1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 314/2017
ಕಲಂ. 32, 34 ಕೆ.ಇ. ಯಾಕ್ಟ
ದಿನಾಂಕ:
25-11-2017 ರಂದು ಸಂಜೆ 6-00 ಗಂಟೆಗೆ ಶ್ರೀ ವಿಶ್ವನಾಥ
ಹಿರೇಗೌಡ್ರ ಪಿ.ಎಸ್.ಐ. ಕುಷ್ಠಗಿ ಪೊಲೀಸ ರವರಿಗೆ ಚಳಗೇರಿ ಕ್ರಾಸ್ ಹತ್ತಿರ ಇರುವ ಚಾಲುಕ್ಯ
ಡಾಬಾದ ಹತ್ತಿರ ಅನಧಿಕೃತವಾಗಿ ಯಾವುದೇ ಲೈಸನ್ಸ ವಗೈರಾ ಹೊಂದಿರದೇ ಮದ್ಯ ಮಾರಾಟ ಮಾಡುತ್ತಿದ್ದಾರೆ
ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಹೋಗಿ ರೇಡ್ ಮಾಡಿ ಒಬ್ಬ ವ್ಯಕ್ತಿಯನ್ನು
ಹಾಗೂ ಅವನಿಂದ
ದೊರೆತ 180 ಎಂ.ಎಲ್. ನ ಒಟ್ಟು
36 ಒಲ್ಡ ಟವರನ್ ಮದ್ಯದ ಟೆಟ್ರಾಪ್ಯಾಕ್ ಅಂ.ಕಿ. 2468=16 ರೂ, ಮತ್ತು ನಗದು ಹಣ 345=00 ರೂ.
ಗಳನ್ನು ಜಪ್ತು ಮಾಡಿಕೊಂಡು ಆರೋಪಿ ವಿರೇಶ ತಂದೆ ಬಸನಗೌಡ ಮಾಲಿಪಾಟೀಲ್, ವಯಾ 29 ವರ್ಷ, ಜಾತಿ: ಲಿಂಗಾಯತ,
ಉ: ಮ್ಯಾನೇಜರ, ಸಾ: ಚಳಗೇರಿ ಇತನನ್ನು ವಶಕ್ಕೆ
ತೆಗೆದುಕೊಂಡು ಬಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 313/2017
ಕಲಂ.
379 ಐ.ಪಿ.ಸಿ.
ದಿನಾಂಕ:
25-11-017 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾದಿದಾರರಾದ ಅಜೀತ್ ತಂದೆ ಸಿದ್ದನಗೌಡ ಪಾಟೀಲ ವಯಾ:
41 ವರ್ಷ ಜಾತಿ: ಹಿಂದೂ ಗಾಣಿಗೇರ ಉ: Enerfra ಕಂಪನಿಯಲ್ಲಿ ಲ್ಯಾಂಡ್ ಲೈಜನಿಂಗ್ ಸಾ: ಅತರಗಾ ತಾ:
ಇಂಡಿ ಜಿ: ವಿಜಯಪೂರ ಹಾ:ವ: ಬಿ.ಬಿ ನಗರ ಕುಷ್ಟಗಿ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಫಿರ್ಯಾದಿಯನ್ನು
ಸಲ್ಲಿಸಿದ್ದು ಸಾರಾಂಶವೆನೆಂದರೆ ಫಿರ್ಯಾದಿದಾರರು ತಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಸಂಜೀವಕುಮಾರ ಇವರ
ಮೊ.ಸೈ ನೇದ್ದನ್ನು ತಾನು ಉಪಯೋಗಿಸುವ ಸಲುವಾಗಿ ಈಗ್ಗೆ 2 ವರ್ಷಗಳಿಂದ ಇಟ್ಟುಕೊಂಡಿದ್ದು ಸದರಿ ಹಿರೊ
ಹೊಂಡಾ ಸ್ಲ್ಪೇಂಡರ್ ಪ್ಲಸ್ ಕಪ್ಪು ಬಣ್ಣದ ಮೊ.ಸೈ ನಂ: ಕೆ.ಎ-28/ಎಸ್-8506 ನೇದ್ದರ
ಇಂಜಿನ್ ನಂ: HA10EA89H62815 ಮತ್ತು ಚೆಸ್ಸಿ ನಂ: MBLHA10EE89H47434 ನೇದ್ದನ್ನು ತಾವು ಇರುವ
ಬಸವರಾಜ ರಾಕಿ ಇವರ ಮನೆಯ ಮುಂದೆ ನಿಲ್ಲಿಸಿದ್ದನ್ನು ದಿನಾಂಕ: 25-08-2017 ರಂದು ರಾತ್ರಿ 10-00
ಗಂಟೆಯಿಂದ ದಿನಾಂಕ: 26-08-2017 ರಂದು ಬೆಳಗಿನ 6-00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ
ಮಾಡಿಕೊಂಡು ಹೋಗಿದ್ದು ಸದರಿ ಮೊ.ಸೈ ನ್ನು ಇಲ್ಲಿಯವರೆಗೆ ಅಲ್ಲಲ್ಲಿ ಹುಡುಕಾಡಿ ಈಗ ತಡವಾಗಿ ಬಂದು
ಫಿರ್ಯಾದಿ ನೀಡಿರುತ್ತೇನೆ ಅಂತಾ ಮುಂತಾಗಿ ನೀಡಿದ
ಫಿರ್ಯಾದಿಯ ಸಾರಾಂಶದ ಮೇಲಿಂದ
ಪ್ರಕರಣ ದಾಖಲು ಮಾಡಿಕೊಂಡು ತನಿಖೆ
ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 18/2017
ಕಲಂ: 174 ಸಿ.ಆರ್.ಪಿ.ಸಿ.
ದಿನಾಂಕ:
25-11-2017 ರಂದು ಬೆಳಗ್ಗೆ 08-00 ಗಂಟೆಗೆ ಫಿರ್ಯಾದಿದಾರರಾದ ವಿರೇಶ ಕೊಪ್ಪಳ ರವರು ನೀಡಿದ
ದೂರಿನ ಸಾರಾಂಶವೇನೆಂದರೆ, ದಿನಾಂಕ: 24-11-2017 ರಂದು ಮುಂಜಾನೆ 10-00 ಗಂಟೆಯಿಂದ ಮಧ್ಯಾಹ್ನ
03-00 ಗಂಟೆಯ ನಡುವಿನ ಅವಧಿಲ್ಲಿ ಕೊಪ್ಪಳ ನಗರದ ಕಿನ್ನಾಳ ರಸ್ತೆಯ ಚೆನ್ನಬಸವೇಶ್ವರ ನಗರದ
ಲಕ್ಷ್ಮೀ ಗುಡಿ ಹತ್ತಿರ ಇರುವ ಬಾವಿಯಲ್ಲಿ ನನ್ನ ಮಗನಾದ ಅನೀಲಕುಮಾರ ತಂದೆ ವಿರೇಶ ಕೊಪ್ಪಳ ವ: 10
ವರ್ಷ ಈತನ ಬಾವಿಯ ದಂಡೆಯ ಮೇಲೆ ಪೀಪಿ ಬಿದ್ದದ್ದನ್ನು ತೆಗೆದುಕೊಳ್ಳಲು ಹೋಗಿ ಆಕಸ್ಮಿಕವಾಗಿ ಬಾವಿಯಲ್ಲಿ
ಬಿದ್ದು ನೀರು ಕುಡಿದು ಮೃತಪಟ್ಟಿದ್ದು, ಈತನ ಸಾವಿನಲ್ಲಿ ಯಾವುದೇ ಸಂಶಯ ಇರುವುದಿಲ್ಲ.. ಇದೊಂದು ಆಕಸ್ಮಿಕವಾದ
ಘಟನೆಯಾಗಿದ್ದು, ಅಂತಾ ವಗೈರೆ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕೊಪ್ಪಳ ನಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 19/2017
ಕಲಂ: 174 ಸಿ.ಆರ್.ಪಿ.ಸಿ.
ದಿನಾಂಕ:
25-11-2017 ರಂದು ಬೆಳಗ್ಗೆ 09-15 ಗಂಟೆಗೆ ಫಿರ್ಯಾದಿದಾರರಾದ ವಿರುಪಾಕ್ಷಯ್ಯ ಹಿರೇಮಠ ರವರು ನೀಡಿದ
ದೂರಿನ ಸಾರಾಂಶವೇನೆಂದರೆ, ದಿನಾಂಕ: 24-11-2017 ರಂದು ಮುಂಜಾನೆ 11-15 ಗಂಟೆ ಸುಮಾರಿಗೆ ಕಿನ್ನಾಳ
ರಸ್ತೆ ಪ್ರಗತಿ ನಗರದಲ್ಲಿರುವ ಮನೆಯಲ್ಲಿ ಫಿರ್ಯಾದಿದಾರರಾಧ ಮಗಳಾದ ವಿನುತಾ ವ:24 ವರ್ಷ ಇವಳು ಜೀವನದಲ್ಲಿ
ಜಿಗುಪ್ಸೆಗೊಂಡು ಮನೆಯ ರೂಮಿನಲ್ಲಿ ವೇಲಿನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಲು ಪ್ರಯತ್ನಿಸಿದ್ದು,
ಕೂಡಲೇ ನೋಡಿದ ಅವಳ ತಾಯಿ ಹಾಗೂ ಇತರರು ಕೂಡಿಕೊಂಡು ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿದ್ದು ನಂತರ
ದಿನಾಂಕ: 25-11-2017 ರಂದು ರಾತ್ರಿ 02-30 ಗಂಟೆಗೆ ಚಿಕತ್ಸೆ ಫಲೀಸದೇ ಮೃತಪಟ್ಟಿದ್ದು ಅವಳ ಸಾವಿನಲ್ಲಿ
ಯಾವುದೇ ಸಂಶಯ ಇರುವುದಿಲ್ಲ. ಮುಂದಿನ ಕ್ರಮ ಕೈಗೊಳ್ಳಿ ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ
ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment