1] ಕುಷ್ಟಗಿ
ಪೊಲೀಸ್ ಠಾಣೆ ಗುನ್ನೆ
ನಂ. 298/2017 ಕಲಂ.
379 ಐ.ಪಿ.ಸಿ.
ದಿನಾಂಕ: 31-10-2017 ರಂದು ಸಂಜೆ 06-45 ಗಂಟೆಗೆ ಪಿರ್ಯಾದಿದಾರರಾದ ಮಹೇಂದ್ರ ತಂದೆ
ಸಿದ್ದಪ್ಪ ಹಡಗಲಿ ವಯಾ: 34 ವರ್ಷ ಜಾತಿ: ಈಳಗೇರ ಉ: ಪೋಟೋ ಗ್ರಾಫರ್ ಸಾ: ಬಿ.ಬಿ ನಗರ ಕುಷ್ಟಗಿ ಇವರು
ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಫಿರ್ಯಾದಿಯನ್ನು ಸಲ್ಲಿಸಿದ್ದು ಸಾರಾಂಶವೆನೆಂದರೆ ಫಿರ್ಯಾದಿದಾರರು
ನಾನು ಈಗ್ಗೆ 4 ವರ್ಷಗಳ ಹಿಂದೆ ಒಂದು ಟಿ.ವ್ಹಿ.ಎಸ್. ಎಕ್ಷ. ಎಲ್. ಸೂಪರ ಹಸಿರು ಬಣ್ಣದ್ದು ಇದ್ದು
ಮೊ.ಸೈ ನಂ: ಕೆ.ಎ-37/ಡಬ್ಯೂ-5471 ನೇದ್ದನ್ನು ಖರೀದಿ ಮಾಡಿದ್ದು, ಸದರಿ ಮೋ.ಸೈನ್ನು ನಾನು ನಮ್ಮದು
ಉಮಾ ಪೋಟೋ ಸ್ಟುಡಿಯೋ ಅಂತಾ ಬಸ್ ಸ್ಟ್ಯಾಂಡ ಎದುರುಗಡೆ ಇದ್ದು ನಾನು ದಿನಾಲು ನನ್ನ ಮೋಟಾರ ಸೈಕಲನ್ನು
ತೆಗೆದುಕೊಂಡು ಬೆಳಿಗ್ಗೆ 09-00 ಗಂಟೆಗೆ ಪೋಟೋ ಸ್ಟುಡಿಯೋಕ್ಕೆ ಹೋಗಿ ನಂತರ ರಾತ್ರಿ 09-00 ಗಂಟೆಯ
ವರೆಗೆ ಸ್ಟುಡಿಯೋದಲ್ಲಿ ಕೆಲಸ ಮಾಡಿ ವಾಪಸ ಮನೆಗೆ ಬರುತ್ತಿದ್ದೇನೆ. ದಿನಾಂಕ:13-08-2017
ರಂದು ಬೆಳಿಗ್ಗೆ 09-00 ಗಂಟೆಗೆಯ ಸುಮಾರಿಗೆ ಪೋಟೋ ಸ್ಟುಡಿಯೋಕ್ಕೆ ಹೋಗಿ ರಾತ್ರಿ 09-00 ಗಂಟೆಯವರೆಗೆ
ಕೆಲಸ ಮಾಡಿ ನಂತರ ಮನೆಗೆ ರಾತ್ರಿ 09-30 ಗಂಟೆಯ ಸುಮಾರಿಗೆ ಬಂದು ನಮ್ಮ ಮನೆಯ ಮುಂದೆ ನನ್ನ ಮೋಟಾರ
ಸೈಕಲನ್ನು ನಿಲ್ಲಿಸಿ ಹ್ಯಾಂಡಲ್ ಲಾಕ್ ಮಾಡಿದ್ದೇನೆ. ನಂತರ ರಾತ್ರಿ ಊಟ ಮಾಡಿಕೊಂಡು ಮನೆಯಲ್ಲಿ ರಾತ್ರಿ
11-00 ಗಂಟೆಯ ಸುಮಾರಿಗೆ ಮನೆಯ ಬಾಗೀಲು ಹಾಕುವಾಗ ನಮ್ಮ ಮೋಟಾರ ಸೈಕಲ್ ಮನೆಯ ಮುಂದೆ ಇತ್ತು ನಂತರ
ರಾತ್ರಿ ಮಲಗಿದ್ದಾಗ ಮರುದಿವಸ ದಿನಾಂಕ:14-08-2017 ರಂದು ಬೆಳಿಗ್ಗೆ 06-00 ಗಂಟೆಗೆ ಎದ್ದು
ಮನೆಯಿಂದ ಹೊರಗೆ ಬಂದು ನನ್ನ ಮೋಟಾರ ಸೈಕಲನ್ನು ನೋಡಲು ನನ್ನ ಮೋಟರ ಸೈಕಲನ್ನು ಯಾರೋ ಕಳ್ಳರು ಕಳ್ಳತನ
ಮಾಡಿಕೊಂಡು ಹೋಗಿದ್ದು ನಂತರ ನಾನು ಸದರಿ ನನ್ನ ಮೋ.ಸೈ ನ್ನು ಕುಷ್ಟಗಿಯ ಬಸ್ ನಿಲ್ದಾಣ, ಮಲ್ಲಯ್ಯ
ಸರ್ಕಲ್, ಮಾರುತಿ ಟಾಕೀಜ್, ಬಸವರಾಜ ಟಾಕೀಜ್ ಎಲ್ಲಾ ಕಡೆಗಳಲ್ಲಿ ಸುತ್ತಾ ಮುತ್ತಾ ಹಳ್ಳಿಗಳಲ್ಲಿ ಹುಡುಕಾಡಲಾಗಿ
ಇಲ್ಲಿಯವರೆಗೂ ಸಿಕ್ಕಿರುವದಿಲ್ಲ. ನನ್ನ ಟಿ.ವ್ಹಿ.ಎಸ್. ಎಕ್ಷ.ಎಲ್. ಸೂಪರ ಹಸಿರು ಬಣ್ಣದ್ದು ಮೊ.ಸೈ
ನಂ: ಕೆ.ಎ-37/ಡಬ್ಯೂ-5471 ಇದ್ದು ಸದರಿ ನನ್ನ ಮೋ.ಸೈ ನ ಅಂದಾಜು ಕಿಮ್ಮತ್ತು 8,000=00 ರೂ:ಗಳಷ್ಟು
ಆಗಬಹುದು. ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ
ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 245/2017. ಕಲಂ: 279, 338, 304 [ಎ] ಐಪಿಸಿ,
ದಿ:31-10-2017 ರಂದು
ಸಂಜೆ 4-00 ಗಂಟೆಗೆ ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ವಾಹನ ಅಪಘಾತದಲ್ಲಿ ಗಾಯಗೊಂಡವರು ಚಿಕಿತ್ಸೆಗೆ
ದಾಖಲಾದ ಬಗ್ಗೆ ಎಮ್.ಎಲ್.ಸಿ ಬಂದಿದ್ದು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳು ಹನುಮಂತಪ್ಪ ಮಡಿವಾಳರ,
ಸಾ: ತಳಕಲ್ ಇವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು, ಸಾರಾಂಶವೇನೆಂದರೆ, ದಿ:31-10-2017
ರಂದು ಮದ್ಯಾಹ್ನ 3-00 ಗಂಟೆಗೆ ಫಿರ್ಯಾದಿದಾರರು ತನ್ನ ಅಣ್ಣ ಪರಶುರಾಮ ಮಡಿವಾಳರ ಇವರ ಆಟೋ ನಂ: ಕೆಎ-37/ಎ-2348
ನೇದ್ದರಲ್ಲಿ ಕುಳಿತುಕೊಂಡು ಕೊಪ್ಪಳದಿಂದಾ ವಾಪಾಸ್ ತಳಕಲ್ ಗೆ ಅಂತಾ ಹೋಗುವಾಗ ಕೊಪ್ಪಳ-ಗದಗ ಎನ್.ಹೆಚ್-63
ರಸ್ತೆಯ ಮಿಲೇನಿಯಮ್ ಸ್ಕೂಲ್ ದಾಟಿ ಸ್ವಲ್ಪ ಮುಂದೆ ಸದರಿ ಆಟೋ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ
ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸಿಕೊಂಡು ಹೋಗುವಾಗ ತನ್ನ ವಾಹನವನ್ನು ನಿಯಂತ್ರಿಸದೇ ಅಪಘಾತ
ಮಾಡಿ ರಸ್ತೆಯ ಎಡಬಾಜು ಪಲ್ಟಿ ಮಾಡಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಫಿರ್ಯಾದಿದಾರರಿಗೆ
ಮತ್ತು ಆರೋಪಿತ ಆಟೋ ಚಾಲಕನಿಗೆ ತೀವ್ರ ಪೆಟ್ಟಾಗಿದ್ದರಿಂದ, ಕೂಡಲೇ 108 ಅಂಬುಲೆನ್ಸ ದಲ್ಲಿ ಕೊಪ್ಪಳ
ಜಿಲ್ಲಾ ಸರಕಾರಿ ಆಸ್ಪತ್ರೆಗ ಬಂದು ಚಿಕಿತ್ಸೆಗೆ ದಾಖಲಾಗಿದ್ದು ಇರುತ್ತದೆ. ನಂತರ ಇಂದೇ
ಮದ್ಯಾಹ್ನ 3-55 ಗಂಟೆಗೆ ಆರೋಪಿ ಪರಶುರಾಮ ಇತನು ಚಿಕಿತ್ಸೆ ಫಲಿಸದೇ
ಮೃತಪಟ್ಟಿದ್ದು ಇರುತ್ತದೆ. ಕಾರಣ ಅಪಘಾತ ಮಾಡಿದ ಆಟೋ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ
ಮುಂತಾಗಿ ನೀಡಿದ ದೂರನ್ನು ಪಡೆದುಕೊಂಡು, ವಾಪಾಸ್ ಠಾಣೆಗೆ ಸಂಜೆ 5-30 ಗಂಟೆಗೆ ಬಂದು ಸದರಿ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು
ಇರುತ್ತದೆ.
0 comments:
Post a Comment