Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, November 22, 2017

1] ಗಂಗಾವತಿ ನಗರ  ಪೊಲೀಸ್  ಠಾಣೆ  ಗುನ್ನೆ ನಂ. 290/2017 ಕಲಂ. 78(3) Karnataka Police Act:
ದಿನಾಂಕ 21-11-2017 ರಂದು 18-45 ಗಂಟೆಗೆ ಆರೋಪಿ ಶಾಮೀದ ತಂದೆ ಮೌಲಸಾಬ ಸಾ: ಲಿಂಗರಾಜ ಕ್ಯಾಂಪ್ ಗಂಗಾವತಿ. ಇವನು ಗಂಗಾವತಿಯ ಇಸ್ಲಾಂಪುರ ಮಸೀದಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದಾಗ, ಮಾನ್ಯ ಪಿ.ಐ. ರವರು ಸದರಿಯವನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಅವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ (01) ನಗದು ಹಣ ರೂ. 590-00. (02) ಮಟಕಾ ನಂಬರ ಬರೆದ 02 ಮಟ್ಕಾ ಪಟ್ಟಿ ಹಾಗೂ (03) 01 ಬಾಲ್ ಪೆನ್ ದೊರೆತಿದ್ದು. ಸದರಿ ಆರೋಪಿತನ ಹತ್ತಿರ ದೊರೆತ ಮುದ್ದೇಮಾಲನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.   
2] ಕುಷ್ಟಗಿ ಪೊಲೀಸ್  ಠಾಣೆ  ಗುನ್ನೆ ನಂ. 311/2017 ಕಲಂ. 279, 337, 338, 447 ಐ.ಪಿ.ಸಿ:
ಪಿರ್ಯಾದಿದಾರನು ಇಂದು ಮುಂಜಾನೆ 08-00 ಗಂಟೆಗೆ ಅಪ್ಸರಪಾಷಾ ರವರ ಮಿನಿಗೂಡ್ಸ ಅಶೋಕ ಲೈಲಾಂಡ ಕಂಪನಿಯ ವಾಹನ ನಂ : ಕೆ.-36-ಬಿ-3462 ನೇದ್ದರಲ್ಲಿ ನಾನು ನಮ್ಮ ಮಾಲಕ ರಮೀಜರಾಜ ಎಲ್ಲರೂ ಕೂಡಿ ಸಿಂಧನೂರ ಬಿಟ್ಟು ಹುಬ್ಬಳ್ಳಿಗೆ ಹೊರಟೇವು. ನಂತರ ಕುಷ್ಟಗಿ ದಾಟಿ ಕುಷ್ಟಗಿ-ಗಜೇಂದ್ರಗಡಾ ರಸ್ತೆಯ ಮೇಲೆ ನಮ್ಮ ಮಿನಿ ಗೂಡ್ಸ ವಾಹನದ ಚಾಲಕ ಅಪ್ಸರಪಾಷಾ ಈತನು ತನ್ನ ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೊರಟಿದ್ದು, ಆಗ ನಾವು ಅವನಿಗೆ ವಾಹನವನ್ನು ನಿಧಾನವಾಗಿ ಚಲಾಯಿಸಿ ಅಂತಾ ಹೇಳಿದ್ದೇವು. ನಾವು ಚಿಕ್ಕನಂದಿಹಾಳ ಕ್ರಾಸ ಹತ್ತಿರ ಹೊರಟಿದ್ದಾಗ ಎದುರುಗಡೆಯಿಂದ ಮಹೀಂದ್ರಾ ಕ್ರಷರ್ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದಿದ್ದು, ಎರಡು ವಾಹನಗಳು ಮುಖಾಮುಖಿಯಾಗಿ ಡಿಕ್ಕಿಯಾಗಿ, ಎರಡು ವಾಹನಗಳ ಮುಂದಿನ ಭಾಗ ಡ್ಯಾಮೇಜ್ ಆಗಿದ್ದು. ಈ ಅಪಘಾತದಲ್ಲಿ ಎರಡು ವಾಹನಗಳ ಚಾಲಕರಿಗೆ ಗಾಯ ವಗೈರೆ ಆಗಿರುವುದಿಲ್ಲಾ ಪಿರ್ಯಾದಿಗೆ ಸಾದಾ ಗಾಯಾಗಳಾಗಿ ವಾಹನಗಳಲ್ಲಿ ಇದ್ದ ಇತರರಿಗೂ ಸಣ್ಣ ಪುಟ್ಟಗಾಯಗಳಾಗಿದ್ದು. ನಂತರ ರೋಡ ಬಾಜು ಇದ್ದ ನಮ್ಮ ಮಿನಿ ಗೂಡ್ಸ ವಾಹನದ ಮುಂದಿನ ಭಾಗ ಡ್ಯಾಮೇಜ ಆಗಿ ಡಿಸೈಲ್ ಸೋರಿದ್ದರಿಂದ ಒಮ್ಮಿಂದೊಮ್ಮಲೇ ಆಕಸ್ಮೀಕವಾಗಿ ದಗ್ ಅಂತಾ ಬೆಂಕಿ ಹತ್ತಿ ಉರಿಯುತ್ತಿದ್ದು ಆಗ ಯಾರೋ 108 ಅಂಬುಲೆನ್ಸಗೆ  ಮತ್ತು ಪೈರ ಸ್ಟೇಷನ ಗೆ ಪೋನ ಮಾಡಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಹನುಮಸಾಗರ ಪೊಲೀಸ್  ಠಾಣೆ  ಗುನ್ನೆ ನಂ. 169/2017 ಕಲಂ. 279, 304(ಎ) ಐ.ಪಿ.ಸಿ:

ದಿನಾಂಕ: 21-11-2017 ರಂದು ಮುಂಜಾನೆ 8-10 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ನಾಗಪ್ಪ ಮನೆಯ ಹೊರಗಡೆ ಬಂದಾಗ ತನ್ನ ಹೆಂಡತಿ ನೀರುತುಂಬಲು ತಮ್ಮ ಮನೆಯ ಮುಂದೆ ರಸ್ತೆ ದಾಟಿ ಮಹೇಬೂಬಸಾಬ ಕಮತಗಿ ರವರ ಮನೆಯ ಮುಂದಿನ ನಳಕ್ಕೆ ಹೋದಾಗ ಹಿಂದಿನಿಂದ ತನ್ನ ಸಣ್ಣ ಮಗನಾದ ಪ್ರವೀಣ ಈತನು ಕೂಡಾ ಹೋಗಿದನು. ತನ್ನ ಹೆಂಡತಿ ನಳದಲ್ಲಿ ನೀರು ತುಂಬಿಕೊಂಡುವಾಪಾಸ್ ಬರುವಾಗ ಅದೆ ಸಮಯಕ್ಕೆ ಮಂಗಳೂರ - ಕಬ್ಬರಗಿ ಬಸ್ ಗುಡೂರಕಡೆಯಿಂದ ಕಬ್ಬರಕಡೆಗೆ ತಮ್ಮ ಬಸ್ ನಿಲ್ದಾಣದ ಹತ್ತಿರ ಬಂದು ನಿಲ್ಲಿಸಿದ್ದು. ಆಗ ತನ್ನ ಹೆಂಡತಿ ನೀರಿನ ಕೊಡ ತುಂಬಿಕೊಂಡು ವಾಪಾಸ್ ಬರುವಾಗ ಹಿಂದಿನಿಂದ ತನ್ನ ಮಗನು ಬರುತ್ತಿರುವಾಗ ಬಸ್ ನಿಲ್ದಾಣದಲ್ಲಿ, ನಿಲ್ಲಿಸಿದ ಬಸ್ ಡ್ರೈವರ ಬಸನ್ನು ಚಾಲುಮಾಡಿ ಮುಂದೆ ಹಿಂದೆ ನೋಡದೆ ಅಲಕ್ಷತನಂದಿ ಬಸನ್ನು ಒಮ್ಮಿಂದೊಮ್ಮಲೇ ಮುಂದಕ್ಕೆ ಚಲಾಯಿಸಿದಾಗ ಮುಂದೆ ರಸ್ತೆ ದಾಟುವ ತನ್ನ ಮಗನ ಮೇಲೆ ಬಸಿನ ಮುಂದಿನ ಎಡಗಡೆ ಗಾಲಿ ಹತ್ತಿಸಿ ಅಪಘಾಟಪಡಿಸಿದಾಗ ತಾನು ಕೂಗುತ್ತಾ ಓಡಿ ಬರುವದನ್ನು ನೋಡಿ ಬಸ್ ಡ್ರೈವರ ಬಸನ್ನು ನಿಲ್ಲಿಸಿದ್ದು ಆಗ ತನ್ನ ಮಗನನ್ನು ತಾನು ನೋಡಲು ತನ್ನ ಮಗ ಪ್ರವೀಣ ಸ್ಥಳದಲ್ಲಿಯೇ ಮೃತಪಟ್ಟಿದ್ದನು ಆತನಿಗೆ ಎಡತೋಡೆಗೆ, ತೇರಚಿದಗಾಯ ಮತ್ತು ತೊಲ್ಡಿಗೆ ಬೆಟ್ಟಾಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.

0 comments:

 
Will Smith Visitors
Since 01/02/2008