1] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 160/2017 ಕಲಂ. 279, 338, 283 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ: 14-11-2017 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ಆರೋಪಿ ನಂ. 01 ನಾಗರಾಜ ತಂದೆ
ಗುಡದಪ್ಪ ಅರಿಕೇರಿ ನೇದವನು ತಾನು ಚಲಾಯಿಸುತಿದ್ದ ಮೋಟಾರ್ ಸೈಕಲ್ ನಂ. ಕೆಎ-37/ಎಲ್-6158 ನೇದ್ದನ್ನು
ಕೊಪ್ಪಳ-ಯಲಬುರ್ಗಾ ರಸ್ತೆಯ ಮೇಲೆ ಕೊಪ್ಪಳ ಕಡೆಯಿಂದ ಭಾನಾಪುರ ಕಡೆಗೆ ಅತಿವೇಗವಾಗಿ & ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ಭಾನಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ ರಸ್ತೆಯ ಮೇಲೆ ಆರೋಪಿ
ನಂ. 02 ಹೆಸರು ವಿಳಾಸ ಗೊತ್ತಾಗಿರುವದಿಲ್ಲ ಇತನು ಹಿಂದೆ ಬರುವ ವಾಹನಗಳಿಗೆ ಕಾಣಿಸುವಂತೆ ಯಾವದೇ ಸಿಗ್ನಲ್
ಗಳನ್ನು ಹಾಕದೇ ನಿಲ್ಲಿಸಿದ್ದ ನೊಂದಣಿ ಸಂಖ್ಯೆ ಇರದ TR 16 ಅಂತಾ ಬರೆದಿರುವ ಟಿಪ್ಪರ್ ವಾಹನಕ್ಕೆ ಹಿಂದುಗಡೆಯಿಂದ
ಡಿಕ್ಕಿ ಹೊಡೆಸಿ ಅಪಘಾತಪಡಿಸಿರುತ್ತಾನೆ. ಅಪಘಾತದ ಸುದ್ದಿ ತಿಳಿದು ಆರೋಪಿ ನಂ. 02 ನೇದವನು ಸ್ಥಳಕ್ಕೆ
ಬಂದಿರುವದಿಲ್ಲ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೇನು.
2] ಕುಕನೂರ ಪೊಲೀಸ್ ಠಾಣೆ ಗಂಗಾವತಿ
ಗುನ್ನೆ ನಂ. 161/2017
ಕಲಂ. 279, 337, 338 ಐ.ಪಿ.ಸಿ.
ದಿನಾಂಕ: 15-11-2017 ರಂದು ಸಾಯಂಕಾಲ 4:30 ಗಂಟೆ ಸುಮಾರಿಗೆ ಸೊಂಪೂರ-ಮಾಳೆಕೊಪ್ಪ ರಸ್ತೆಯ
ಮೇಲೆ ಮಾಳೆಕೊಪ್ಪ ಹತ್ತಿರ ಆರೋಪಿತನು ತಾನು ನಡೆಸುತ್ತಿದ್ದ ಅಟೊ ಪ್ಯಾಸೆಂಜರ್ ವಾಹನ ನಂ: KA-26 A 7720 ನೇದ್ದನ್ನು ಸೊಂಪೂರ ಕಡೆಯಿಂದ
ಮಾಳೆಕೊಪ್ಪ ಕಡೆಗೆ ಅತೀ ಜೋರಾಗಿ ಹಾಗೂ ಅಲ್ಷತನದಿಂದ ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ನಡೆಸಿಕೊಂಡು
ಬಂದು ರಸ್ತೆಯ ತಿರುವಿನಲ್ಲಿ ಅಟೋ ವಾಹನದ ಮೇಲೆ ಹತೋಟಿ ಸಾದಿಸದೆ ಎಡಮಗ್ಗಲಾಗಿ ಪಲ್ಟಿ ಮಾಡಿ ಅಪಘಾತ
ಮಾಡಿದ್ದರಿಂದ ಸದರಿ ಅಪಘಾತದಲ್ಲಿ ಅಟೋ ವಾಹನದಲ್ಲಿದ್ದ 5 ಜನರಿಗೆ ಸಾದಾ ಹಾಗೂ ಭಾರಿ ಸ್ವರೂಪದ ಗಾಯಗಾಳಾಗಿರುತ್ತವೆ,
ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೆಲಿಂದ ಪ್ರಕರಣ ದಾಖಲಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ,
3] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ
ನಂ. 277/2017 ಕಲಂ. 78(3)
Karnataka Police Act:.
ದಿನಾಂಕ 15-11-2017
ರಂದು 15-45 ಗಂಟೆಗೆ ಆರೋಪಿ ರಾಮಾರಾವ್ ತಂದೆ ನಾರಾಯಣ ಸಾ: ಬೃಂದಾವನ ಹೋಟೆಲ್ ಗಂಗಾವತಿ
ಇವನು ಬೃಂದಾವನ
ಹೋಟೆಲ್ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು 1 ರೂಪಾಯಿಗೆ 80 ರೂಪಾಯಿ
ಕೊಡುವುದಾಗಿ ಸಾರ್ವಜನಿಕರನ್ನು ಕರೆದು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು
ಬರೆದುಕೊಡುತ್ತಾ ಮಟಕಾ
ಜೂಜಾಟದಲ್ಲಿ ತೊಡಗಿದಾಗ, ಮಾನ್ಯ ಪಿ.ಐ. ರವರು ಸದರಿಯವನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ
ದಾಳಿ ಮಾಡಿ ಹಿಡಿದು ಅವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ (01) ನಗದು ಹಣ ರೂ. 240-00. (02) ಮಟಕಾ ನಂಬರ ಬರೆದ 01 ಮಟ್ಕಾ ಪಟ್ಟಿ
ಹಾಗೂ (03) 01
ಬಾಲ್ ಪೆನ್ ದೊರೆತಿದ್ದು. ಸದರಿ ಆರೋಪಿತನ ಹತ್ತಿರ ದೊರೆತ
ಮುದ್ದೇಮಾಲನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
4] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ
ನಂ. 278/2017 ಕಲಂ. 78(3)
Karnataka Police Act:.
ದಿನಾಂಕ 15-11-2017
ರಂದು 17-45 ಗಂಟೆಗೆ ಆರೋಪಿ ಪೀರಪ್ಪ ತಂದೆ ರೆಡ್ಡೆಪ್ಪ ಸಾ: ವಿರುಪಾಪುರ ತಾಂಡಾ
ಗಂಗಾವತಿ ಇವನು ವಿರುಪಾಪುರ
ತಾಂಡ ಬೇತಲ್ ಸ್ಕೂಲ್ ಶಾಲೆ ಕ್ರಾಸ್ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ನಿಂತುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಸಾರ್ವಜನಿಕರನ್ನು ಕರೆದು
ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದಾಗ,
ಮಾನ್ಯ ಪಿ.ಐ. ರವರು ಸದರಿಯವನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ
ಹಿಡಿದು ಅವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ (01) ನಗದು ಹಣ ರೂ. 450-00. (02) ಮಟಕಾ ನಂಬರ ಬರೆದ 01 ಮಟ್ಕಾ ಪಟ್ಟಿ
ಹಾಗೂ (03) 01
ಬಾಲ್ ಪೆನ್ ದೊರೆತಿದ್ದು. ಸದರಿ ಆರೋಪಿತನ ಹತ್ತಿರ ದೊರೆತ
ಮುದ್ದೇಮಾಲನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
5] ತಾವರಗೇರಾ ಪೊಲೀಸ್ ಠಾಣೆ ಗುನ್ನೆ
ನಂ. 148/2017 ಕಲಂ. 87
Karnataka Police Act:.
ದಿನಾಂಕ: 15-11-2017 ರಂದು ಸಂಜೆ 5:00 ಗಂಟೆಗೆ ಶ್ರೀ ಈರಣ್ಣ ಮಾಳವಾಡ ಎ.ಎಸ್.ಐ. ತಾವರಗೇರಾ
ಪೊಲೀಸ್ ಠಾಣೆರವರು ಗಣಕೀಕೃತ ವರದಿ, ದಾಳಿ ಪಂಚನಾಮೆ, ಮುದ್ದೇಮಾಲು ಸಿಕ್ಕಿಬಿದ್ದ 05 ಜನ ಆರೋಪಿತರನ್ನು
ಹಾಜರಪಡಿಸಿದ್ದು, ವರದಿಯಲ್ಲಿ ಜೂಲಕುಂಟಿ ಗ್ರಾಮದ ಮಸೀದಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಅಂದರ್
ಬಾಹರ್ ಎಂಬ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದು, ಆ ಕಾಲಕ್ಕೆ ಅಧಿಕಾರಿರವರು ಹಾಗೂ ಸಿಬ್ಬಂದಿಯವರು
ದಾಳಿ ಮಾಡಿ ಜೂಜಾಟದ ಒಟ್ಟು ನಗದು ಹಣ ರೂ. 2020=00 ಹಾಗೂ 52 ಇಸ್ಪಿಟ್ ಎಲೆಗಳನ್ನು ಜಪ್ತ ಮಾಡಿಕೊಂಡಿದ್ದು,
ಸಿಕ್ಕಿಬಿದ್ದ 05ಜನ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿಯನ್ನು ನೀಡಿದ್ದು ಇರುತ್ತದೆ.
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment