Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, January 19, 2018

1] ಕೊಪ್ಪಳ ಗ್ರಾಮೀಣ  ಪೊಲೀಸ್ ಠಾಣೆ  ಗುನ್ನೆ ನಂ.  06/2018  ಕಲಂ. 34 Karnataka Excise Act.
ದಿ:18-01-2018 ರಂದು ಮದ್ಯಾಹ್ನ 2-30 ಗಂಟೆಗೆ ಠಾಣಾ ವ್ಯಾಪ್ತಿಯ ಹೂವಿನಾಳ ಗ್ರಾಮದ ಕೊಪ್ಪಳ-ಕುಣಿಕೇರಿ ರಸ್ತೆಯ ಬಾಜು ಇರುವ ಸಿಬಿರಕಟ್ಟೆ ಹತ್ತಿರ ಓರ್ವ ವ್ಯಕ್ತಿ ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದರಿಂದ, ಪಿ.ಎಸ್.ಐ. ರವರು ಸಿಪಿಐ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಸಂಗಡ ಕರೆದುಕೊಂಡು ಮದ್ಯಾಹ್ನ 3-00 ಗಂಟೆಗೆ ದಾಳಿ ಮಾಡಿ ಆರೋಪಿತನಿಗೆ ವಶಕ್ಕೆ ತೆಗೆದುಕೊಂಡು, ಹೆವಾರ್ಡ್ಸ ಚೀಯರ್ಸ ವಿಸ್ಕಿ. 90 ಎಮ್.ಎಲ್. ಅಳತೆಯ ಒಂದು ಟೆಟ್ರಾಪಾಕೇಟ್ ಅಂ.ಕಿ. 28=13. ರೂ. ಹೀಗೆ ಒಟ್ಟು 58 ಟೆಟ್ರಾಪಾಕೇಟಗಳು. ಅಂ.ಕಿ. 1,631=54. ರೂ. ಬೆಲೆಬಾಳುವವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2] ಕೊಪ್ಪಳ ಗ್ರಾಮೀಣ  ಪೊಲೀಸ್ ಠಾಣೆ  ಗುನ್ನೆ ನಂ.  07/2018  ಕಲಂ. 15(ಎ) 32(3) Karnataka Excise Act.
ದಿ:18-01-2018 ರಂದು ಸಂಜೆ 6-30 ಗಂಟೆಗೆ ಠಾಣಾ ವ್ಯಾಪ್ತಿಯ ಗಿಣಿಗೇರಿ ಗ್ರಾಮದಲ್ಲಿ ಆರೋಪಿ ವಿನೋದ ಹಲಿಗೇರಿ ಇತನು ತನ್ನ ಪಾನಶಾಪ್ ಮುಂದೆ ವಿಸ್ಕಿ ತುಂಬಿದ ಮದ್ಯದ ಟೆಟ್ರಾಪಾಕೇಟಗಳನ್ನು ಪಾನಶಾಪ್ ಗೆ ಬರುವ ಗ್ರಾಹಕರಿಗೆ ಮದ್ಯ ಸೇವಿಸಲು ಅವಕಾಶ ಮಾಡಿಕೊಟ್ಟಿದ್ದರಿಂದ ಫಿರ್ಯಾದಿದಾರರು ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಗೆ ವಶಕ್ಕೆ ತೆಗೆದುಕೊಂಡು, ಪಾನಶಾಪ್ ಮುಂದೆ ಕುಡಿಯಲು ಇಟ್ಟಿದ್ದ, 1] ಹಾಯವಾರ್ಡ್ಸ ಚೀಯರ್ಸ ವಿಸ್ಕಿ. 90 ಎಮ್.ಎಲ್. ಅಳತೆಯ ಒಂದು ಟೆಟ್ರಾಪಾಕೇಟ್ ಅಂ.ಕಿ. 28=13 ರೂ. ಹೀಗೆ ಒಟ್ಟು 02 ಟೆಟ್ರಾಪಾಕೇಟಗಳು. ಅಂಕಿ. 56.26  ರೂ. ಬೆಲೆಬಾಳುವವುಗಳಿದ್ದು ಅದರಲ್ಲಿ ಅಲ್ಪಸ್ವಲ್ಪ ಮದ್ಯವಿದ್ದರಿಂದ ಸ್ಥಳದಲ್ಲಿ ಬಿಸಾಕಿದ್ದು  ಇರುತ್ತದೆ. ಪ್ರಕರಣವನ್ನು ದಾಖಲಿಸಿ ತಪಾಸಣೆ ಕೈಗೊಂಡಿದ್ದು ಅದೆ.
3] ಮುನಿರಾಬಾದ  ಪೊಲೀಸ್ ಠಾಣೆ  ಗುನ್ನೆ ನಂ.  07/2018  ಕಲಂ. 78(3) Karnataka Police Act.
ದಿನಾಂಕ: 18-01-2018 ರಂದು  4-50 ಪಿ.ಎಂ. ಸುಮಾರಿಗೆ ಹುಲಗಿ ಬನ್ನಿಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ, ಪಿರ್ಯಾದಿದಾರರಾದ ಶ್ರೀ ಕೆ.ಜಯಪ್ರಕಾಶ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನನ್ನು ಹಿಡಿದುಕೊಂಡು ಅವರಿಂದ 1130-00 ರೂ. ಮಟಕಾ ಜೂಜಾಟದ ನಗದು ಹಣ ಮತ್ತು ಒಂದು ಬಾಲ ಪೆನ್ ಹಾಗೂ ಒಂದು ಮಟಕಾ ಚೀಟಿಯನ್ನು ಜಪ್ತ ಪಡಿಸಿಕೊಂಡಿದ್ದು ಇರುತ್ತದೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.    
4] ಅಳವಂಡಿ ಪೊಲೀಸ್ ಠಾಣೆ  ಗುನ್ನೆ ನಂ.  05/2018  ಕಲಂ. 87 Karnataka Police Act.
ದಿನಾಂಕ: 18-01-2018 ರಂದು ಫಿರ್ಯಾಧಿದಾರರಾದ ಶ್ರೀ ಶಂಕರಪ್ಪ ಎಲ್. ಪಿ.ಎಸ್. ಅಳವಂಡಿ ಪೊಲೀಸ್ ಠಾಣೆ ರವರು, ಹಾಗೂ ಸಿಬ್ಬಂದಿ, ಪಂಚರು ಕೂಡಿಕೊಂಡು ಠಾಣಾ ವ್ಯಾಪ್ತಿಯ ಅಳವಂಡಿ ಗ್ರಾಮದ ವಿರುಪಾಕ್ಷಗೌಡ ಎಂಬುವರ ಮನೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಹಣವನ್ನು ಕಟ್ಟಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟವನ್ನು ಆಡುತ್ತಿರುವಾಗ ದಾಳಿ ಮಾಡಿದ್ದು, 09 ಜನ ಆರೋಪಿತರು ಸಿಕ್ಕಿದ್ದು, ಸಿಕ್ಕ ಆರೋಪಿತರಿಂದ ಜೂಜಾಟಕ್ಕೆ ಬಳಸಿದ ನಗದು ಹಣ ರೂ. 9,020=00, 52 ಇಸ್ಪೇಟ್ ಎಲೆ, ಹಾಗೂ ಒಂದು ಪ್ಲಾಸ್ಟಿಕ್ ಬರಕಾ ಜಪ್ತ ಮಾಡಿ ಸ್ಥಳದಲ್ಲಿ ಪಂಚನಾಮೆಯನ್ನು ತಯಾರಿಸಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
5] ಗಂಗಾವತಿ ಗ್ರಾಮೀಣ  ಪೊಲೀಸ್ ಠಾಣೆ  ಗುನ್ನೆ ನಂ.  15/2018  ಕಲಂ. 78(3) Karnataka Police Act.
ದಿನಾಂಕ:- 18-01-2018 ರಂದು ಸಾಯಂಕಾಲ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ ಠಾಣೆಯಲ್ಲಿರುವಾಗ ವೆಂಕಟಗಿರಿ ಗ್ರಾಮದ ವೆಂಕಟೇಶ್ವರ ದೇವಸ್ಥಾದನ ಅಗಸಿ ಬಾಗಿಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ದಾಳಿ ಮಾಡಲು ಠಾಣೆಯಲ್ಲಿ ಹಾಜರಿದ್ದ ಅಧಿಕಾರಿ/ ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ ಪಟ್ಟಿಯನ್ನು ಬರೆದುಕೊಳ್ಳುತ್ತಾ ಅದೃಷ್ಠದ ಮಟಕಾ ಜೂಜಾಟದಲ್ಲಿ ತೊಡಗಿದ್ದವನ ಮೇಲೆ ದಾಳಿ ಮಾಡಲಾಗಿ ಮಟಕಾ ಪಟ್ಟಿ ಬರೆಯುತ್ತಿದ್ದವನು ಸಿಕ್ಕಿಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ಸಿಕ್ಕವನ  ಹೆಸರು ವಿಚಾರಿಸಲು ಮಹ್ಮದ್ ರಫಿ ತಂದೆ ಸಣ್ಣ ಅಮೀನಸಾಬ ವಯಾ 35, ಜಾ. ಮುಸ್ಲಿಂ. ಉ. ಕೂಲಿ ಸಾ. ವೆಂಕಟಗಿರಿ ಅಂತಾ ತಿಳಿಸಿದನು. ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ 1,900-00 ರೂಪಾಯಿ, ಒಂದು ಮಟಕಾ ಪಟ್ಟಿ, ಹಾಗೂ ಒಂದು ಬಾಲ ಪೆನ್ನು ದೊರೆತಿದ್ದು, ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀಯಾ ಅಂತಾ ವಿಚಾರಿಸಲು ಅವರು ಮಟಕಾ ಪಟ್ಟಿಯನ್ನು ಗಂಗಾವತಿಯ ಹಸನಸಾಬ ತಂದೆ ಸತ್ತಾರಸಾಬ ಸಾ: ಲಕ್ಷ್ಮೀಕ್ಯಾಂಪ ಗಂಗಾವತಿ. ಈತನಿಗೆ ಕೊಡುವದಾಗಿ ತಿಳಿಸಿದನು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  
6] ಹನುಮಸಾಗರ ಪೊಲೀಸ್ ಠಾಣೆ  ಗುನ್ನೆ ನಂ. 06/2018  ಕಲಂ. 78(3) Karnataka Police Act.
ಪಿ.ಎಸ್.. ಹಾಗೂ ಸಿಬ್ಬಂದಿಯವರು ಇಂದು ಸಾಯಾಂಕಾಲ 16-50 ಗಂಟೆಗೆ ಠಾಣೆಯಲ್ಲಿದ್ದಾಗ ಮನ್ನೇರಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ 1] ಮಂಜುನಾಥ ತಂದೆ ಬಸವಂತಪ್ಪ ಶಿರೋಳ, ಸಾ: ಹನಮಸಾಗರ 2] ಚಂದಪ್ಪ ತಂದೆ ಗುರುಲಿಂಗಪ್ಪ ಆಡೂರ, ಸಾ: ಮನ್ನೇರಾಳ ರವರೊಂದಿಗೆ ಸರಕಾರಿ ಜೀಪ್ ನಂ: ಕೆ.-37/ಜಿ-777 ನೇದ್ದರಲ್ಲಿ ಹೊರಟು ಸಾಯಾಂಕಾಲ 5-25 ಗಂಟೆಗೆ ದಾಳಿ ಮಾಡಲಾಗಿ ಮಟಕಾ ನಂಬರ ಬರೆದುಕೊಂಡು ಹಣ ಪಡೆದುಕೊಳ್ಳುವವನು ಸಿಕ್ಕಿಬಿದಿದ್ದು ಅವರ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಬಸವರಾಜ ತಂದೆ ಚಂದಪ್ಪ ಬೆಣ್ಣಿ ವಯಾ: 45 ವರ್ಷ, ಜಾತಿ: ಗಾಣಿಗ, : ಒಕ್ಕಲುತನ, ಸಾ: ಮನ್ನೇರಾಳ, ತಾ: ಕುಷ್ಟಗಿ, ಅಂತಾ ತಿಳಿಸಿದ್ದು ಅವನ ಹತ್ತಿರ ಮಟಕಾ ಚೀಟಿ, 750=00 ರೂಪಾಯಿ ನಗದು ಹಣ ಹಾಗೂ ಒಂದು ಬಾಲಪೆನ್ನ ಜಪ್ತಮಾಡಿಕೊಂಡಿದ್ದು ನಂತರ ಸದರಿ ಆರೋಪಿ ಬಸವರಾಜನಿಗೆ ಈ ಮಟಕಾ ಚೀಟಿಯನ್ನು ಯಾರಿಗೆ ಕೊಡುವದಾಗಿ ಕೇಳಿದಾಗ ತಾನೇ ಇಟ್ಟುಕೊಳ್ಳುವುದಾಗಿ ತಿಳಿಸಿದ್ದು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
7] ಗಂಗಾವತಿ ನಗರ ಪೊಲೀಸ್ ಠಾಣೆ  ಗುನ್ನೆ ನಂ. 13/2018  ಕಲಂ. 78(3) Karnataka Police Act.
ದಿನಾಂಕ 18-01-2018 ರಂದು 19-30 ಗಂಟೆಗೆ ಆರೋಪಿತನಾದ ಯಮನೂರಪ್ಪ ತಂದೆ ಸಾರಪ್ಪ ಜೋಗೆರ್ ವಯಾ: 32 ವರ್ಷ ಜಾ:ಜೋಗೆರ್ ಉ: ಡ್ರೈವರ್  ಸಾ:ಜೋಗೆರ್ ಓಣಿ ಗಂಗಾವತಿ  ಈತನು ಗಂಗಾವತಿ ನಗರದ ಓ.ಎಸ್.ಬಿ ರಸ್ತೆಯ ಜೋಗೆರ ಓಣಿಯ ಯಲ್ಲಮ್ಮ ದೇವಸ್ಥಾನದ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರನ್ನು ಕರೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಕೂಗುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಅವರಿಗೆ ಮಟಕಾ ನಂಬರ ಬರೆದ ಚೀಟಿ ಬರೆದುಕೊಡುತ್ತಿರುವಾಗ ಸದರಿ ವ್ಯಕ್ತಿಯ ಮೇಲೆ ಪಿ.ಐ ರವರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ರೂ. 520-00. (02) ಮಟಕಾ ನಂಬರ ಬರೆದ 2 ಚೀಟಿ. (03) ಒಂದು ಬಾಲ್ ಪೆನ್ನು ದೊರೆತಿರುತ್ತದೆ. ಸದರಿ ಆರೋಪಿತನ ಹತ್ತಿರ ದೊರೆತ ಮುದ್ದೇಮಾಲನ್ನು ಜಪ್ತಿ ಪಡಿಸಿಕೊಂಡು ಪ್ರತ್ಯೇಕವಾಗಿ ಪಂಚನಾಮೆಯನ್ನು ಬರೆದುಕೊಂಡಿದ್ದು ಇರುತ್ತದೆ. ಸದರಿ ಮಟಕಾ ಪಟ್ಟಿಯನ್ನು ಬಕ್ಕಿಯಾದ (02) ಹಮೀದ್ (03) ಆಟೋ ಶಂಕರ್  ಇಬ್ಬರೂ ಸಾ; ಮೆಹಬೂಬ ನಗರ ಗಂಗಾವತಿ ಇವರಿಗೆ ಕೊಡುವುದಾಗಿ ತಿಳಿಸಿದ್ದು ಕಾರಣ ಸದರಿಯವರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.        
8] ಕುಷ್ಟಗಿ ಪೊಲೀಸ್ ಠಾಣೆ  ಗುನ್ನೆ ನಂ: 13/2018 ಕಲಂ: 279, 304(ಎ) ಐ.ಪಿ.ಸಿ:

ಮುಂಜಾನೆ 08-00 ಗಂಟೆಯ ಸುಮಾರಿಗೆ  ಶಿವಪ್ಪ ತಂದೆ ಚೆನ್ನಸಂಗಪ್ಪ ಪಟ್ಟಣಶೆಟ್ಟಿ ಸಾ : ಹಿರೇಸಿಂಗನಗುತ್ತಿ ತಾ : ಹುನಗುಂದ ರವರ ಮಗ ಪ್ರಭು ಈತನು ಊರಿಗೆ ಬಂದು ನನಗೆ ತಾನು ಒಂದು ಹೊಸ ಮೋಟಾರ ಸೈಕಲನ್ನು ಖರೀಧಿ ಮಾಡುವುದಾಗಿ ಹೇಳಿ ನನಗೂ ಬಾ ಅಂತಾ ಹೇಳಿ ಆಗ ನಾನು ಮತ್ತು ನನ್ನ ಮಗ ಪ್ರಭುನನ್ನ ಮಗನ ಸ್ನೇಹಿತರಾದ ನಮ್ಮೂರಿನ ಶರಣಪ್ಪ ಬಿಳಗಿ, ಬಸವರಾಜ ಮುಖಾಷಿ ರವರು ನಾವು ಎಲ್ಲರೂ ಕೂಡಿಕೊಂಡು ನನ್ನ ಮಗನಿಗೆ ಹೊಸ ಮೋಟಾರ ಸೈಕಲ್ Kಕೊಂಡು ಬರಲು ಎರಡು ಮೋಟಾರ ಸೈಕಲ ಮೇಲೆ  ಕುಷ್ಟಗಿಗೆ ಹೊರಟು ಕುಷ್ಟಗಿಗೆ ಬಂದು ಕುಷ್ಟಗಿಯಲ್ಲಿ ಇರುವ ಹಿರೋ ಜನತಾ ಮೋಟರ್ಸ ಶೋ ರೂಮಿನಲ್ಲಿ ಒಂದು ಬ್ಲಾಕ್ ಬಣ್ಣದ ಹಿರೋ ಕಂಪನಿಯ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ್ ಟೆಂಪರವರಿ ಪಾಸಿಂಗ್ ನಂ : K.A-37-TZ009407 ಇದ್ದು ಇದರ ಇಂಜನ ನಂ : HA10AGHHME5726, ಚೆಸ್ಸಿ ನಂ : MBLHARO71HHM73730 ನೇದ್ದನ್ನು ಖರೀದಿ ಮಾಡಿಕೊಂಡು ವಾಪಸ ನಮ್ಮೂರಿಗೆ ಕುಷ್ಟಗಿ ಹುನಗುಂದ ಎನ್.ಹೆಚ್-50 ರಸ್ತೆಯ ಮೇಲೆ ವಣಗೇರಿ ಟೋಲನಾಕ ದಾಟಿ ಬೋದೂರ ಕ್ರಾಸ ಹತ್ತಿರ ರೋಡ ಹಮ್ಸ್ ಗೆ ನನ್ನ ಮಗ ಪ್ರಭು ಹೊಸ ಮೋಟಾರ ಸೈಕಲ್ ತೆಗೆದುಕೊಂಡು ಒಬ್ಬನೇ ಮುಂದೆ ಹೊರಟಿದ್ದು ನಾವು ನಮ್ಮ ನಮ್ಮ ಗಾಡಿಯ ಮೇಲೆ ಹಿಂದೆ ಹಿಂದೆ ಹೋಗುತ್ತಿದ್ದೇವು. ಸದರಿ ರೋಡ್ಸ ಹಮ್ಸ್ ಹತ್ತಿರ ನಿಧಾನವಾಗಿ ಇಂದು ಮದ್ಯಾಹ್ನ 01-15 ಗಂಟೆಯ ಸುಮಾರಿಗೆ ಹೋಗುತ್ತಿದ್ದಾಗ ಹಿಂದಿನಿಂದ ಲಾರಿಯ ಚಾಲಕನು ತನ್ನ ಲಾರಿಯನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದವನೇ ಹಿಂದಿನಿಂದ ಟಕ್ಕರಕೊಟ್ಟು ಅಪಘಾತ ಪಡಿಸಿದ್ದು ಅಪಘಾತದಿಂದ ಬಲಗಡೆ ಬಿದ್ದು ಮೋಟಾರ ಸೈಕಲ್ ಸಮೇತ ಗೀಚಿಕೊಂಡು ಹೋಗಿದ್ದು ಇರುತ್ತದೆ. ನಾವು ಕೂಡಲೇ ನಮ್ಮ ವಾಹನಗಳನ್ನು ರೋಡಿನ ಎಡಬಾಜು ನಿಲ್ಲಿಸಿ ಕೆಳಗೆ ಇಳಿದು ನೋಡಲು ನನ್ನ ಮಗನಿಗೆ ಹೊಟ್ಟೆಯ ಪೂರ್ತಿ ಬಾಗ, ಬಲಗಡೆಯ ತೊಡೆಯ ಬಾಗ ಪೂರ್ತಿ ಭಾರಿ ತೆರಚಿದಗಾಯವಾಗಿದ್ದು ಹಾಗೂ ಗುಪ್ತಾಂಗಕ್ಕೆ ಭಾರಿ ಒಳ ಪೆಟ್ಟಾದಂತೆ ಕಂಡು ಬಂದಿದ್ದು ನಂತರ ಲಾರಿಯ ನಂಬರ ನೋಡಲು RJ-13-G-8342 ಅಂತಾ ಇದ್ದು ಸದರಿ ಚಾಲಕನ ಹೆಸರು ವಿಚಾರಿಸಲು ತನ್ನ ರಣಜಿತಸಿಂಗ್ ತಂದೆ ಬಹದ್ದೂರಸಿಂಗ್ ವಯಾ 45 ವರ್ಷ ಜಾ : ಸಿಂಗ್ ಸಾ : ನೋನೆ ತಾ :ಜಿ : ತರನತಾರನ್  ರಾಜ್ಯ : ಪಂಜಾಬ ಅಂತಾ ಹೇಳಿದನು. ನಂತರ ವಣಗೇರಿ ಟೋಲನಾಕದ ಹೈವೆಯ ಅಂಬುಲೆನ್ಸ ಎನ್.ಹೆಚ್..ಐ ವಾಹನದಲ್ಲಿ ಚಿಕಿತ್ಸೆ ಕುರಿತು ನಾವೆಲ್ಲರೂ ಪ್ರಭುನನ್ನು ಹಾಕಿಕೊಂಡು ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ನಂತರ ಮದ್ಯಾಹ್ನ 01-45 ಗಂಟೆಯ ಸುಮಾರಿಗೆ ಚಿಕಿತ್ಸೆ ಫಲಿಸದೇ ನನ್ನ ಮಗನು ಮೃತಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿದ್ದು ಇರುತ್ತದೆ.

Wednesday, January 17, 2018

1] ಕುಕನೂರ  ಪೊಲೀಸ್ ಠಾಣೆ 13/2018  ಕಲಂ. 87 Karnataka Police Act.
ದಿನಾಂಕ: 16-01-2018 ರಂದು ಸಾಯಂಕಾಲ 5:30 ಗಂಟೆ ಸುಮಾರಿಗೆ ತಳಕಲ್ ಗ್ರಾಮದ ಸೀಮಾದಲ್ಲಿರುವ ಸಿದ್ದನಗೌಡ ಪಾಟೀಲ ಇವರ ಹೊಲದ ಹತ್ತಿರ ಸರ್ಕಾರಿ ಹಳ್ಳದಲ್ಲಿ ಆರೋಪಿತರೆಲ್ಲರೂ ಗುಂಪಾಗಿ ಕುಳಿತುಕೊಂಡು ಪಣಕ್ಕೆ ಹಣ ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎಂಬ ಜೂಜಾಟದಲ್ಲಿ ತೊಡಗಿದ್ದಾಗ ಪಿಎಸ್ಐ ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ದಾಳಿ ಮಾಡಿ ಎಲ್ಲಾ ಆರೋಪಿತರನ್ನು ಹಿಡಿದು ಆರೋಪಿತರಿಂದ ಇಸ್ಪೇಟ್ ಜೂಜಾಟದ ನಗದು ಹಣ 8700=00 ರೂ. ಒಂದು ಪ್ಲಾಸ್ಟಿಕ್ ಚೀಲ ಮತ್ತು 52 ಇಸ್ಪೀಟ್ ಎಲೆಗಳು ಇವೆಲ್ಲವೂಗಳನ್ನು ಜಪ್ತ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  
2] ಯಲಬುರ್ಗಾ ಪೊಲೀಸ್ ಠಾಣೆ  ಗುನ್ನೆ ನಂ: 04/2018 ಕಲಂ: 279, 337, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:
ದಿನಾಂಕ: 16-01-2018 ರಂದು ಫಿರ್ಯಾದಿದಾರರು ಹಾಗೂ ಆತನ ಹೆಂಡತಿಯಾದ ಗಾಯಾಳು ಅನ್ನಪೂರ್ಣ ಇಬ್ಬರು ಕೂಡಿಕೊಂಡು ತಮ್ಮ ಸ್ಕೂಟಿ ಯಲ್ಲಿ ತಮ್ಮೂರಿಗೆ ರಜೆಗೆ ಹೋಗಿ, ರಜೆ ಮುಗಿಸಿಕೊಂಡು ವಾಪಸ್ ಯಲಬುರ್ಗಾ ಮಾರ್ಗವಾಗಿ ಕುಕನೂರಿಗೆ ಹೋಗುತ್ತಿದ್ದಾಗ, ಸಾಯಂಕಾಲ 5-30 ಗಂಟೆಯ ಸುಮಾರಿಗೆ ಯಲಬುರ್ಗಾ ಸೀಮಾದಲ್ಲಿ ರಸ್ತೆಯ ಬದಿಗೆ ನಿಧಾನವಾಗಿ ನಡೆಸಿಕೊಂಡು ಬರುತ್ತಿದ್ದಾಗ, ಆರೋಪಿತನು ತಾನು ನಡೆಸುತ್ತಿದ್ದ ಮೋಟಾರ್ ಸೈಕಲ್ ನಂಳ ಕೆಎ-26  ಎಸ್-8321 ನೇದ್ದರ ಮೇಲೆ ಗಾಯಾಳು ಶಿವಕುಮಾರನನ್ನು ಕೂಡಿಸಿಕೊಂಡು ತಾನು ನಡೆಸುತ್ತಿದ್ದ ಮೋಟಾರ್ ಸೈಕಲ್ ನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಫಿರ್ಯಾದಿದಾರರಿಗೆ ಟಕ್ಕರ್ ಕೊಟ್ಟು ಅಫಘಾತ ಮಾಡಿದ್ದರಿಂದ ಫಿರ್ಯಾದಿದಾರನಿಗೆ ಬಲ ತೊಡೆಯ ಹತ್ತಿರ ಭಾರಿ ಸ್ವರೂದ ಗಾಯವಾಗಿದ್ದು, ಅಲ್ಲದೇ ಬಲ ಪಾದದ ಹತ್ತಿರ, ಬಲಗೈ ಬೆರಳುಗಳ ಹತ್ತಿರ ಗಾಯವಾಗಿದ್ದು, ಅಲ್ಲದೇ ಅನ್ನಪೂರ್ಣ ಇವರಿಗೆ ಬಲಗಾಲ ಮೋಣಕಾಲ ಹತ್ತಿರ, ಬಲ ಹೆಬ್ಬೆರಳಿಗೆ ರಕ್ತಗಾಯವಾಗಿದ್ದು, ಅಲ್ಲದೇ ಹೊಟ್ಟೆಗೆ ಒಳ ಪೆಟ್ಟಾಗಿರುತ್ತದೆ. ಹಾಗೂ ಆರೋಪಿತನ ಮೋಟಾರ್ ಸೈಕಲ್ ಹಿಂದೆ ಕುಳಿತಿದ್ದ ಶಿವಕುಮಾರ ಈತನಿಗೂ ಸಹ ಎರಡು ಮೋಣ ಕೈ ಹತ್ತಿರ, ತಲೆಯ ಮೇಲೆ ರಕ್ತಗಾಯವಾಗಿದ್ದು  ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.


Tuesday, January 16, 2018

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 12/2018 ಕಲಂ 143, 147,447, 323, 504, 506  ಸಹಿತ 149 ಐ.ಪಿ.ಸಿ. ಮತ್ತು 3(1)(x) SC/ST. P.A. Act. 1989.
ಇಂದು ದಿನಾಂಕ:- 15-1-2018 ರಂದು ಮದ್ಯಾಹ್ನ 1-00 ಪಿ.ಎಂ.ಕ್ಕೆ ಫಿರ್ಯಾದಿದಾರರಾದ ಶ್ರೀ ರಾಜಗೋಪಾಲ ತಂದಿ ಅಳಗಿರಿ  ವಯಾ- 54 ವರ್ಷ ಜಾ- ಮಾಲದಾಸರಿ ( ಪರಿಶಿಷ್ಟ ಜಾತಿ )  ಸಾ- ವಡ್ಡರಹಟ್ಟಿ ಕ್ಯಾಂಪ್ ತಾ- ಗಂಗಾವತಿ ಜಿ- ಕೊಪ್ಪಳ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿಸಿದ ದೂರನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. “ ಗಂಗಾವತಿ ತಾಲೂಕಿನ ವೆಂಕಟಗಿರಿ ಹೊಬಳಿ ಬಾಗಲಾಪೂರ ಗ್ರಾಮದ ಸರ್ವೆ ನಂ-10/12 ವಿಸ್ತೀರ್ಣ ನಂ : 01-14 ಗುಂಟೆ ಜಮೀನು ನಮ್ಮ ಸ್ವಂತದ್ದಾಗಿದ್ದು ನಾವು ಸದರಿ ಜಮೀನಿನ ಖಾತಾದಾರರು, ಹಿಸ್ಸಾದಾರರು, ಅಲಾಟ್ದಾರರು  ಇದ್ದು ಸದರಿ ಜಮೀನಿನಲ್ಲಿ ನಾನು ಸುಮಾರು ವರ್ಷಗಳಿಂದ ವ್ಯವಸಾಯ ಮಾಡುತ್ತಾ ಬಂದಿರುತ್ತೇನೆ  ಕೆಲವು ವರ್ಷಗಳಿಂದ ನಮ್ಮ ಗ್ರಾಮದ  ಕುರುಬ ಜನಾಂಗದ  ಮತಾಂಧ, ಕಾಮಾಂಧ, ಸವರ್ಣಿಯ ವ್ಯಕ್ತಿಗಳಾದ 1)ಕೆಂಚಪ್ಪ ತಂದಿ ಹನಮಂತಪ್ಪ 2) ಮುದಿಯಪ್ಪ ತಂದಿ ಹನಮಂತಪ್ಪ 3)ಬಸವರಾಜ ತಂದಿ ಹನಮಂತಪ್ಪ 4) ಪ್ರಭು ತಂದಿ ತಾಯಪ್ಪ 5)  ಗಾಧಿಲಿಂಗಪ್ಪ ತಂದಿ ಹನಮಂತಪ್ಪ ಸಾ- ಎಲ್ಲರೂ ವಡ್ಡರಹಟ್ಟಿ ಇವರಿಗೆ  ಈ ಮೊದಲು ನನ್ನ ಜಮೀನನ್ನುಗುತ್ತಿಗೆ ಮಾಡುತ್ತಿದ್ದರು. ನಂತರ ಅವರು ನಮ್ಮ ಜಮೀನನ್ನು  ಬಿಟ್ಟುಕೊಡಲು ಕೇಳಿದಾಗ ಈ ಬೆಳಗೆ ಮುಂದಿನ ಬೆಳೆ ಎಂದು ಸಬೂಬು ಹೇಳುತ್ತಾ ಬಂದಿರುತ್ತಾರೆ. ಮುಂದುವರೆದು ಈಗಲೂ ಕೂಡಾ  ಅವರು ಅನಧೀಕೃತವಾಗಿ ನಮ್ಮ ಜಮೀನನನ್ನು ಸಾಗು / ಕಟಾವು ಮಾಡುತ್ತಿದ್ದಾರೆ. ಇದನ್ನು ಪ್ರಶಿಸಿದಾಗ ಸದರಿ ಮೇಲ್ಕಂಡ ಸಬಲ, ಪ್ರಭಲ, ಸಮರ್ಥ, ಸದೃಢ, ಬಲಿಷ್ಟ, ಬಲಾಡ್ಯ ವ್ಯಕ್ತಿಗಳಗು  ಏಕಾಏಕಿ ನನ್ನ ಮೇಲೆ ಹಾಗೂ ನನ್ನ ಸಹೋದರನಾದ ದರ್ಮರಾಜ ತಂದಿ ಅಳಗಿರಿಯವರ ಮೇಲೆ ದಿನಾಂಕ : 28-12-2017 ರಂದು ಸಾಯಂಕಾಲ 06-00 ಗಂಟೆಗೆ ದೌರ್ಜನ್ಯ  ಮಾಡಿ ಹೊಡದಿರುತ್ತಾರೆ ಮತ್ತು ಜಮೀನಿನಲ್ಲಿಯ ಭತ್ತವನ್ನು ಹೊತ್ತೊಯದದಿರುತ್ತಾರೆಲ ಅಲ್ಲದೆ ಕಮ್ಮಿ ಜಾತಿ ಸೂಳೇ ಮಕ್ಕಳೆ  ಎಂದು ಎಂದು ಅವಾಚ್ಯ ಶಬ್ದಗಳಿಂದ  ನಿಂದಿಸಿ ಕೊಲೆಬೆದರಿಕೆ ಜೀವಭೆದರಿಕೆ, ಪ್ರಾಣಬೆದರಿಕೆ ಹಾಕಿರುತ್ತಾರೆ  ಇವರು ಪರಿಶಿಷ್ಟ ಜಾತಿ ದೌರ್ಜನ್ಯ ಕಾಯ್ದೆ 1989  ಹಾಗೂ ಪಿಟಿಸಿಯಲ್ ಕಾಯ್ದೆ ಕಲಂ : 5 ರ ಪ್ರಕಾರ ಕಾನೂನು ಉಲ್ಲಂಗನೆ ಮಾಡಿರುತ್ತಾರೆ  ಈ ಬಗ್ಗೆ ವಿಚಾರ ಮಾಡಿ  ಕಾರಣಾಂತರಗಳಿಂದ ಫಿರ್ಯಾದಿ ಕೊಡಲು ವಿಳಂಬವಾಗಿರುತ್ತದೆ ಅಂತಾ  ಮುಂತಾಗಿ ಇದ್ದ ದೂರಿನ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 11/2018 ಕಲಂ 379 ಐ.ಪಿ.ಸಿ.
ದಿನಾಂಕ 15-01-2018 ರಂದು 19-00 ಗಂಟೆಗೆ ಶ್ರೀಮತಿ ಸುನಿತಾ ನೆಕ್ಕಂಟಿ ಗಂಡ ಶ್ರೀನಿವಾಸ ನೆಕ್ಕಂಟಿ ವಯಾ: 44 ವರ್ಷ ಜಾ: ಕಮ್ಮಾ ಉ: ಹೌಸ್ ವೈಪ್ ಸಾ: ವಡ್ಡರಹಟ್ಟಿ, ಗಂಗಾವತಿ. ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ: 07-01-2018 ರಂದು  ಫಿರ್ಯಾದಿದಾರರು ತಮ್ಮ ಮಗಳ ಜೊತೆಗೆ ಕಾರಿನಲ್ಲಿ ಗಂಗಾವತಿ ನಗರದ ಕೋಟೆ ಆಂಜನೇಯ ದೇವಸ್ತಾನಕ್ಕೆ ಬಂದು ದೇವಸ್ತಾನದ ಒಳಗೆ ಹೋದ ಕಾಲಕ್ಕೆ ಸಂಜೆ 6-00 ಗಂಟೆಯಿಂದ 6-20 ಗಂಟೆಯ ಮಧ್ಯದ ಅವಧಿಯಲ್ಲಿ    ಯಾರೋ ಕಳ್ಳರು ಕಾರಿನಲ್ಲಿದ್ದ ವ್ಯಾನಿಟಿ ಬ್ಯಾಗನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು , ಸದರಿ ವ್ಯಾನಿಟಿ ಬ್ಯಾಗನಲ್ಲಿ   ಪಿರ್ಯಾಧಿದಾರರ ಮಗಳಾದ ಲಲಿತಾ ಶ್ರೀಯಾ ರವರ ಪಾಸಪೋರ್ಟ ನಂ P 7837268 ನೇದ್ದು ಹಾಗೂ 5000-00 ನಗದು ಹಣ ಮತ್ತು ಇತರೆ ದಿನ ಬಳಕೆಯ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ  ಅಂತಾ ವಗೈರೆಯಾಗಿ ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Sunday, January 14, 2018

1] ಯಲಬುರ್ಗಾ ಪೊಲೀಸ್ ಠಾಣೆ 03/2018  ಕಲಂ. 279, 304(ಎ) ಐ.ಪಿ.ಸಿ
ದಿನಾಂಕ: 13-01-2018 ರಂದು ಬೆಳಗ್ಗೆ 09-30 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಣ ಮಾಡಿಸಿದ ಒಂದು ಫಿರ್ಯಾದಿಯನ್ನು ಹಾಜರು ಪಡಿಸಿದ್ದು, ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ, ದಿನಾಂಕ: 04-01-2018 ರಂದು ಸಂಜೆ 6-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರ ಮಗನಾದ ಈರಪ್ಪ ತಂದೆ ಫಕೀರಪ್ಪ ಕಳಸಪ್ಪನವರು, ಸಾ: ಬಂಡಿಹಾಳ ಈತನು ದಿನಾಂಕ: 04-01-2018 ರಂದು ಸಂಜೆ 6-00 ಗಂಟೆಯ ಸುಮಾರಿಗೆ ದ್ಯಾಮೂಣಚಿಗೆ ಗ್ರಾಮಕ್ಕೆ ತನ್ನ ಅಕ್ಕಳಿಗೆ ಮಾತನಾಡಿಸಿಕೊಂಡು ಬರುವ ಸಲುವಾಗಿ ತನ್ನ ಮೋಟಾರ್ ಸೈಕಲ್ ಚಸ್ಸಿ ನಂ : ME4JC36JB7340589 ನೇದ್ದರ ಮೇಲೆ ಹೋಗಿ, ಮಾತನಾಡಿಸಿಕೊಂಡು ವಾಪಸ್ ಊರಿಗೆ ಬರುವ ಸಲುವಾಗಿ ಊರಿಗೆ ಬೇಗನೇ ಹೋಗಬೇಕು ಅಂತಾ ತಾನು ನಡೆಸುತ್ತಿದ್ದ ಮೋಟಾರ್ ಸೈಕಲ್ ನ್ನು ಸೂಡಿ-ಸಂಕನೂರು ರಸ್ತೆಯ ಮೇಲೆ ಸಂಕನೂರು ಸೀಮಾದಲ್ಲಿ ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು, ಮೋಟಾರ್ ಸೈಕಲ್ ವೇಗದ ಮೇಲೆ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಬಿದ್ದ ಪರಿಣಾಮ ತಲೆಗೆ ಭಾರಿ ಸ್ವರೂಪದ ಗಾಯವಾಗಿದ್ದು, ಬಾಯಿಂದ, ಮೂಗಿನಿಂದ ರಕ್ತ ಬಂದಿದ್ದು, ಅಲ್ಲದೇ ಅಲ್ಲಲ್ಲಿ ತೆರೆಚಿದ ಗಾಯವಾಗಿದ್ದು, ಆತನಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಗೆ ದಾಖಲು ಮಾಡಿದಾಗ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 12-01-2018 ರಂದು ರಾತ್ರಿ 8-30 ಸುಮಾರಿಗೆ ಚಿಕತ್ಸೆ ಫಲಕಾರಿಯಾದೇ ಮೃತ ಪಟ್ಟಿರುತ್ತಾನೆ . ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಮುನಿರಾಬಾದ ಪೊಲೀಸ್ ಠಾಣೆ  ಗುನ್ನೆ ನಂ: 05/2018 ಕಲಂ: 279, 338, 304(ಎ) ಐ.ಪಿ.ಸಿ.
ದಿನಾಂಕ: 13-01-2018 ರಂದು ಮುಂಜಾನೆ 8-00 ಗಂಟೆ ಸುಮಾರಿಗೆ ಕುಷ್ಟಗಿ-ಹೊಸಪೇಟೆ ಎನ್.ಎಚ್-50 ರಸ್ತೆಯಲ್ಲಿ ಕುಸ್ಟಗಿ ಕಡೆಯಿಂದ ಆರೋಪಿತನು ತನ್ನ ಲಾರಿ ನಂ. ಟಿಎನ್-52/ಜೆ-8577 ನೇದ್ದನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ವಣಬಳ್ಳಾರಿ ಕ್ರಾಸನಲ್ಲಿ ಇರಕಲಗಡದಿಂದ ವಣಬಳ್ಳಾರಿಗೆ ರಸ್ತೆ ಕ್ರಾಸ್ ಮಾಡಿಕೊಂಡು ಬರುತ್ತಿದ್ದ ಟಿ.ವಿ.ಎಸ್. ಎಕ್ಸೆಲ್ ವಾಹನ ನಂ. ಕೆಎ-35/ಕ್ಯೂ-9943 ನೇದ್ದನ್ನು ಲೆಕ್ಕಿಸದೇ ಡಿಕ್ಕಿ ಪಡಿಸಿ ಅಪಘಾತ ಪಡಿಸಿದ್ದರಿಂದ ಟಿ.ವಿ.ಎಸ್. ವಾಹನ ಸವಾರ ಭೀಮಪ್ಪ ತಂದೆ ಗುರುಸಿದ್ದಪ್ಪ ಹಿಡಕಲ್ ಸಾ: ಬೂದಿಹಾಳ ರಾಯಭಾಗ ತಾಲೂಕ ಇತನು ಸ್ಥಳದಲ್ಲಿಯೇ ಮೃತಪಟ್ಟಿದ್ದು, ವಿರುಪಣ್ಣ ತಂದೆ ಈರಪ್ಪ ಚನ್ನಾಳವರ ಸಾ: ಮಂಗಳೂರು ಯಲಬುರ್ಗಾ ತಾಲೂಕ ಇತನಿಗೆ ರಕ್ತಗಾಯಗಳಾಗಿರುತ್ತದೆ ಎಂದು ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 05/2018 ಕಲಂ 279, 338, 304(ಎ) ಐ.ಪಿ.ಸಿ. ರಿತ್ಯ ಪ್ರಕರಣ ದಾಖಲಿಸಿಕೊಂಡಿರುತ್ತದೆ.
3] ಅಳವಂಡಿ ಪೊಲೀಸ್ ಠಾಣೆ  ಗುನ್ನೆ ನಂ: 02/2018 ಕಲಂ: 279, 338, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ.
ದಿನಾಂಕ: 13-01-2018 ರಂದು ಮುಂಜಾನೆ 7-00 ಗಂಟೆಗೆ ಜಿಲ್ಲಾ ಆಸ್ಪತ್ರೆಯಿಂದ ಎಂ.ಎಲ್.ಸಿ. ಸ್ವೀಕೃತವಾಗಿದ್ದರಿಂದ ದಿನಾಂಕ: 12-01-2018 ರಂದು ರಾತ್ರಿ 11-30 ಗಂಟೆಯ ಸುಮಾರಿಗೆ ಫಿರ್ಯಾದಿ ತನ್ನ ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ ನಂ: ಕೆ.ಎ-37/ಇಎ-5126 ನೇದ್ದರ ಹಿಂಭಾಗದಲ್ಲಿ ಮೃತ ಯಲ್ಲಪ್ಪ ತಾಯಿ ಗಂಗವ್ವ 40 ವರ್ಷ ಎಂಬುವನನ್ನು ಕೂಡಿಸಿಕೊಂಡು ಹಲಗೇರಿ-ಹಿರೇಸಿಂಧೋಗಿ ಮುಖ್ಯ ರಸ್ತೆಯಲ್ಲಿ ನಿಧಾನವಾಗಿ ಬರುತ್ತಿರುವಾಗ ಕಾಟ್ರಳ್ಳಿ ಸೀಮಾದಲ್ಲಿ ಹಿರೇಸಿಂದೋಗಿ ಕಡೆಯಿಂದ ಯಾವುದೋ ಒಂದು ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಮೋಟಾರ ಸೈಕಲಗೆ ಟಕ್ಕರು ಕೊಟ್ಟು ಅಪಘಾತ ಪಡಿಸಿದ್ದರಿಂದ ಮೋಟಾರ ಸೈಕಲ ನಡಸುತ್ತಿದ್ದ ಫಿರ್ಯಾದಿ ಗೆ ತೀವ್ರ ಸ್ವರೂಪದ ಗಾಯಗಳಾಗಿ ಮತ್ತು ಹಿಂಭಾಗ ಕುಳಿತುಕೊಂಡಿದ್ದ ಯಲ್ಲಪ್ಪನ ತಲೆಗೆ ಹಾಗೂ ಕಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕುಷ್ಟಗಿ ಪೊಲೀಸ್ ಠಾಣೆ  ಗುನ್ನೆ ನಂ: 08/2018 ಕಲಂ: 78(3) Karnataka Police Act & 420 IPC.
ಕುಷ್ಟಗಿ ಪಟ್ಟಣದ ತಿಕೋಟಿಕರ್ ಪೆಟ್ರೋಲ್ ಬಂಕ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟಕಾ ಜೂಜಾಟ ನಡೆದಿದೆ ಅಂತಾ ಬಾತ್ಮೀ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಹೋಗಿ ರೇಡ್ ಮಾಡಿ ಆರೋಪಿತರನ್ನು ಹಾಗೂ ಅವರಿಂದ ಜೂಜಾಟದ ಒಟ್ಟು ಹಣ 20500=00 ರೂ, ಒಂದು ಬಾಲ್ ಪೆನ್ನು, ಒಂದು ಮಟಕಾ ಚೀಟಿ  ಹಾಗೂ ಒಂದು ಮಟಕಾ ಪಟ್ಟಿ ಜಪ್ತಿ ಮಾಡಿಕೊಂಡಿದ್ದು ಸದರಿ ಆರೋಪಿತರು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಚೀಟಿ ಬರೆದುಕೊಟ್ಟು ಅವರಿಂದ ಹಣ ಪಡೆದು ಮೋಸ ಮಾಡಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5] ಹನುಮಸಾಗರ ಪೊಲೀಸ್ ಠಾಣೆ  ಗುನ್ನೆ ನಂ: 05/2018 ಕಲಂ: 87 Karnataka Police Act:.
ಪಿ.ಎಸ್.. ಹಾಗೂ ಸಿಬ್ಬಂದಿಯವರು ಸಾಯಾಂಕಾಲ 16-05 ಗಂಟೆಗೆ ಠಾಣೆಯಲ್ಲಿದ್ದಾಗ ಕೊಡ್ತಗೇರಿ ಸೀಮಾದ ತೆಗ್ಗಿನ ಹಳ್ಳದ ದಂಡೆಗೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಹೋಗಿ ಅಲ್ಲಿಯೇ ಗಿಡಗಳ ಮರೆಯಾಗಿ ನಿಂತು ನೋಡಲಾಗಿ ತೆಗ್ಗಿನ ಹಳ್ಳದ ದಂಡೆಗೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಲು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 3 ಜನರು ಆರೋಪಿತರು ಸಿಕ್ಕಿಬಿದಿದ್ದು ಅವರಿಂದ ಸದರಿ ಆಪಾದಿತರು ಜೂಜಾಟಕ್ಕೆ ಉಪಯೋಗಿಸಿದ 52 ಇಸ್ಪೀಟ್ ಎಲೆಗಳು ಹಾಗೂ 2270/- ನಗದು ಸಿಕ್ಕಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
6] ಕುಕನೂರ ಪೊಲೀಸ್ ಠಾಣೆ  ಗುನ್ನೆ ನಂ: 07/2018 ಕಲಂ: 87 Karnataka Police Act:.

ದಿನಾಂಕ: 13-01-2018 ರಂದು ಸಾಯಂಕಾಲ 4:10 ಗಂಟೆ ಸುಮಾರಿಗೆ ಆರೋಪಿತರೆಲ್ಲರೂ ತೊಂಡಿಹಾಳ ಗ್ರಾಮದ ಬನ್ನಿಕಟ್ಟಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಪಣಕ್ಕೆ ಹಣ ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎಂಬ ಜೂಜಾಟದಲ್ಲಿ ತೊಡಗಿದ್ದಾಗ ಪಿಎಸ್ಐ ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ದಾಳಿ ಮಾಡಿದಾಗ 7 ಜನರು ಸಿಕ್ಕಿಬಿದ್ದಿದ್ದು, ಸಿಕ್ಕಿಬಿದ್ದ  ಆರೋಪಿತರಿಂದ ಇಸ್ಪೇಟ್ ಜೂಜಾಟದ ನಗದು ಹಣ 4,150=00 ರೂ. 52 ಇಸ್ಪೀಟ್ ಎಲೆಗಳು, ಒಂದು ಸಿಮೇಂಟ್ ಪ್ಲಾಸ್ಟಿಕ್ ಚೀಲ ಇವೆಲ್ಲವೂಗಳನ್ನು ಜಪ್ತ ಪಡಿಸಿಕೊಂಡು ಈ ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 
Will Smith Visitors
Since 01/02/2008