1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 226/2017 ಕಲಂ. 78(3)
Karnataka Police Act.
ದಿನಾಂಕ:-03-11-2017 ರಂದು
ಸಂಜೆ 7-15 ಗಂಟೆಗೆ
ನಮೂದು ಮಾಡಿದ ಆರೋಪಿ ನಂ.1 ನೇದ್ದವನು ಕಾರಟಗಿ ಗ್ರಾಮದ
ಇಂದಿರಾನಗರದ ಗಾಳೆಮ್ಮ ದೇವಸ್ಥಾನದ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಶ್ರೀ ಮೊನಯ್ಯ ಎ.ಎಸ್.ಐ ರವರು
ಸಿಬ್ಬಂದಿಯವರೊಂದಿಗೆ ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿತನು ಸಿಕ್ಕಿಬಿದ್ದಿದ್ದು
ಸಿಕ್ಕಿಬಿದ್ದವನ ಕಡೆಯಿಂದ 670=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು
ಇರುತ್ತದೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಯಲಬರ್ಗಾ ಪೊಲೀಸ್ ಠಾಣೆ ಗುನ್ನೆ
ನಂ. 145/2017 ಕಲಂ. 78(3)
Karnataka Police Act.
ದಿನಾಂಕ: 03-11-2017 ರಂದು ಸಂಜೆ 6-45 ಗಂಟೆಯ ಸುಮಾರಿಗೆ ಆರೋಪಿ ಮಂಜುನಾಥ ತಂದೆ ಯಲ್ಲಪ್ಪ ಮಡಿವಾಳರ, ಈತನು ಯಲಬುರ್ಗಾ ಪಟ್ಟಣದ ಕನಕದಾಸ
ವೃತ್ತದ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಂದು ರೂಪಾಯಿಗೆ 80 ರೂಪಾಯಿಗಳು ಬರುತ್ತವೆ ಓಸಿ
ಮಟಕಾ ನಂಬರಗಳನ್ನು ಬರೆಯಿಸಿರಿ ಅಂತಾ ಜನರನ್ನು ಕೂಗಿ ಕರೆದು ಅವರಿಂದ ಹಣ ಪಡೆದು ಓಸಿ ಮಟಕಾ
ನಂಬರಗಳನ್ನು ಬರೆದುಕೊಳ್ಳುತಿದ್ದಾಗ ಪಿ.ಎಸ್.ಐ. ಯಲಬುರ್ಗಾರವರು ಸಿಬ್ಬಂದಿಯೊಂದಿಗೆ ದಾಳಿ ಮಾಡಿ
ಹಿಡಿದಿದ್ದು, ಸದರಿ ಆರೋಪಿ ನೇದ್ದವನ ಹತ್ತಿರ ಮಟಕಾ ಜೂಜಾಟದ ನಗದು ಹಣ 260/-ರೂ. ಹಾಗೂ ಮಟ್ಕಾ ನಂಬರ್ ಬರೆದ ಚೀಟಿ & 01 ಬಾಲ ಪೆನ್ ಅ.ಕಿ ಇಲ್ಲ. ಮತ್ತು ಒಂದು ಎಲ್.ವಾಯ. ಎಫ್
ಕಂಪನಿಯ ಮೊಬೈಲ ನೇದ್ದುವುಗಳೊಂದಿಗೆ ಸಿಕ್ಕಿಬಿದ್ದಿದ್ದು, ಪ್ರಕರಣವನ್ನು
ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ
ನಂ. 249/2017 ಕಲಂ. 78(3)
Karnataka Police Act.
ದಿನಾಂಕ 03-11-2017
ರಂದು 7-30 ಪಿ.ಎಮ್ ಗಂಟೆಯ ಸುಮಾರಿಗೆ ರಾಜಾಸಾಬ
ತಂದೆ ಸಾಯಬಣ್ಣ ವಯಾ: 60 ವರ್ಷ, ಜಾ: ನದಾಫ್, ಉ: ತರಕಾರಿ ವ್ಯಾಪಾರ, ಸಾ: ಮೆಹಬೂಬ ನಗರ ಗಂಗಾವತಿ
ಇವನು ಗಂಗಾವತಿ ನಗರದ ಸಂತೇಬಯಲಿನ ಆಂಜಿನೇಯ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ
ಸಾರ್ವಜನಿಕರನ್ನು ಕರೆದು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದವನ
ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ
ಹಿಡಿದು ಅವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ 01] ನಗದು ಹಣ ರೂ. 200-00. 02] ಮಟಕಾ ನಂಬರ ಬರೆದ 1 ಮಟ್ಕಾ ಪಟ್ಟಿ ಅಂ. ಕಿ 00 03] 01 ಬಾಲ್ ಪೆನ್ ಅಂ.ಕಿ
00-00 ದೊರೆತಿದ್ದು. ಸದರಿ ಆರೋಪಿತನ ಹತ್ತಿರ
ದೊರೆತ ಮುದ್ದೇಮಾಲನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment