1] ಗಂಗಾವತಿ ನಗರ ಪೊಲೀಸ್
ಠಾಣೆ ಗುನ್ನೆ ನಂ: 320/2017 ಕಲಂ. 341, 323, 324, 504, 506, ಸಹಿತ 34 ಐ.ಪಿ.ಸಿ
ದಿನಾಂಕ 19-12-2017 ರಂದು ರಾತ್ರಿ 21-30 ಗಂಟೆಗೆ ಸರಕಾರಿ ಆಸ್ಪತ್ರೆ ಗಂಗಾವತಿಯಿಂದ ಎಮ್.ಎಲ್.ಸಿ
ಸ್ವೀಕೃತವಾಗಿದ್ದು ಸದರಿ ಎಂ.ಎಲ್.ಸಿ ವಿಚಾರಣೆ ಕುರಿತು ರಾತ್ರಿ 21-40 ಗಂಟೆಗೆ ಆಸ್ಪತ್ರೆಗೆ ಬೇಟಿ
ನೀಡಿ ಇಲಾಜು ಪಡೆಯುತ್ತಿದ್ದ ಅಕ್ಬರ್
ಅಲಿ ತಂದೆ ಮಹ್ಮದ್ ಸಾಬ ಸಂಪಂಗಿ, 49 ವರ್ಷ, ಜಾ: ಮುಸ್ಲಿಂ, ಉ: ಗುಮಾಸ್ತ , ಸಾ: ಲಿಂಗರಾಜ ಕ್ಯಾಂಪ್
ಗಂಗಾವತಿ ಇವನ ಹೇಳಿಕೆಯನ್ನು ಪಡೆದುಕೊಂಡಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೆ, ಫಿರ್ಯಾದಿಯು ಗಂಜ್
ನಲ್ಲಿರುವ ಸಂತೋಷ ಟ್ರೆಡಿಂಗ್ ಕಂಪನಿಲ್ಲಿ ಗುಮಾಸ್ತ ಅಂತಾ ಕೆಲಸ ಮಾಡುತ್ತಿದ್ದು ಸದರಿ ಅಂಗಡಿಯಲ್ಲಿ
ಆರೋಪಿ ಮಂಜುನಾಥ ಇವನು ಸಹ ಕೆಲಸ ಮಾಡುತ್ತಿದ್ದು ಸದರಿಯವನಿಗೆ ಫಿರ್ಯಾದಿ ಕೆಲಸದ ಮಾಡುವುದು ಇಷ್ಠವಿರದಿದ್ದರಿಂದ
ಕೆಲಸವನ್ನು ಬಿಟ್ಟು ಹೋಗು ಅಂತಾ ಹೇಳಿದ್ದರು ಫಿರ್ಯಾದಿ ಕೆಲಸ ಬಿಟ್ಟಿರಲಿಲ್ಲ. ಇಂದು ದಿನಾಂಕ.
19-12-2017 ರಂದು ಸಾಯಂಕಾಲ 6-30 ಗಂಟೆಗೆ ಫಿರ್ಯಾದಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವಾಗ ಆರೋಪಿತರಾದ
ಮಂಜುನಾಥ, ವೀರೇಶ, ಹನುಮಂತ ಇವರೆಲ್ಲರೂ ಕೂಡಿಕೊಂಡು ಬಂದು ಮಂಜುನಾಥನು ಫಿರ್ಯಾದಿಗೆ ಲೇ ಸೂಳೇಮಗನೆ
ನೀನು ಕೆಲಸ ಬಿಟ್ಟು ಹೋಗು ಅಂದರು ಹೋಗುತ್ತಿಲ್ಲ ಅಂತಾ ಅವಾಚ್ಯವಾಗಿ ಬೈದಿದ್ದು ಆಗ ಫಿರ್ಯಾದಿ ನಾನು
ಇಲ್ಲಿಯೇ ಕೆಲಸ ಮಾಡುತ್ತೇನೆ ಅಂತಾ ಅಂದಿದ್ದಕ್ಕೆ ಉಳಿದ ಇಬ್ಬರು ಆರೋಪಿತರು ಫಿರ್ಯಾದಿಗೆ ಗಟ್ಟಿಯಾಗಿ
ಹಿಡಿದುಕೊಂಡಿದ್ದಾಗ ಆರೋಪಿ ಮಂಜುನಾಥನು ಫಿರ್ಯಾದಿಯ ಬಲಗಣ್ಣಿಗೆ ತನ್ನ ಕೈಯಲ್ಲಿದ್ದ ಮೋಳೆಯನ್ನು ತೆಗೆದುಕೊಂಡು
ಹೊಡೆದಿದ್ದ ಇದರಿಂದ ಫಿರ್ಯಾದಿಗೆ ಬಲಗಣ್ಣಿಗೆ ರಕ್ತಗಾಯ ವಾಗಿದ್ದು ಇರುತ್ತದೆ ಅಲ್ಲದೆ ಉಳಿದವರು ಕೈಯಿಂದ
ಮೈ-ಕೈಗೆ ಹೊಡೆಬಡೆ ಮಾಡಿ ನೀನು ಇಲ್ಲಿಯೇ ಕೆಲಸ ಮಾಡಿದರೆ ನಿನ್ನ ಜೀವಸಹಿತ ಬಿಡುವುದಿಲ್ಲಾ ಅಂತಾ ಜೀವಬೆದರಿಕೆ
ಹಾಕುತ್ತಾ ಹೋದರು ಕಾರಣ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಹೇಳಿಕೆ ತಗೆದುಕೊಂಡು
ವಾಪಸ್ ಠಾಣೆಗೆ ರಾತ್ರಿ 22-45 ಗಂಟೆಗೆ ಬಂದು ಸದರಿ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ
ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 319/2017. ಕಲಂ: 379 ಐ.ಪಿ.ಸಿ:
ದಿನಾಂಕ 16-12-2017
ರಂದು ಗಂಗಾವತಿ ನಗರದ ಜ್ಯೂನಿಯರ್ ಕಾಲೇಜ ಮೈದಾನದಲ್ಲಿ ಬಿ.ಜೆ.ಪಿ. ಪಕ್ಷದಿಂದ ಪರಿವರ್ತನಾ
ಯಾತ್ರೆಯನ್ನು ಹಮ್ಮಿಕೊಂಡಿದ್ದು, ಸದರಿ ಕಾರ್ಯಕ್ರಮದ ನಿಮಿತ್ಯ ಬಹಿರಂಗ ಸಭೆ ಇದ್ದು, ಸದರಿ
ಬಹಿರಂಗ ಸಭೆ ಕಾರ್ಯಕ್ರಮದ ವಿಡಿಯೋ ಚಿತ್ರಿಕರಣವನ್ನು ಮಾಡಲು ರಾಜ್ಯ ಗುಪ್ತ ವಾರ್ತೆ
ಕೊಪ್ಪಳ ಘಟಕದ ಪೊಲೀಸ್ ಇನ್ಸಪೆಕ್ಟರ್ ಶ್ರೀ ಪರಸಪ್ಪ ಭಜಂತ್ರಿ ರವರು ಆದೇಶಿಸಿದ
ಮೇರೆಗೆ ಫಿರ್ಯಾದಿದಾರರು ಸೋನಿ ಹ್ಯಾಂಡಿ ಕ್ಯಾಮ್ ಮುಖಾಂತರ
ಬಹಿರಂಗ ಸಭೆಯ ಕಾರ್ಯಕ್ರಮದ ಮುಂಭಾಗದಲ್ಲಿ ಪ್ರೆಸ್ ಗ್ಯಾಲರಿಯಲ್ಲಿ ಕುಳಿತುಕೊಂಡು ಕಾರ್ಯಕ್ರಮದ
ವಿಡಿಯೋ ಚಿತ್ರಿಕರಣ ಮಾಡುವ ವೇಳೆಯಲ್ಲಿ ಸದರಿ ಕ್ಯಾಮರದ ಬ್ಯಾಟರಿ ಲೋ ಆಗಿ ಬಂದ್ ಆಗಿದ್ದಕ್ಕೆ
ವಿಡಿಯೋ ಕ್ಯಾಮರವನ್ನು ವಿಡಿಯೋ ಕ್ಯಾಮರದ ಬ್ಯಾಗಿನಲ್ಲಿ ಇಟ್ಟುಕೊಂಡು ಉಳಿದ ಕಾರ್ಯಕ್ರಮವನ್ನು ತನ್ನ ಮೊಬೈಲ್ ದಲ್ಲಿ
ವಿಡಿಯೋ ಚಿತ್ರಿಕರಣವನ್ನು ಮಾಡಿದ್ದು, ಕಾರ್ಯಕ್ರಮವು ಮಧ್ಯಾಹ್ನ 12-30
ಗಂಟೆಗೆ ಪ್ರಾರಂಭವಾಗಿ 2-30 ಗಂಟೆ ಸುಮಾರಿಗೆ ಮುಕ್ತಾಯವಾಗಿದ್ದು, ಕಾರ್ಯಕ್ರಮ
ಮುಗಿದ ನಂತರ ಕಾರ್ಯಕರ್ತರು ಹಾಗೂ ಬಹಳಷ್ಟು ಜನ ಸಾರ್ವಜನಿಕರು ಸೇರಿ ಎಲ್ಲರೂ ಮುಖ್ಯ ರಸ್ತೆಯ
ಮುಖಾಂತರ ಹೊರಗಡೆಗೆ ಹೋಗುತ್ತಿದ್ದು, ಫಿರ್ಯಾದಿದಾರರು ಅವರೊಂದಿಗೆ ಮುಖ್ಯ
ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ ತನ್ನ ಮೋಟಾರ ಸೈಕಲ್ ಹತ್ತಿರ ಹೋಗಿ ಅಲ್ಲಿ ತನ್ನ
ಹೆಗಲಿಗೆ ಹಾಕಿಕೊಂಡಿದ್ದ ಬ್ಯಾಗಿನಲ್ಲಿದ್ದ ವಿಡಿಯೋ ಕ್ಯಾಮರವನ್ನು ನೋಡಿಕೊಳ್ಳಲಾಗಿ ವಿಡಿಯೋ
ಕ್ಯಾಮರ ಬ್ಯಾಗಿನಲ್ಲಿ ಇರಲಿಲ್ಲಾ. ಅಲ್ಲಿ ಸುತ್ತ-ಮುತ್ತ ಹುಡುಕಾಡಲಾಗಿ ಕಾಣಿಸಲಿಲ್ಲಾ.
ಕಾರ್ಯಕರ್ತರು ಮತ್ತು ಸಾರ್ವಜನಿಕರೊಂದಿಗೆ ಮುಖ್ಯ ರಸ್ತೆಗೆ ಬರುವ ವೇಳೆಯಲ್ಲಿ ನೂಕು
ನುಗ್ಗಲಾಗಿದ್ದು, ತಾನು ಅವರೊಂದಿಗೆ ಹೊರಗಡೆಗೆ ಬರುತ್ತಿರುವಾಗ ಯಾರೋ ಕಳ್ಳರು ತನ್ನ
ಕೊರಳಿಗೆ ಹಾಕಿಕೊಂಡಿದ್ದ ವಿಡಿಯೋ ಕ್ಯಾಮರದ ಬ್ಯಾಗಿನಲ್ಲಿದ್ದ ಹ್ಯಾಂಡಿ ಕ್ಯಾಮರ ಮಾಡಲ್
ನಂ. HDR-PJ230E ಇದರ
ಸೀರಿಯಲ್ ನಂ. 3471326 ಅಂ.ಕಿ.ರೂ. 29,990-00 ನೇದ್ದನ್ನು ಕಳ್ಳತನ ಮಾಡಿಕೊಂಡು
ಹೋಗಿರುತ್ತಾರೆ. ಇಲ್ಲಿಯವರೆಗೆ ಸದರಿ ವಿಡಿಯೋ ಕ್ಯಾಮರವನ್ನು ಹುಡುಕಾಡಲಾಗಿ ಎಲ್ಲಿಯೋ ಪತ್ತೆ
ಆಗಿರುವುದಿಲ್ಲ. ಈ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿದ್ದು ಅವರು ಈ ಬಗ್ಗೆ ಕೇಸ್
ಮಾಡಿಸುವಂತೆ ಮೌಖಿಕವಾಗಿ ಆದೇಶಿಸಿದ್ದರಿಂದ ತಾನು ಇಂದು ತಡವಾಗಿ
ಬಂದು ಈ ಫಿರ್ಯಾದಿಯನ್ನು ಸಲ್ಲಿಸಿದ್ದು, ಕಾರಣ ಸದರಿ ವಿಡಿಯೋ
ಕ್ಯಾಮರವನ್ನು ಕಳ್ಳತನ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು
ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment