ರಾತ್ರಿ 7-10 ಗಂಟೆಗ ಫಿರ್ಯಾದಿದಾರ ಶ್ರೀನಿವಾಸ ತಂದೆ ಯಂಕೋಬಣ್ಣ ಉಪ್ಪಾರ ವಯ 42 ವರ್ಷ ಜಾತಿ ಉಪ್ಪಾರ  ಸಾ. ಹಗೇದಾಳ ತಾ. ಗಂಗಾವತಿ ಇವರು ಠಾಣೆಗೆ ಹಾಜರಾಗಿ ತಮ್ಮದೊಂದು ಲಿಖಿತ ದೂರನ್ನು ಕೊಟ್ಟಿದ್ದು  ಅದರ ಸಾರಾಂಶವೇನೆಂದರೆ, ನನಗೆ ಮೂರು ಜನ ಗಂಡು ಮಕ್ಕಳಿದ್ದು, ಅದರಲ್ಲಿ ನನ್ನ ಹಿರಿಯ ಮಗ ಅರವಿಂದ್ ವಯ 21 ವರ್ಷ, 2 ನೇ ಮಗ ಆನಂದ ವಯ 18 ವರ್ಷ ಹಾಗೂ ಕೊನೆಯ ಮಗ ಸತೀಶ @ ಸತ್ಯನಾರಾಯಣ ವಯ 16 ವರ್ಷ ಅಂತಾ ಇದ್ದು ಕೊನೆಯ ಮಗನಾದ ಸತೀಶ್ @ ಸತ್ಯನಾರಾಯಣ ಈತನು  5 ನೇ ತರಗತಿಯಿಂದ ದೇವದುರ್ಗಾ ತಾಲೂಕಿನ ಅಲಕೋಡಾ ಗ್ರಾಮದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಈಗ 10 ನೇ ತರಗತಿಯಲ್ಲಿ ಓದುತ್ತಿರುತ್ತಾನೆ. ನನ್ನ ಮಗನು ದಸರಾ ರಜೆ ನಿಮಿತ್ಯ ನಮ್ಮ ಸ್ವಂತ ಊರಾದ ಹಗೇದಾಳ ಗ್ರಾಮಕ್ಕೆ ಬಂದಿದ್ದು, ರಜೆಯ ಅವಧಿಯಲ್ಲಿ ಮನೆಯಲ್ಲಿದ್ದನು. ನಂತರ ಮತ್ತೆ ಶಾಲೆ ಪ್ರಾರಂಭವಾಗಿದ್ದರಿಂದ ದಿನಾಂಕ 06-11-2017 ರಂದು ಬೆಳಿಗ್ಗೆ 10-00 ಗಂಟೆಗೆ ತಾನು ವಸತಿ ಶಾಲೆಗೆ ಹೋಗುವುದಾಗಿ ಲಗೇಜ್ ಸಮೇತ ಮನೆಯಿಂದ ಹೋಗಿದ್ದನು. ಇದಾದ ನಂತರ ನಾವು ಹಾಸ್ಟೇಲ್ ದಲ್ಲಿದ್ದಾನೆಂದು ಸುಮ್ಮನಾಗಿದ್ದೆವು. ಆದರೆ ದಿನಾಂಕ 19-11-2017 ರಂದು ವಸತಿ ಶಾಲೆಯಿಂದ ಶಿಕ್ಷಕರು ಫೋನ್ ಮಾಡಿ ರಜೆಗೆ ಹೋಗಿರುವ ನಿಮ್ಮ ಮಗ ವಾಪಸ್ ಶಾಲೆಗೆ ಬಮದಿರುವುದಿಲ್ಲವೆಂದು ತಿಳಿಸಿದರು. ಆಗ ನಾವುಗಳು ಆತನು ಓದುವ ಶಾಲೆಯ ಬಳಿ, ನಮ್ಮ ಸಂಬಂಧಿಕರ ಊರುಗಳಾದ ಯರಡೋಣಾ, ಸಿಂಧನೂರ, ಜಂಗಮರ ಕಲ್ಗುಡಿ ಮುಂತಾದ ಕಡೆಗಳಲ್ಲಿ ವಿಚಾರಣೆ ಮಾಡಿ ಹುಡುಕಾಟ ಮಾಡಲಾಗಿ ಎಲ್ಲಿಯೂ ಪತ್ತೆ ಆಗಿರುವುದಿಲ್ಲ ಕಾಣೆಯಾಗಿರುವ ನನ್ನ ಮಗನ  ಚಹರೆ ಪಟ್ಟಿ ಈ ಕೆಳಗಿನಂತೆ ಇರುತ್ತದೆ. ದುಂಡು ಮುಖ, ಗೋದಿ ಮೈ ಬಣ್ಣ, ಸಾಧಾರಣ ಮೈ ಕಟ್ಟು, ತಲೆಯಲ್ಲಿ ಕಪ್ಪು ಕೂದಲು ಇದ್ದು, 10 ನೇ ತರಗತಿಯಲ್ಲಿ ಓದುತ್ತಿರುತ್ತಾನೆ.  ಕನ್ನಡ ಬಾಷೆ ಮಾಡನಾಡುವವನಿದ್ದು, ಮನೆಯಿಂದ ಹೋಗುವಾಗ ನೀಲಿ ಬಣ್ಣದ ತುಂಬಾ ತೋಳಿನ ಶರ್ಟ, ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದಾನೆ ಕಾರಣ ಮೇಲ್ಕಂಡ ಚಹರೆ ಪಟ್ಟಿಯುಳ್ಳ ಕಾಣೆಯಾಗಿರುವ ನನ್ನ ಮಗನನ್ನು ಪತ್ತೆ ಮಾಡಿಕೊಡಬೇಕೆಂದು ಈಗ ಠಾಣೆಗೆ ಬಂದು ಫೀರ್ಯಾಧಿ ನೀಡಿದ್ದು, ಅದರ ಸಾರಾಂಶದಲ್ಲಿ ಕಾಣೆಯಾಗಿರುವ ಹುಡುಗ ಅಪ್ರಾಪ್ತನಿರುವುದರಿಂದ  ಅಪಹರಣ ಪ್ರಕರಣ ಅಂತಾ ಪರಿಗಣಿಸಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ  ಕೈಗೊಂಡಿದ್ದು ಇರುತ್ತದೆ.
5]  ಗಂಗಾವತಿ ನಗರ ಪೊಲೀಸ್  ಠಾಣೆ  ಗುನ್ನೆ ನಂ.293/2017 ಕಲಂ 78 (3) ಕೆ.ಪಿ.ಆ್ಯಕ್ಟ್.
ದಿನಾಂಕ 24-11-2017 ರಂದು 11-45 ಗಂಟೆಗೆ ಆರೋಪಿ ಹನುಮಂತ ತಂದೆ ದುರುಗಪ್ಪ ಜೇಕಿನ್ ಸಾ: ಹೆಚ್.ಆರ್ ಎಸ್. ಕಾಲೋನಿ ಗಂಗಾವತಿ. ಇವನು ಗಂಗಾವತಿಯ ಹಿರೇಜಂತಕಲ್ ಪೋಸ್ಟ್ ಆಫೀಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಸಾರ್ವಜನಿಕರನ್ನು ಕರೆದು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದಾಗ ಶ್ರೀ ಉದಯರವಿ, ಪಿ.ಐ ಗಂಗಾವತಿ ನಗರ ಪೊಲೀಸ್ ಠಾಣೆ ರವರು ಸದರಿಯವನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಅವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ (01) ನಗದು ಹಣ ರೂ. 350-00. (02) ಮಟಕಾ ನಂಬರ ಬರೆದ 01 ಮಟ್ಕಾ ಪಟ್ಟಿ ಹಾಗೂ (03) 01 ಬಾಲ್ ಪೆನ್ ದೊರೆತಿದ್ದು. ಸದರಿ ಆರೋಪಿತನ ಹತ್ತಿರ ದೊರೆತ ಮುದ್ದೇಮಾಲನ್ನು ಜಪ್ತಿ ಪಡಿಸಿಕೊಂಡು ಪ್ರತ್ಯೇಕವಾಗಿ ಪಂಚನಾಮೆಯನ್ನು ಬರೆದುಕೊಂಡಿದ್ದು ಇರುತ್ತದೆ. ಸದರಿ ಮಟಕಾ ಪಟ್ಟಿಯನ್ನು ಬಕ್ಕಿಯಾದ ಕಾಸಿಂಅಲಿ ತಂದೆ ಬುಡನ್ ಸಾಬ ಸಾ: ಗುಂಡಮ್ಮ ಕ್ಯಾಂಪ್  ಗಂಗಾವತಿ ಇವನಿಗೆ ಕೊಡುವುದಾಗಿ ತಿಳಿದ್ದು ಕಾರಣ ಸದರಿಯವರ ಮೇಲೆ ಕಲಂ 78 (3) ಕೆ.ಪಿ.ಆ್ಯಕ್ಟ್ ಅಡಿಯಲ್ಲಿ ಕ್ರಮ ಜರುಗಿಸುವಂತೆ ನೀಡಿದ ವರದಿ ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 293/2017 ಕಲಂ 78 (3) ಕೆ.ಪಿ.ಆ್ಯಕ್ಟ್ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
6]  ಗಂಗಾವತಿ ನಗರ ಪೊಲೀಸ್  ಠಾಣೆ  ಗುನ್ನೆ ನಂ.294/2017 ಕಲಂ 78 (3) ಕೆ.ಪಿ.ಆ್ಯಕ್ಟ್.
ದಿನಾಂಕ 24-11-2017 ರಂದು 2-00 ಗಂಟೆಗೆ ಆರೋಪಿ ಪರಶುರಾಮ ತಂದೆ ಹುಲಗಪ್ಪ ವಜ್ಜಲ ಸಾ: ಹೆಚ್.ಆರ್ ಎಸ್. ಕಾಲೋನಿ ಗಂಗಾವತಿ. ಇವನು ಗಂಗಾವತಿಯ ಹಿರೇಜಂತಕಲ್ ಮಸೀದಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಸಾರ್ವಜನಿಕರನ್ನು ಕರೆದು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದಾಗ, ಶ್ರೀ ಉದಯರವಿ, ಪಿ.ಐ ಗಂಗಾವತಿ ನಗರ ಪೊಲೀಸ್ ಠಾಣೆ ರವರು ಸದರಿಯವನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಅವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ (01) ನಗದು ಹಣ ರೂ. 450-00. (02) ಮಟಕಾ ನಂಬರ ಬರೆದ 02 ಮಟ್ಕಾ ಪಟ್ಟಿ ಹಾಗೂ (03) 01 ಬಾಲ್ ಪೆನ್ ದೊರೆತಿದ್ದು. ಸದರಿ ಆರೋಪಿತನ ಹತ್ತಿರ ದೊರೆತ ಮುದ್ದೇಮಾಲನ್ನು ಜಪ್ತಿ ಪಡಿಸಿಕೊಂಡು ಪ್ರತ್ಯೇಕವಾಗಿ ಪಂಚನಾಮೆಯನ್ನು ಬರೆದುಕೊಂಡಿದ್ದು ಇರುತ್ತದೆ. ಸದರಿ ಮಟಕಾ ಪಟ್ಟಿಯನ್ನು ಬಕ್ಕಿಯಾದ ಕಾಸಿಂಅಲಿ ತಂದೆ ಬುಡನ್ ಸಾಬ ಸಾ: ಗುಂಡಮ್ಮ ಕ್ಯಾಂಪ್  ಗಂಗಾವತಿ ಇವನಿಗೆ ಕೊಡುವುದಾಗಿ ತಿಳಿದ್ದು ಕಾರಣ ಸದರಿಯವರ ಮೇಲೆ ಕಲಂ 78 (3) ಕೆ.ಪಿ.ಆ್ಯಕ್ಟ್ ಅಡಿಯಲ್ಲಿ ಕ್ರಮ ಜರುಗಿಸುವಂತೆ ನೀಡಿದ ವರದಿ ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 294/2017 ಕಲಂ 78 (3) ಕೆ.ಪಿ.ಆ್ಯಕ್ಟ್ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.   
7] ಕೂಕನೂರು ಪೊಲೀಸ್  ಠಾಣೆ  ಗುನ್ನೆ ನಂ. : 172/2017 ಕಲಂ: 87 ಕೆ.ಪಿ.ಅಕ್ಟ್.
ದಿನಾಂಕ: 23-11-2017 ರಂದು ಸಾಯಂಕಾಲ 5:30 ಗಂಟೆ ಸುಮಾರಿಗೆ ಆರೋಪಿತರು ತಳಬಾಳ ಗ್ರಾಮದ ಭೀಮಲಿಂಗೇಶ್ವರ ದೇವಸ್ಥಾನದ ಹಿಂದುಗಡೆ  ಸಾರ್ವಜನಿಕ ಸ್ಥಳದಲ್ಲಿ 04 ಜನ ಆರೋಪಿತರು ಕುಳಿತುಕೊಂಡು ಪಣಕ್ಕೆ ಹಣ ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎಂಬ ಜೂಜಾಟದಲ್ಲಿ ತೊಡಗಿದ್ದಾಗ ಪಿಎಸ್ಐ ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ದಾಳಿ ಮಾಡಿ ಸದರಿ ಆರೋಪಿತರಿಂದ ಇಸ್ಪೇಟ್ ಜೂಜಾಟದ ನಗದು ಹಣ 1100=00 ರೂ. ಒಂದು ಪ್ಲಾಸ್ಟಿಕ್ ಬರಕಾ  ಮತ್ತು 52 ಇಸ್ಪೀಟ್ ಎಲೆಗಳು ಇವೆಲ್ಲವೂಗಳನ್ನು ಜಪ್ತ ಪಡಿಸಿಕೊಂಡು ಈ ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದು ಆರೋಪಿತರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಪಿಎಸ್ಐ ರವರು ವರದಿ ನೀಡಿದ್ದು ಸದರಿ ವರದಿಯಲ್ಲಿದ್ದ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲು ಮಾನ್ಯ ನ್ಯಾಯಾಲಯದ  ಅನುಮತಿಗಾಗಿ ಯಾದಿಯೊಂದಿಗೆ ವಿನಂತಿಸಿಕೊಂಡಿದ್ದು, ಇರುತ್ತದೆ, ನಂತರ ಇಂದು ದಿನಾಂಕ: 24-11-2017 ರಂದು ಸಾಯಂಕಾಲ 4:00 ಗಂಟೆಗೆ ಪಿ.ಸಿ.378 ರವರು ನ್ಯಾಯಾಲಯದಿಂದ ಅನುಮತಿಯ ಪತ್ರವನ್ನು ತಂದು ಹಾಜರಪಡಿಸಿದ್ದು ಸದರ ಪರವಾನಿಗೆ ಆದೇಶದ ಮೇರೆಗೆ ಠಾಣಾ ಗುನ್ನೆ ನಂ: 172/2017 ಕಲಂ: 87 ಕೆ.ಪಿ.ಅಕ್ಟ್ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008