1] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ
ನಂ. 242/2017 ಕಲಂ. 78(3)
Karnataka Police Act.
ದಿನಾಂಕ 01-11-2017
ರಂದು 6-30 ಪಿ.ಎಮ್ ಗಂಟೆಯ ಸುಮಾರಿಗೆ ಆರೋಪಿತನಾದ ಮೇಹರಾಜ ತಂದೆ ಪಾಷಾಸಾಬ ವಯ : 45 ವರ್ಷ ಜಾ : ಮುಸ್ಲಿಂ
ಉ : ಎಲೆಕ್ಟ್ರಿಕಲ್ ಕೆಲಸ ಸಾ : ಕಿಲ್ಲಾ ಏರಿಯಾ ಗಂಗಾವತಿ ಈತನು ಗಂಗಾವತಿ ನಗರದ
ಕಿಲ್ಲಾ ಏರಿಯಾದ ಅಂಬಾಭವಾನಿ ದೇವಸ್ಥಾನದ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ನಿಂತುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಸಾರ್ವಜನಿಕರನ್ನು ಕರೆದು
ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುವಾಗ ಸದರಿಯವನ ಮೇಲೆ
ಶ್ರೀ ಉದಯರವಿ ಪಿ.ಐ ರವರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಸದರಿಯವನಿಗೆ ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ 01] ಮಟಕಾ ಜೂಜಾಟದ ಹಣ ನಗದು ಹಣ ರೂ. 200-00. 02] ಮಟಕಾ ನಂಬರ ಬರೆದ 2 ಮಟ್ಕಾ ಪಟ್ಟಿ ಅಂ. ಕಿ 00 03] 01 ಬಾಲ್ ಪೆನ್ ಅಂ.ಕಿ
00-00 ದೊರೆತಿದ್ದು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ
ನಂ. 144/2017. ಕಲಂ: 279, 304 [ಎ] ಐಪಿಸಿ ಹಾಗೂ 187
ಐ.ಎಂ.ವಿ. ಕಾಯ್ದೆ:.
ದಿನಾಂಕ: 01-11-2017 ರಂದು ರಾತ್ರಿ 8-40 ಗಂಟೆಯ ಸುಮಾರಿಗೆ
ಮೋಟಾರ್ ಸೈಕಲ್ ನಂ: ಕೆಎ-37 ಎಕ್ಸ-7298 ನೇದ್ದರ ಸವಾರನು ತಾನು ನಡೆಸುತ್ತಿದ್ದ ಸದರಿ ಮೋಟಾರ್ ಸೈಕಲ್
ನ್ನು ವಜ್ರಬಂಡಿ ಕಡೆಯಿಂದ ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು, ರಸ್ತೆಯ ಬದಿಗೆ
ಕುದರಿಕೊಟಗಿ ಕಡೆಯಿಂದ ನಡೆದುಕೊಂಡು ಬರುತ್ತಿದ್ದ ಶಿವಪ್ಪ ತಂದೆ ಗೋಸಪ್ಪ ಹಳ್ಳಿಗುಡಿ ಈತನಿಗೆ ಟಕ್ಕರ್
ಕೊಟ್ಟು ಅಫಘಾತ ಮಾಡಿ, ಮೋಟಾರ್ ಸೈಕಲ್ ನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಈ
ಅಫಘಾತದಿಂದ ಶಿವಪ್ಪನಿಗೆ ಎಡ ಮೋಣಕಾಲ ಕೆಳ ಭಾಗದಲ್ಲಿ ಭಾರಿ ಸ್ವರೂಪದ ಪೆಟ್ಟಾಗಿ ಕಾಲು ಮುರಿದ್ದಿದ್ದು,
ಬಲಗಡೆ ಕಪಾಳಕ್ಕೆ ರಕ್ತಗಾಯವಾಗಿದ್ದು, ಅಲಲ್ಲಿ ತೆರೆಚಿದ ಗಾಯಗಳಾಗಿದ್ದು ಇರುತ್ತದೆ. ಅಲ್ಲದೇ ಮೂಗಿನಲ್ಲಿ
ರಕ್ತ ಬಂದಿದ್ದು, ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆ ಯಲಬುರ್ಗಾಕ್ಕೆ ಸೇರಿಕೆ ಮಾಡುವಷ್ಟರಲ್ಲಿ
ಮಾರ್ಗ ಮಧ್ಯ ಮೃತ ಪಟ್ಟಿರುತ್ತಾನೆ. ಕಾರಣ ಶಿವಪ್ಪ ಹಳ್ಳಿಗುಡಿ ಈತನಿಗೆ ಟಕ್ಕರ್ ಕೊಟ್ಟು ಅಫಘಾತ ಮಾಡಿ,
ಭಾರಿ ಸ್ವರೂಪದ ಗಾಯವಾಗಿ ಆತನ ಸಾವಿಗೆ ಕಾರಣನಾದ ಮೋಟಾರ್ ಸೈಕಲ್ ಚಾಲಕನಿಗೆ ಪತ್ತೆ ಮಾಡಿ. ಆತನ ಮೇಲೆ
ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ
ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment