1] ಗಂಗಾವತಿ
ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ
ನಂ: 359 /2017 ಕಲಂ : 379, ಐ.ಪಿ.ಸಿ.
ದಿನಾಂಕ: 05-12-2017 ರಂದು
ಮದ್ಯಾಹ್ನ 12:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ
ಸತ್ಯನಾರಾಯಣ ತಂದೆ ಕೆ. ವೆಂಕಟಸ್ವಾಮಿ ವಯಸ್ಸು 59, ಜಾ. ಶೆಟ್ಟಿ ಬಣಜಿಗ ಉ. ಒಕ್ಕಲುತನ ಸಾ. ಸಂಗಾಪುರ.
ತಾ. ಗಂಗಾವತಿ.ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆ, ಫಿರ್ಯಾದಿದಾರರು ಸಂಗಾಪುರ ಸೀಮಾ ರಾಮಬಾಬು
ಇವರ ಭೂಮಿಯನ್ನು ಗುತ್ತಿಗೆ ಪಡೆದುಕೊಂಡು ಸದರ ಭೂಮಿಯಲ್ಲಿ ಕೃಷಿ ಮತ್ತು ಹೈನುಗಾರಿಕೆ ಮಾಡಿದ್ದು ಹೈನುಗಾರಿಕೆಗಾಗಿ
ಭೂಮಿಯಲ್ಲಿ ಒಂದು ಹಂಚಿನ ಶಡ್ಡಿನಲ್ಲಿ 4 ಜರ್ಸಿ ಆಕಳು ಕಟ್ಟಿದ್ದು ಇರುತ್ತದೆ. ದಿನಾಂಕ.
03-12-2017 ರಂದು ರಾತ್ರಿ 09-00 ಗಂಟೆ ಸುಮಾರಿಗೆ ಹಂಚಿನ ಶಡ್ಡಿನಲ್ಲಿ 4 ಜರ್ಸಿ ಆಕಳು ಕಟ್ಟಿ ಮನೆಗೆ
ಹೋಗಿದ್ದು ದಿನಾಂಕ. 04-12-2017 ರಂದು ಬೆಳಿಗ್ಗೆ 04-30 ಗಂಟೆಗೆ ಹಾಲು ಹಿಂಡಲು ಹೊಲದಲ್ಲಿರುವ ಶಡ್ಡಿನಲ್ಲಿ
ಹೋಗಿ ನೋಡಲು ರಾತ್ರಿ ವೇಳೆ ಸುಮಾರು 1,24,0000=00 ರೂ. ಬೆಲೆ ಬಾಳುವ 4 ಜರ್ಸಿ ಆಕಳುಗಳು ಯಾರೋ ಕಳ್ಳರು
ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನವಾದ 4 ಜರ್ಸಿ ಆಕಳು ಹುಡುಕಾಡಿ ತಡವಾಗಿ ಬಂದು ಫಿರ್ಯಾದಿ
ನೀಡಿರುತ್ತೆನೆ ಅಂತಾ ಮುಂತಾಗಿದ್ದ ಲಿಖಿತ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ
ಪೊಲೀಸ್ ಠಾಣೆ ಗುನ್ನೆ ನಂ: 262/2017. ಕಲಂ: 279,338 ಐ.ಪಿ.ಸಿ.
ದಿ: 05-12-2017 ರಂದು ಸಂಜೆ
5-15 ಗಂಟೆಗೆ ಜಿಲ್ಲಾ ಆಸ್ಪತ್ರೆಯಿಂದ ವಾಹನ ಅಪಘಾತದಲ್ಲಿ ಗಾಯಗೊಂಡವರು ಚಿಕಿತ್ಸೆಗೆ ದಾಖಲಾದ ಬಗ್ಗೆ
ಎಂ,ಎಲ್,ಸಿ ವಸೂಲಾಗಿದ್ದು, ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಹನ್ಮಂತ ಬೀಡನಾಳ. ಇವರ ಆರೈಕೆಯಲ್ಲಿದ್ದ
ಗವಿಸಿದ್ದಪ್ಪ ಬೇಳೂರ. ಸಾ:ಕೊಪ್ಪಳ. ಇವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ,
ದಿ:05-12-2017 ರಂದು ಸಂಜೆ 4-00 ಗಂಟೆಗೆ ಗಾಯಾಳು ಹನುಮಂತ ಇವರು ತಮ್ಮ ಮೋಟಾರ ಸೈಕಲ್ ನಂ: ಕೆಎ-22/ಎಕ್ಸ-4704
ನೇದ್ದನ್ನು ಓಡಿಸಿಕೊಂಡು ಕೊಪ್ಪಳದ ಕಡೆಯಿಂದ ಗಿಣಿಗೇರಿ ಕಡೆಗೆ ಅಂತಾ ಕೊಪ್ಪಳ-ಹೊಸಪೇಟೆ ಎನ್.ಹೆಚ್-63
ರಸ್ತೆಯ ಬಸಾಪೂರ ಸಮೀಪದಲ್ಲಿ ಓಡಿಸಿಕೊಂಡು ಹೋಗುವಾಗ ಅದೇ ಸಮಯಕ್ಕೆ ಗಿಣಿಗೇರಿ ಕಡೆಯಿಂದ ಟಿಪ್ಪರ ನಂ;
ಕೆಎ:-37/ಎ-6194 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ
ಅಪಾಯವಾಗುವಂತೆ ಚಲಾಯಿಸುತ್ತಾ ಬಂದವನೇ ಹನ್ಮಂತ ಇವರ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ
ಮೋಟಾರ ಸೈಕಲ್ ಸವಾರ ಹನ್ಮಂತ ಇವರ ಬಲಕಾಲ ಮೊಣಕಾಲ ಗೆ ಭಾರಿ ರಕ್ತಗಾಯ ಹಾಗೂ ಗದ್ದಕ್ಕೆ, ಎರಡೂ ಕಾಲುಗಳ
ಹೆಬ್ಬೆರಳಿಗೆ ತೆರೆಚಿದ ರಕ್ತಗಾಯವಾಗಿದ್ದು ಇರುತ್ತದೆ. ಕಾರಣ ಅಪಘಾತ ಮಾಡಿದ ಟಿಪ್ಪರ ಚಾಲಕ ಓಂಕಾರಪ್ಪ
ಸಾ: ವಿನೋಬನಗರ ತಾ: ಗಂಗಾವತಿ ಹಾವ: ಹೊಸಪೇಟೆ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ
ಅಂತಾ ಮುಂತಾಗಿ ನೀಡಿದ ಸಾರಾಂಶದ ಮೇಲಿಂದ ಪ್ರಕರಣ
ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 168/2017 ಕಲಂ 32, 34 ಕೆ.ಇ.ಆಕ್ಟ
ದಿನಾಂಕ :05-12-2017 ರಂದು
ಸಾಯಂಕಾಲ 6-30 ಗಂಟೆ ಸುಮಾರಿಗೆ ಆರೋಪಿತನು ಮುಧೋಳ ಗ್ರಾಮದ ಕರಮೂಡಿ ಕ್ರಾಸದ ಸಾರ್ವಜನಿಕ ಸ್ಥಳದಲ್ಲಿ
ಮಧ್ಯಸಾರ ಮಾರಾಟ ಮಾಡಲು ಯಾವುದೇ ಪರವಾನಿಗೆ ಪಡೆದುಕೊಳ್ಳದೆ ಅನಧೀಕೃತವಾಗಿ ಮಧ್ಯಸಾರದ ಟ್ರೇಟ್ರಾ ಪಾಕೀಟಗಳನ್ನು
ಜನರಿಗೆ ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ ಯಲಬುರ್ಗಾ ರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ
ಮಾಡಿ ಆರೋಪಿತನಿಂದ 1] 90 ML ನ HAYWARDS CHEERS WHISKY -ಒಟ್ಟು 40 (ನಲವತ್ತು] ಟೇಟ್ರಾ ಪಾಕೀಟಗಳು.
ಪ್ರತಿಯೊಂದಕ್ಕೆ -28.13 ರೂ. ಗಳಂತೆ ಒಟ್ಟು 1125/- ರೂ. 2] ಒಂದು ಪ್ಲಾಸ್ಟಿಕ್ ಚೀಲ ಅ.ಕಿ.ಇಲ್ಲ
3] ಮಧ್ಯಾಸಾರ ಮಾರಾಟದಿಂದ ಬಂದ ನಗದು ಹಣ : 230/- ರೂಗಳು. ಹೀಗೆ ಎಲ್ಲಾ ಸೇರಿ ಒಟ್ಟು 1355/- ರೂ ಸಿಕ್ಕಿದ್ದು ಇರುತ್ತದೆ. ಆರೋಪಿತನ ಮೇಲೆ ಕಾನೂನು
ಕ್ರಮ ಜರುಗಿಸಲು ನೀಡಿದ ವರದಿಯ ಸಾರಾಂಶದ ಮೆಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 156/2017 ಕಲಂ:323, 326,
504, 506, ಐಪಿಸಿ
ದಿನಾಂಕ:05-12-2017 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದಿದಾರರಾದ
ಶ್ರೀ ಶರಣಪ್ಪ ತಂದೆ ಗುರಪ್ಪ ಕಾಡನ್ನವರ ಸಾ:ಕೆ.ಹೊಸೂರು ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕರಣ
ಪಿರ್ಯಾದಿಯ ಸಾರಾಂಶವೆನೆಂದರೆ ಪಿರ್ಯಾದಿದಾರರು ಇಂದು ಬೆಳಿಗ್ಗೆ 10-00 ಗಂಟೆಯ ಸುಮಾರು ತಮ್ಮ ಗ್ರಾಮದ
ಮರಿಯಪ್ಪರವರ ಹೋಟೆಲ ಹತ್ತಿರ ಇದ್ದಾಗ ಆರೋಪಿತನು ಹಣದ ವಿಚಾರವಾಗಿ ಪಿರ್ಯಾದಾರರೊಂದಿಗೆ ಜಗಳ ತೆಗೆದು
ಅವಾಚ್ಯವಾಗಿ ಬೈದು , ಜಿವದ ಬೆದರಿಕೆನ್ನು ಹಾಕಿ ಕೈಯಲ್ಲಿ ತಂದಿದ್ದ ಕಬ್ಬಿಣದ ಸಲಿಕೆ ಕಾವಿನಿಂದ ಪಿರ್ಯಾದಿ
ಎಡಗೈ ಮೋಣಕೈ ಕೆಳಗೆ ಮೂಳೆ ಮುರಿಯುವಂತೆ ಹೊಡಿದು ಭಾರಿ ಗಾಯಪೆಟ್ಟು ಮಾಡಿದ್ದು ಅಲ್ಲದೇ ಕೈಯಿಂದ ಹೊಡಿಬಡಿ
ಮಾಡಿದ್ದು ಇರುತ್ತದೆ ಅಂತಾ ಪಿರ್ಯಾದಿ ವಗೈರೆ ಮೇಲಿಂದ ಪ್ರಕರಣ ದಾಖಲಿಸಿ ತನಿಕೆಯನ್ನು ಕೈಗೊಂಡಿದ್ದು
ಇರುತ್ತದೆ.
0 comments:
Post a Comment