1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ
ನಂ. 166/2017 ಕಲಂ. 20(ಬಿ)NDPS
Act.
ದಿ: 04-11-2017 ರಂದು ಬೆಳಿಗ್ಗೆ 11-30 ಗಂಟೆಯ ಸುಮಾರಿಗೆ ಶ್ರೀ. ಶರಣಪ್ಪ. ಎ.ಎಸ್.ಐ ಖಚಿತ ಬಾತ್ಮಿ ಬಂದಿದ್ದೇನೆಂದರೆ, ಕೊಪ್ಪಳ ನಗರದ ಸಜ್ಜಿಹೊಲದಲ್ಲಿ ಒಬ್ಬ ವ್ಯಕ್ತಿ ಮುರಾರಿ ಹರಣಿಶಿಕಾರಿ ಈತನು ತನ್ನ ಮನೆಯಲ್ಲಿ ಗಾಂಜಾ ಮಾರಾಟ ಮಾಡುವದಾಗಿ ತಿಳಿದುಬಂದ ಮೇರೆಗೆ ಕೂಡಲೇ ನಾನು ಮೇಲಾಧಿಕಾರಿಗಳಿಗೆ ತಿಳಿಸಿ ಶೋಧನೆ ಮಾಡಲು ಅನುಮತಿ ಪಡೆದುಕೊಂಡು ಇಬ್ಬರು ಪಂಚರು ಹಾಗೂ ಸಿಬ್ಬಂದಿಗಳ ಸಮೇತ ಠಾಣೆಯಿಂದ 12-00 ಗಂಟೆಗೆ ಸರ್ಕಾರಿ ಜೀಪಿನಲ್ಲಿ ಹೋಗಿ ಖಚಿತ ಬಾತ್ಮಿ ಪ್ರಕಾರ ಪಂಚರ ಸಮಕ್ಷಮ ದಾಳಿ ಮಾಡಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಮುರಾರಿ ತಂದೆ ಗೊಪತ್ತೆಪ್ಪ ಹರಣಶಿಕಾರಿ ಸಾ: ಸಜ್ಜಿಓಣಿ ಕೊಪ್ಪಳ ಇತನನ್ನು ಹಿಡಿದುಕೊಂಡು ಇತನಿಂದ ಒಟ್ಟು 220 ಗ್ರಾಂ ಗಾಂಜಾ ಅಂ.ಕಿ. ರೂ. 3500=00 ಬೆಲೆಬಾಳುವದನ್ನು ಹಾಗೂ ಗಾಂಜಾ ಮಾರಾಟದಿಂದಾ ಬಂದಂತಹ ನಗದು ಹಣ 450=00 ರೂ ಗಳನ್ನು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಅದೆ.
2] ಕನಕಗಿರಿ ಪೊಲೀಸ್ ಠಾಣೆ ಗುನ್ನೆ
ನಂ. 160/2017 ಕಲಂ. 32, 34
Karnataka Exice Act.
ದಿನಾಂಕ 04-11-2017 ರಂದು ಸಂಜೆ ಫಿರ್ಯಾದಿದಾರಿಗೆ ಕನಕಗಿರಿ ಗ್ರಾಮದ ಹೊರವಲಯದಲ್ಲಿ ಇರುವ ಸೋಮಸಾಗರ
ಕ್ರಾಸ್ ನಂತರ ಬಸರಿಹಾಳ ರಸ್ತೆಯಲ್ಲಿ ಶಂಕ್ರಪ್ಪ ಸಜ್ಜನ್ ಇವರ ಇಟ್ಟಂಗಿ ಭಟ್ಟಿಯ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ರಸ್ತೆಯಲ್ಲಿ ಇಬ್ಬರೂ ಒಂದು ಬೈಕ್ ಮೇಲೆ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ
ಮಾಹಿತಿ ಬಂದ ಮೇರೆಗೆ ಪಂಚರಿಗೆ ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಕನಕಗಿರಿ ಪೊಲೀಸ್ ಠಾಣೆಯಿಂದ
ಹೋಗಿ ನೋಡಲು ಸಾರ್ವಜನಿಕ ಸ್ಥಳದಲ್ಲಿ ರಸ್ತೆಯಲ್ಲಿ ಶಂಕ್ರಪ್ಪ ಸಜ್ಜನ್ ಇವರ ಇಟ್ಟಂಗಿ ಭಟ್ಟಿಯ ಹತ್ತಿರ
ದು ಬೈಕ್ ಮೇಲೆ ಇಬ್ಬರು ಕುಳಿತುಕೊಂಡು ಇಬ್ಬರ ಮಧ್ಯದಲ್ಲಿ ಇಟ್ಟುಕೊಂಡಿದ್ದ ಚೀಲದಲ್ಲಿಂದ ಮಧ್ಯದ ಪಾಕೀಟುಗಳನ್ನು
ತೆಗೆದು ಸಾರ್ವಜನಿಕರಿಂದ ಹಣವನ್ನು ಪಡೆದು ನೀಡುತ್ತಿರುವುದು ಕಂಡು ಬಂದಿದ್ದು ಕೂಡಲೇ ಧಾಳಿ ಮಾಡಿ
ಇಬ್ಬರೂ ಆರೋಪಿತರಿಗೆ ಹಿಡಿದು ಚೀಲವನ್ನು ವಶಕ್ಕೆ ಪಡೆದು ಆರೋಪಿತರಿಗೆ ಅದರ ಬಗ್ಗೆ ವಿಚಾರಿಸಿ ಪರಿಶೀಲೀಸಲು
ಅದರಲ್ಲಿ 90 ಓರಿಜೀನಲ್ ಚಾಯ್ಸ ಕಂಪನಿಯ 90 ಎಂ.ಎಲ್ ಅಳತೆಯ ಟೆಟ್ರಾ ಪಾಕೀಟುಗಳಿದ್ದು ಪ್ರತಿಯೊಂದರ
ಮೇಲೆ ಬೆಲೆ ರೂ, 28.13 ಅಂತಾ ನಮೂದಿಸಿರುತ್ತದೆ. ಒಟ್ಟು ಅಳತೆ 8100 ಎಂ.ಎಲ್ ಮತ್ತು ಒಟ್ಟು ಮೌಲ್ಯ
ರೂ, 2531=70 ರೂಪಾಯಿ. ಬೆಲೆಯುಳ್ಳ ಮದ್ಯದ ಟೆಟ್ರಾ ಪಾಕೇಟಗಳನ್ನು ಹಾಗೂ ಒಂದು ಕೆಂಪು ಬಣ್ಣದ ಕೆ.ಎ-37
ಇ.ಬಿ-3196 ಹಿರೋ ಹೋಂಡಾ ಸ್ಪ್ಲೆಂಡರ್ ಪ್ರೋ ಕಂಪನಿಯ ಮೋಟಾರ್ ಸೈಕಲ ಅಂ.ಕಿ.ರೂ 35,000=00 ನೇದ್ದನ್ನು
ಪಂಚರ ಸಮಕ್ಷಮದಲ್ಲಿ ಆರೋಪಿತನಿಂದ ಜಫ್ತ ಮಾಡಿ ವಶಕ್ಕೆ ತೆಗೆದುಕೊಂಡು ಪ್ರಕರಣವನ್ನು ದಾಖಲಿಸಿಕೊಂಡು
ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
0 comments:
Post a Comment