Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, November 29, 2017

1]  ಕೊಪ್ಪಳ ನಗರ ಪೊಲೀಸ್  ಠಾಣೆ  ಗುನ್ನೆ ನಂ: 178/2017 ಕಲಂ 392 ಐಪಿಸಿ.
ದಿನಾಂಕ: 28-11-2017 ರಂದು ಸಾಯಂಕಾಲ 5-15 ಗಂಟೆಗೆ ಫಿರ್ಯಾದಿದಾರರಾದ ತಾಯಶ್ರೀ ಜೆ ಉ: ನಿಲಯ ಮೇಲ್ವಿಚಾರಕರು(ಸೂಪರಿಡೆಂಟ್) ಡಿ. ದೆವರಾಜ ಅರಸು ಮೇಟ್ರಿಕ್ ನಂತರ ಬಾಲಕೀಯರ ವಸತಿ ನಿಲಯ(ಬಿ) ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಶವೇನೆಂದರೆ, ಭಾರತಿ ತಂದೆ ಅಂದಪ್ಪ ಬಡಿಗೇರ ವಯಾ: 17 ವರ್ಷ ಜಾ: ಬಡಿಗೇರ ಉ: ವಿದ್ಯಾಥರ್ಿ ಸಾ: ಮತ್ತೂರ ಈಕೆಯು ನಮ್ಮ ವಸತಿ ನಿಲಯದಲ್ಲಿ ಇದ್ದು ಈಕೆಯು ಸರಕಾರಿ ಬಾಲಕಿಯರ ಕಾಲೇಜನಲ್ಲಿ ಪ್ರಥಮ ಪಿ.ಯು.ಸಿ ಓದಿಕೊಂಡು ಇರುತ್ತಾಳೆ. ಈಕೆಯು ದಿನಾಲೂ ನಮ್ಮ ಹಾಸ್ಟೇಲ್ನಿಂದ ಕಾಲೇಜ್ಗೆ ನಡೆದುಕೊಂಡು ಹೋಗುತ್ತಿದ್ದಳು. ದಿನಾಂಕ: 28-11-2017 ರಂದು ಮುಂಜಾನೆ 10-30 ಗಂಟೆಯ ಸುಮಾರಿಗೆ ನಾನು ಹಾಸ್ಟೇಲ್ನಲ್ಲಿದ್ದಾಗ ಕುಮಾರಿ ಭಾರತಿಯು ಅಳುತ್ತಾ ನನ್ನ ಹತ್ತಿರ ಬಂದು ಹೇಳಿದ್ದೇನೆಂದರೆ, ತಾನು ಇಂದು ಮುಂಜಾನೆ 7-00 ಗಂಟೆಗೆ ಕಾಲೇಜ್ಗೆ ಹೋಗಿದ್ದು, ನಂತರ ನನಗೆ ಮೈಯಲ್ಲಿ ಆರಾಮ ಇಲ್ಲದಿರುವುದರಿಂದ ಮುಂಜಾನೆ 9-30 ಗಂಟೆಯ ಸುಮಾರಿಗೆ ನಾನು ಕಾಲೇಜಿನಿಂದ ಹಾಸ್ಟೇಲ್ಗೆ ನಂಧಿ ನಗರ, ಗವಿಶ್ರೀ ನಗರದ ಮುಖಾಂತರ ನಮ್ಮ ಹಾಸ್ಟೇಲ್ಗೆ ಬರುತ್ತಿದ್ದಾಗ ಹೊಸದಾಗಿ ನಿರ್ಮಿಸಿರುವ ಡಾಲರ್ಸ್ ಕಾಲೋನಿ ಆಕಡೆ ಸೂರ್ಯ ಕಾಂತಿ ಬೆಳೆದಿರುವ ಹೊಲದ ಹತ್ತಿರ ಸುಮಾರು 10-00 ಗಂಟೆಯ ಸುಮಾರಿಗೆ ನಡೆದುಕೊಂಡು ಬರುತ್ತಿದ್ದಾಗ, ಹಿಂದಿನಿಂದ ಒಂದು ಪ್ಲಾಟೀನಾ ದ್ವಿ-ಚಕ್ರ ವಾಹನದಲ್ಲಿ ಇಬ್ಬರು ಅಪರಿಚಿತರು ಬಂದು ನನ್ನ ಹತ್ತಿರ ಮೋಟಾರ ಸೈಕಲ್ ನಿಲ್ಲಿಸಿ ನನಗೆ ಒಂದು ಹಾಳಿ ಕೊಡು ಪೋನ್ ನಂಬರ ಬರೆದುಕೊಳ್ಳಬೇಕು ಅಂತಾ ಹೇಳಿದರು, ಆಗ ನಾನು ಅವರಿಗೆ ನನ್ನ ನೋಟ ಬುಕ್ನ್ನು ಕೊಟ್ಟೇನು. ಆಗ ಅವರಲ್ಲಿ ಹಿಂದೆ ಕುಳಿತವನು ನೋಟ ಬುಕ್ ತೆಗೆದುಕೊಂಡು ಏನೋ ಬರೆಯುತ್ತಿದ್ದನು, ಆಗ ಮುಂದೆ ಕುಳಿತವನು ನನ್ನ ಕೊರಳಿಗೆ ಕೈ ಹಾಕಿ ನನ್ನ ಕೊರಳಲ್ಲಿದ್ದ ರೋಡ್ ಗೋಲ್ಡ್ ಸರವನ್ನು ಬಲವಂತವಾಗಿ ಕಿತ್ತುಕೊಳ್ಳಲು ಮುಂದಾದನು ಆಗ ನಾನು ಆತನಿಂದ ನಾನು ಬಿಡಿಸಿಕೊಳ್ಳಲು ಯತ್ನಿಸಿದೆನು. ಆಗ ಮುಂದೆ ಕುಳಿತಿರುವನು ನನ್ನ ಕೊರಳಲ್ಲಿದ್ದ ಸರವನ್ನು ಬಲವಂತವಾಗಿ ಕಿತ್ತುಕೊಂಡನು ಆಗ ನನ್ನ ಕೊರಳಿಗೆ ತೆರೆಚಿದ ಗಾಯವಾಗಿದ್ದು ಇರುತ್ತದೆ. ಆಗ ಹಿಂದೆ ಕುಳಿತಿದ್ದವನು ನನ್ನ ನೋಟ್ ಬುಕ್ನ್ನು ಬೀಸಾಕಿ ನನ್ನ ಮುಂದುಗಡೆಯಿಂದ ಹೋದನು. ಅಂತಾ ಹೇಳಿದಳು. ಆಗ ನಾನು ಭಾರತಿಗೆ ಆ ವ್ಯಕ್ತಿಗಳು ಯಾರು ಮತ್ತು ಹೇಗಿದ್ದರು ಅಂತಾ ಕೇಳಿದಾಗ ಆಕೆಯು ಅವರು ಯಾರೂ ಅಂತಾ ಗೋತ್ತಿಲ್ಲಾ ಆದರೆ ಹಿಂದೆ ಕುಳಿತಿದ್ದವನು ಈ ಹಿಂದೆ ನನಗೆ ಆಗಾಗ್ಗೆ ನಾವು ಕಾಲೇಜ್ಗೆ ಹೋಗಿ ಬರುವ ರಸ್ತೆಯಲ್ಲಿ ಚುಡಾಯಿಸುತ್ತಿದ್ದನು. ಅಂತಾ ಹೇಳಿದಳು. ಮೋಟಾರ ಸೈಕಲ್ನಲ್ಲಿ ಮುಂದೆ ಕುಳಿತವನು ಅಂದಾಜು 32 ವಯಸ್ಸು ಮತ್ತು ಹಿಂದೆ ಕುಳಿತಿದ್ದವನು ಅಂದಾಜು 25 ವಯಸ್ಸು ಇರಬಹುದು ಅಂತಾ ಹೇಳಿದಳು. ಕಾರಣ ಮಾನ್ಯರವರು ಕುಮಾರಿ ಭಾರತಿಯ ಕೊರಳಲ್ಲಿದ್ದ ರೋಲ್ಡ್ ಗೋಲ್ಡ್ ಸರ ಅಂ.ಕಿ.ರೂ 200=00 ಬೆಲೆ ಬಾಳುವುದನ್ನು ಬಲವಂತವಾಗಿ ಕಿತ್ತುಕೊಂಡು ಹೋದವರನ್ನು ಪತ್ತೇ ಮಾಡಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2]  ಕುಕನೂರ ಪೊಲೀಸ್  ಠಾಣೆ  ಗುನ್ನೆ ನಂ: 177/2017 ಕಲಂ. 78(3) Karnataka Police Act:.
ದಿನಾಂಕ:28-11-2017 ರಂದು ರಾತ್ರಿ 8-30 ಗಂಟೆಗೆ ತಳಕಲ್ ಗ್ರಾಮದಲ್ಲಿಯ ಅಂಬೇಡ್ಕರ್ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಮಾರ್ತಾಂಡಪ್ಪ ತಂದೆ ಫಕೀರಪ್ಪ ತಾಯಮ್ಮನವರ್, ವಯಾ 55 ವರ್ಷ, ಜಾ:ಮಾದಿಗ, ಸಾ:ತಳಕಲ್, 2] ಮುತ್ತಣ್ಣ ತಂದೆ ದುರುಗಪ್ಪ ವಡ್ಡರ, ವಯಾ 35 ವರ್ಷ, ಜಾ:ವಡ್ಡರ, ಉ:ಕೂಲಿ, ಸಾ:ವೀರಾಪೂರ, ಇವರು ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್.ಐ ಕೂಕನೂರ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು, ಸದರಿ ಆರೋಪಿತರಿಂದ 1500/-ರೂ, ನಗದು ಹಣ ಹಾಗೂ ಮಟಕಾ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಸದರಿ ಆರೋಪಿತರು ತಾವು ಬರೆದುಕೊಂಡ ಓ.ಸಿ. ಪಟ್ಟಿ & ಜೂಜಾಟದ ಹಣವನ್ನು ತಾವೇ ಇಟ್ಟುಕೊಳ್ಳುವ ಬಗ್ಗೆ ಒಪ್ಪಿಕೊಂಡಿದ್ದು ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3]  ಬೇವೂರು ಪೊಲೀಸ್  ಠಾಣೆ  ಗುನ್ನೆ ನಂ: 152/2017 ಕಲಂ. 279, 337, 338 ಐಪಿಸಿ
ದಿನಾಂಕ: 28-11-2017 ರಂದು  ಮಧ್ಯಾಹ್ನ 1:45 ಗಂಟೆ ಸುಮಾರಿಗೆ ಕೊಪ್ಪಳ-ಕುಷ್ಟಗಿ ರಸ್ತೆಯ ಮೇಲೆ ನೆಲಜೇರಿ ಸೀಮಾದಲ್ಲಿ ಶಿವಣ್ಣ ಡೊಳ್ಳಿನ ಇವರ ಹೊಲದ ಹತ್ತಿರ ಆರೋಪಿ ಶರಣಪ್ಪ ತಂದೆ ಬಾಲಪ್ಪ ಚೌಡಕಿ ಇತನು ಕಾರ ನಂ: ಏಂ-37/ಒ-8865 ನೇದ್ದನ್ನು ಕೊಪ್ಪಳ ಕಡೆಯಿಂದ ಕುಷ್ಟಗಿ ಕಡೆಗೆ ಅತೀ ಜೋರಾಗಿ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಮಗ್ಗಲು ಇರುವ ಬೇವಿನ ಗಿಡದ ಬಡ್ಡಿಗೆ ಜೋರಾಗಿ ಠಕ್ಕರ್ ಕೊಟ್ಟು ಅಪಘಾತಪಡಿಸಿದ್ದರಿಂದ ಸದರಿ ಆರೋಪಿತನಿಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4]  ಕಾರಟಗಿ ಪೊಲೀಸ್  ಠಾಣೆ  ಗುನ್ನೆ ನಂ: 178/2017 ಕಲಂ. 420  ಐಪಿಸಿ
ದಿನಾಂಕ 28-11-2017 ರಂದು ರಾತ್ರಿ 8-20 ಗಂಟೆಗೆ ಪಿರ್ಯಾದಿದಾರರಾದ N. ರಾಮಕೃಷ್ಣಾ ತಂದೆ ಪಾಪರಾವ್ ವಯಾ-40ವರ್ಷ ಜಾ.ಕಮ್ಮಾ ಉ-ಒಕ್ಕಲುತನ ಸಾ.ಹೊಸಜೂರಟಗಿ ಕ್ಯಾಂಪ್ ರವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸದ್ರಿ ದೂರಿನಲ್ಲಿ ನಾನು ನನ್ನ ವ್ಯವಹಾರದ ಸಲುವಾಗಿ ಕಳೆದ 5-6 ವರ್ಷಗಳ ಹಿಂದೆಯೆ ಮರ್ಲಾನಹಳ್ಳಿಯ Axis Bank ನಲ್ಲಿ A/c no 910010019121465 ಅಂತಾ ಖಾತೆಯನ್ನು ಹೊಂದಿದ್ದು ಇರುತ್ತದೆ ನಾನು ಖಾತೆಯನ್ನು ಹೊಂದಿದಾಗಿನಿಂದ ಇದೇ ಬ್ಯಾಂಕಿನಲ್ಲಿ ನನ್ನ ವ್ಯವಸಾಯದಿಂದ ಬರುವ ಆಧಾಯದ ವ್ಯವಹಾರವನ್ನು ಮಾಡುತ್ತಾ ಬಂದಿದ್ದು ಬ್ಯಾಂಕಿನಲ್ಲಿ ಲಕ್ಷಾನುಗಟ್ಟಲೆ ಹಣವನ್ನು ಸದ್ರಿ ನನ್ನ ಉಳಿತಾಯ ಖಾತೆಯಲ್ಲೆ ಬಿಟ್ಟಿರುತ್ತಿದ್ದೇನೆ. ಅದೇ ರೀತಿ ನನ್ನ ಖಾತೆಯಲ್ಲಿ ದಿನಾಂಕ :- 10-10-2017 ರಂದು ನನ್ನ ಖಾತೆಯಲ್ಲಿ ರೂ. 1,57,725=74 ಗಳು ಇದ್ದವು ತದ ನಂತರ ದಿನಾಂಕ :-11-10-2017 ರಂದು ಸದ್ರಿ ನನ್ನ ಖಾತೆಗೆ ನನ್ನ ಭತ್ತವನ್ನು ಶ್ರಿ ಸಿದ್ದಲಿಂಗೇಶ್ವರ ಕಾರ್ಪೂರೇಷನ್ ರವರಿಗೆ ಮಾರಾಟ ಮಾಡಿದ್ದ ರೂ. 2,00,000=00 ಗಳು ನನ್ನ ಖಾತೆಗೆ ಜಮಾ ಆಗಿತ್ತು ಆಗ ನನ್ನ ಖಾತೆಯಲ್ಲಿ ಒಟ್ಟು ರೂ. 3,57725=74 ಇರುವ ಬಗ್ಗೆ ಎಸ್.ಎಮ್.ಎಸ್ ಬಂದಿತ್ತು ನಂತರ ದಿನಾಂಕ :-23-10-2017 ರಂದು ನಾನು ರೂ.100000=00 ಡ್ರಾ ಮಾಡಿಕೊಂಡು ಬ್ಯಾಲೇನ್ಸ್ ಮಾಹಿತಿ ನನ್ನ ಮೋಬೈಲ್ ನಂಬರ್ 9731453080 ನೆದ್ದಕ್ಕೆ ನಾನು ಮನೆಗೆ ಬಂದ ನಂತರ ಎಸ್.ಎಮ್.ಎಸ್ ಬಂದಾಗ ನನ್ನ ಖಾತೆಯಲ್ಲಿ ಭಾಕಿ ಹಣ ರೂ. 1,06304=00 ಗಳು ಅಂತಾ ತೋರಿಸಿದ್ದರಿಂದ ನನ್ನ ಖಾತೆಯಲ್ಲಿ ಕಡಿಮೆ ಭಾಕಿ ತೋರಿಸಿದ್ದರಿಂದ ನನಗೆ ಗಾಬರಿಯಾಗಿ ನನ್ನ ಮಾವನಾದ ಗಣೇಶ ತಂದೆ ರಾಮರಾವ್ ರವರಿಗೆ ವಿಷಯ ತಿಳಿಸಿ ಅವತ್ತು ನಾನು ನಮ್ಮ ಮಾವ ಮರ್ಲಾನಹಳ್ಳಿ Axis Bank ಗೆ ನನ್ನ ಪಾಸ ಬುಕ್ ತೆಗೆದುಕೊಂಡು ಹೋಗಿ ಮ್ಯಾನೇಜರ್ ಗೆ ವಿಚಾರಿಸಿ ಪಾಸ್ ಬುಕ್ಕಿನಲ್ಲಿ ಎಂಟ್ರಿ ಮಾಡಿಸಿದಾಗ ನಮಗೆ ಗೊತ್ತಾಗಿದ್ದೆಂದರೆ ದಿನಾಂಕ-11-10-2017 ರಂದು ನಮ್ಮ ಭತ್ತದ ಹಣ ಜಮ ಆದ ನಂತರ ಅವತ್ತೆ ರೂ.1,50,017=70 ಗಳನ್ನು ಯಾವುದೋ ಅಪರಿಚಿತ ವ್ಯಕ್ತಿಯ ಬ್ಯಾಂಫ್ ಖಾತೆಯ ನಂ 36545017452 ಎಂಬ ಖಾತೆಗೆ ಮೋಬೈಲ್ ಬ್ಯಾಂಕಿಂಗ್ ಮೂಖಾಂತರ ವರ್ಗಾವಣೆಯಾಗಿರುವ ಬಗ್ಗೆ ಬ್ಯಾಂಫ್ ಮ್ಯಾನೇಜರ್ ತಿಳಿಸಿದರು. ನಾನು ನನ್ನ ಮೋಬೈಲ್ ನಲ್ಲಿ ಯಾವುದೇ ಇಂಟರ್ ನೆಟ್ ಬಳಕೆ ಮಾಡುವುದಿಲ್ಲಾ ಅಂತಾ ಹೇಳಿದರೆ ಬ್ಯಾಂಫ್ ಮ್ಯಾನೇಜರ್ ನಮಗೆ ಏನು ಗೊತ್ತಿಲ್ಲಾ ನಿಮ್ಮ ಖಾತೆಯಿಂದ 36545017452 ಖಾತೆಗೆ ಹಣ ವರ್ಗಾವಣೆಯಾಗಿರುತ್ತದೆ ಅಂತಾ ಇದು ಎಸ್.ಬಿ.ಐ ಬ್ಯಾಂಫ್ ಖಾತೆ ಇದೆ ನಾವು ನೋಡಿ ಆ ಮೇಲೆ ಹೇಳುತ್ತೇನೆ. ಅಂತಾ ತಿಳಿಸಿದರು. ನಾವು ಸದ್ರಿ ಮರ್ಲಾನಹಳ್ಳಿ Axis Bank ಗೆ ದಿನಾಂಕ-26-10-2017 ರಂದು ಮತ್ತು 31-10-2017 ರಂದು ಎರಡು ಸಲ ಕಂಪ್ಲೆಂಟ್ ಕೊಟ್ಟಿರುತ್ತೇನೆ. ಆದಾಗ್ಯೂ ಬ್ಯಾಂಕಿನವರು ವರ್ಗಾವಣೆಯಾಗಿರುವ ನನ್ನ ಹಣದ ಬಗ್ಗೆ ಯಾವುದೇ ಮಾಹಿತಿ ಕೊಡದೇ ಬೇಜವಬ್ದಾರಿ ರೀತಿಯಲ್ಲಿ ಮಾತನಾಡುತ್ತಿದ್ದರು ನಂತರ ನನಗೆ ಹೃದಯ ಖಾಯಿಲೆಗೆ ತುತ್ತಾಗಿದ್ದರಿಂದ ನಾನು ಚಿಕಿತ್ಸೆ ಕುರಿತು ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿಕೊಳ್ಳುವ ಸಲುವಾಗಿ ಬೆಂಗಳೂರಿಗೆ ಹೋಗಿದ್ದೆನೆ ನಂತರ ಚಿಕಿತ್ಸೆ ಮುಗಿದ ನಂತರ ನಾನು ಚಿಕಿತ್ಸೆ ಮುಗಿಸಿಕೊಂಡು ದಿನಾಂಕ-19-11-2017 ರಂದು ವಾಪಸ ನಮ್ಮೂರಿಗೆ ಬಂದೇನು. ನನಗೆ ಚಿಕಿತ್ಸೆ ಮಾಡಿಸಿಕೊಳ್ಳುವ ಸಲುವಾಗಿ ಹಣದ ಅವಶ್ಯವಾಗಿದ್ದರೂ ಕೂಡಾ ಬ್ಯಾಂಕಿನವರು ಇವತ್ತು ನಾಳೆ ಅಂತಾ ಕಾಲ ಮುಂದುಡುತ್ತಾ ಬಂದಿದ್ದು ಇವತ್ತಿನ ವರೆಗೂ ನನ್ನ ಹಣದ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲಾ ನನಗೆ ಅನಾರೋಗ್ಯವಾಗಿದ್ದರಿಂದ ಚಿಕಿತ್ಸೆ ಮಾಡಿಸಿಕೊಂಡು ಬ್ಯಾಂಕಿನಲ್ಲಿ ವಿಚಾರಿಸಿ ಇವತ್ತು ಠಾಣೆಗೆ ಬಂದು ದೂರು ಕೊಟ್ಟಿರುತ್ತೇನೆ. ಕಾರಣ ನನ್ನ A/c no 910010019121465 ರಲ್ಲಿಯ ರೂ. 150017=70ಗಳನ್ನು ನನಗೆ ಯಾವುದೇ ಮಾಹಿತಿ ಇಲ್ಲದೇ ಮೋಬೈಲ್ ಮೂಖಾಂತರ ಇಂಟರ್ನೆಟ್ ವರ್ಗಾವಣೆ ಮಾಡಿಕೊಂಡು ಮೊಸ ಮಾಡಿರುವ A/c no 36545017452 ನೇದ್ದರ ಅಪರಿಚಿತ ವ್ಯಕ್ತಿಯನ್ನು ಪತ್ತೆ ಮಾಡಿ ಆತನ ಮೇಲೆ ಕಾನೂನು ಕ್ರಮ ಜರುಗಿಸಿ ನನ್ನ ಹಣವನ್ನು ವಾಪಾಸ ಕೊಡಿಸಲು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಅಂತಾ ಮುಂತಾಗಿದ್ದ ಫಿರ್ಯಾದಿ ಮೇಲಿಂದ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008