1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ
ನಂ. 173/2017 ಕಲಂ. 96 (B)
& (C) KP Act..
ದಿನಾಂಕ 14-11-2017 ರಂದು ಸಂಜೆ 6 -30 ಗಂಟೆಗೆ
ನಿಸಾರ್ ಅಹ್ಮದ್ ಪಿ.ಸಿ.
226 ಕೊಪ್ಪಳ ನಗರ ಪೊಲೀಸ್ ಠಾಣೆರವರು
ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿಯೊಂದಿಗೆ
ಇಬ್ಬರು ಆರೋಪಿತರೊಂದಿಗೆ ಹಾಜರುಪಡಿಸಿದ್ದು, ಸದರಿ ಫಿರ್ಯಾದಿಯ ಸಾರಂಶವೇನೆಂದರೆ,
ಇಂದು ದಿನಾಂಕ 14-11-2017 ರಂದು ಸಂಜೆ 04-00 ಗಂಟೆಯಿಂದ
ನಗರದಲ್ಲಿ ಹಗಲು ಗಸ್ತು ಕರ್ತವ್ಯದಲ್ಲಿ
ಪಿಸಿ 382 ರವರೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ನಗರದ
ಕಿನ್ನಾಳ ರಸ್ತೆಯಲ್ಲಿರುವ ನೀರಿನ ಟ್ಯಾಂಕಿನ ಹತ್ತಿರ
ಸಂಶಯಾಸ್ಪದವಾಗಿ ಸಿಕ್ಕ ಆರೋಪಿತರದ 1] ಯಲ್ಲಪ್ಪ
ತಂಧೆ ರಾಮಣ್ಣ ಮ್ಯಾಗಳ ಮನಿ
ವಯಾ; 28 ವರ್ಷ ಜಾ: ಹರಿಜನ
ಉ: ಕೂಲಿಕೆಲಸ ಸಾ: ಮಡ್ಲಿ ತಾ:
ಶಿಗ್ಗಾಂವ 2] ರಾಜು ತಂದೆ ಶಂಕರ
ಸಾ ದಾಲಬಂಜನ ವಯಾ: 28 ವರ್ಷ
ಜಾ: ಕ್ಷತ್ರಿಯ ಉ: ಕೂಲಿಕೆಲಸ ಸಾ:
ಮಹೆಬೂಬ ನಗರ ಗಂಗಾವತಿ ಇವರನ್ನು
ಹಿಡಿದುಕೊಂಡು ರಾತ್ರಿ ವೇಳೆಯಲ್ಲಿ ಸದರಿ
ಸ್ಥಳದಲ್ಲಿದ್ದ ಬಗ್ಗೆ ವಿಚಾರಿಸಲಾಗಿ ಸಮರ್ಪಕವಾದ
ಉತ್ತರ ಕೊಡದೆ ಇರುವುದರಿಂದ ಅವರ
ಮೇಲೆ ಸಂಶಯ ಬಂದು ಠಾಣೆಗೆ
ಕರೆತಂದು ಸಂಜೆ 6-30 ಗಂಟೆಗೆ ಫಿರ್ಯಾದಿಯನ್ನ ತಯಾರಿಸಿ
ಮುಂದಿನ ಕ್ರಮ ಜರುಗಿಸುವಂತೆ ಫಿರ್ಯಾದಿಯೊಂದಿಗೆ
ಆರೋಪಿತರನ್ನು ಹಾಜರುಪಡಿಸಿ ಸೂಕ್ತ ಕಾನೂನು ಕ್ರಮ
ಜರುಗಿಸಲು ವಿನಂತಿ ಅಂತಾ ಇರುವ
ಫಿರ್ಯಾದಿ ಮೆಲಿಂದ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
2] ಸಂಚಾರ ಪೊಲೀಸ್ ಠಾಣೆ ಗಂಗಾವತಿ
ಗುನ್ನೆ ನಂ. 32/2017
ಕಲಂ. 279, 337, 338 ಐ.ಪಿ.ಸಿ.
ದಿನಾಂಕ 14-11-2017 ಸಂಜೆ 4-00 ಪಿಎಂಗೆ ಫಿರ್ಯಾದಿ
ಸೈಯದ್ ಬಶೀರ್ ಅಹ್ಮದ್ ತಂದೆ ಸೈಯದ್ ಅಬ್ದುಲ್ ರಜಾಕ್ ವಯ: 32 ವರ್ಷ ಉ: ಹಿಟ್ಟಿನ ಗಿರಣಿ
ವ್ಯಾಪಾರ ಸಾ: ಇಲಾಹಿ ಕಾಲೋನಿ ಗಂಗಾವತಿ ಇವರು ತನ್ನ ಮನೆಯಿಂದ ತನ್ನ ಮೋಟರ್ ಸೈಕಲ್ ಹೀರೋ ಹೆಚ್
ಎಫ್ ಡಿಲೆಕ್ಸ್ ನಂ ಕೆಎ 37 ಇಸಿ 7596 ನೇದ್ದನ್ನು
ತೆಗೆದುಕೊಂಡು ತನ್ನ ಹೆಂಡತಿಯನ್ನು ಕರೆದುಕೊಂಡು ಬರಲು ಗಂಗಾವತಿ ಜುಲೈ ನಗರ ಕ್ರಾಸ್
ಹೋಗುವಾಗ ರಸ್ತೆ ಮದ್ಯೆ ಅಂದರೆ ಕೊಪ್ಪಳ ರಸ್ತೆ ಎಪಿಎಂಸಿ ಹತ್ತಿರ ಇರುವ ಮಂಡಕ್ಕಿ ಅಂಗಡಿಯಲ್ಲಿ
ಕಾರಮಂಡಳು ತೆಗೆದುಕೊಂಡು ಜುಲೈ ನಗರಕ್ಕೆ ತನ್ನ ಮೋಟರ್ ಸೈಕಲ್ ಚಾಲನೆ ಮಾಡಿಕೊಂಡು
ಹೋರಟಿರುವಾಗ ಸಂಜೆ 4-30 ಪಿಎಂಗೆ
ವೆಂಕಟಸಾಯಿ ಗೊಬ್ಬರದ ಅಂಗಡಿ ಮುಂದೆ ಆರೋಪಿತನು ತನ್ನ ಕಾರ್ ನಂ ಕೆಎ 37 ಎಂ 3410 ನೇದ್ದನ್ನು ಸಿಬಿ
ಸರ್ಕಲ್ ಕಡೆಯಿಂದ ಅತಿ ಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದವನೇ
ಫಿರ್ಯಾದಿಯ ಮೋಟರ್ ಸೈಕಲ್ ಹಿಂದಿನಿಂದ ಟಕ್ಕರ್ ಮಾಡಿ ಕಾರ ನಿಯಂತ್ರಣಗೊಳದೆ ರೋಡ್
ಡಿವ್ಶೆಡರ್ಗೆ ಗುದ್ದಿದ್ದು ಇದರಿಂದ ಫಿರ್ಯಾದಿದಾರನ ಬಲಗಾಲ ಮೊಣಕಾಲಿನ ಕೆಳಗೆ ಭಾರಿ
ಒಳಾಪೆಟ್ಟಾಗಿದ್ದು ಮತ್ತು ಎಡಗಾಲಿನ ಹಿಮ್ಮಡಕ್ಕೆ ತೆರಿಚಿದ ಗಾಯವಾಗಿದ್ದು ಇರುತ್ತದೆ
ಕಾರಣ ಆರೋಪಿತ ವಿರುದ್ದ ಠಾಣೆ ಗುನ್ನೆ ನಂ 32/2017
ಕಲಂ 279.337.338 ಐಪಿಸಿ
ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ
ನಂ. 151/2017 ಕಲಂ. 279, 337, 338, 304(A) ಐ.ಪಿ.ಸಿ. ಹಾಗೂ 187 ಐ.ಎಂ.ವಿ. ಕಾಯ್ದೆ.
ದಿನಾಂಕ: 14-11-2017 ರಂದು ಬೆಳಿಗ್ಗೆ 09-30 ಗಂಟೆಯ ಸುಮಾರಿಗೆ
ಫಿರ್ಯಾದಿ ದುರುಗಮ್ಮ ಗಂಡ ದುರುಗಪ್ಪ ಆದಾಪೂರ, ವಯ: 30 ವರ್ಷ ಜಾತಿ: ನಾಯಕ ಉ: ಕೂಲಿಕೆಲಸ
ಸಾ: ಹಂಪಸದುರ್ಗ ತಾ: ಗಂಗಾವತಿ ಇವರು ಟಂಟಂ ವಾಹನ ಸಂ: ಕೆ.ಎ-37/ಎ-2140 ನೇದ್ದರಲ್ಲಿ ಕುಳಿತುಕೊಂಡು
ತಮ್ಮ ಗ್ರಾಮದ ಇತರ ಜನರೊಂದಿಗೆ ಲಿಂಗನಬಂಡಿ ಗ್ರಾಮದ ಲಕ್ಷ್ಮಣ ತಂದೆ ಲಕ್ಕಪ್ಪ ಜರಕುಂಟಿ ರವರ ಹೊಲಕ್ಕೆ
ಕೂಲಿ ಕೆಲಸಕ್ಕೆಂದು ಮಂಡಲಮರಿ ಕ್ರಾಸ್ ದಾಟಿ ವಜ್ರಬಂಡಿ ಹೋಗುತ್ತಿರುವಾಗ ಎದುರುಗಡೆಯಿಂದ ಟಾಟಾ ಎ.ಸಿ.ಈ
ವಾಹನ ನಂ : ಕೆ.ಎ-37/ಎ-7859 ನೇದ್ದರ ಚಾಲಕನು ತಾನು ನಡೆಸುತ್ತಿದ್ದ ವಾಹನವನ್ನು ಅತಿ ವೇಗವಾಗಿ
ಅಲಕ್ಷತನದಿಂದ ಮಾನವ ಜೀವಕ್ಕೆ ಹಾನಿಯಾಗುವಂತೆ ಚಲಾಯಿಸಿಕೊಂಡು ಬಂದು ಟಂಟಂ ವಾಹನಕ್ಕೆ ಜೋರಾಗಿ ಠಕ್ಕರ್
ಕೊಟ್ಟು ಅಪಘಾತ ಪಡಿಸಿದ್ದರಿಂದ ಟಂಟಂ ವಾಹನದಲ್ಲಿದ್ದ ಫಿರ್ಯಾದಿದಾರಳು ಹಾಗೂ ಮೃತ ಮಲ್ಲಮ್ಮ ಹಾಗೂ
ಇತರೇ 10 ಜನರಿಗೆ ಭಾರಿ ಹಾಗೂ ಸದಾ ಸ್ವರೂಪದ ರಕ್ತಗಾಯವಾಗಿದ್ದು ಇರುತ್ತದೆ. ಚಿಕಿತ್ಸೆಗಾಗಿ ಸರಕಾರಿ
ಆಸ್ಪತ್ರೆ ಕೊಪ್ಪಳದಲ್ಲಿ ಸೇರಿಕೆ ಮಾಡಿದಾಗ ಮಲ್ಲಮ್ಮ ಈಕೆಯು ಚಿಕಿತ್ಸೆ ಫಲಕಾರಿಯಾಗದೇ ಮದ್ಯಾಹ್ನ
1-00 ಗಂಟೆಯ ಸುಮಾರಿಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆ. ಹಾಗೂ ಆರೋಪಿ ವಾಹನ ಚಾಲಕನು ಅಪಘಾತ
ಪಡಿಸಿದ ನಂತರ ಓಡಿ ಹೋಗಿರುತ್ತಾನೆ. ಕಾರಣ ಸದರಿ ಆರೋಪಿ ಚಾಲಕನಿಗೆ ಪತ್ತೆ ಮಾಡಿ. ಆತನ ಮೇಲೆ ಕಾನೂನು
ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ
ಕೈಗೊಂಡಿದ್ದು ಇರುತ್ತದೆ.
4] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 342/2017 ಕಲಂ 279, 338, 304(ಎ) ಐ.ಪಿ.ಸಿ.
ದಿನಾಂಕ:-
14-11-2017 ರಂದು 7:00 ಎ.ಎಂ.ಕ್ಕೆ ಫಿರ್ಯಾದಿದಾರರಾದ ರುದ್ರೇಶ ತಂದೆ ಬಸಪ್ಪ ಉಪ್ಪಾರ ಸಾ. ಆರಾಳ
ಇವರು ಠಾಣೆಗೆ ಹಾಜರಾಗಿ ಗಣಕೀಕರಿಸಿದ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ.
“ ನಿನ್ನೆ ದಿನಾಂಕ : 13-11-2017 ರಂದು ರಾತ್ರಿ 10-00 ಗಂಟೆಯಿಂದ 10-30 ಗಂಟೆ
ಅವಧಿಯೊಳಗೆ ಫಿರ್ಯಾದಿದಾರನ ಅಣ್ಣನಾದ ನರಸಪ್ಪ ತಂದೆ ವೀರೇಶಪ್ಪ ಉಪ್ಪಾರ ಮತ್ತು ಹುಬ್ಬಳ್ಳಿಯ ಶಿವಮೂರ್ತಿ
ಹಾಗೂ ಆಟೋ ಚಾಲಕ ರುದ್ರೇಶ ತಂದೆ ರೇಣುಕಪ್ಪ ಡಂಬರ ಇವರು ಮೂರು ಜನರು ಆಟೋ ನಂ. ಕೆ.ಎ.37/ಎ.4193 ನೇದ್ದರಲ್ಲಿ
ಆರಾಳ ಗ್ರಾಮದಿಂದ ನೀರ ಮಾನ್ವಿ ಯಲ್ಲಮ್ಮ ದೇವಸ್ಥಾನಕ್ಕೆ ಹೋಗುತ್ತಿದ್ದು, ಗಂಗಾವತಿ ಸಿಂಧನೂರ ರಸ್ತೆಯ
ಮೇಲೆ ಶ್ರೀರಾಮನಗರ ದಾಟಿ ಸ್ಮಶಾನದ ಹತ್ತಿರ ರುದ್ರೇಶ ಡಂಬರ ಈತನು ಆಟೋವನ್ನು ಅತಿವೇಗವಾಗಿ ಅಜಾಗರುಕತೆಯಿಂದ
ಚಲಾಯಿಸಿಕೊಂಡು ಹೊರಟಿದ್ದು ಬಾಯಲ್ಲಿದ್ದ ಗುಟಕಾ ಉಗುಳುತ್ತಿರುವಾಗ ಆಟೊವನ್ನು ನಿಯಂತ್ರಣ ಮಾಡದೆ ಆಟೋ
ಪಲ್ಟಿ ಮಾಡಿ ಅಪಘಾತ ಮಾಡಿದ್ದರಿಂದ ಆಟೊದಲ್ಲಿದ್ದ ನರಸಪ್ಪ ಈತನಿಗೆ ಪಕ್ಕಡಿಗೆ ತೊಡೆಗೆ ಮರ್ಮಾಂಗದ
ಹತ್ತಿರ ಭಾರಿ ಗಾಯವಾಗಿ ಮೃತ ಪಟ್ಟಿದ್ದು ಇರುತ್ತದೆ. ಹಾಗೂ ಆಟೋ ಚಲಾಯಿಸುತ್ತಿದ್ದ ರುದ್ರೇಶ ಈತನಿಗೆ
ಹಣೆಗೆ, ತಲೆಗೆ ಕೈ ಕಾಲುಗಳಿಗೆ ಗಾಯ ಪೆಟ್ಟುಗಳಾಗಿರುತ್ತವೆ ” ಅಂತಾ
ಮುಂತಾಗಿ ಇದ್ದ ದೂರಿನ ಆಧಾರದ ಮೇಲಿಂದ ಪ್ರಕರಣ
ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
5] ಕೊಪ್ಪಳ ಗ್ರಾಮೀಣ
ಪೊಲೀಸ್ ಠಾಣೆ ಗುನ್ನೆ ನಂ. 255/2017 ಕಲಂ 279, 337, 304(ಎ) ಐ.ಪಿ.ಸಿ.
ದಿ:13.11.2017 ರಂದು ರಾತ್ರಿ 10.00 ಗಂಟೆಗೆ ಜಿಲ್ಲಾ ಆಸ್ಪತ್ರೆಯಿಂದ ಎಂಎಲ್.ಸಿ ಬಂದಿದ್ದು
ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಹನುಮವ್ವ ಇವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು, ಸಾರಾಂಶವೇನೆಂದರೆ,
ದಿ:13.11.2017 ರಂದು ರಾತ್ರಿ 07.00ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತನ್ನಗಂಡನ ಹೊಸ ಮೋಟರ್ ಸೈಕಲ್
ಚೆಸ್ಸಿ ನಂ:MBLHAR071HHF45383 ನೇದ್ದರಲ್ಲಿ ಕುಳಿತುಕೊಂಡು ಇರಕಲಗಡದಿಂದ ವಾಪಾಸ್ ಊರಿಗೆ ಅಂತಾ
ಹೋಗುವಾಗ ಮಾರ್ಗದ ಚಿಲಕಮುಖಿ ಮಟ್ಟಿ ಹತ್ತಿರ ತನ್ನ ಗಂಡನು ಮೊ.ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ
ಮಾನವ ಜೀವಕ್ಕೆ ಅಪಾಯವಾಗುವಂತೆ ಕರ್ವಿಂಗ್ ಗಮನಿಸದೇ ಚಲಾಯಿಸಿವಾಹನ ನಿಯಂತ್ರಿಸದೇ ಅಪಘಾತ ಮಾಡಿಕೊಂಡು
ಬಿದ್ದಿದ್ದು ಇದರಲ್ಲಿ ಪಿರ್ಯಾದಿದಾರರಿಗೆ ಬೆನ್ನಿಗೆ ಬಲಗೈ ಮುಂಗೈಗೆ ತರಚಿದ ಗಾಯಗಳಾಗಿದ್ದು
ಮೋ.ಸೈಕ್ಲ ಸವಾರನಿಗೆ ತಲೆಗೆ ಬಾರಿ ರಕ್ತ ಗಾಯವಾಗಿ ಅಸ್ವಸ್ಥಗೊಂಡಿದ್ದು ನಂತರ ಯಾವುದೋ ಖಾಸಗಿ ವಾಹನದಲ್ಲಿ
ಕರೆತಂದಾಗ ರಾತ್ರಿ 09.15 ಗಂಟೆಗೆ ಮೃತಪಟ್ಟಿರುವುದಾಗಿ ವೈದ್ಯರು ಖಚಿತ ಪಡಿಸಿದ್ದು ಕಾರಣ
ಅಪಘಾತ ಮಾಡಿದ ಮೋ ಸೈಕಲ್ ಸವಾರನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ನೀಡಿದ
ದೂರನ್ನು ಪಡೆದು ವಾಪಾಸ್ ಠಾಣೆಗೆ ದಿನಾಂಕ:14.11.2017 ರಂದು ಬೆಳಗಿನ ಜಾವ 02.15 ಎ.ಎಂ ಗಂಟೆಗೆ
ಬಂದು ಸದರಿ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment