1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 350/2017 ಕಲಂ. 78(3) Karnataka Police Act:
ದಿನಾಂಕ:- 22-11-2017 ರಂದು ಸಾಯಂಕಾಲ ನಾನು ಠಾಣೆಯಲ್ಲಿರುವಾಗ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಬರುವ ಬಂಡ್ರಾಳ ಗ್ರಾಮ ಆಂಜನೇಯ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಹಾಜರಿದ್ದ ಸಿಬ್ಬಂದಿಯವರಾದ, ಪಿ.ಸಿ. 358, 328, 335, 366, ಮತ್ತು ಎಪಿಸಿ-15 ಇವರನ್ನು ಮತ್ತು ಇಬ್ಬರು ಪಂಚರು ಕೂಡಿಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಬಂಡ್ರಾಳ ಗ್ರಾಮದ ಆಂಜನೇಯ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರು ಸೇರಿದ್ದು, ಅವರಲ್ಲಿ ಒಬ್ಬ ವ್ಯಕ್ತಿ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ ಅದೃಷ್ಟದ ಮಟಕಾ ಅಂಕಿಗಳ ಮೇಲೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಕೂಗಿ ಜನರನ್ನು ಕರೆದು ಜನರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಹಣವನ್ನು ಪಣಕ್ಕೆ ಹಚ್ಚಿಸಿಕೊಂಡು ಅವರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ, ಪಟ್ಟಿಯನ್ನು ಬರೆದುಕೊಳ್ಳುತ್ತಾ ಅದೃಷ್ಠದ ಮಟಕಾ ಜೂಜಾಟದಲ್ಲಿ ತೊಡಗಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಮಟಕಾ ಪಟ್ಟಿ ಬರೆಯುತ್ತಿದ್ದವನು ಸಿಕ್ಕಿಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ಸಿಕ್ಕವನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಪೀರಸಾಬ ತಂದೆ ಇಮಾಮಸಾಬ ಕಂಪ್ಲಿ ವಯಸ್ಸು 50, ವರ್ಷ, ಜಾ. ಮುಸ್ಲಿಂ. ಉ. ಕೂಲಿ ಸಾ. ಬಂಡ್ರಾಳ. ತಾ. ಗಂಗಾವತಿ ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ 700-00 ರೂಪಾಯಿ, ಒಂದು ಮಟಕಾ ಪಟ್ಟಿ, ಹಾಗೂ ಒಂದು ಬಾಲ್ ಪೆನ್ನು ದೊರೆತಿದ್ದು, ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ
ನಂ. 274/2017 ಕಲಂ. 279, 337 ಐ.ಪಿ.ಸಿ:
ದಿನಾಂಕ:-22-11-2017 ರಂದು
ಬೆಳಿಗ್ಗೆ 11-30
ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಲಿಖಿತ ದೂರು ಕೊಟ್ಟಿದ್ದು
ಸದ್ರಿ ದೂರಿನಲ್ಲಿ ಇಂದು ದಿನಾಂಕ:-22-11-2017 ರಂದು ಬೆಳಿಗ್ಗೆ 7-30 ಗಂಟೆಯ ಸುಮಾರಿಗೆ ಗಂಗಾವತಿ-ಸಿಂಧನೂರು ರಸ್ತೆಯ ಮೇಲೆ ಕಾರಟಗಿಯ
ಶಿವನಗರದಲ್ಲಿರುವ ಮಂಜುನಾಥ ಸಾವಜಿ ಖಾನಾವಳಿಯ ಸಮೀಪ ಆರೋಪಿತರಾದ ದಿನೇಶ ಚವ್ಹಾಣ ತಂದೆ
ಶುಕುರಿ ಚವ್ಹಾಣ ಇತನು ತನ್ನ ಲಾರಿ ನಂ NL-01/L-3939 ನೆದ್ದನ್ನು ಕಾರಟಗಿ ಕಡೆಯಿಂದ ಅದೇ ರೀತಿ ಎನಪ್ಪ ತಂದೆ ತಿಪ್ಪಣ್ಣ ಕಟಂಬ್ಲಿ ಇತನು ತನ್ನ
ಬೋಲೇರೊ ಪಿಕಫ್ ವಾಹನದ ನಂಬರ್-KA01/B-8033
ನೆದ್ದನ್ನು ಇಬ್ಬರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ
ರೀತಿಯಲ್ಲಿ ವೇಗವಾಗಿ ವಾಹನವನ್ನು ಚಲಾಯಿಸಿಕೊಂಡು ಬಂದು ಪರಸ್ಥರ ಟಕ್ಕರ ಮಾಡಿಕೊಂಡು
ಅಪಘಾತಪಡಿಸಿಕೊಂಡಿದ್ದರಿಂದ ಬುಲೇರೋ ವಾಹನದಲ್ಲಿದ್ದ ಚಾಲಕನಿಗೆ ಮತ್ತು ಪಕ್ಕದಲ್ಲಿ ಕುಳಿತದ್ದ
ಬಸವರಾಜ ತಂದೆ ಓಬಪ್ಪ ಇಬ್ಬರಿಗೂ ತಲೆಗೆ, ಕೈಕಾಲುಗಳಿಗೆ, ಇತರೆ ಕಡೆಗೆ ತೆರಚಿದ,
ಸಣ್ಣ ಪುಟ್ಟ ಮತ್ತು ಒಳಪೆಟ್ಟಾದ ಗಾಯಗಳು ಆಗಿದ್ದು ಎರಡು ವಾಹನಗಳು
ಮುಂದಿನ ಬಾಗ ಡ್ಯಾಮೇಜ್ ಆಗಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment