Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, November 12, 2017

1] ಮುನಿರಾಬಾದ  ಪೊಲೀಸ್  ಠಾಣೆ  ಗುನ್ನೆ ನಂ. 290/2017  ಕಲಂ. 78(3) Karnataka Police Act.
ದಿನಾಂಕ: 11-11-2017 ರಂದು  4-50 ಪಿ.ಎಂ. ಸುಮಾರಿಗೆ ಮುನಿರಾಬಾದ ಆರ್.ಎಸ್.ನಲ್ಲಿ ಹುಲಗಿ ರಸ್ತೆಯಲ್ಲಿರುವ ಪಾನ್ ಶಾಫವೊಂದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ, ಪಿರ್ಯಾದಿದಾರರಾದ ಶ್ರೀ ಕೆ.ಜಯಪ್ರಕಾಶ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನನ್ನು ಹಿಡಿದುಕೊಂಡು ಅವರಿಂದ 630-00 ರೂ. ಮಟಕಾ ಜೂಜಾಟದ ನಗದು ಹಣ ಮತ್ತು ಒಂದು ಪೆನ್ ಹಾಗೂ ಒಂದು ಮಟಕಾ ಚೀಟಿಯನ್ನು ಜಪ್ತ ಪಡಿಸಿಕೊಂಡಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
2] ಅಳವಂಡಿ ಪೊಲೀಸ್  ಠಾಣೆ  ಗುನ್ನೆ ನಂ. 186/2017  ಕಲಂ. 20(B) NDPS Act.
ದಿನಾಂಕ :11-11-2017 ರಂದು ಹಟ್ಟಿ ಗ್ರಾಮದಲ್ಲಿ ಮಹಿಳೆಯೊಬ್ಬಳು ಅನಧಿಕೃತವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಶ್ರೀ ಭೀಮಣ್ಣ. ಸಿಪಿಐ ಕೊಪ್ಪಳ ಗ್ರಾಮೀಣ ವೃತ್ತ ರವರು ಅಳವಂಡಿ ಠಾಣೆಯ ಪಿ.ಎಸ್.ಐ ಹಾಗೂ ಸಿಬ್ಬಂದಿ ಯೊಂದಿಗೆ ಹಟ್ಟಿ ಗ್ರಾಮಕ್ಕೆ ಹೋಗಿ ದಾಳಿ ಮಾಡಿ ಆರೋಪಿ ಹಿರಿಯಕ್ಕ @ ಈರವ್ವ ಬಿಸನಳ್ಳಿ. ಸಾ: ಹಟ್ಟಿ ಇವರನ್ನು ವಶಕ್ಕೆ ಪಡೆದುಕೊಂಡು, 1450 ಗ್ರಾಂ ಗಾಂಜಾ ಹಾಗೂ ನಗದು ಹಣ 350/- ರೂ ಗಳನ್ನು ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡು ಬಂದು ಸದರಿ ಆರೋಪಿತಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3] ಕುಕನೂರ  ಪೊಲೀಸ್  ಠಾಣೆ  ಗುನ್ನೆ ನಂ. 157/2017  ಕಲಂ. 78(3) Karnataka Police Act.
ದಿನಾಂಕ: 10-11-2017 ರಂದು ಸಾಯಂಕಾಲ 5-00 ಗಂಟೆಗೆ ಯರೇಹಂಚಿನಾಳ ಗ್ರಾಮದಲ್ಲಿಯ ಗ್ರಾಮ ಪಂಚಾಯತ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ. 01 & 02 ನೇದವರು ಮಟಕಾ ಜೂಜಾಟದಲ್ಲಿ ತೋಡಗಿದ್ದಾಗ ಪಿ.ಎಸ್.ಐ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು, ಸದರಿ ಆರೋಪಿ ನಂ. 01 ನೇದವನಿಂದ 2,900/-ರೂ, ನಗದು ಹಣ ಹಾಗೂ ಆರೋಪಿ ನಂ. 02 ನೇದವನಿಂದ ಮಟಕಾ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಸದರಿ ಆರೋಪಿ ನಂ. 01 & 02 ನೇದವರು ತಾವು ಬರೆದುಕೊಂಡ ಓ.ಸಿ. ಪಟ್ಟಿ & ಜೂಜಾಟದ ಹಣವನ್ನು ಬುಕ್ಕಿಯಾದ ಆರೋಪಿ ನಂ. 03 ಇವನಿಗೆ ಕೊಟ್ಟಿರುವ ಬಗ್ಗೆ ಒಪ್ಪಕೊಂಡಿದ್ದು ಇರುತ್ತದೆ ಅಂತಾ ಪಿ.ಎಸ್.ಐ. ರವರು ಠಾಣೆಗೆ ಹಾಜರಾಗಿ ಆರೋಪಿ ನಂ. 01 & 02 ನೇದವರನ್ನು ಹಾಗೂ ಓಸಿ ಜೂಜಾಟದ ಸಾಮಾಗ್ರಿಗಳನ್ನು ಹಾಜರಪಡಿಸಿ ದಾಳಿ ಪಂಚನಾಮೆಯೊಂದಿಗೆ ವರದಿ ನೀಡಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೇನು.
4] ಗಂಗಾವತಿ ನಗರ  ಪೊಲೀಸ್  ಠಾಣೆ  ಗುನ್ನೆ ನಂ. 266/2017  ಕಲಂ. 78(3) Karnataka Police Act.

ದಿನಾಂಕ 11-11-2017 ರಂದು ಮಧ್ಯಾಹ್ನ 1-00 ಗಂಟೆಗೆ ಆರೋಪಿ ಕಾಸಿಂ ಅಲಿ ತಂದೆ ಬುಡನಸಾಬ ವಯಸ್ಸು 50 ವರ್ಷ ಜಾ: ಮುಸ್ಲಿಂ ಉ: ತೌಡು ವ್ಯಾಪಾರ ಸಾ: ಗುಂಡಮ್ಮ ಕ್ಯಾಂಪ್, ಗಂಗಾವತಿ ಇವನು ವಿರುಪಾಪುರ ತಾಂಡಾದ ಬೇತಲ್ ಶಾಲೆ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಸಾರ್ವಜನಿಕರನ್ನು ಕರೆದು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದಾಗ, ಮಾನ್ಯ ಶ್ರೀ ಉದಯರವಿ, ಪಿ.ಐ ಗಂಗಾವತಿ ನಗರ ಪೊಲೀಸ್ ಠಾಣೆ ರವರು ಸದರಿಯವನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಅವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ (01) ನಗದು ಹಣ ರೂ. 1,750-00. (02) ಮಟಕಾ ನಂಬರ ಬರೆದ 01 ಮಟ್ಕಾ ಪಟ್ಟಿ ಹಾಗೂ (03) 01 ಬಾಲ್ ಪೆನ್ ದೊರೆತಿದ್ದು. ಸದರಿ ಆರೋಪಿತನ ಹತ್ತಿರ ದೊರೆತ ಮುದ್ದೇಮಾಲನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008