1] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ
ನಂ. 149/2017 ಕಲಂ. 78(3)
Karnataka Police Act.
ದಿನಾಂಕ: 10-11-2017 ರಂದು ಸಾಯಂಕಾಲ 7-30 ಗಂಟೆಯ ಸುಮಾರಿಗೆ ಆರೋಪಿತನು ಕುದ್ರಿಕೋಟಗಿ ಗ್ರಾಮದಲ್ಲಿ ಬರುವ ಬಸ್ಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಂದು ರೂಪಾಯಿಗೆ
80 ರೂಪಾಯಿಗಳು ಬರುತ್ತವೆ ಓಸಿ ಮಟಕಾ ನಂಬರಗಳನ್ನು ಬರೆಯಿಸಿರಿ ಅಂತಾ ಜನರನ್ನು ಕೂಗಿ ಕರೆದು
ಅವರಿಂದ ಹಣ ಪಡೆದು ಓಸಿ ಮಟಕಾ ನಂಬರಗಳನ್ನು ಬರೆದುಕೊಳ್ಳುತಿದ್ದಾಗ ಪಿ.ಎಸ್.ಐ. ಯಲಬುರ್ಗಾರವರು
ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದಿದ್ದು, ಸದರಿ ಆರೋಪಿ ನಂ
01 ನೇದ್ದವನ ಹತ್ತಿರ ಮಟಕಾ ಜೂಜಾಟದ ನಗದು ಹಣ 740/-ರೂ.,
ಒಂದು ಮಟ್ಕಾ ನಂಬರ್ ಬರೆದ ಚೀಟಿ & 01 ಬಾಲ ಪೆನ್
ಅ.ಕಿ ಇಲ್ಲ. ನೇದ್ದುವುಗಳೊಂದಿಗೆ
ಸಿಕ್ಕಿಬಿದ್ದಿದ್ದು ಅಂತಾ ಫಿರ್ಯಾದಿ
ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಕನೂರ ಪೊಲೀಸ್ ಠಾಣೆ ಗುನ್ನೆ
ನಂ. 153/2017 ಕಲಂ. 78(3)
Karnataka Police Act.
ದಿನಾಂಕ: 09-11-2017 ರಂದು ಮಧ್ಯಾಹ್ನ 3:10 ಗಂಟೆಗೆ ಕುಕನೂರು ಪಟ್ಟಣದ ತೆರಿನ ಗಡ್ಡಿ ಹತ್ತಿರ
ಸಾರ್ವಜನಿಕ ಸ್ಥಳದಲ್ಲಿ, ಆರೋಪಿ ನಂ. 01 ನೇದವನು ಮಟಕಾ ಜೂಜಾಟದಲ್ಲಿ ತೋಡಗಿದ್ದಾಗ ಪಿ.ಎಸ್.ಐ ಹಾಗೂ
ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು, ಸದರಿ ಆರೋಪಿತನಿಂದ 680/-ರೂ, ನಗದು ಹಣ ಹಾಗೂ
ಮಟಕಾ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿದ್ದು ಮತ್ತು ಸದರಿ ಆರೋಪಿ ನಂ. 01 ನೇದವನು ತಾನು ಬರೆದುಕೊಂಡು
ಓ.ಸಿ. ಪಟ್ಟಿ & ಜೂಜಾಟದ ಹಣವನ್ನು ಬುಕ್ಕಿಯಾದ ಆರೋಪಿ ನಂ. 02 ಇವನಿಗೆ ಕೊಟ್ಟಿರುವ ಬಗ್ಗೆ ಒಪ್ಪಕೊಂಡಿದ್ದು
ಇರುತ್ತದೆ ಅಂತಾ ಪಿ.ಎಸ್.ಐ. ರವರು ಠಾಣೆಗೆ ಹಾಜರಾಗಿ ಆರೋಪಿ ನಂ. 01 ನೇದವನನ್ನು ಹಾಗೂ ಓಸಿ ಜೂಜಾಟದ
ಸಾಮಾಗ್ರಿಗಳನ್ನು ಹಾಜರಪಡಿಸಿ ದಾಳಿ ಪಂಚನಾಮೆಯೊಂದಿಗೆ ವರದಿ ನೀಡಿದ್ದು ಇರುತ್ತದೆ. ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ,
3] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 154/2017 ಕಲಂ. 78(3) Karnataka Police Act.
ದಿನಾಂಕ: 09-11-2017 ರಂದು ಸಾಯಂಕಾಲ 5:30 ಗಂಟೆಗೆ ಕುಕನೂರು ಪಟ್ಟಣದ ಹಳೆ ಬಜಾರದಲ್ಲಿಯ
ಮಸೀದಿಯ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ, ಆರೋಪಿ ನಂ. 01 ನೇದವನು ಮಟಕಾ ಜೂಜಾಟದಲ್ಲಿ ತೋಡಗಿದ್ದಾಗ
ಪಿ.ಎಸ್.ಐ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು, ಸದರಿ ಆರೋಪಿತನಿಂದ 490/-ರೂ,
ನಗದು ಹಣ ಹಾಗೂ ಮಟಕಾ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿದ್ದು ಮತ್ತು ಸದರಿ ಆರೋಪಿ ನಂ. 01 ನೇದವನು
ತಾನು ಬರೆದುಕೊಂಡು ಓ.ಸಿ. ಪಟ್ಟಿ & ಜೂಜಾಟದ ಹಣವನ್ನು ಬುಕ್ಕಿಯಾದ ಆರೋಪಿ ನಂ. 02 ಇವನಿಗೆ ಕೊಟ್ಟಿರುವ
ಬಗ್ಗೆ ಒಪ್ಪಕೊಂಡಿದ್ದು ಇರುತ್ತದೆ ಅಂತಾ ಪಿ.ಎಸ್.ಐ. ರವರು ಠಾಣೆಗೆ ಹಾಜರಾಗಿ ಆರೋಪಿ ನಂ. 01 ನೇದವನನ್ನು
ಹಾಗೂ ಓಸಿ ಜೂಜಾಟದ ಸಾಮಾಗ್ರಿಗಳನ್ನು ಹಾಜರಪಡಿಸಿ ದಾಳಿ ಪಂಚನಾಮೆಯೊಂದಿಗೆ ವರದಿ ನೀಡಿದ್ದು ಇರುತ್ತದೆ.
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ,
4] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 155/2017 ಕಲಂ. 78(3) Karnataka Police Act.
ದಿನಾಂಕ: 09-11-2017 ರಂದು
ಸಾಯಂಕಾಲ 7:30 ಗಂಟೆಗೆ ಕುಕನೂರು ಪಟ್ಟಣದ ಟಿಪ್ಪು ಸುಲ್ತಾನ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ,
ಆರೋಪಿತನು ಮಟಕಾ ಜೂಜಾಟದಲ್ಲಿ ತೋಡಗಿದ್ದಾಗ ಸಿಪಿಐ ಸಾಹೆಬರು ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ
ದಾಳಿ ಮಾಡಿ ಹಿಡಿದು, ಆರೋಪಿತನಿಂದ 2350/-ರೂ, ನಗದು ಹಣ ಹಾಗೂ ಮಟಕಾ ಜೂಜಾಟದ ಸಾಮಾಗ್ರಿಗಳನ್ನು ಜಪ್ತ
ಮಾಡಿಕೊಂಡು ಬಂದು ಆರೋಪಿ ಮತ್ತು ಓಸಿ ಜೂಜಾಟದ ಸಾಮಾಗ್ರಿಗಳನ್ನು ಹಾಜರಪಡಿಸಿ ದಾಳಿ ಪಂಚನಾಮೆಯೊಂದಿಗೆ
ವರದಿ ನೀಡಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ,
0 comments:
Post a Comment